Total Pageviews

Tuesday, April 19, 2011

Everlasting Engineering journey......!!!!

              Am excited!! ಅಂತಷ್ಟೇ ಹೇಳಿ ನನ್ನ ಮನಸಿಗೆ ತೋಚಿದ್ದನ್ನು ಬರೆಯಲು ಸಜ್ಜಾಗಿದ್ದೇನೆ.
ಮಕ್ಕಳು ನೋಡ್ತಾ ನೋಡ್ತಾ ದೊಡ್ಡವರಾಗಿ ಬಿಡ್ತಾರೆ ಅನ್ನೋದು ನಮ್ಮ ಪಾಲಕರ ಮಾತುಗಳು. ನಿಜವಾಗಲು ನಾನು ದೊಡ್ದವಳಗಿದ್ದಿನ? ಕನ್ನಡಿಯಲ್ಲಿ ನಿಂತು ನನ್ನ ನಾನೆ ಕೇಳಿಕೊಂಡಾಗ, slap yourself! ಅಂತು ನನ್ನ ತುಂಟ ಪ್ರತಿಬಿಂಬ.

             ಏನೇ ಅಂದ್ರು ನೋಡ್ತಾ ನೋಡ್ತಾ ಎಂಟನೆ ಸೆಮೆಸ್ಟರ್ ತಲುಪಿದ್ದೇನು ಸುಮ್ಮನೆ ಮಾತಾ?? ಮೊನ್ನೆ ತಾನೆ ಅಪ್ಪ- ಅಮ್ಮನ್ನ ಬಿಟ್ಟು ಹಾಸ್ಟೆಲ್ ಸೇರಿದ ಹಾಗಿದೆ, within a blink of an eye we are almost through it! ಇಂಜಿನಿಯರಿಂಗ್ ಲೈಫ್ ಸ್ಟೈಲ್ ಬಗ್ಗೆ ಪುಟಗಟ್ಟಲೆ ಪುಸ್ತಕಗಳನ್ನ ಬರೆದ ಭೂಪರಿದ್ದರೆ. ಒಂದು ಚಿತ್ರವನ್ನೇ ಮಾಡಿ, ಹಿಸ್ಟರಿ create ಮಾಡಿದವರಿದ್ದಾರೆ. ಅವೆಲ್ಲ complete guys oriented ಅಂತ ಅನ್ನಿಸೋಕೆ ಶುರುವಾಗಿ, ಹುಡುಗಿಯರ ಇಂಜಿನಿಯರಿಂಗ್ ಜೀವನದ ಬಗ್ಗೆ ಬರೆದರೆ ಹೇಗೆ ಅಂತ ಯೋಚಿಸ್ತಾ ನನ್ನ ಜೀವದ ಗೆಳತಿ ಅರ್ಪಿತಗೆ ಮೆಸೇಜ್ ಮಾಡಿದೆ.
me: appi wanna write something...
appi: ಏನ್ ಕಡಿಮ ಬಿತ್ತು?/
me: am serious wanna write something about college life...
appi: are you nuts??
me: wait and watch!!
ಅಂತ ಹೇಳಿ ಬರಿಯೋಕೆ ಶುರು ಮಾಡಿದಿನಿ......

            ಜೀವನದ ಅತ್ಯಮೂಲ್ಯ ಮಹತ್ತರ ವರ್ಷಗಳ ಪಾಲುದಾರ ಡಿಗ್ರಿ. ಅತ್ತ matured ಕೂಡ ಅಲ್ಲದ, ಇತ್ತ immatured ಕೂಡ ಅಲ್ಲದ ,  adult ಕೂಡ ಅಲ್ಲದ, childish ಕೂಡ ಅಲ್ಲದ, ಸುಪ್ತ ಸುಪ್ತ, ಹಸಿ ಹಸಿ ಮನಸುಗಳ ಪಿಕಿಲಾಟ,ಹೋರಾಟ,ಸಂಘರ್ಷ,ಸಂತೋಷ,ಆಕರ್ಷಣೆ, ಒತ್ತಡ, ಭಯ,ಅಭಿವ್ಯಕ್ತ,ಸ್ನೇಹ, ಹೊಂದಾಣಿಕೆ,ಪ್ರೀತಿ, ದ್ವೇಷ, ಮಮತೆ, ಜೀವನೋತ್ಸಾಹ,ಹುಂಬತನ,ಅಮಾಯಕತೆ, ವ್ಯಕ್ತಿತ್ವ,ಜೀವನ ಪ್ರೀತಿ, ಇತ್ಯಾದಿ ಇತ್ಯಾದಿ.... ಎಲ್ಲವುಗಳನ್ನೋಳಗೊಂಡ ಹುಡುಗಿಯರ ಇಂಜಿನಿಯರಿಂಗ್ experience ಅನ್ನು ಹಂಚಿಕೊಳ್ಳುವ ತವಕ ನನ್ನನ್ನು, ಇಡೀಯಾಗಿ ಕಳೆದ ಮೂರು ದಿನಗಳಿಂದ ಕಾಡುತ್ತಿದೆ!!!

           ಕಾರಣವಿಷ್ಟೇ , ರವಿನ್ದೆರ್ ಸಿಂಗ್ (Ravinder singh writer of ' I TOO HAD A LOVE STORY'!) ಎಂಥ ಹುಡುಗ! ಪ್ರತಿ ಹುಡುಗಿ ತನ್ನ ಜೀವನ ಸಂಗಾತಿಯಲ್ಲಿ  ಅಪೇಕ್ಷಿಸುವ ಎಲ್ಲ ಗುಣಗಳನ್ನು ಒಳಗೊಂಡಿರುವಾತ. ಮದುವೆ  ಎಂದಾಕ್ಷಣ ನೂರು ಮೈಲಿ ಓಡುವ ನಾನು ಮತ್ತು ನನ್ನಂಥ ಅನೇಕ ಸ್ನೇಹಿತೆಯರಿಗೆ ರವಿನ್ ಅಂಥ ಹುಡುಗ ಸಿಗ್ತಾನೆ ಅಂದರೆ, ಇವತ್ತೇ  ಮದುವೆಯಾಗಿ ಬಿಡುವ ಸಂಭ್ರಮ!! ರವಿನ್ ಬಗ್ಗೆ ಆಗಾಗ ಬರೆಯೋದು ತುಂಬಾ ಇದೆ, ಸಧ್ಯಕ್ಕೆ ನನ್ನನು ಬರೆಯಲು ಪ್ರೇರೇಪಿಸಿದ ಈ  ಲೇಖಕನಿಗೆ ಒಂದು ಥ್ಯಾಂಕ್ಸ್ ಹೇಳಿ, ನಮ್ಮ ಕಥೆ ಆರಂಭಿಸೋಣ ಏನಂತೀರಿ??

         ಸೆಪ್ಟೆಂಬರ್ ೫, ೨೦೦೭ ಇಂಜಿನಿಯರಿಂಗ್ ಮೊದಲ ದಿನ. ದ್ವಿತೀಯ PUC, ಎಂಬ ಮಹಾನ್ ಯುದ್ಧ ಮುಗಿಸಿ, ನಮ್ಮೆಲ್ಲ ಶಸ್ತ್ರಾಸ್ತ್ರಗಳನ್ನ ತ್ಯಜಿಸಿ, ಕಾಲೇಜ್ ಕ್ಯಾಂಪಸ್ನಲ್ಲಿ  ಕಾಲಿಡುವ ಮುನ್ನ ಕ್ಲಾಸ್ ರೂಮ್ಸ್ ಕನಸ ಕಾಣ  ತೊಡಗಿದ್ದಾಗ, ಅಮ್ಮನ ಎಂದು ಮುಗಿಯದ ಬುದ್ಧಿ ವಾದ, ಅಜ್ಜಿಯ ನೆಲ ನೋಡಿ ಹೋಗ್ಬೇಕು ನೆಲ ನೋಡಿ ಬರಬೇಕು ಎಂಬ ಎಚ್ಚರಿಕೆ, ಪ್ರೀತಿಯ ತಮ್ಮನ ಇನ್ನಾದ್ರು ಎಂಜಾಯ್ ಮಾಡ್ರೆ ...ಎಂಬ ಅಪ್ಪಣೆ, ಎಲ್ಲವನ್ನು ಅರಗಿಸಿಕೊಂಡು ಕಾಲೇಜ್ ಕ್ಯಾಂಪಸ್ ಎಂಟ್ರಿ ಕೊಟ್ಟಿದ್ದು, ಇವತ್ತಿಗೂ ನಂಗೆ ಸರಿಯಾಗಿ ನೆನಪಿದೆ ನಾನು ಮೊದಲ ದಿನ ಒಂದನೇ ತರಗತಿ ಶಾಲೆಗೆ ಸೇರಿಸುವಾಗ ಒಂದು ಬದಿ ಅಪ್ಪ ಇನ್ನೊಂದು ಬದಿ ಅಮ್ಮ ನನ್ನ ಪುಟ್ಟ ಕೈಗಳನ್ನು ಹಿಡಿದು ಶಾಲೆಗೆ ಬಿಟ್ಟೂ ಬಂದ ನೆನಪು.  ಇಂಜಿನಿಯರಿಂಗ್  ಮೊದಲ ದಿನವು ಮೊದಲ ಸಲ ಶಾಲೆಗೆ ಹೋದ ಅನುಭವೇ ಸರಿ, ಯಾಕೆಂದರೆ ಅಪ್ಪ ಅಮ್ಮ ಅದೇ ರೀತಿಯಲ್ಲಿ ನಾನೀಗ ಬೆಳೆದು ದೊಡ್ದವಲಾಗಿದ್ದಿನಿ ಎಂಬ ಪರಿವು ಇಲ್ಲದಂತೆ ಮಗುವಿನಂತೆ ನನ್ನ ಎರಡು ಕೈಗಳನ್ನು ಹಿಡಿದುಕೊಂಡು ಕ್ಲಾಸ್ ರೂಂ ತನಕ ಕರೆದುಕೊಂಡು ಹೋಗಿದ್ದು ಕೊಂಚ ವಿಪರೀತ ಅನಿಸಿದರು  ನಿಜ!! 



                   ನನ್ನನ್ನ್ನು  ಬರೆಯಲು ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಎಲ್ಲ ಗೆಳೆಯರಿಗೆ, ಮತ್ತು ಪರಿಚಯವೇ ಇಲ್ಲದಿದ್ದರೂ  ತುಂಬಾ ಆತ್ಮೀಯವಾಗಿ ಹುರಿದುಂಬಿಸುತ್ತಿರುವ  ಜಲನಯನ blooger  ಸರ್  ಮತ್ತು ಗಣೇಶ್ ಅವರಿಗೆ ಥ್ಯಾಂಕ್ಸ್  ಹೇಳುತ್ತಾ    ನಮ್ಮ ಕ್ಲಾಸ್ ರೂಂ ಸ್ಟೋರಿ  .....

                 ಅವತ್ತು ಎಲ್ಲ ಹುಡುಗಿಯರು ತುಂಬಾ ಚೆನ್ನಾಗಿ ಡ್ರೆಸ್ ಮಾಡಿಕೊಂಡಿದ್ದರು ನಾನು ಕೂಡ ಅಂತ ಸ್ಪೆಷಲ್ ಆಗಿ ಹೇಳುವ ಅವಶ್ಯಕತೆ  ಇಲ್ಲದಿದ್ದರೂ ಹೇಳ್ತೀನಿ ತಪ್ಪು ತಿಳಿಬೇಡಿ ಪ್ಲೀಸ್;-)....ಹಾ ಹುಡುಗರು ತಕ್ಕ ಮಟ್ಟಿಗೆ Professionals  ಅನ್ನೋ ಹಾಗೆ ರೆಡಿ ಆಗಿದ್ದರು. ಎಲ್ಲ ಹೊಸ ಮುಖಗಳ ನಡುವೆ ಕಪ್ಪು ಬಣ್ಣದ ಸಲ್ವಾರ್ ಹಾಕಿಕೊಂಡಿದ್ದ ಹುಡುಗಿ ಪಕ್ಕದಲ್ಲಿ ಹೋಗಿ ಕುಳಿತೆ. ತುಂಬಾ ಸೌಮ್ಯ ಸ್ವಭಾವದ ಹುಡುಗಿ ಅನ್ನಿಸಿದರು ಮತ್ತೆ ನೋಡಬೇಕು ಅನ್ನುವಷ್ಟು ಚೆನ್ದವಿರುವ ಹುಡುಗಿಯನ್ನು ಮಾತನಾಡಿಸದೆ ಇರುವುದು ಉಂಟೆ?? ಆಯಿತು ವಾಚಾಳಿ ಅದ ನನಗೇನು ಸ್ನೇಹಿತರನ್ನ ಮಾಡಿಕೊಳ್ಳುವುದು ಅಷ್ಟೇನೂ ಕಷ್ಟದ ಕೆಲಸವಲ್ಲ...ಅವಳತ್ತ ಕೈ ಚಾಚಿ...
Hi  ashwini  here from dharwad(ಮೂವತ್ತು ಹಲ್ಲುಗಳು ಕಾಣುವಂತೆ ದೊಡ್ಡ ಸ್ಮೈಲ್ ಕೊಡುತ್ತ..)
Spandana  from bijapur.....:-) ನಮ್ಮ ಮೊದಲ ದಿನದ ಭೇಟಿ ಅಷ್ಟೇನೂ memorable  ಅಂತ ಅನ್ನಿಸದಿದ್ದರೂ ಅವಳು ನನ್ನ ಜೀವದ ಗೆಳತಿ ನಂಬರ್ ೧ ಆಗುತ್ತಾಳೆ  ಅಂತ ಆ ಕ್ಷಣಕ್ಕಂತು ಅನ್ನ್ನಿಸಿರಲಿಲ್ಲ....ಇಷ್ಟು ಪರಿಚಯದ ನಂತರ

         ತುಂಬಾ ಚಿಕ್ಕವನಂತೆ ಕಾಣುವ, ಮತ್ತು ಅಷ್ಟೇನೂ ಎತ್ತರ ವಿಲ್ಲದಿದ್ದರೂ ಸ್ಪುರದ್ರೂಪಿ, ಕೃಷ್ಣ ಬಣ್ಣದ professionally dressed , lecturer ಕ್ಲಾಸ್ ಒಳ ಬಂದಾಗ ಅವರು ನಮ್ಮ ಲೆಕ್ಟುರೆರ್ ಅಂತ ನಮಗ್ಯಾರಿಗೂ ಅನ್ನಿಸದೆ ಅವರು ನಮ್ಮಂತೆ fresher  ಅಂದು ಕೊಂಡು ಸುಮ್ಮನೆ ಕುಳಿತುಕೊಂಡಿದ್ದು ಮಾತ್ರ ವಿಪರ್ಯಾಸ!! ಪಾಪ ಬೇರೆ ದಾರಿ ಇಲ್ಲದೆ ಅವರೇ stage ಮೇಲೆ ಹೋಗಿ ತಮ್ಮ ಪರಿಚಯ ಹೇಳಿ ಕೊಂಡಾಗಲೇ ಇವರು ನಮ್ಮ ಸರ್,.... ಅಂತ ಗೊತ್ತಾಗಿದ್ದು...ಹುಡುಗರಿಗೆ ಅದು ಚರ್ಚೆಯ ವಿಷಯವೇ ಅಲ್ಲ ಬಿಡಿ.,ಆದ್ರೆ ಹುಡುಗೀಯರು '' ಹೇಯ್ lecturer  ಅಂತೆ ಕಣ್ರೆ ತುಂಬಾ ಚಿಕ್ಕವ್ರಲ್ಲವ?', ಎಷ್ಟು ಚೆನ್ನಗಿದರಲ್ಲ??,ಹೈಟೆ ಇಲ್ಲ ಕಣೆ ಇನ್ನು ಸ್ವಲ್ಪ ಎತ್ತರ ಇರಬೇಕಿತ್ತು ಅಲ್ವ?, ಅಯ್ಯೋ ವಿಪರೀತ ಕಪ್ಪು...! ಅವ್ರು ನಮ್ಮ  ಸರ್ ಅನ್ನೋದಕಿಂತ ಮದ್ವೆ ಹುಡುಗನೇನೋ ಅನ್ನೋ ಥರ  ವ್ಯರ್ಥ ಚರ್ಚೆಗಳನ್ನ ಮಾಡ್ತಾ ಇರ್ಬೇಕಾದ್ರೆ, 'Good morning everyone! i am akash patil ', as this is the first class, let me have your introductions, the very first question of HR round tell me about youself!!! ಅಂತ ಹೇಳಿದ್ರು.

          ಒಂದಿಬ್ಬರನ್ನು ಬಿಟ್ಟರೆ ಉಳಿದೆಲ್ಲರೂ ತುಂಬಾ ಬೋರಿಂಗ್  ಆದ ರೀತಿಯಲ್ಲೇ ತಮ್ಮ Introduction  ಕೊಡಲು ಶುರುಮಾಡಿದರು....ಸ್ವಲ್ಪ ಹೊತ್ತಿನ ನಂತರ ರಮ್ಯ, ಅರ್ಪಿತ, ಅಪೇಕ್ಷ, ಪ್ರಿಯಾಂಕ, ಕಾವ್ಯ ಇಂಟರೆಸ್ಟಿಂಗ್ ಆದ ಹವ್ಯಾಸಗಳನ್ನ   ಹೇಳತ್ತ ಹೋದರು. thank god! ನನ್ನ ಹವ್ಯಾಸಕ್ಕೆ ಸರಿ ಹೊಂದುವ ಹುಡುಗೀಯರು ಸಿಕ್ರಲ್ಲ, ಅಂತ ಅಂದು ಕೊಳ್ಳುವಾಗ ,ನನ್ನ ಸರದಿ ಬಂತು. writing articles to the news papers  ನನ್ನ ಹವ್ಯಾಸ ಅಂತ ಹೇಳಿದ್ದಕ್ಕೂ, ಆವತ್ತೇ ನನ್ನ ಲೇಖನ ವಿಜಯ್ ಕರ್ನಾಟಕದಲ್ಲಿ ಪುಬ್ಲಿಶ್ ಆಗುವುದಕ್ಕೂ ಸರಿ ಹೋಯಿತು. I was the centre of attraction! ಮಧ್ಯಾನ ಊಟಕ್ಕೆ ಹೋದ ಕೆಲ ಗೆಳೆಯರು, ನನ್ನ ಲೇಖನ ಓದಿ  ಮೆಚ್ಚುಗೆ ವ್ಯಕ್ತ ಪಡಿಸಿದರು.  ತುಂಬಾ ಜನ ಮೊದನಲೇ ದಿನಕ್ಕೆ ಸ್ನೇಹಿತರಾದರು. ಇಡೀ ದಿನ ಅಂದರೆ ಮಧ್ಯಾನದ ಸೆಶನ್ ನಲ್ಲಿ,, ಫ್ಯೂಚರ್ ಪ್ಲಾನ್ಸ್ ಹೇಗೆ? ಒಂದೇ ಸೆಂ ನಲ್ಲಿ ಎಂಟೂ ಸುಬ್ಜೆಕ್ಟ್ಸ್ ಗಳನ್ನ ಹೇಗೆ ನಿಭಾಯಿಸಬೇಕು? ಇಂಟರ್ನಲ್ಸ್ ಅಂದ್ರೆ ಏನು? ಎಕ್ಷ್ತೆರ್ನಲ್ಸ ಅಂದ್ರೆ ಏನು, ಲ್ಯಾಬ್ ಏನು? ಮುಂತಾದ ವಿಷಯಗಳನ್ನ ನಮ್ಮ ಪ್ರೀತಿಯ  ಪ್ರಿನ್ಸಿ ತುಂಬಾ ಚೆನ್ನಾಗಿ ಹೇಳಿದ್ದರು. that was an inspiring session of three hours!

              ಸಂಜೆ ಐದು ಗಂಟೆ ಹೊತ್ತಿಗೆ, ನನ್ನ ಲಗೇಜ್ sameta, ಅಪ್ಪ- ಅಮ್ಮ ನನ್ನ ಅಜ್ಜಿ ಮನೆ ಇಂದ  ಹಾಸ್ಟೆಲ್ಗೆ ರೂಂ ನಂಬರ್ ಫ-೧೨ ಗೆ ಶಿಫ್ಟ್ ಮಾಡಿದ್ದರು. ಜೀವಮಾನದಲ್ಲೇ ಹಾಸ್ಟೆಲ್ ಗೇಟ್ ನಲ್ಲಿ  ಮೊದಲಬಾರಿಗೆ ನಿಂತು, ಅಮ್ಮ- ಅಪ್ಪನಿಗೆ ಬೈ ಹೇಳುವ ಹೊತ್ತಿಗೆ ಮನಸು ಭಾರ ಭಾರ :-(. ಗಂಡನ ಮನೆಗೆ ಹೋಗುವಾಗ ಹುಡುಗಿ ಜೊತೆ ಗಂಡನಾದರೂ ಇರುತ್ತಾನೆ, ಅತ್ತರೆ ಸಮಾಧಾನವಾದರೂ ಮಾಡುತ್ತಾನೆ, ಹಾಸ್ಟೆಲ್ ನಲ್ಲಿ ಇರುವುದಕ್ಕಿಂತ ಮದುವೆನೇ ಅಗಿರಬಹುದಿತ್ತಲ್ಲ ಅಂತ ಅನ್ನಿಸಿದ್ದು ಮಾತ್ರ ಸತ್ಯ!:-P. ಅತ್ತರೆ ಸಮಾಧಾನ ಮಾಡುವವರೇ  ಬೈ ಹೇಳುತ್ತಿರುವಾಗ ಏನು ಮಾಡುವುದೋ ತಿಳಿಯದೆ, ಓಡಿ ಹೋಗಿ ಅಪ್ಪನನ್ನ ಗಟ್ಟಿ ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿರುವಾಗ, 'ಶುರುವಾಯ್ತ ನಿಮ್ಮದು?' ಎಂದು ಗದರಿಸುತ್ತಾ, ಅಮ್ಮ 'ರೀ ಅವಳಿಗೆ ರೂಢಿಯಾದ ಮೇಲೆ ಸರಿ ಹೋಗುತ್ತಾಳೆ, ಬಿಡಿ ಅವಳನ್ನ ಎಂದು ತನ್ನ  ದುಃಖ ಮರೆ ಮಾಚಲು ಅಮ್ಮ ಮಾಡಿದ್ದೂ ನಾಟಕ ಎಂದು ತಿಳ್ಯೋ ಹೊತ್ತಿಗೆ ಅಪ್ಪ- ಅಮ್ಮ ನನ್ನಿಂದ ಬಲು ದೂರ ನಡೆದು ಬಿಟ್ಟಿದ್ದರು.
           
             ಅವರು  ಹೋದ ಎಷ್ಟೋ ಹೊತ್ತಿನ ನ0ತರವು, ನಾನು ಗೇಟ್ ಬಳಿಯೇ ನಿಂತಿದ್ದನ್ನೇ ಕಂಡು, ತುಂಬಾ ಸುಂದರವಾಗಿರುವ ಸೀರೆಯುಟ್ಟ ಹುಡುಗಿ, ನನ್ನ ಹತ್ತಿರ ಬಂದು, new admission? ಎಂದಾಗ ಕಣ್ಣು ಒರೆಸುತ್ತಾ,  ಹುಂ ಅಂದೇ. come on dear, cheer up! am naina 1st  sem BBM. ಎಂದಾಗ , ಅವಳು ನನ್ನ ವಾರಿಗೆಯ ಬೇರೆ ಕೋರ್ಸ್ ನ ಹುಡುಗಿ ಎಂದು ತಿಳಿಯದೆ, I am ashu BE 1st sem, should i call you dee? ಎಂದೆ.ಹೇ ಹುಚ್ಚಿ ನಾನು ನಿಮ್ಮ ಬ್ಯಾಚ್ ಮೇಟ್, dee ಯಾಕೆ? ಅಂದಾಗ ನೀನು ನನಗಿಂತ ಎತ್ತರ ಇದ್ದೀಯ, ನನಗಿಂತ ಉದ್ದ ಕೂದಲಿದೆ, ಸೀರೆ ಹಾಕೊಂಡಿದಿಯ, ಅಕ್ಕ ಅಂತ ತಿಳಿದು ಕೊಂಡೆ ಸಾರೀ ಅಂತ ಕೇಳಿದಾಗ,  ದೊಡ್ಡ ದನಿಯಲ್ಲಿ ನಗುತ್ತ ನನ್ನ ಅಮಯಕತೆಯನ್ನು ವ್ಯಂಗ ಮಾಡುತ್ತಾ,  ಮೊದಲ ದಿನವೇ ನನ್ನನು ತುಂಬಾ ಆಕರ್ಷಿಸಿದ್ದ ನೈನಾ, ನನ್ನ ಜೀವದ ಗೆಳತಿ ನಂಬರ್ ೨ ಆಗಬಹುದು ಅಂತ ಆ ಕ್ಷಣಕ್ಕಂತು  ಅನ್ನಿಸಿರಲಿಲ್ಲ!


            

23 comments:

  1. Translate in english also... Wanna read it.

    ReplyDelete
  2. nice saying..............
    add few more pages.........:):)

    ReplyDelete
  3. ಅಶ್ವಿನಿ ಸ್ವಾಗತ ನನ್ನ ಬ್ಲಾಗ್ ಲೋಕಕ್ಕೆ...ನನ್ನ ಜಲನಯನಕ್ಕೆ ಭೇಟಿ ಕೊಡಿ...ಹಾಗೇ..
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ..

    ReplyDelete
  4. ಅಶ್ವಿನಿ ಮನಸ್ಸು ವಯಸ್ಸು ಎರಡೂ ನಿಲ್ಲೊಲ್ಲ ಮೊದಲನೇದು ಎರಡೂ ಕಡೆ ಓಲಾಡುತ್ತೆ..ಎರಡನೇದು ಮುಂದಕ್ಕೇ ಹೋಗುತ್ತೆ ಹಿಂದಕ್ಕೆ ..ನೋ ವೇ...!!! ನಿಮ್ಮ ಮುಕ್ತ ಮನದ ಮಾತು ಪ್ರಾರಂಭಿಸಿದ್ದೀರಿ ಮುಂದುವರೀಲಿ...ಬ್ಲಾಗ್ ಒಳ್ಳೆ ಮಾಧ್ಯಮ...ಗುಡ್ ಲಕ್...

    ReplyDelete
  5. nice... thanks a lot, u brought my first semester back,,

    ReplyDelete
  6. nice, and the reason which has motivated u was.... hmmm looking fwrd to read rest of the JOURNEY, sachin

    ReplyDelete
  7. ಇಂಜಿನಿಯರಿಂಗ್ ಸೇರುವಾಗ ಏನೇನೋ‌ಕನಸಿರುತ್ತೆ ೪ ವರ್ಷ ಓದಿದ ಮೇಲೆ ಹಾಗಿರಬಹುದು ಹೀಗಿರಬಹುದು ಅಂತ.. ಕೆಲವರಿಗೆ ಅದೇ ಬದುಕಿನ ಜವಾಬ್ದಾರಿಯಾಗಿರುತ್ತೆ. ಆದ್ರೆ ಇಂಜಿನಿಯರಿಂಗ್ ಮುಗಿಯೋ ಹೊತ್ತಿಗೆ ಯಾರನ್ನೇ ಆಗಲಿ ಹೇಗಿತ್ತು ಈ‌೪ ವರ್ಷ ಅಂದ್ರೆ ನನ್ ಜೀವನದ ಮರೆಯಲಾಗದ ೪ ವರ್ಷ... ಎಲ್ಲೂ‌ಮಾಡದಿದ್ದಷ್ಟು ಮಜಾ ಮಾಡ್ದೆ ಅಂತಾನೇ ಹೇಳೋದು.... ನಿಮ್ಮ to be continued stories ಎಲ್ಲವನ್ನು ಮುಂದುವರೆಸಿ...
    "ಹಾಸ್ಟೆಲ್ ನಲ್ಲಿ ಇರುವುದಕ್ಕಿಂತ ಮದುವೆನೇ ಅಗಿರಬಹುದಿತ್ತಲ್ಲ ಅಂತ ಅನ್ನಿಸಿದ್ದು ಮಾತ್ರ ಸತ್ಯ!"
    ಇದಂತೂ‌ ಸೂಪರ್!

    ReplyDelete
  8. nice to see those moments through your eyes:) keep going :)

    ReplyDelete
  9. u r good writer re....u wrote abt hostel i can feel hw u r heart hw it was was feeling....and wat u told ಹಾ ಹುಡುಗರು ತಕ್ಕ ಮಟ್ಟಿಗೆ Professionals ಅನ್ನೋ ಹಾಗೆ ರೆಡಿ ಆಗಿದ್ದರು.. wats tat anno hage we r and we were pa....ha its very funny abt ಗಂಡನ ಮನೆ....and who is tat Ravinder singh????better u stay far from him.....

    ReplyDelete
  10. Hey Very nice blog. It took my attention when I started reading 2-3 lines and was deeply involved. Please continue..... Very interesting..

    ReplyDelete
  11. indushree, sachin, pavan ,shekhar, anil, ullas thank you very much :-)

    ReplyDelete
  12. Good job..u have started to write up your golden memories...Good luck..carry on!!!!

    ReplyDelete
  13. U want me to comment something too?
    U gotta sit in the last bench for that.
    Ana-mika ;)

    ReplyDelete
  14. Good one Ashu, but u wrote about Engineering life, the same things happens to me also in my Bachelor of Computer Application, "Vivekanand Institute of Management & Technology" college life.

    ReplyDelete
  15. ಸರಳ ಸುಲಲಿತ ಸ್ಪಷ್ಟ ಶೈಲಿ.
    ಕಾಲೇಜ್ ಮತ್ತು ಹಾಸ್ಟೆಲ್ ಜೀವನದ ಆರಂಭ ಚನ್ನಾಗಿದೆ. ಶಬಾಷ್!
    ನಾನೂ ೨೫ ವರ್ಷ ಹಿಂದೆ ಹೋಗಿಬಂದೆ.
    ನನ್ನ ಬ್ಲಾಗಿಗೂ ಬನ್ನಿ.

    ReplyDelete
  16. ಕಾಲೇಜ್ ಮತ್ತು ಹಾಸ್ಟೆಲ್ ಜೀವನದ ಆರಂಭ ಚನ್ನಾಗಿದೆ. ನನ್ನ ಕಾಲೇಜು ದಿನಗಳನ್ನು ನೆನೆಪಿಸಿಕೊಂಡೆ.ಅದೇ ರೀತಿ ಅಪ್ಪನನ್ನು ಅಪ್ಪಿ ಹಿಡಿದು ನೀವು ಅತ್ತದ್ದು,ನಮ್ಮ ಮಗನನ್ನು ಇಂಜಿನೀರಿಂಗ್ ಕಾಲೇಜಿಗೆ ಸೇರಿಸಿ ಬಿಟ್ಟು ಬರುವಾಗ ಆದ ಅನುಭವ ನೆನಪಾಯಿತು.ಅವನು ಮರು ದಿನ ಫೋನ್ ಮಾಡಿ ತನ್ನ ತಾಯಿಯೊಡನೆ ಹೇಳಿದ ಮಾತು,ಆ ರಾತ್ರಿ ಒಬ್ಬನೇ ಅತ್ತು ತಲೆ ದಿಂಬು ಕಣ್ಣೀರಿನಿಂದ ಒದ್ದೆಯಾದ ವಿಚಾರ.ನಿಮ್ಮ ಬ್ಲಾಗ್ನ ಎಲ್ಲ ಬರಹಗಳನ್ನೂ ಓದಿದೆ.ಕನ್ನಡ ಬಾಷೆಯ ಬಗ್ಗೆ ಚೆನ್ನಾಗಿ ಬರೆದಿದ್ದೀರಿ.ಮುಂದಕ್ಕೆ ನಿಮಗೆ ಬರವಣಿಗೆಯಲ್ಲಿ ಒಳ್ಳೆಯ ಭವಿಷ್ಯವಿದೆ.ಶುಭವಾಗಲಿ.

    ReplyDelete
  17. ನಮ್ಮ ಭಾಗದ ಯುವ ಪ್ರತಿಭಾವಂತ ಲೇಖಕಿ ಅಶ್ವಿನಿ ಅವರು ಉತ್ತಮ ಬರಹಗಾರರಾಗಿ ಮುಂದೊರೆಯುವ ಎಲ್ಲಾ ಲಕ್,ಣಗಳು ಅವರಲ್ಲಿವೆ. ಅವರ ಪ್ರಯತ್ನ ಸದಾ ಯಶಸ್ಸಿನ ಹಾದಿಯಲ್ಲಿ ಸಾಗುವಂತಾಗಲು ಸಾಧ್ಯವಾಗಲಿ.

    ReplyDelete
  18. nice....its a top-notch piece of work...thanku for your distinguished presentation...adhbhuta...!!!1

    ReplyDelete