Total Pageviews

Wednesday, August 24, 2011

ಬದುಕಿರುವಾಗಲೇ ಖಾಲಿಯಾಗುವ ಖಾಯಿಲೆ!


                         ಬದುಕು ಒಂದು ಖಾಲಿ ಕ್ಯಾನ್ವಾಸ್  ಹಾಳೆಯಂತೆ! ಬೆಳಗ್ಗೆ ಎದ್ದು ಬೃಷ್ ಮಾಡಲು ಹೋದಾಗ ಖಾಲಿಯಾದ ಟೂಥ್ ಪೇಸ್ಟ್ ಟ್ಯೂಬ್  ಕಂಡು ಏನೇನೋ  ವಿಚಾರಧಾರೆಗಳ ಸಂಚಲನ. ಎಲ್ಲ ಖಾಲಿಯಾದ ವಸ್ತುಗಳು replace  ಆಗುತ್ತಲೇ ಇರುತ್ತವೆ. ನಾವು ಪ್ರತಿನಿತ್ಯ ಬಳಸುವ ಪದಾರ್ಥಗಳು, ಮಹಡಿ ಮೇಲಿನ syntax , ಯಾವುದೇ ಆಗಿರಲಿ ಖಾಲಿಯಾದಾಗಲೆಲ್ಲಾ ಅವುಗಳನ್ನು ಪುನಃ replace ಮಾಡಲಾಗುತ್ತದೆ. replace ಆದ ವಸ್ತುಗಳು ಒಂದು ದಿನ ಖಾಲಿಯಾಗುತ್ತ  ಹೋಗುತ್ತವೆ.ಇದನ್ನು ಗಮನಿಸದೆ ದಿನ ಕಳೆಯುವ ನಾವುಗಳು ದೈಹಿಕವಾಗಿ ( ಕೆಲೊವೊಮ್ಮೆ ಮಾನಸಿಕವಾಗಿ ) ಖಾಲಿಯಾಗುತ್ತ ಹೋಗುತ್ತೇವೆ. ಎಂಥ ವಿಚಿತ್ರವಿದು?

                       ಅತೀ ಸಂತುಷ್ಟ ಮನುಷ್ಯನು ಕೆಲೊವೊಮ್ಮೆ ಖಿನ್ನತೆಗೊಳಗಾಗೋದು ನಿಜ, ಹೀಗೇಕಾಗುತ್ತದೆ? ತುಂಬಿದ ಸಂಸಾರ, ಒಬ್ಬೊರನ್ನೊಬ್ಬರು ಅಗಾಧವಾಗಿ ಪ್ರೀತಿಸುವ ದಂಪತಿ, ಮುದ್ದಾದ ಮಕ್ಕಳು, ಯಾವುದೂ ಕೊರತೆ ಇರದ ಮನೆ, ಹೀಗಿದ್ದಾಗಲೂ ಆಕೆ ಬೇರೆ ಯಾವುದೊ ದಿಗಂತಕ್ಕೆ ಕೈ ಚಾಚಿ ಕುಳಿತುಕೊಂಡಿರುತ್ತಾಳೆ, ಆತ ತನ್ನ ಕೆಲಸದಲ್ಲೇ ಮುಳಗೆದ್ದು ಹೋಗಿರುತ್ತಾನೆ, ಮಕ್ಕಳು ತಂದೆ- ತಾಯಿಯರ ಪ್ರೀತಿ-ಮಮತೆಗಾಗಿ ಚಡಪಡಿಸುತ್ತವೆ.

                       ದಾಂಪತ್ಯ ಹಳೆತಾಗುತ್ತ ಹೋದಂತೆ, ಅಲ್ಲಿ ದೈಹಿಕ ಕಾಮನೆಗಳು ಕಡಿಮೆಯಾಗಿ ಮಕ್ಕಳ ಲಾಲನೆ-ಪಾಲನೆಗಳಲ್ಲಿ ಸಮಯ ವಿನಿಯೋಗಿಸಲ್ಪಡುತ್ತದೆ . ಇದು ಸಹಜ  ಪ್ರಕ್ರಿಯೆ. ಆದರೆ ಪಾಲಕರ ಮತ್ತು ಮಕ್ಕಳ ನಡುವೆ ಸಂಬಂಧಗಳ  warmth ನಶಿಸಿ ಹೋದಾಗ, ಅಪ್ಪ ದುಡಿದು ತಂದು ಹಾಕುವ, ಅಮ್ಮ ಅಡುಗೆ ಮಾಡುವ ಮತ್ತು ಮಕ್ಕಳು ಮಾರ್ಕ್ಸ್ ತರುವ ಮಷಿನ್ ಗಳಾಗಿಬಿಡುತ್ತಾರೆ.

                       ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲ ದಂಪತಿಗಳೂ ಕಾಲಿಗೆ ಸಮಯದ ಚಕ್ರವನ್ನು ಕಟ್ಟಿಕೊಂಡೆ ಓಡಾಡುವ working parents. ನೂರಕ್ಕೆ ಒಂದರಂತೆ ಹೌಸ್ ವೈವ್ಸ್ ಕಾಣಸಿಗುತ್ತಾರೆ, ಇದು ಅವರವರ ಇಷ್ಟ, ಕಷ್ಟ ಮತ್ತು ವೈಯಕ್ತಿಕ ವಿಷಯ ಬಿಡಿ. ಆದರೆ ಪ್ರಶ್ನೆ ಇರುವುದು ನಮ್ಮ ಪಾಲಕರು ನಮ್ಮನ್ನು ಬೆಳಸಿದಂತೆ ಇಂದಿನ ಪಾಲಕರು ತಮ್ಮ  ಮಕ್ಕಳನ್ನು ಬೆಳೆಸಲು ಸಾಧ್ಯವೇ? ಖಂಡಿತ ಇಲ್ಲ. ಅಜ್ಜ ಅಜ್ಜಿಯರು ನಮ್ಮ ಪಾಲಕರನ್ನು ಬೆಳಸಿದಂತೆ ನಮ್ಮನ್ನು ನೋಡಿಕೊಳ್ಳಲಾಗಿಲ್ಲ ಎಂದು ಸ್ವತಹ ಪಾಲಕರೇ ಒಪ್ಪಿಕೊಳ್ಳುತ್ತಾರೆ.

                       ಮಕ್ಕಳ ವಿಕಾಸಕ್ಕಾಗಿ ಎಷ್ಟು ಜನ ಪಾಲಕರು ನಿಜವಾಗಿಯೂ ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ ಮಾಡುತ್ತಿದ್ದಾರೆ?  ಯಾವುದೇ ಶಾಲೆಯ ಪಾಲಕರ ಮೀಟಿಂಗ್ಸ್ ಗಳನ್ನು ನೋಡಿ, ಎಲ್ಲ ಪಾಲಕರೂ ಮಕ್ಕಳ ಮಾರ್ಕ್ಸ್ ಬಗ್ಗೆಯೇ ಚರ್ಚಿಸುತ್ತಾರೆ. ಅಯ್ಯೋ  ನಿಮ್ಮ ಮಗಳು ಪಾರದಳು ಬಿಡಿ ಇಂಜಿನಿಯರಿಂಗ್ ಸೀಟ್ ಸಿಕ್ತಂತೆ, ನನ್ನ ಮಗ ಈಗ PUC ಕಣ್ರೀ, ಮೆಡಿಕಲ್ ಸೀಟ್ ಸಿಗಬೇಕಿದೆ ಹೆಂಗ್ ಮಾಡ್ತಾನೋ ಏನೋ? ನನ್ನ ಮಗಳು cet ನಲ್ಲಿ ೫೦ನೆ ರಾಂಕ್ ಗೊತ್ತ? ನನ್ನ ಮಗ 10th ನಲ್ಲಿ 92 % ಮಾರ್ಕ್ಸ್ ತೆಗೆದಿದಾನೆ. ಆದರೂ competetion ಜಾಸ್ತಿ ಬಿಡಿ highest  99 % ಇದೆ! ಹುಹ್ ಎಂಥ ದಿವ್ಯ ದರ್ಶನ! ಅಖಂಡ ಭಾರತ ದೇಶದ ಮುಂದಿನ ಪ್ರಜೆಗಳ ಪಾಲಕರ ಮನದಾಳದ ಮಾತುಗಳಿವು.

                      ನಮ್ಮ ಸಮಾಜ ತಾಂತ್ರಿಕವಾಗಿ ಬೆಳೆದು ಹೋದಂತೆಲ್ಲ ನಮ್ಮ  ಸಂಬಂಧಗಳೆಲ್ಲ extinction ಹಂತ ತಲುಪುತ್ತಿವೆಯೇ? ಯಾವುದೋ ಸ್ಪರ್ಧೆಯಲ್ಲಿ ಸೋತು ಬಂದ ಮಗುವನ್ನು ತನ್ನ ಮಡಿಲಿನಲ್ಲಿ ಮಲಗಿಸಿಕೊಂಡು ಸಾಂತ್ವನ ಹೇಳುವ ತಾಯಂದಿರು ಕಡಿಮೆಯಾಗುತ್ತಿದ್ದಾರೆ. ಹಸಿವೆ ಇಲ್ಲ ಎಂದು ಮುನಿಸಿಕೊಳ್ಳುವ ಮಗುವನ್ನು ತನ್ನ ಕೈಯಾರೆ ತಿನಿಸುವ ಅಮ್ಮಂದಿರಿಲ್ಲ. ಅಪ್ಪನ ತಬ್ಬುಗೆಯ warmth ಗೊತ್ತಿಲ್ಲ. ಇಂಥ ಅನೇಕ ಸ್ಮಾಲ್ pleasures ಗಳಿಂದ ವಂಚಿತರಾಗುತ್ತಿರುವ ಇಂದಿನ ಮಕ್ಕಳಿಗೆ ಅಜ್ಜ- ಅಜ್ಜಿಯ ಆಸರೆಯಾದರು ಇದೆಯೇ? ಅದು ಇಲ್ಲ. ಅಜ್ಜಿಯ ಮಡಿಲಿನ ಸ್ವರ್ಗ ಸುಖ ಗೊತ್ತಿಲ್ಲ, ಅಜ್ಜನ ನೀತಿ ಕಥೆಗಳನ್ನು ಕೇಳಿಲ್ಲ, ಅಜ್ಜಿಯ ಕೈ ತುತ್ತಿನ ರುಚಿಯೇ ತಿಳಿದಿಲ್ಲ, ಅಜ್ಜನೊಟ್ಟಿಗೆ ಕೈ ಹಿಡಿದುಕೊಂಡು ಗಾಳಿ ವಿಹಾರಕ್ಕೆ ಹೋಗಿಲ್ಲ.

                     ನಾವುಗಳೆಲ್ಲ ಯಾಂತ್ರಿಕವಾಗಿ ಬದುಕುತ್ತಿರುವುದು ನಿಜ. ಎಲ್ಲವು materialistic ಜೀವನದ ಮೇಲೆಯೇ ನಿರ್ಧಾರಿತವಾಗಿದೆ. ಆದರೂ ನಮ್ಮೆಲ್ಲ ಭಾವನೆಗಳನ್ನು materialize ಮಾಡಲಾಗದೆ ಹೆಣಗುತ್ತಿದ್ದೇವೆ. ಮಾನವೀಯ ಮುಲ್ಯಗಳನ್ನು ಭಾವನಾತ್ಮಕವಾಗಿ ಮೌಲ್ಡ್  ಮಾಡುವಲ್ಲಿ ವಿಫಲರಾಗುತ್ತಿದ್ದೇವೆ. ನಿರ್ಜೀವ ವಸ್ತುಗಳು ಖಾಲಿಯಾದಾಗ replace ಮಾಡುವ ನಾವುಗಳು, ಬದುಕಿರುವಾಗಲೇ ಖಾಲಿಯಾಗಬಾರದಲ್ಲವೇ?