Total Pageviews

Wednesday, June 22, 2011

ತುಂತುರು ಅಲ್ಲಿ ನೀರ ಹಾಡು, ಕಂಪನ ಇಲ್ಲಿ ಪ್ರೀತಿ ಹಾಡು.....

                

                 ಯಾವ ಮಹಾನುಭಾವ ಹೇಳಿದ್ದಾನೋ  ಗೊತ್ತಿಲ್ಲ, ನಮ್ಮ ಉತ್ತರ ಕರ್ನಾಟಕದೆಡೆಗೆ, ತುಂಬಾ popular ಮಾತೊಂದಿದೆ. ''ಧಾರವಾಡ ಮಳಿ ನಂಬ ಬ್ಯಾಡ, ಬೆಳಗಾವಿ ಹುಡುಗಿ ನಂಬ ಬ್ಯಾಡ!'' ನಮ್ಮ ವರಕವಿ ಬೇಂದ್ರೆ ಅವರು  ನಮ್ಮ ಧಾರವಾಡದ ಮಳೆಯ ಬಗ್ಗೆ ತುಂಬಾ ಅಧ್ಭುತವಾದ ಕವನಗಳನ್ನ ಬರೆದಿದ್ದಾರೆ, ಅವುಗಳೆಲ್ಲ ನಿಜ ಎಂದು ಕಳೆದು ನಾಲ್ಕು ದಿನಗಳಿಂದ ಅನ್ನಿಸುತ್ತಿದೆ, ನಾನು ಬೇಸಿಗೆಯಲ್ಲಿ ಹುಟ್ಟಿದ ಕಾರಣಕ್ಕೋ ಏನೋ ಮಳೆಗೂ ನಂಗು ಮೊದಲಿನಿಂದ ಅಷ್ಟಕ್ಕಷ್ಟೇ. ನನ್ನೆಲ್ಲ ಸ್ನೇಹಿತೆಯರು, ಮಳೆಯಂದ್ರೆ ಇಷ್ಟ ಇಲ್ವಾ? ಯಾವ ಸೀಮೆಯವಳೇ ನೀನು? ಅಂತ ರೆಗಿಸಿದಾಗ,ಮಳೆಗೆ ನನ್ನ ಕಂಡ್ರೆ ಇಷ್ಟ ಕಣ್ರೆ, ಅಂತ ಹೊಟ್ಟೆ ಉರಿಸುತ್ತಿದ್ದೆ! ಈಗಲೂ ಅಷ್ಟೇ ಬಿಟ್ಟು ಬಿಡದೆ ಧಾರಾಕಾರವಾಗಿ ಸುರಿಯುವ ಮಳೆ ನೋಡಲು ನನಗೆ ಕಷ್ಟವೇ.. 

               ಮನೆಯಿಂದ ಹೊರನಡೆದ ಎರಡನೇ ಹೆಜ್ಜೆಗೆ, ನನ್ನನ್ನು ಅತೀ ಯಾಗಿ ಪ್ರೀತಿಸುವ ಮಳೆರಾಯನೆಡೆಗೆ ಒಂದು ಅಕ್ಕರೆಯ ಮುಗುಳ್ನಗೆ! ನನ್ನ ಒಂದು ನಗುವಿಗಾಗಿ ವರ್ಷವಿಡಿ ಚಡಪಡಿಸಿದ ಹುಡುಗನಂತೆ, ಒಂದೇ ಕ್ಷಣದಲ್ಲಿ ತನ್ನೆಲ್ಲ ಮನದ ಭಾವನೆಗಳನ್ನು, ಹರ್ಷೋದ್ಗಾರಗಳನ್ನು  ನನ್ನ ಮೇಲೆ ಚಿಮ್ಮಿಸಿ ಆನಂದಿಸುವ ಮಳೆರಾಯನಿಗಿಂತ ಇನ್ನೊಬ್ಬ ಗೆಳೆಯ ಬೇಕೇ?


               ಇದೆಲ್ಲ ಕೇವಲ ನನ್ನ ಕಲ್ಪನೆಯೂ, ಅಥವಾ ಭ್ರಮೆಯೋ ನನಗಂತೂ ಕಳೆದ ನಾಲ್ಕು ದಿನಗಳಿಂದ ಮಳೆಯೊಂದಿಗೆ ವಿಪರೀತ ಪ್ರೇಮ! ನಮ್ಮಿಬ್ಬರಲ್ಲಿ ಕೇವಲ ನಾನೊಬ್ಬಳೆ ಮಾತಿನ ಮೂಲಕ ಪ್ರತಿಕ್ರಿಯುಸುತ್ತೇನೆ, ಮಳೆರಾಯನೋ ನಿರ್ಲಿಪ್ತ ಭಾವನೆಯ, ಅತ್ಯಂತ ಸಹನಶೀಲ ಮತ್ತು ಶಾಂತ ಸ್ವಭಾವದ, ಎಲ್ಲವನ್ನು ವರ್ಷಧಾರೆಯ ಮೂಲಕ ವ್ಯಕ್ತ ಪಡಿಸುವ ಅಪರೂಪದ ಹುಡುಗ!ಅವನು ನನ್ನ ಎಷ್ಟು ಪ್ರೀತಿಸುತ್ತನೆಂದರೆ, ನನ್ನ ಅನುಮತಿ ಇಲ್ಲದೆ ಹೋದರೆ ಬರದೆ ಕೇವಲ ಗುಡುಗು ಮತ್ತು ಮಿಂಚಿನ ಮೂಲಕ ನನ್ನ ಪ್ರತಿಕ್ರಿಯೆಗೆ ಕಾಯುತ್ತ ಕುಳಿತಿರುತ್ತಾನೆ.

              ಮೊನ್ನೆ ಕಲಾಭವನ್ ಸರ್ಕಲ್ ಇಂದ ನನ್ನ ಸ್ಕೂಟಿ ಕಿವಿ ಹಿಂಡಿ, ಮುಂದೆ ಹೋಗುವಾಗ ಧಬಲ್ಲನೆ ಎದುರಾದ ಸಿಗ್ನಲ್  ಕಂಡು ಗಾಡಿ ನಿಲ್ಲಿಸಿದ ಕೆಲವೇ ಕ್ಷಣಗಳಲ್ಲಿ, ಮಳೆರಾಯ ತನ್ನ ಆರ್ಭಟ ಶುರು ಮಾಡಿದ್ದನ್ನು ಕಂಡು, ಜರ್ಕಿನ್  ಮತ್ತು ಕ್ಯಾಪ್ ಮರೆತು ಬಂದ ನನ್ನನ್ನು ನಾನೇ  ಹಳಿದುಕೊಂಡು, ಉಪಾಯ ಮಾಡಿ ಆಕಾಶವನ್ನೇ ನೋಡುತ್ತಾ, ಮನದಲ್ಲೇ ಪ್ಲೀಸ್ ಕಣೋ ನಾನು ಮನೆಗೆ ಹೋಗುವ ವರೆಗೂ ಬರಬೇಡ, ನಿನ್ನ ಪ್ರೀತಿಯ ಹುಡುಗಿಯನ್ನ ಮನೆವರೆಗೂ ಸೇಫ್ ಆಗಿ ತಲುಪಿಸುವುದು ನಿನ್ನ ಜವಾಬ್ದಾರಿ ಅಲ್ವ? ಪ್ಲೀಸ್ ಬರಲ್ಲ ತಾನೆ ಅಂತ ಗೊಣಗುತ್ತಿರುವುದನ್ನು, ನನ್ನ ಪಕ್ಕದ ಬೈಕ್ ಮೇಲೆ ಕುಳಿತ ಸ್ಪುರದ್ರೂಪ ಹುಡುಗ  ಅವಕ್ಕಾಗಿ, what's going on? ಅಂದ, nothing serious, speaking to my boy friend Mr Rain! ಅಂದೆ, ಆ ಹುಡುಗನ reaction ಪಡೆಯುವದರೊಳಗಾಗಿ, ಗ್ರೀನ್ ಸಿಗ್ನಲ್  ಬಂತು, ಮತ್ತೆ ನನ್ನ ಸ್ಕೂಟಿಯ ಕಿವಿ ಹಿಂಡಿ ಮನೆಯೆಡೆಗೆ ಹೋಗುವಾಗ ಒಂದೇ ಪ್ರಶ್ನೆ ಮನದಲ್ಲಿ ಕಾಡುತ್ತಿತು ಮಳೆರಾಯ ನನ್ನ ಮಾತು ಕೇಳುತ್ತಾನ? ಕೇಳದೆ ಏನು ಮನೆ ತಲುಪೋ  ವರೆಗೂ ಒಂದು ಹನಿಯನ್ನೂ ಸುರಿಸದೇ,  ಇರುವದನ್ನು ಕಂಡು ಆಕಾಶವನ್ನು ನೋಡಿ ಸಿಹಿ ಮುತ್ತೊಂದನ್ನ ನನ್ನ ಪ್ರೀತಿಯ ಹುಡುಗನೆಡೆಗೆ  ತೇಲಿ  ಬಿಟ್ಟೆ. ಮನೆಸೇರಿದ ಎರಡೇ ನಿಮಿಷಕ್ಕೆ ಧಾರಾಕಾರ ಮಳೆ!

            ಅಮ್ಮ ಆಫೀಸಿಂದ ಮನೆಗೆ ಬಂದ ತಕ್ಷಣ, ಈವತ್ತು ಸಿಗ್ನಲ್ನಲ್ಲಿ ನಿಂತಾಗ.........................................................  ಹಿಂಗಾಯ್ತು. ಅಂತ ವಿವರಿಸಿದಾಗ ಅಮ್ಮ ನನ್ನನ್ನು ಪೆದ್ದಿ ಅನ್ನೋ ಹಾಗೆ ಒಂದು ಹುಸಿ ನಗು ನಕ್ಕಳು. ನಂಗೊತ್ತು  ನೀನು ನಂಬೋಲ್ಲ ಅಂತ, ಆಯಿತು ಈಗಲೇ prove ಮಾಡ್ತಿನಂತೆ. ಈಗ ಮಳೆ ಜೋರಾಗಿದೆ ತಾನೇ? ಆಯ್ತು ಈಗ ನಾನು ಹೊರಗೆ ಹೋಗಿ ಆಕಾಶವನ್ನು ನೋಡಿ ನಾನು ಮತ್ತು ಅಮ್ಮ ಪಾರ್ಕ್ ವರೆಗೂ ಹೋಗಿ ಬಾರೋ ತನಕ ನಿಲ್ಲು. ಅಂತ ಕೇಳ್ತೀನಿ ನೋಡು.ಅವಾಗ್ ನೀನೆ ನಂಬ್ತಿ.  ಅಮ್ಮ ಕಾಫಿ ಕುಡಿದು ಹೊರಗೆ ಬರುವದರೋಳಗಾಗಿ ನನ್ನ ಪ್ರೀತಿಯ ಹುಡುಗನಿಗೆ ನನ್ನ ವಿನಂತಿ ತಲುಪಿಸಿದ್ದೆ. ಅವನದು ನನ್ನಡೆಗೆ ನಿಜವಾದ ಪ್ರೀತಿಯಮ್ಮ, ನೋಡು ನನ್ನ ಮಾತನ್ನೆಲ್ಲ ಕೇಳುತ್ತಾನೆ, ಎಂದು ಹರಟುತ್ತ ನಡೆದ ಸ್ವಲ್ಪ ಸಮಯದ ನಂತರ, ಪುಟ್ಟ ಮನೆಗೆ ಮೆಂಟಲ್ ಹಾಸ್ಪಿಟಲ್ ತುಂಬಾ ಹತ್ರ ಇರೋದ್ರಿಂದ ನಿನಗೆ ಸೈಡ್ ಎಫ್ಫೆಕ್ಟ್ಸ್ ಆಗ್ತಾ ಇದೆ ಕಣೋ , ಒಂದ್ಸಲ  ಹೋಗಿ ಚೆಕ್ ಅಪ್ ಮಾಡಿಸೋಣ, ಮನೆಗೆ ಹೋಗುವ ಮೊದಲು ಆಸ್ಪತ್ರೆಗೆ ಹೋಗೋಣ್ವಾ? !

            ಅಮ್ಮ ......ಗುರ್ರ್ರ್ ...ಅನ್ನುವಾಗ ಮತ್ತೆ ನನ್ನ ಪ್ರೀತಿಯ ಹುಡುಗನ ಆರ್ಭಟ ಶುರುವಾಯ್ತು. ಮನೆಗೆ ಹೋಗೋ ವರೆಗೂ ಬರಲ್ಲ ಅಂದೆಲ್ಲ ಈಗ ಏನ್ ಹೇಳ್ತಿಯ? ನನ್ನ ಪ್ರೀತಿಯ ಹುಡುಗ ನನ್ನಷ್ಟೇ ಪ್ರೀತಿಸ್ತಾನೆ, ಅವನ ಅತ್ತೆಯನ್ನಲ್ಲ ! ಅಮ್ಮ ನನ್ನ ಕಿವಿ ಹಿಡಿದು ಏನಂದೆ ಅಂದಾಗ, ಹೌದಮ್ಮ  ನೀನು ನನ್ನ ಬೈದ್ರೆ ಅವನಿಗೆ ಕೋಪ ಬರುತ್ತೆ, ಎಲ್ಲಿ ಒಂದು ಮುತ್ತು ಕೊಡು ನೋಡೋಣ ? ಮತ್ತೆ ಮಳೆ ನಿಂತು ಹೋಗುತ್ತೆ  ಅಂದೆ. ನಿನಗೇನು ತೆಲೆ ಕೆಟ್ಟಿದೆಯ ? ಪಾರ್ಕ್ನಲ್ಲಿ ಮುತ್ತು ಕೊಡು ಅಂತಿಯ ? ಅಮ್ಮ ನಾನೇನು ಅಪ್ಪನಿಗೆ ಮುತ್ತು ಕೊಡು ಅಂದ್ನ ? ಇಲ್ವಲ್ಲ ನಾಚ್ಕೊಬೇಡ  ಬೇಗ ಕೊಡು ಇಲ್ದೆ ಹೋದ್ರೆ  ಇಬ್ರೂ ನೆನೆದು ಹೋಗ್ತೇವೆ ಅಮ್ಮ .  ಆಯ್ತು ನೋಡೇ ಬಿಡೋಣ ಅಮ್ಮ ನನ್ನ ಕೆನ್ನೆಗೆ ಮುತ್ತಿಡಲು ಮಳೆರಾಯ ಶಾಂತ! ಏನೇ ಕಂದ ಇದು ವಿಸ್ಮಯ? ಎಂದು ಅಮ್ಮ ಕಣ್ಣು ಬಿಟ್ಟು ನೋಡ್ತಾ ಕುಳಿತು ಬಿಟ್ಲು   ! ನೋಡು  ನಿನಗೆ ಮಳೆರಾಯನಿಗಿಂತ  ಒಳ್ಳೆ ಅಳಿಯ ಬೆಕ?  ಈವತ್ತೇ ಅಪ್ಪನೊಟ್ಟಿಗೆ ಮಾತಾಡಿ ನನಗು ಮಳೆರಾಯನಿಗು ಮದ್ವೆ ಫಿಕ್ಸ್ ಮಾಡು.    ''ತುಂತುರು ಅಲ್ಲಿ ನೀರ ಹಾಡು, ಕಂಪನ ಇಲ್ಲಿ ಪ್ರೀತಿ ಹಾಡು, ಹಗಲಿರಲಿ ಇರುಳಿರಲಿ ನೀನಿರದೆ ನಾ ಹೇಗಿರಲಿ?.......'' ಪ್ರೇಮ ಕವಿ ಕಲ್ಯಾಣರ ಪತ್ನಿಯೆಡೆಗೆ, ಸಣ್ಣ ಮರುಕ! 

29 comments:

  1. ತುಂಬಾ ಚೆನ್ನಾಗಿ ಬಂದಿದೆ ಈ ಲೇಖನ. ನಿನ್ನ ಮಳೆರಾಯನ ಮದುವೆಗೆ ನಮಗೆ ಕರೆಯೋದನ್ನ ಮರೀಬೇಡ ...:))

    ಮಳೆ ಅಂದ್ರೆ ಅದ್ರ ಮಜಾನೆ ಸೂಪರ್! ನಿಮ್ಮ ವರ್ಣನೆ ಇನ್ನೂ ಸೂಪರ್.

    ನಾನು ನನ್ನ ಸ್ಕೂಟಿಯಲ್ಲಿ ಕಾಲೇಜಿನಿಂದ ಮನೆಗೆ ಬರುವಾಗ ಮಳೆಯಲ್ಲಿ ನೆನೆದ ಸನ್ನಿವೇಶ ನೆನಪಿಗೆ ಬಂತು ಈ ಪೋಸ್ಟ್ ಓದುವಾಗ.. ಅದು ನಡೆದು ಸುಮಾರು 8 ವರ್ಷ ಕಳೆದಿದೆ, ಆದರೆ ಆ ಮಳೆಯ ಸುವಾಸನೆ ಮನದಲ್ಲಿ ಇನ್ನು ಚಿಗುರಾಗಿಯೇ ಉಳಿದಿದೆ. Keep writing! loved this post.

    ReplyDelete
  2. tumba chennagide hige munduvarisi

    ReplyDelete
  3. Super...
    Bar beda andre baralla, Ba andre Barta naa..!!

    ReplyDelete
  4. Odi mugiso astaralli nananna manasu ondu round dharwad sutta odadi bantu...

    Awesome article :)

    ReplyDelete
  5. ''ಧಾರವಾಡ ಮಳಿ ನಂಬ ಬ್ಯಾಡ, ಬೆಳಗಾವಿ ಹುಡುಗಿ ನಂಬ ಬ್ಯಾಡ!'' is good..:):))

    ReplyDelete
  6. ಅಶ್ವಿನಿ..

    ನವಿರು ಭಾವನೆಗಳ ಅನಾವರಣ..

    ಒಂದು ಚಂದದ ಮಳೆ..
    ಹೂ.. ಕುಸುಮಗಳ ಮೇಲೆ ಬಿದ್ದಂತೆ...

    ಚಂದದ ಬರವಣಿಗೆ.. ಅಭಿನಂದನೆಗಳು...

    ReplyDelete
  7. ನಾವು ಸ್ಕೂಲಲ್ಲಿದ್ದಾಗ ನಡೆದದ್ದು ಇದು... ನಾವು ೯ನೇ ತರಗತಿಯಲ್ಲಿದ್ದಾಗ ಒಂದು ಪದ್ಯ ಇತ್ತು. ಅದರ ಶೀರ್ಷಿಕೆ 'ಮಳೆ' (ತೃತೀಯ ಭಾಷೆ ಪಠ್ಯಪುಸ್ತಕ) ಆ ಪದ್ಯಕ್ಕೆ ನಾನು ನನ್ನ ಗೆಳತಿ ಶ್ರುತಿ ಸೇರಿ tune composition ಕೂಡ ಮಾಡಿದ್ವಿ. ನಮ್ ಕನ್ನಡ ಟೀಚರ್ ತರಗತಿಗೆ ಬಂದ ತಕ್ಷಣ ಪದ್ಯ ಹಾಡಿಸ್ತಾ ಇದ್ರು. ಮೊದಲು ಹುಡುಗಿಯರಷ್ಟೇ ಹಾಡ್ತಾ ಇದ್ವಿ. ಮಳೆ ಶುರು ಆಗೋದು.. ಆಮೇಲೆ ಹುಡುಗರು ಹಾಡೋಕೆ ಶುರು ಮಾಡಿದಾಗ ಮಳೆ ನಿಲ್ಲೋದು... ಮತ್ತೆ ಇಬ್ರೂ‌ ಒಟ್ಟಿಗೆ ಹಾಡಿದಾಗ ಮತ್ತೆ ಮಳೆ ಶುರುವಾಗೋದು....ಆ ಪದ್ಯ ಮುಗಿಸುವವರೆಗೆ ಇದೇ‌ ರೀತಿ ಆಗ್ತಿತ್ತು. :)‌

    ReplyDelete
  8. thanks a lot to all the new friends..i hope to continue with the same zeal:-), Indushree yes i do remember the poem it was ''Sanana sanana saviya raagadi maleya dhareyu suriyali, hanigalondere bidade maateya udaradaaladi iliyali'' :-)

    ReplyDelete
  9. oh.... so nice da wen ur marriage ah ?
    pl tell me shore i ll bring rain jacket and all k na else i ll gift u one umbrella k na always rain wit u so k na

    ReplyDelete
  10. Beautiful article... after reading this boys will get jealous of Rain... God bless miss..

    ReplyDelete
  11. ಎಷ್ಟು ಫ್ರೆಶ್ಶಾಗಿದೆ ನಿಮ್ಮ ಬರಹ..!
    Thumbs up!
    :-)

    -RJ

    ReplyDelete
  12. ಇಡೀ ಲೇಖನ ಸುಗಸಾಗಿದೆ. ಉತ್ತಮ ನಿರೂಪಣೆ. ಅಕ್ಷರ ಕುಣಿಸೋದನ್ನ ಎಲ್ಲಿ ಕಲಿತ್ರಿ..?

    ReplyDelete
  13. ಸುಂದರ ಪರಿಕಲ್ಪನೆ....ಚೆಂದವಿದೆ ನಿಮ್ಮ ಬರಹ....

    ReplyDelete
  14. tumbaa channagide.
    if more raining pls visit girishrainlover.blogspot.com

    ReplyDelete
  15. good playing with the words!! you are a fantastic writer. But why you want to go for a wrong profession so intelligently called "engineering"???

    ReplyDelete
  16. ದಾರವಾಡ ಮಳಿಗೂ ಬೆಳಗಾವಿ ಹುಡುಗಿಗೂ ಎಲ್ಲಿಂದೆಲ್ಲಿಯ ಸಂಬಂಧ...? ಕೆಲವೊಮ್ಮೆ ನಂಬಬೇಕ್ರಿ..

    ಪತ್ರೇಶ್ ಹಿರೇಮಠ

    ReplyDelete
  17. ವಾಹ್ , ಸೂಪರ್ . ಒಳ್ಳೆ ಮಳೆಗೆ ನೆನೆದ ಅನುಭವ. ನವಿರಾದ ಬರಹ.

    ReplyDelete
  18. ಮಧುರ ಭಾವಗಳ ಸೋನೆ ಮಳೆ...:):):)

    ReplyDelete
  19. I just recalling the joyous i had experienced in early days..so sweet!

    ReplyDelete
  20. Its so freshh.. gud one. I liked it so much. :)

    ReplyDelete
  21. ಬಹಳ ನವಿರಾದ ಬರಹ ! ಏನೋ ಹೊಸ ಪರಿಕಲ್ಪನೆಯ ,,, ಮಳೆ ಅಲ್ಲದಿದ್ದರೂ ಸಿಂಚನ ದಲ್ಲಿ ಮಿಂದ ಹಾಗಾಯ್ತು .ನಿಮಗೆ ಬರೆಯುವ ಕಲೆ ಸಿದ್ದಿಸಿದೆ ಅಶ್ವಿನಿ , ಶುಭವಾಗಲಿ .

    ReplyDelete
  22. ಹಾಗೆ ನಮ್ಮನ್ನೂ ಮಳೆಯಲ್ಲಿ ತೇಲಿಸಿವಬಿಟ್ರಿ... ನಿಮ್ಮ ಹುಡುಗ ನಿನ್ನೆ ನಮ್ಮ ಕೆಡೆ ಬಂದಿದ್ದ... ಅದ್ಯಾಕೋ ತುಂಬಾ ಸಿಟ್ಟಲ್ಲಿದ್ದ .. ಅವನ ಆರ್ಭಟಕ್ಕೆ ೨ ಮರಗಳು ಧರೆಗುರುಳಿದ್ದವು.. ಬಹುಷಃ ನಿಮ್ಮ ಮೇಲೆ ಕೋಪಿಸಿಕೊಂಡಿರಬೇಕು ..
    http://nenapinasanchi.wordpress.com

    ReplyDelete
  23. super ri .... hangara namma uttar karntakakke baragala illa inn mele ... namge yavaga beku male avaga nimgondu mail madidre saku ...

    ReplyDelete