Total Pageviews

Friday, February 10, 2012

ಮಾತನಾಡದೇ ಎಲ್ಲ ಹೇಳುವ ಗೋಡೆಗಳು!

                ನಮ್ಮ ಡಿಗ್ರಿ ಕಾಲೇಜ್ ನ, ಹಾಸ್ಟೆಲ್ ಗೋಡೆಗಳು ಬಿಟ್ಟು ಬಿಡದೆ ನೆನಪಾಗಿ ಕಾಡುತ್ತಿವೆ ! ಗೋಡೆಗಳು ಇಟ್ಟಿಗೆ ಸಿಮೆಂಟು ಮಿಶ್ರಣದ, ನಿರ್ಜೀವ್ ವಸ್ತು ಎಂದೂ ನಮಗೆಂದೂ ಕಂಡೆ ಇರಲಿಲ್ಲ, ಪ್ರತಿ ಹುಡುಗಿಯ ವ್ಯಕ್ತಿತ್ವ  ಬಿಂಬಿಸುವ, ಹಾಗೂ ನಮ್ಮೆಲ್ಲರ ಹಸ್ತಾಕ್ಷರದ ಮುತ್ತಿಡಿಸುಕೊಳ್ಳುವ ಹುಡುಗನಂತೆ ಗೋಚರಿಸುತ್ತಿದ್ದವು. ನಮ್ಮ ಹುಚ್ಚು ತಾಣದ ಪರಮಾವಧಿ ಅದ್ಯಾವ್ ಪರಿ ಇತ್ತೆಂದರೆ, ನಾಲ್ಕು ಗೋಡೆಗಳೇ ನಮ್ಮ ಸರ್ವಸ್ವವೂ ಆಗಿ ಹೋಗಿದ್ದವು.

                   ಏನೆಲ್ಲಾ ಬರೆಯುತ್ತಿದ್ದೆವು? ಪ್ರತಿ ಸಂಭ್ರಮಗಳ  ದಿನಾಂಕ, ಚಿಕ್ಕ ಚಿಕ್ಕ ಗೆಲುವುಗಳ ನೆನಪು, ಜಗಳವಾದ ದಿನ, ಮತ್ತೆ ಕೂಡಿದ ಬಿಸಿ ಅಪ್ಪುಗೆ, ಸ್ನೇಹಿತೆಯ ಮದುವೆಯ ವಾರ, ತುಂಬಾ ಇಷ್ಟವಾಗುವ ಗೀತೆ, ಕವನ,ಕನಸಲ್ಲಿ ಕಾಡುವ ಹುಡುಗನ ತಲೆಯೇ  ಇರದ ಚಿತ್ರ, ನಮ್ಮನ್ನು ಸದಾ ಜಗೃತೆಯಿಂದ  ಇರುವಂತೆ ಮಾಡುವ ಸ್ವಾಮಿ ವಿವೇಕಾನಂದರ ಧ್ಯೇಯ ವಾಕ್ಯ, ಕಾಡಿಸುವ ಅಡ್ಡಡ್ಡ ಹೆಸರುಗಳು, ನಮ್ಮ ನೆಚ್ಚಿನ ನಾಯಕರ ಪಟಗಳು, ಗೋಡೆಗೆ ನೋವಾಗುವಂತೆ ಚುಚ್ಚಿದ ಮೊಳೆಗಳಿಂದ ನೇತಾಡುವ ಕ್ಯಾಲೆಂಡರ್, ನಮ್ಮ ಎತ್ತರ ನೋಡಿಕೊಳ್ಳಲು ಎಳೆದ ಉದ್ದ ರೇಖೆ ಇನ್ನು ಅದೆಷ್ಟು ಹೊಸ ಬ್ಯಾಚ್ಗಳಿಗೆ ಅದು ಸಹಕಾರಿಯಾಗಬಲ್ಲುದೋ?! ಒಂದೇ ಎರಡೇ ಪಟ್ಟಿ ಮಾಡುತ್ತಾ ಕುಳಿತರೆ, ದಿನ ಪೂರ್ತಿ ಸಾಲದು.

                   ಅಪ್ಪ-ಅಮ್ಮನ ನೆನಪಾದಾಗ ಸುಮ್ಮನೆ ಗೋಡೆಗೆ ವರಗಿಕೊಂಡು ಅತ್ತಾಗ ಅದೆಂಥ ಆಪ್ತ ಸಮಾಧಾನ! ಗೊತ್ತಿಲ್ಲದೇಯೋ, ಗೊತ್ತಿದ್ದೋ ಸಂಭ್ರಮದ ಕ್ಷಣಗಳಲ್ಲಿ ಗೋಡೆಯನ್ನು ಅಪ್ಪಿ ಮುದ್ದಾಡಿದಂಥ ಮಧುರ ನೆನಪು, ಬೆಳ ಬೆಳಗ್ಗೆ ಓದಲು ಎದ್ದು ಕುಳಿತು ಕಣ್ಣು ಜಗ್ಗಿ ಜಗ್ಗಿ ಓದಲಾಗದ ಸಂದರ್ಭದಲ್ಲಿ ಗೋಡೆಯನ್ನೇ ತಲೆ ದಿಂಬ್ಎಂದು ತಿಳಿದು ಹಾಗೆ ಕಣ್ಮುಚ್ಚಿ ಅನುಭವಿಸುವ ನಿದ್ದೆಯ ಸವಿ, ಒಂಟಿತನಕ್ಕೂ ಏಕಾಂತಕ್ಕೋ ಇರುವ ವ್ಯತ್ಯಾಸವನ್ನ ಅರೆಯುವಂತೆ ಮಾಡುವುದೇ ಈ ಗೋಡೆಗಳು.

                  ಹಾಗಾಗಿಯೇ ಈಗಲೂ ನನಗೆ ಮನೆಗಳಿಗಿಂತ ಗೋಡೆಗಳೇ ತುಂಬಾ ಆಪ್ತವೆನಿಸುತ್ತವೆ, ಇದು ಕೊಂಚ ವಿಪರೀತ ಅನ್ನಿಸಿದರೂ, ಗೋಡೆಗಳು ಮನೆಗೆ ಹೇಗೆ ಆಧಾರ ಸ್ಥಂಭ ಗಳಾಗಿರುತ್ತವೆಯೋ, ಹಾಗೆಯೇ ನಮಗೆ ಗೊತ್ತಿಲ್ಲದೇ ನಮ್ಮದೇ ಒಂಟಿತನದ ಗೆಳೆಯನಂತಾಗಿ ಬಿಡುತ್ತವೆ. ಕೇವಲ ಮನೆ, ಹಾಸ್ಟೆಲ್, ಹಾಗೂ ರೂಮ್ಗಳ ಮಾತಲ್ಲ, ನಿಮ್ಮ ನಿಮ್ಮ ಕಛೇರಿಗಳ ಗೋಡೆಗಳನ್ನು ಒಮ್ಮೆ ಮಗ್ಗುಲು ಬದಲಿಸಿ ನೋಡಿ, ನಿಮಗೆ ಗೊತ್ತಿಲ್ಲದೇ ಅದೆಷ್ಟು ಸಲ ಅವಗುಳ ಅಪ್ಪುಗೆ ಇಂದ ನಿರಾಳ ಗೊಂಡಿದ್ದಿರಿ ಎಂಬುದು ಜ್ಞಾಪಿಸಿಕೊಳ್ಳಿ. ಮನೆಯ ಗೋಡೆಗಳು , ತುಂಬಾ ಶಾಂತ  ಸ್ವಭಾವದ, ಗಂಭೀರ ಗೆಳೆಯನಂತೆ  ಕಂಡು ಬಂದರೂ, ಆ ಘನಘೋರ ಗಾಂಭೀರ್ಯದ ನಡುವೆಯೂ, ವಯಸ್ಕರಿಗೆ ಆಧಾರ ವಸ್ತುವಿನಂತೆ, ಚಿಕ್ಕ ಮಕ್ಕಳಿಗೆ ತಮ್ಮ ಮನದಾಳದ ರೇಖೆಗಳನ್ನು ಗೀಚುವ ಹಾಳೆಗಳಂತೆ ಕಾಣಿಸುತ್ತವೆ.

                   ನಾವೆಲ್ಲರೂ ಒಂದಿಲ್ಲೊಂದು ನಿರ್ಜೀವ ವಸ್ತುವಿನೋಟ್ಟಿಗೆ ಭಾವನಾತ್ಮಕವಾಗಿ ಬೆಸೆದು ಕೊಂಡಿರುತ್ತೇವೆ, ಅದು ಅಜ್ಜ ಕೊಡಿಸಿದ ಮೊದಲ ಕೈ ಗಡಿಯಾರ, ಮೊದಲ ದ್ವಿಚಕ್ರ ವಾಹನ,  ಶಾಲೆ, ಕಾಲೇಜ್ ಗಳಲ್ಲಿ ನಾವು ನಾವಷ್ಟೇ ಕುಳಿತುಕೊಳ್ಳುವ ನಿರ್ದಿಷ್ಟ ಜಾಗ,  ಅಮ್ಮ ಮೊದಲು ಕೊಡಿಸಿದ ಉಂಗುರ, ಅಕ್ಕ ಕೊಡಿಸಿದ ಕಾದಂಬರಿ, ತಮ್ಮನ ಅಲಾರ್ಮ್, ಇಂಥ ಅನೆಕವೂ ನಮ್ಮದೇ ಎಂಬ ವಿಪರೀತ ಪೋಸ್ಸೇಸ್ಸಿವ್ನೆಸ್ಸ್  ಬೆಳೆಸಿಕೊಂಡಿರುತ್ತೇವೆ, ಅದ್ಯಾಕೆ ಹೀಗೆ ಈ ನಿರ್ಜೀವ ವಸ್ತುಗಳ ಮೇಲೆ ನಮಗೆ ಅಷ್ಟೊಂದು ಪ್ರೇಮ?? ವ್ಯಕ್ತಿಗಳಾದರೆ ಬದುಕಿನ ತಿರುವುಗಳಿಗೆ  ಒಳಗಾಗಿ ನಮ್ಮನ್ನು ಬಿಟ್ಟು ಹೋಗಬಹುದು, ಆದರೆ ಇವುಗಳು ನಾವೇ ಬಿಡುವ ವರೆಗೂ ನಮ್ಮನ್ನು ಬಿಡದೆ ಇರುವ ಕಾರಣಕ್ಕೋ?? ಅಥವಾ ನಮ್ಮನ್ನು ಎಂದೂ ಒಂಟಿತನ ಕಾಡದಿರಲಿ ಎಂದು ನಾವೇ ನಿರ್ಮಿಸಿಕೊಳ್ಳುವ pseudo  ಮುದ ನಿಡುವ ನಮ್ಮವೇ ಅಂದು ಕೊನೆವರೆಗೂ ಗುರುತಿಸುಕೊಳ್ಳುವ ಐಡೆಂಟಿಟಿ ಗಳು ಆಗಿರಬಹುದು.


                     ನಮ್ಮದೇ ಅನ್ನಿಸಿಬಿಟ್ಟ ಗೋಡೆಗಳು ಈಗ ಅದ್ಯಾವ ಹುಡುಗಿಯರ ಸ್ವತ್ತಾಗಿವೆಯೋ ಯಾಂವ ಬಲ್ಲ?  ಕೊನೆವರೆಗೂ ನಮ್ಮದೇ ಗೋಡೆಗಳಾಗಿ ಉಳಿಯಬೇಕೆಂದು ಬಯಸುವುದು, ಹತ್ತಿದ ಬಸ್ಸು ಇಷ್ಟವಾಯಿತೆಂದು ನಮ್ಮ ನಿಲ್ದಾಣ ಬಂದರೂ ಇಳಿಯದೇ ಅಲ್ಲೇ ಕುಳಿತುಕೊಳ್ಳುವ ಪ್ಯಾಲಿತನ ಅಲ್ಲವೇ?? ಹಾಗಂತ ನಾವಿದ್ದ ಹಳೆ ಮನೆ, ನಾವ್ ಆಡಿದ ಶಾಲೆ ಮೈದಾನ, ಕಾಲೇಜ್ ಮುಂದಿನ ವಿಶಾಲ ಆಲದ ಮರ, ನಾವು ನಡೆದಾಡಿದ ರಸ್ತೆ, ಓಡಾಡಿದ ಬೀದಿ, ಪಕ್ಕದ್ಮನೆ ಹುಡುಗ, ದೂರದಲ್ಲೆಲ್ಲೋ ಕುಳಿತು ಬಿಕ್ಷೆ ಬೇಡುತ್ತಿದ್ದ ಅಶಕ್ತ ಅಜ್ಜಿ, ಪಾರ್ಕ್ನಲ್ಲಿ ಕಂಡ ಅದ್ಯಾವುದೋ ಮುದ್ದು ಮಗುವಿನ ಮುದ್ದು ನಗು, ಇದ್ಯಾವುದನ್ನು ನಾವು ವಿಪರೀತ ಹಚ್ಚಿಕೊಳ್ಳಲಾಗುವದಿಲ್ಲ,ಇವುಗಳನ್ನೆಲ್ಲ ಫಾರ್ ಟೈಮ್ ಬಿಇಂಗ್ ಅಷ್ಟೇ ಅನುಭವಿಸಿ ಸುಮ್ಮನಾಗಬೇಕು, ಯಾಕೆಂದರೆ ಇವುಗಳನ್ಯಾವುದನ್ನೂ ನಾವು ಕೊನೆವರೆಗೂ carry  ಮಾಡಲಾಗುವುದಿಲ್ಲ, ನಮ್ಮ ನೆನಪಿನ ಅಂಗಳದಲ್ಲಿ ಇವುಗಳದ್ದೆಲ್ಲ ಮಧುರ ಅಧ್ಯಾಯಗಳಷ್ಟೇ ಹೊರತು, ಇವುಗಳೇ ನಮ್ಮ ಅಸ್ತಿತ್ವಗಳು ಎಂದಾಗಲು ಸಾಧ್ಯವಿಲ್ಲ, ಹಾಗಂತ ಅಂದುಕೊಂಡೆ ಸಮಾಧಾನ ಪಡಬೇಕು.

                     ಬೇಜಾರಾದಾಗ ತಿರುಗುವ ಸೀಲಿಂಗ್ ಫ್ಯಾನ್ ನೋಡಿ ನಮ್ಮ ನೆನಪಿನ DVD  player  ಸ್ವಿಚ್ ಆನ್ ಮಾಡಿದಾಗ, ಪ್ಲೇ ಮಾಡಲು ಯಾವ ಮಧುರ ನೆನಪೇ ಇಲ್ಲದಿದ್ದರೆ ಹೇಗೆ? ಕೆಲುವು ಕ್ಷಣಗಳು ನೆನಪಾಗಿರುವುದೇ ಸಂಭ್ರಮ, ಆ ನೆನಪುಗಳನ್ನು ಕೊನೆ ವರೆಗೂ rewind  ಮಾಡಿ ನೋಡುವ ಆನಂದಕ್ಕಿಂತ, ಇನ್ನೊಂದು ಖುಷಿ ಕೊಡುವ ಸಂಗತಿ ಇದೆಯೇ??








Tuesday, February 7, 2012

ಬರೆಯುವ ಸಂಭ್ರಮಕ್ಕೆ ನಾಲ್ಕು ಮುನ್ನುಡಿ !!!

            
             

         
               ಓದು, ಬರಹ ಎಲ್ಲದಕ್ಕೂ ಕಳೆದ ಐದು ತಿಂಗಳಿಂದ ಬ್ರೇಕ್ ಹಾಕಿದ್ದೆ. ದಿನ ಬೆಳೆಗ್ಗೆ ಎದ್ದು ಕಾಲೇಜ್ ಗೆ  ಓಡಿ ಹೋಗುವ ಪರಿ, ಕ್ಲಾಸ್ ಗಳು, ಸೆಮಿನಾರ್ ಗಳು, ಪ್ರಾಜೆಕ್ಟ್, ಅಸ್ಸೈನ್ಮೆಂಟ್ಗಳು, ಇವುಗಳ ಮದ್ಯ ಕೊಂಚ್ ಕೊಂಚ್ refreshments  ಅನ್ನೋ ಹಾಗೆ ಕಂಡು ಕೊಳ್ಳುವ ಚಿಕ್ಕ-ಪುಟ್ಟ ಸಂಭ್ರಮಗಳು, ಇನ್ನೂ ಒಂದು ವರೆ  ವರ್ಷದ ವರೆಗೆ ನಾನು ಅದೃಷ್ಟವಂತೆಯೇ !!
                  
                ಬದುಕಿರುವಾಗಲೇ ಖಾಲಿಯಾಗುವ ಖಾಯಿಲೆ ನನ್ನ ಕೊನೆಯ ಪೋಸ್ಟ್ , ಅದಾದಮೇಲೆ  ಒಂದೇ ಒಂದು ಹೊಸ ಪೋಸ್ಟ್ ಕೂಡ ಬರೆಯಲಾಗಲಿಲ್ಲ, ಅದಕ್ಕೆ ಸ್ನೇಹಿತರೆಲ್ಲರೂ ನೀವೇ ಖಾಲಿಯಾಗಿಬಿಟ್ಟಿರ? ಎಂದು ಕಾಲೆಳೆಯುತ್ತಿದ್ದಾರೆ ;). ಬರಿಯಲೇ ಬೇಕು ಎಂದು ಶತಾಯು ಗತಾಯ  ನಿರ್ಧಾರ ಮಾಡಿ ತಲೆ ತುಂಬಾ ಸಾವಿರಾರು ವಿಚಾರಗಳನ್ನು ಇಟ್ಟುಕೊಂಡು ಶುರು ಮಾಡಿದ್ದೇನೆ. ನಾನೀಗ ಬರೆಯುವುದು ನನ್ನದೇ ಆದ ವಿಚಾರಗಳಿಗೆ ವಿರುದ್ಧವಾದದ್ದು, ಆದರೂ ಈಗ ಬರೆಯುತ್ತಿರುವುದೇ ಸರಿ ಅಂತ ಅನ್ನಿಸಲಾರಂಭಿಸಿದೆ.

                ಪ್ರೀತಿಯ ಬಗ್ಗೆ ನನಗಿರುವ ಹುಚ್ಚು ಕಲ್ಪನೆ ಹೋಗಲಾಡಿಸುವುದಕ್ಕೆ, ನನ್ನ ಚಿಕ್ಕಪ್ಪ ''ನನ್ನ ತೇಜಸ್ವಿ'' ಬುಕ್ ಓದಲು ಸಲಹೆ ನೀಡಿದ್ದರು. ಸರಿ, ಏನಿದೆ ಎಂದು ಬೆಳಗ್ಗೆ ಆರು ಗಂಟೆಗೆ ಟ್ರೈನ್ ನಲ್ಲಿ ಓದಲು ಶುರು ಮಾಡಿದವಳು ಹುಬ್ಬಳ್ಳಿ ತಲುಪುವವರೆಗೂ , ತೇಜಸ್ವಿಯ ಇನ್ನೊಂದು ವ್ಯಕ್ತಿತ್ವವನ್ನು ಕಂಡು ಬೆರಗಾದೆ! ತೇಜಸ್ವಿ ಹಾಗೂ ಅವರ ಅರ್ಧಾಂಗಿ ರಾಜೇಶ್ವರಿ ಯವರ ತೀರ ವೈಯಕ್ತಿಕ  ಪ್ರೇಮ ಪತ್ರಗಳ ಸಂಗ್ರಹ ಹಾಗೂ, ನಾವುಗಳೆಲ್ಲ, ಕೇಳದ, ಕಾಣದ hidden ತೇಜಸ್ವಿಯ ಅನಾವರಣ.

                ನಾವೆಲ್ಲಾ ಎಷ್ಟೊಂದು ಅಲ್ಪ ತೃಪ್ತರು? ನಮ್ಮ ಜನಾಂಗದವರಿಗೆ  ಪತ್ರಗಳ ಪರಿಚಯವೇ ಇಲ್ಲ, ಪತ್ರ ದೂರದ ಮಾತು, sms ಗಳು ಎರಡು ಸಾಲಿಗಿಂತ ಜಾಸ್ತಿ ಇದ್ದರೇ ಓದಲಾಗದ ಹಿಂಸೆ, ಇನ್ನು ಉದ್ದುದ ಪತ್ರ ಓದುವುದು, ಬರೆಯುವುದು ಸುಮ್ಮನೆ ಮಾತೆ?? ಎಲ್ಲವನ್ನು ಸರಳ ಮಾಡಿಕೊಟ್ಟ ತಂತ್ರಜ್ನ್ಯಾನ , ಪ್ರೀತಿಯ ಆಳ , ತೀವ್ರತೆ, ಭಾವುಕತೆ, ಕಾಡುವ ತವಕ, ಯಾವುದು ಇಲ್ಲದಂತಾಗಿಸಿದೆ.

            ದೂರದಲ್ಲಿರುವ ತನ್ನ ಪ್ರಿಯಕರ ಎಲ್ಲಿ ತನ್ನನ್ನು ಮರೆತು ಬಿಡುವನೋ ಎಂಬ ಆತಂಕದಲ್ಲಿ ಬರೆದ ಪತ್ರಕ್ಕೆ ತೇಜಸ್ವಿ ಉತ್ತರಿಸಿದ ಪತ್ರದ ಕೆಲ ಸಾಲು ಗಳು ಅದ್ಭುತವಾಗಿವೆ, '' Love  ಎಂದರೆ ಏನು ಗೊತ್ತ? ಒಂದು ವ್ಯಕ್ತಿತ್ವದ ಸಂಪೂರ್ಣ ನಗ್ನತ್ವವನ್ನು ಸ್ವೀಕರಿಸುವುದು, ದೈಹಿಕವಾಗಿ, ಮಾನಸಿಕವಾಗಿ'' ಇದಕ್ಕಿಂತ ಮಿಗಿಲಾದ ಲವ್ definition  ಹಿಂದೆಂದು ಕೇಳಿರಲಿಲ್ಲ. ಪ್ರತಿ ಅಕ್ಷರವೂ ಆ ಕ್ಷಣದ ಭಾವ ತೀವ್ರತೆಯನ್ನು ಅನಾಯಾಸವಾಗಿ ಮನಸಿಗೆ ನಾಟುವಂತೆ ಮಾಡುವ ಶಕ್ತಿ ಪತ್ರಗಳಿಗಿದೆ.

       ಪ್ರೀತಿ ಎಂದರೆ ಕೇವಲ ಪದ ಅಲ್ಲ , ನನ್ನ ನೆಚ್ಚಿನ ಲೇಖಕ ರವಿಂದರ್ ಸಿಂಗ್ ಹೇಳುವಂತೆ , '' I just do not say  I Love you, it means that you are the best thing that has ever happened to me'' ಎಂಥ ಸಾಲುಗಳು, ಇಂಥವುಗಳನ್ನು ಓದಿ ಓದಿ, ತೇಜಸ್ವಿಯಂಥ ಹುಡುಗನ ಹುಡುಕಾಟದಲ್ಲಿ ಸನಿಹವು ಇಲ್ಲವೋ, ದೂರವು ಇಲ್ಲವೋ, ಎಲ್ಲಿ ನೀ ಇರುವೆಯೋ ಪ್ರಿಯ ತಿಳಿದಿಲ್ಲ !!!

                ಬರೆಯೋದಕ್ಕೆ ನಿಜಕ್ಕೂ ತುಂಬಾ ಇದೆ , ನಮ್ಮ ಬೆಂಗಳೂರು ನಮ್ಮದೇ ಆಗಿಬಿಡುವ ಆಪ್ತತೆ, PG ಬದುಕು, ಕಾಲೇಜ್ ಹೊಸ ಸ್ನೇಹಿತರು, ಫಾಸೆಬೂಕ್ ನಲ್ಲಿ ಸಿಕ್ಕ ಅಮೂಲ್ಯ ಮುತ್ತು-ರತ್ನಗಳು, ಏನು ಅಂತ ಬರೆಯಲಿ, ಎಷ್ಟು ಅಂತ ಸಂಭ್ರಮಿಸಲಿ? ಇಂದಿನಿಂದ  ಎಲ್ಲವನ್ನು ಬರೆಯಲು ಪ್ರಯತ್ನಿಸುತ್ತೇನೆ.