Total Pageviews

Friday, April 6, 2012

ಸಾಗರ್ ಕಿನಾರೆ, ದಿಲ್ ಏ ಪುಕಾರೆ.........

                                 
                            
                    ಸಾಗರ್ ಕಿನಾರೆ, ದಿಲ್ ಏ ಪುಕಾರೆ ತು ಜೋ ನಹಿನ್ ತೊ ಮೇರಾ ಕೋಯೀ ನಹಿ ಹೈ...ಹೋ ಓ ಹೋ ....ಸಾಗರ್ ಕಿನಾರೆ....ಎಂಬ ಹಾಡು ಗುನುಗುವಾಗಲೇ ತಲೆ ಸುತ್ತು ಬಂದಂತಾಗಿ ಅಲ್ಲೇ ಗೋಡೆಗೆ ಆನಿಸಿಕೊಂಡು ನಿಂತೇ. ಯಾಕೋ cd corrupt  ಆದಂಗಿದೆ.. rewind  ಅಂಡ್ ಪ್ಲೇ ಅಂತ ನನ್ನ ನೋಡಿ ಚಂದ್ರಿಕಾ ಹೇಳುವಾಗ, ನಾನು ಗೋಡೆಗೆ ಆನಿಸಿಕೊಂಡು ನಿಂತಿರುವುದನ್ನು ನೋಡಿ ಎನಯ್ತ್ಲೇ ಬೊಡ್ಡೆತದೇ ಚೆನ್ನಾಗೆ ಇದ್ಯಲ..ಬರಿ ಸುತ್ತು ಸುತ್ತು ಹಾಕು ಒಂದು ಕಡೆ ಕೂರಕ್ ಆಗಲ್ವ?? ಅದೆಷ್ಟು ಸಲ ಮೇಲೆ ಕೆಳಗೆ ಓಡಾಡ್ತೀಯ?? ಹೇಳಿದ್ರೆ ಕೇಳಲ್ಲ ಏನ್ ತಲೆ ಸುತ್ತ??  ನಡಿ ಡಾಕ್ಟರ ಹತ್ರ ಹೋಗಣ, ಮೂರ್ ನಾಲ್ಕ್ ದಿನದಿಂದ ತಲೆ ನೋವು ಬೇರೆ ಅಂತಿದಿ, ಹೋಗ ಬರೋಣ..ಇವತ್ತ್ ಬೇಡವೆ ನಾಳೆ ಹೋಗಣ ಅಂದೇ,ನಮ್ಮ ಗ್ರೂಪಿನಲ್ಲಿ ಚಂದ್ರಿಕಾಳನ್ನ ನಾವು medicated ಚಂದ್ರಿಕಾ ಅಂತಲೇ ಕರೆಯೋದು!ಅವಳು ಇರೋದೇ ಹಾಗೆ ಅವಳು ಬಳಸೋ soap , ಶಾಂಪೂ, ಕಾಸ್ಮೆಟಿಕ್ಸ್ ಎಲ್ಲ maedicated ! ಮೈಸೂರ್ ನ ಹುಡುಗಿ ಎಲ್ಲರನ್ನು ತುಂಬಾ ಕೇರ್ ಮಾಡ್ತಾಳೆ ನಮ್ಮ ಗ್ರೂಪಿನಲ್ಲಿ  ಹಿರಿಯ ಅಕ್ಕ ಇದ್ದ ಹಾಗೆ.

                           ನಾನ್ ಬೇಡ ಅಂತಿದ್ರು ಹತ್ತಿರದಲ್ಲೇ ಇದ್ದ ಕ್ಲಿನಿಕ್ ಗೆ  ಕರೆದುಕೊಂಡು ಹೋದಳು, ಆ ಡಾಕ್ಟ್ರಮ್ಮ ಕೇಳಬೇಕಾದ ಪ್ರಶ್ನೆ ಬಿಟ್ಟು ಇನ್ನೆಲ್ಲ ಪ್ರಶ್ನೆ ಕೇಳಿ, ಯಾವದೋ ದೊಡ್ಡ ಆಸ್ಪತ್ರೆಯ ಅಡ್ರೆಸ್ಸ್ ಬರೆದುಕೊಟ್ಟು ಸ್ಕ್ಯಾನ್ ಮಾಡಿಸಲು ಹೇಳಿದಳು. ಒಂದು ಚಿಕ್ಕ ತಲೆ ಸುತ್ತಿಗೂ ಸ್ಕ್ಯಾನ್ ಮಾಡಕ್ ಹೇಳಿ ಸಾವಿರಗಟ್ಟಲೆ ದುಡ್ಡು ಕೀಳುತ್ತಾರಲ್ಲ ಇವರುಗಳು ಎಂದು ಮನದಲ್ಲೇ ಬೈದು ಕೊಳ್ಳುತ್ತಾ receptionist ಹತ್ರ ಹೋದರೆ,ಸಂಜಯ್ ಶರ್ಮ MBBS ,MD ಅಂತ ಹೆಸರಿರುವ ಕಾರ್ಡ್ ಕೊಟ್ಟು ಥರ್ಡ್  ಫ್ಲೂರ್ ಗೆ ಹೋಗುವಂತೆ ಹೇಳಿದಳು,ಲಿಫ್ಟ್ ಹತ್ತಿದಾಗ ನಾನು ಚಂದ್ರಿಕಾ ಇಬ್ಬರೇ,ಸೆಕೆಂಡ್ ಫ್ಲೂರ್ ನಲ್ಲಿ,  ಒಬ್ಬ ಸ್ಪುರದ್ರೂಪ ಹಾಲಿನ ಬಣ್ಣದ ಯುವಕ ನಮ್ಮಲಿಫ್ಟ್ ಎಂಟರ್ ಆಗುತ್ತಿದ್ದಂತೆ ನಾನು,ಚಂದ್ರಿಕಾ ಅವನಿಗೆ  irritate    ಆಗುವಷ್ಟು ಗುರಾಯಿಸಿದೆವು, ಪಾಪ ಅವನಿಗೂ ಥರ್ಡ್ ಫ್ಲೂರ್ ಗೆ ಹೊಗೊದಿತ್ತೇನೋ.

                      ಅಂತೂ ಇಂತೂ ಥರ್ಡ್ ಫ್ಲೂರ್ ಗೆ ಬಂದು ಡಾಕ್ಟರ ಕ್ಯಾಬಿನ್ ಗೆ ಹೋಗುವಷ್ಟರಲ್ಲಿ, ನಾನು ಚಂದ್ರಿಕಾ  ಅವಾಕ್ಕಾಗಿ ನಿಂತು ಬಿಟ್ಟೆವು ಸಂಜಯ್ ಶರ್ಮ ನಾವು ಲಿಫ್ಟ್ ನಲ್ಲಿ ಕಣ್ಣು  ಬಡೆಯದೇ  ನೋಡಿದ  ಯುವಕ  ಅಲ್ಲಲ್ಲ್ಲ ಡಾಕ್ಟರ!,  ಇಬ್ಬರಿಗೂ ಏನು  ಮಾಡೋದು ಅಂತ ಗೊತ್ತಾಗದೆ ಹಾಗೆ ನಿಂತಾಗ, ನಮ್ಮನ್ನು ಒಂದು ಚಿಕ್ಕ ಮುಗುಳ್ನಗುವೊಂದಿಗೆ ಒಳ ಬರಮಾಡಿಕೊಂಡ ಡಾಕ್ಟರ, yes what's the matter?? ಅಂದಾಗ ಅವನನ್ನ ನೋಡುತ್ತಾ ಮೈ ಮರೆತ ನನ್ನ ಚಂದ್ರಿಕಾ ಲೇ..ಹೇಳು ಎಂದು poke ಮಾಡಿದಾಗಲೇ,ಹಾಂ ಡಾಕ್ಟರ ಎರಡು ದಿನದಿಂದ ತಲೆ ನೋವು,ಈಗ ತಲೆ ಸುತ್ತು ಬಂದಿದೆ, ಅಂದೇ. ಅಷ್ಟೆನಾ ಸರಿ ನೋಡೋಣ, ಅಂತ ಹೇಳಿ In which standard are you studying babay?? ಅಂತ ಕೇಳಲು ಮೈ ಮೈ ಪರಚಿಕೊಳ್ಳುವಂತಾಗಿ am not a baby doctor, am doing masters ಅಂದೇ, ಇರೋ ಬರೋ ಸ್ಪುರದ್ರೂಪ ಹುಡುಗರು  ನನ್ನ ಚಿಕ್ಕ ಹುಡುಗಿ ಎಂದೇ ಪರಿಗಣಿಸುತ್ತಾರೆ, ಪೇಚು ಮೊರೆ ಹಾಕಿಕೊಂಡು ಚಂದ್ರಿಕಳನ್ನು ನೋಡಿದಾಗ , ನಗು ತಡೆಯಲಾಗದೆ ಅವಳು ಜೋರಾಗಿ ನಗಲಾರಂಭಿಸಿದಳು.

                         ಈ ಡಾಕ್ಟ್ರಪ್ಪ medicine  ಕೊಡೋದ್ ಬಿಟ್ಟು, ಅದೇನ್ ಮಾಡ್ತಾ ಇದಾನೋ ಅಂತ ತಲೆ ಕೆಡೆಸಿ    ಅದೆಂತದೋ  covering  ಶೀಟ್ ಥರದ ಜಾಕೆಟ್ ಕೊಟ್ಟು,  sliding  ಬೆಡ್ ಮೇಲೆ ಮಲಗಿಸಿ, ನನ್ನ ತಲೆಯನ್ನು ಬಾಯಿ ಆಕಾರದ ಪೆಟ್ಟಿಗೆಯಲ್ಲಿ slide ಮಾಡಿ ಅಂತು ಇಂತೂ 3೫ ನಿಮಿಷಗಳ ಕಾಲ ಆ ದೈತ್ಯ ಮಚಿನೆ ನ ಮೇಲೆ ಮಲಗಿಸಿದ ಡಾಕ್ಟರ ಕಡೆಗೂ ಅದರಿಂದ ಮುಕ್ತಿ ಕೊಡೆಸಿದರು.

                         reports ಗಳನ್ನ ಸ್ಟಡಿ ಮಾಡ್ಬೇಕು, ಒಂದು ಚೂರು ಲೇಟ್ ಆಗುತ್ತೆ till then wait in the reception ಅಂದ್ರು, ಸರಿ ಅಲ್ಲಿ ಕುಳಿತು ತಮ್ಮ appointment ಗೋಸ್ಕರ ಕಾಯುತ್ತಿರವ, ಗರ್ಭಿಣಿಯರು, ವಯೋವೃದ್ಧರು, ಚಿಕ್ಕ ಮಕ್ಕಳೊಟ್ಟಿಗೆ ಬಂದ ತಂದೆಯರ,  ಮಧ್ಯೆ ಜಾಗ ಮಾಡಿಕೊಂಡು ಕುಳಿತೆವು   ನಮ್ಮ ಡಾಕ್ಟರ ಹೊರಬಂದು receptionist ಹತ್ತಿರ ಏನೋ ಮಾತಾಡಿಕೊಂಡು, ಮತ್ತೆ ಲಿಫ್ಟ್ ಹತ್ತಿ ಹೋದರು. ಚಂದ್ರಿಕಾ ಅಷ್ಟರಲ್ಲೇ handsome na ??!! ಅಂತ ನನ್ನ ನೋಡಿ ನಕ್ಕಳು, ನಾನದಕ್ಕೆ married  ಇದಾನೆ ಅದಕ್ಕೆ ನನ್ನ ಬೇಬಿ ಅಂದಿದ್ದು ಅಂದೇ, ಅವಳು ಇರಲಿಕ್ಕಿಲ್ಲ he  is young ! ಅಂದಳು, ಯವ್ವಾ ಹೋಗ್ಲಿ ಬಿಡು ನಾನು ನನ್ನ ತಲಿ ನೋಸಕತೈತಿ ಅಂತ ಬಂದ್ರ , ಆ ಮೊಬ್ಬ್ ಡಾಕ್ಟರ, ನನ್ನ ರಿಪೋರ್ಟ್ ಸ್ಟಡಿ ಮಾಡಿ ಅದರ ಮ್ಯಾಲೆ thesis ಬರೆದು ರಿಸರ್ಚ್ ಮಾಡಿ Phd ಮಾಡೋ ಹಂಗ ಕಾಣಸ್ತದ. ಅಂತ ರೇಗಿದೆ.
ನೀನಂತೂ ಏಳರಲ್ಲೇ ಹುಟ್ಟಿದ ಹಾಗೆ ಆಡ್ತಿಯ, ಬರ್ತಾನ್ ಇರು ಅಂದಳು.

                    ಅಷ್ಟರಲ್ಲೇ receptionist ಡಾಕ್ಟರ ಕರಿತಿದಾರೆ ಅಂದಳು, ಸರಿ ಇಬ್ಬರು ಹೋಗಿ ಕುಳಿತಾಗ since how many days are you suffering from headache?? ಅಂದರು. ನಾನು ಎರಡ ದಿನನದಿಂದ ಜಾಸ್ತಿ ಆಗಿದೆ, ಮೊದಲೆಲ್ಲ ೧೫ ದಿವಸಕ್ಕೆ ತಿಂಗಳಿಗೆ ಮಾಮೂಲು ಬಂದು ೧೫-೩೦ ನಿಮಿಶದ್ವರೆಗೂ ಇರ್ತಿತ್ತು ಅಷ್ಟೇ ಅಂದೇ. parents ಎಲ್ಲಿರ್ತಾರೆ  ಅಂತ ಕೇಳಿದರು, ಧಾರವಾಡ್ ಅಂದೇ, I wanna talk to your parents, can you ask them to come over here? or shall i have a phone conversation? ಅಂದಾಗ, i felt something fishy. ನನ್ನ ರೆಪೋರ್ಟ್ನಲ್ಲಿ ಏನಿದೆ?? ಏನಾದ್ರು ಪ್ರಾಬ್ಲಮ್ ಇದೆಯಾ?? ಅದಕ್ಕೆ ಡಾಕ್ಟರ ಸರಿಯಾಗಿ ಉತ್ತರಿಸದೆ I'll talk to your parents ಅಂದ್ರು,  stop treating me like a kid am not a baby, I am a major girl you can say it on my face ಅಂದೇ.

                         ನನಗೆ ಸಣ್ಣ ಸುಳಿವು ಸಿಕ್ಕಂತಾಗಿತ್ತು, ಆದರೂ confirmation ಗಾಗಿ ಕಾಯ್ತಿದ್ದೆ. ತಲೆ ನೋಯ್ತಿರೋದು ನನಗೆ, ಏನೇ ಇದ್ರೂ ಫೇಸ್ ಮಾಡ್ಬೇಕಾಗಿರೋದ್ ನಾನು, ದಯವಿಟ್ಟು ಏನು ಅಂತ ಹೇಳಿ ಅಂದೇ, ಅದಕ್ಕೆ ಡಾಕ್ಟರ, ಓಕೆ ಅಶ್ವಿನಿ you seem to be a very strong girl, ನಿನಗ ಹೇಳೋದೇ ಒಳ್ಳೇದು ಅನ್ಸುತ್ತೆ, ಫಿಲಂಸ್ ಗಳಲ್ಲಿ ಬರೋ ಹಾಗೆ ರೋಗಿಗೆ ಗೊತ್ತಾಗದೆ ಸತ್ಯವನ್ನು ಮುಚ್ಚಿಡುವುದು ಅಸಾಧ್ಯ, ಇವತ್ತಲ್ಲ ನಾಳೆ ನಿನಗೆ ಗೊತ್ತಾಗೇ ಆಗು ಮುಂಚೆ ನಿನಗೆ ಹೇಳಿ ಬಿಡುವುದೇ ಸೂಕ್ತ, ನಿಮ್ ಮಿದುಳಿನಲ್ಲಿ blood clot ಆಗ್ತಾ ಹೋಗ್ತಿದೆ, ಅದು ಫೈನಲ್ stage ನಲ್ಲಿ ಇದೆ, blood clot  ಆಗ್ತಾ ಹೋದಂತೆ ತಲೆ ವಿಪರೀತ ನೋಯುತ್ತದೆ, It's an another form of cancer you can say a brain tumour!!

                     ಯಾರೋ ಸುತ್ತಿಗೆ ಹಿಡಿದು ಮೆದುಳಿಗೆ ಮೂರೆಟು ಕೊಟ್ಟ ಅನುಭವ, ಅಷ್ಟರಲ್ಲೇ ಚಂದ್ರಿಕಾ, ಅದಕ್ಕೇನ್ treatment  ಅಂತ ಕೇಳಿದಳು, ಅದಕ್ಕೆ ಡಾಕ್ಟರ, ಹೇಗಿದ್ರು ಫೈನಲ್ stage ನಲ್ಲಿ ಇದೆ treatment  ಕೊಟ್ರು ವಾಸಿಯಗೋ ಸಾಧ್ಯತೆ ಇಲ್ಲವೇ ಇಲ್ಲ, ಇರೋ ಮೂರು-ತಿಂಗಳೋ ಆರು ತಿಂಗಳೋ ವೃಥಾ treatment , ಡಾಕ್ಟರ, ಹೋಸ್ಪಿಟಲ್ ಅಂತ ಸಮಯ ವ್ಯರ್ಥ ಮಾಡ್ಬೇಡಿ, Enjoy your life to fullest!! ನೋಡಿ ಅಶ್ವಿನಿ ನೀವು ಬೋಲ್ಡ್ ಹುಡುಗಿ ಅಂತ ನಿಮ್ಮನ್ನು ಕೂರಿಸಿಕೊಂಡು ನೇರವಾಗಿ ಹೇಳ್ತಿದ್ದೇನೆ, ಸಾವು ನಿಶ್ಚಿತ! ಎಲ್ಲರಿಗು ಬಂದೆ ಬರುತ್ತೆ, ಕೆಲವರ ಬದುಕಿನಲ್ಲಿ , ಅಪಘಾತವಾಗಿ, ಆತ್ಮಹತೆಯಾಗಿ, ಕಾಯಿಲೆ ಯಾಗಿ, ವಯಸ್ಸಾಗಿ, ವ್ಯಸನಿಯಾಗಿ, ಇನ್ಯಾವುದೋ ರೂಪದಲ್ಲಿ ಬರಬಹುದು, ತಾಯಿ ಗರ್ಭ ಕೋಶದಿಂದ ಹೊರಬರುವ ಮೊದಲೇ ಅದೆಷ್ಟೋ ಜೀವಗಳು ಕಣ್ಮುಚ್ಚಿಕೊಂಡಿರುತ್ತವೆ , ಇವೆಲ್ಲವನ್ನೂ ನೋಡಿ, , you are lucky enough to see the different colours of life for twenty long years! ಅಲ್ವಾ? ಸಾವು   inevitable   ಡೆವಿಲ್, ನಾವದರ ಬಗ್ಗೆ ಚಿಂತಿಸಿ ಪ್ರಯೋಜನವಿಲ್ಲ, ಆದರೆ ಬದುಕುವುದು, ಪ್ರತಿಕ್ಷಣವನ್ನು ಅನುಭವಿಸುವುದು ನಮ್ಮ ಕೈಲಿದೆ. ಸಾವಿಗೂ ನಮ್ಮ ಜೀವನ ಪ್ರೀತಿ ಕಂಡು ಹೆದರಿಕೆ ಆಗೋ ಹಾಗೆ ಇರೋ ಕೆಲವೇ ದಿವಸಗಳನ್ನು ಬದುಕಿ ಬಿಡಬೇಕು.

                   ಆ ಡಾಕ್ಟರ ಹಾಗೆ ಹೇಳುತ್ತಲೇ ಇದ್ದರು, ನಾನಿನ್ನೆಲ್ಲೋ ಕಳೆದು ಹೋಗಿದ್ದೆ, ಅಯ್ಯೋ ಬರಿ ಇನ್ನೂ ಮೂರೇ ತಿಂಗಳ ಕಾಲಾವಾಕಾಶನ?? ನಾನೇನ್ ಮಾಡ್ಲಿ?? ಏನೇನೆ ಮಾಡಬೇಕಿತ್ತು ನಾನು?? ಕನಸು ಕಂಡಿದೆಲ್ಲ ಮೂರು ತಿಂಗಳಿನಲ್ಲೇ  ನನಸಾಗೋ ಸಾಧ್ಯತೆ ಇದೆಯಾ?? ಮೂರೇ ತಿಂಗಳು ಸಾಕಾಗುತ್ತ?? ಅಥವಾ ನಾನು ಹತ್ತರಲ್ಲಿ ಹನ್ನೊಂದು ಅನ್ನೋ ಹಾಗೆ ನನ್ನ ಐಡೆಂಟಿಟಿ ಇಲ್ಲದೆ ನಾಶವಾಗಿ ಹೋಗುತ್ತೇನ?? ನನಗೆ ದುಃಖ-ಬೇಜಾರಿಗಿಂತ, ತುಂಬಾ ಕಡಿಮೆ ಸಮಯ ಅನ್ನೋ ಚಿಂತೆ ಬಾಧಿಸಲಾರಭಿಸಿತು, ಅಷ್ಟರಲ್ಲಿ ನನ್ನ ಹೊರ ಕರೆದುಕೊಂಡು ಬಂದ ಚಂದ್ರಿಕಾ PG ತಲುಪೋವರೆಗೂ, ರೆಪೋರ್ಟ್ನಲ್ಲಿ ಬಂದಿದೆಲ್ಲ ಸರಿ ಇರಲ್ಲ, ಎಷ್ಟೋ reports ಸುಳ್ಳು ಆಗಿರುತ್ತವೆ, ನಮ್ಮ ಅಕ್ಕನ ಗಂಡ ನಮ್ ಭಾವ US  ನಲ್ಲೆ ಡಾಕ್ಟರ, ಅವರು ಇನ್ನೆರಡು ದಿನ holidays ಅಂತ ಮೈಸೂರಿಗೆ ಬರೋವ್ರಿದಾರೆ, ಅವರಿಗೆ ತೋರಿಸಿದ್ರಾಯ್ತು. ಏನು ಚಿಂತೆ ಮಾಡಬೇಡ ನಿನಗೇನು ಆಗಲ್ಲ. ಅವಳೇನು ಹೇಳ್ತಿದ್ಲೋ ಅದ್ಯಾವುದು ನನ್ನ ತಲೆಗೆ ಹೋಗಲೇ ಇಲ್ಲ, ವಾಪಸ್ ರೂಮಿಗೆ ಬಂದು ಅರ್ಧ ಗಂಟೆ ಕನ್ನಡಿಯಲ್ಲಿ ನನ್ನ ನಾನೇ ನೋಡಿಕೊಂಡು  ಜೋರಾಗಿ ಅಳಲಾರಂಭಿಸಿದೆ.

                  ಸ್ವಲ್ಪ ಹೊತ್ತಿನ ನಂತರ, ಒಂದು ಗಟ್ಟಿ ನಿರ್ಧಾರಕ್ಕೆ ಬಂದೆ, ಇವತ್ತು ಅತ್ತಿದ್ದೆ ಕೊನೆ ಇನ್ನು ಮೂರೋ-ಆರೋ ಅದೆಷ್ಟು ದಿನನೋ ಏನೋ, ಕಾಯಿಲೆ ಇದ್ದರೆಷ್ಟು, ಬಿಟ್ಟರೆಷ್ಟು. ನಮ್ಮ ಬದುಕೇ ನೀರಿನ ಮೇಲಿನ ಗುಳ್ಳೆಯಂತೆ, ರೋಡ್ ಕ್ರಾಸ್ ಮಾಡುವಾಗ ಆಕ್ಸಿಡೆಂಟ್ ಆಗುತ್ತದೆ ಎಂದು ರೋಡ್ನಲ್ಲಿ ಓಡಾಡುವದನ್ನೇ ಬಿಡಲಾಗುತ್ತದೆಯೇ? ಬರುವ ಸಾವಿಗೆ ಅದೆಷ್ಟು ದುಃಖಿಸಿ ಏನು ಪ್ರಯೋಜನ?? ಎಲ್ಲರು ಸಾಯುತ್ತಾರೆ. ನಾನು ತುಸು ಬೇಗ ಸಾಯುತ್ತೇನೆ ಅಷ್ಟೇ ಅಲ್ಲವ?? ಹಾಗಾಗಿ ನಾನು ಮೊದಲಿನಂತೆಯೇ ಇರುತ್ತೆ, ಮೊದಲಿಗಿಂತ ಹೆಚ್ಚು lively ಯಾಗಿ, ಇರೋ ಬರೋ ಮೂರು ತಿಂಗಳನ್ನು ಇಂಚಿಂಚಾಗಿ ಅನುಭವಿಸುತ್ತೇನೆ. ಏನಾಗುತ್ತೋ ಆಗೇ ಬಿಡಲಿ. ಅಪ್ಪ-ಅಮ್ಮನನ್ನ ಮನದಲ್ಲೇ ನೆನೆಸಿಕೊಂಡು ತೀರ್ಮಾನಿಸಿದೆ.

                 ಉಳಿದ ಸ್ನೇಹಿತೆಯರಿಗೂ ವಿಷಯ ಗೊತ್ತಾಗಿ, ಕೆಲವರು ಧೈರ್ಯ, ಹೇಳಿದರೆ, ಇನ್ನು ಕೆಲವರು ನಿನಗೆ ಹೀಗಾಗಬಾರದಿತ್ತು, ಇನ್ನು ಕೆಲವರು ನನ್ನ ಗಟ್ಟಿಯಾಗಿ ತಬ್ಬಿಕೊಂಡು ಅಳಲಾರಭಿಸಿದರು. ನಾನೆಲ್ಲರಿಗೂ ಗಟ್ಟಿ ಧ್ವನಿಯಲ್ಲಿ ಹೇಳಿದೆ, ಫ್ರೆಂಡ್ಸ್ ನನಗೆ ನಿಮ್ಮ ಸಾಂತ್ವನ, sympathy ಮಾತುಗಳು ಬೇಕಿಲ್ಲ, ಕಣ್ಣಿರಿತ್ತು ನನ್ನ ಇನ್ನೂ  ಅಧೀರಳನ್ನಾಗಿಸಬೇಡಿ. ಇನ್ನು ಮೂರು ತಿಂಗಳು ಅದ್ಹೇಗೆ ಎಂಜಾಯ್ ಮಾಡಬಹುದೆಂದು ಹೇಳಿ, ನನ್ನ ಮುಖ ಒಮ್ಮೆ ನೋಡಿ ಯಾವ angle ಇಂದ ನಾನು ಇನ್ನೂ ಮೂರೇ ದಿನ ಬದುಕಬಹುದು ಅನ್ಸುತ್ತೆ?? ನಾನು ಇನ್ನು ತುಂಬಾ ದಿವ್ಸ ಚೆನ್ನಾಗೆ ಇರ್ತೀನಿ ಕಣ್ರೆ, ನನಗೇನು ಆಗಲ್ಲ, ಚಂದ್ರಿಕಾ ಓಡಿ ಬಂದು ಗಟ್ಟಿ ತಬ್ಬಿಕೊಂಡು, Love you ಬೊಡ್ಡೆತದೆ, am proud of you ಅಂದ್ಲು. ಇರ್ಲಿ ಈಗ ಒಬ್ಬಬರಾಗೆ ಮೂರು ತಿಂಗಳಿನಲ್ಲಿ ಏನೇನ್ ಮಾಡಬಹುದು ಹೇಳಿ ಅಂದೇ.

                ಅನುಷಾ ನನ್ನ ಬಳಿ ಬಂದು, ಏನ್ ಲೇ ಜೀವನ ಎಲ್ಲ ಬರಿ ಓದು ಓದು ಅಂತ ಕಳೆದೆ, ಒಂದು ಬಾಯ್ ಫ್ರೆಂಡ್ ಇಲ್ಲ, ಒಂದು dating ಇಲ್ಲ,ಏನ್ ಹಿಂಗೆ?ಇರೋ ಮೊರ್ರ್ ತಿಂಗಳು ಫುಲ್ ಮಜಾ ಮಾಡು,ಬಾಯ್ ಫ್ರೆಂಡ್ ಮಾಡ್ಕೋ. ಮೂರು ತಿಂಗಳಿಗೋಸ್ಕರ  ಬಾಡಿಗೆ ಬಾಯ್ ಫ್ರೆಂಡ್? I am happily single and remain the same for the rest few days! It was  ಬ್ಯಾಡ್ ಐಡಿಯಾ next suggestion please!

                world ಟೂರ್ ಮಾಡು ಪ್ರಿಯಾಂಕ ಹೇಳಿದಳು. ವರ್ಲ್ಡ್ ಟೂರ್ ಪ್ರತಿಯೊಬ್ಬರ ಕನಸಲ್ವ?ಇರೋದ್ರಲ್ಲೇ ಎಲ್ಲ ದೇಶ ಸುತ್ಕೊಂಡ್ ಬಾ, ನಯಾಗರ ಫಾಲ್ಸ್ ನೋಡಿದ್ರೆ ಜೀವನ ಸಾರ್ಥಕ ಆದಂತೆ ಅಂದಳು. ಇರೋ ಮೂರ್ ತಿಂಗಳನ್ನ ಟೂರ್ ಮಾಡಿ ವೇಸ್ಟ್ ಮಾಡೊದ? ನೋ ಅಂದೇ.

              ಊರಿಗೆ ಹೋಗಿ ಬಿಡು, ಇರೋ ಅಷ್ಟು ದಿನ ಅಪ್ಪ-ಅಮ್ಮ-ತಮ್ಮನೋಟ್ಟಿಗೆ ಇದ್ದು ಬಿಡು, ನೀನು ಎಲ್ಲದಿಕಿಂತ ಹೆಚ್ಚಾಗಿ ಇಷ್ಟ ಪಡೋದೇ ನಿನ್ನ ಫ್ಯಾಮಿಲಿ ಯನ್ನ, ನಮ್ಮ ಕೊನೆ ಗಳಿಗೆಯಲ್ಲಿ ನಾವು ಪ್ರೀತಿಸುವವರುಮತ್ತು ನಮ್ಮನ್ನು ಪ್ರೀತಿಸುವವವರು   ನಮ್ ಹತ್ತಿರ ಇದ್ದರೆ ಒಳ್ಳೆಯದು. ಯೋಚನೆ ಮಾಡು.ವೀಣಾ ಹೇಳಿದಳು. ಊರಿಗೆ ಹೋದರೆ Mtech ಕಥೆ? ಮುಗಿಸೋದು?? I am confident ಡಾಕ್ಟರ ಎಷ್ಟು ಬೇಕಾದರು ಟೈಮ್ ಕೊಟ್ಟಿರಲಿ Mtech ಮುಗಿಸೋವರೆಗೂ  ನನಗೇನೂ ಆಗೋದಿಲ್ಲ.

                 ಅಷ್ಟರಲ್ಲಿ ಅಪ್ಪನಿಗೆ ಹೇಗೋ ಗೊತ್ತಾಗಿ ಅಪ್ಪನ ಕಾಲ್ ಬಂತು, ಹಲೋ ಮಗಳೇ ನೀನೇನ್ ಯೋಚನೆ ಮಾಡಬೇಡ ನಾನಿದಿನಿ, ಈಗ ತಾನೇ ಸತೀಶನ ಜತೆ ಮಾತದಿದಿನಿ, ನಾಳೆನೆ ಫ್ಲೈಟ್ ಬುಕ್ ಮಾಡಿಸ್ತಾನಂತೆ Dr ಗೌತಮ್ ಕೂಡ ಏನು ಆಗಲ್ಲ ತಾವೇ ಆಪರೇಷನ್ ಮಾಡಿ ಸರಿ ಮಾಡ್ತಾರಂತೆ, ಚಿಕ್ಕ ಆಪರೇಷನ್ ಅಂತೆ ಪುಟ್ಟ ಎಲ್ಲ ಸರಿ ಹೋಗುತ್ತೆ, ನಾನು ಅಮ್ಮ ಇವತ್ತೇ  ಹೊರಡ್ತಾ ಇದಿವಿ, ನಾಳೆನೆ Houston ಗೆ ಹೋಗೋಣ ಆಯ್ತಾ?? ನೀನೇನ್  ತಲೆ ಕೆಡಿಸ್ಕೋಬೇಡ ಸರಿನಾ? ಪಪ್ಪಾ ನಾನು ಎಲ್ಲೂ  ಬರೋದಿಲ್ಲ, ಇಲ್ಲೇ ಇರ್ತೀನಿ, ಇರೋ ಅಷ್ಟು ದಿನಾನು treatment , ಆಸ್ಪತ್ರೆ, ಆಪರೇಷನ್ ಎಲ್ಲ ಬೇಡ, ನಾನಿಲ್ಲೇ Mtech  ಮುಂದುವರೆಸುತ್ತೇನೆ. ನೀವೇನ್ ಯೋಚನೆ ಮಾಡ್ಬೇಡಿ ನನಗೇನು ಆಗಲ್ಲ, ನೀವ್ ಬರೋದ ಬೇಡ, ಅಪ್ಪ ನಾನೇ ಎಲ್ಲ ನೋಡ್ಕೋತೀನಿ, ಮೊದಲು Mtech  ಮುಗಿಲಿ....ಎಂದು ಕಿರುಚುವಾಗ....

                 ನನ್ನ ರೂಮಿ ಅನುಷಾ ಬಂದು, ಲೇ ದಾಸರೆ ಏನ್ ಅಗ್ಯದೆ ಯಾಕ್ ಮುಂಜ್ ಮುಂಜಾನೆ ಹಿಂಗ್ ಕಿರಚ್ತಾ ಇದಿ? ಏನ್ ಕನಸ ಕಂಡೆ?? ಕನಸ್ನ್ಯಾಗು Mtech ಅಂತ ಬಡ ಬಡಸಾಕತಿ??? ಅಂತ ಕೇಳುವಾಗ ಕಣ್ಣು ಬಿಟ್ಟು ನೋಡಿದಾಗ ನಾ ಕಂಡಿದ್ದು ಭಯಾನಕ ಕನಸು!!!
                                    


                               

12 comments:

 1. ತುಂಬಾ ಒಳ್ಳೆ ನಿರೂಪಣೆ ಅಶ್ವಿನಿ :) ಸೂಪರ್ ಆಗಿ ಓದಿಸಿಕೊಂಡು ಹೋಯಿತು. Nicely narrated :)

  ReplyDelete
 2. ಕೆಲ್ಸಾ ಮಾಡಿ ಮಾಡಿ ಸಾಕಾಗಿ ಮಂಪರಿನಲ್ಲಿ ಓದಿದೆ.. ಓದಿ ಮುಗಿಯೋ ಹೊತ್ತಿಗಾಗ್ಲೇ ನಿದ್ದೆ ಹೌಹಾರಿ ಹೋಗಿತ್ತು..!! ಚೆನ್ನಾಗ್ ಬರ್ದಿದಿ, ಒಂಥರ ಸಸ್ಪೆನ್ಸ್ ಥ್ರಿಲ್ಲರ್ ತರ..:)

  ReplyDelete
  Replies
  1. Rakshith, thank me i helped you without costing a cup of coffee or tea ;)

   Delete
 3. ನಿರೂಪಣೆ ಮತ್ತು ಓದಿಸಿಕೊಂಡು ಹೋಗುವ ಶೈಲಿ ಇಷ್ಟವಾಯಿತು.

  ಲಗೇ ರಹೋ!!!

  ನನ್ನ ಬ್ಲಾಗಿಗೂ ಸ್ವಾಗತ.

  ReplyDelete
 4. ಅಶ್ವಿನಿ;ನಾನೇ ಸ್ವತಹ ವೈದ್ಯನಾದ್ದರಿಂದ ಡಯಾಗ್ನೋಸಿಸ್ ಬಗ್ಗೆ ತಲೆ ಕೆಡಿಸಿಕೊಂಡಿದ್ದೆ.ಕನಸು ಅಂದಾಗ ನಿರಾಳವಾಯಿತು.ನೂರು ವರ್ಷ ಆರೋಗ್ಯವಾಗಿರಿ.ನನ್ನ ಬ್ಲಾಗಿಗೊಮ್ಮೆ ಬನ್ನಿ.ನಮಸ್ಕಾರ.

  ReplyDelete
 5. ಯಾಕ್ರೀ ಯಾವ ಫಿಲಂ ನೋಡಿರಿ ..
  ಇಷ್ಟು ಹೆದರ್ಸುವಂಗ್ ಬರದರಿ..

  ReplyDelete
 6. ಯಾವುದೇ ಕಥೆ ಕವನವಾಗಲಿ, ಅದು ಎಲ್ಲರಿಂದಲೂ ಓದಿಸಿಕೊಂಡು ಹೋಗುವ ಶೈಲಿಯನ್ನು ಹೊಂದಿರಬೇಕು. ಸರಳವಾಗಿ ಮನಸ್ಸನ್ನು ತಟ್ಟುವಂತಿರಬೇಕು. ಬರವಣಿಗೆ ನಮ್ಮ ಆತ್ಮಸಂತೋಷಕ್ಕಾದರು, ಅದನ್ನು ಇತರರು ಓದಿ ಮೆಚ್ಚುಗೆ ಅಥವಾ ವಿಮರ್ಶೆ ಮಾಡಿದಾಗ ಅದರಿಂದ ದೊರೆವ ಸಂತೃಪ್ತಿ ಇಷ್ಟದಿಂದ ಕಷ್ಟಪಟ್ಟು ಬರೆದ ಕಥೆ/ಕವನ ಕ್ಕೆ ದೊರಕುವ ಸಾರ್ಥಕ ಭಾವ ಮೂಡುವುದು ಆ ಬರಹಗಾರರಿಗೆ. ಈ ನಿಟ್ಟಿನಲ್ಲಿ ನಿಮ್ಮ ನಿರೂಪಣೆ ಯಶಸ್ವಿಯಾಗಿ ಎಲ್ಲರ ಮನವನ್ನು ಸೆಳೆದಿದೆ ಎಂದರೆ ತಪ್ಪಾಗಲಾರದು. ಆಂಗ್ಲ ವಾಕ್ಯಗಳನ್ನು ಆದಷ್ಟು ಕಡಿಮೆಗೊಳಿಸಿ. ಈ ಕನ್ನಡ ಸಿನಿಮಾ ನಟಿಯರು ಮಾತನಾಡುವಾಗ ಕನ್ನಡ ಆಂಗ್ಲ ಮಿಶ್ರಿತವಾಗಿ ಮಾತನಾಡುತ್ತಾರಲ್ಲ ಹಾಗಾಗುತ್ತದೆ. ನಮ್ಮ ಕನ್ನಡ ಬ್ಲಾಗಿಗೆ ಒಳ್ಳೆಯ ಬರಹಗಾರ್ತಿಯೋಬ್ಬರು ಸಿಕ್ಕಂತಾಯಿತು. ಶುಭವಾಗಲಿ.

  ReplyDelete
 7. ಏರುಗತಿಯಾಗಲಿ, ಏರುಪೇರಾಗಲಿ ಇಲ್ಲದ ಸಂಯಮದ ನಿರೂಪಣೆ

  ReplyDelete
 8. ಕಥೆ ಚೆನ್ನಾಗಿದೇರಿ....ಹಾಗೆ ಒಮ್ಮೆ ನಮ್ಮ ಬ್ಲಾಗ್ ಕಡೆನೂ ಬ೦ದ ಹೋಗಿ...
  www.ravindratalkies.blogspot.in

  ReplyDelete
 9. ಅಶ್ವಿನಿ ಅವ್ರಿಗೆ ನಮಸ್ಕಾರ,

  ನಿಮ್ಮ ಬರಹ ಭಾಳಾ ಚೊಲೋ ಐತಿ. ಅದರಾಗ ನೀವು ನಮ್ಮಧಾರವಾಡದೋರು ಅಂತಾ ತಿಳಿದಾಗ ಇನ್ನೂಖುಶಿ ಆತು.ಬರವಣಿಗಿ ಶೈಲಿ ಓದಿಸಿಕೊಂಡು ಹೋಗ್ತತಿ.
  ಆದ್ರ ನಿಮ್ಮಂಥಾ ಐಟಿ ಮಂದಿಗೆ ಎಲ್ಲಾದ್ಕೂ ಅಮೇರಿಕಾ ಬಿಟ್ಟು ಬ್ಯಾರೆ ಏನೂ ಇಲ್ಲ್ವಾ ಅಂಥಾ ಅನಸ್ಥದ.
  ನಾನು ದುಬೈದಾಗ ಕೆಲಸಾ ಮಾಡ್ತನಿ. ಇತ್ತೀಚೆಗೆ ಕೈ ಭಾಳಾ ನೋಯುತ್ತೆ ಅಂಥಾ ಇಲ್ಲಿಯ ಅಮೇರಿಕನ್ ಹಾಸ್ಪಿಟಲ್ ಗೆ ಹೋಗಿದ್ದೆ.( ನಮ್ಮ ಕಂಪನಿಯ ಅಥರೈಜಡ್ ಹಾಸ್ಪಿಟಲ್)ಅವರು ಏನೇನೆಲ್ಲಾ ಟೆಸ್ಟ್ ಮಾಡಿ, ನಿಮಗೆ Frozen shoulder ಆಗಿದೆ. ಆಪರೇಶನ್ ಮಾಡಬೇಕು. ೩-೪ ತಿಂಗಳು ರೆಸ್ಟ್ ತೊಗೋಬೇಕು. ಎಂದು ಹೇಳಿದರು.ಅದನ್ನು ಕೇಳಿ ನಮ್ಮ ಕಂಪನಿಯವರು ಇವಾ ಒಬ್ಬ ಬಿಳೀ ಆನಿ,ಇಲ್ಲೇ ಯಾಕ್ ಸಾಕೋದು ಅಂಥಾ ತಿಳಿದು "ನೀ ಆರಾಮ್ ಆಗಿಂದ ಬಾ ಹೋಗು" ಅಂಥಾ ವಾಪಸ್ ಕಳಿಸಿದರು. ನಾನು ಹೆದರಿ ಧಾರವಾಡಕ್ಕೆ ಬಂದು ,ಮನೆಯಲ್ಲಿ ಹೇಳಿದೆ. ನನ್ನ ಹೆಂಡತಿ ಹುಬ್ಬಳ್ಳಿಯ ಕಳಸೂರ್ ಡಾಕ್ಟರ್ ಹತ್ತಿರ ಕರ್ಕೊಂಡು ಹೋದ್ಳು. ಆ ಡಾಕ್ಟರ್ ಮಹಾಶಯಾ ಬರೀ ಎರಡ ನಿಮಿಷಾ ಚಕ್ ಮಾಡಿ ನಿಮಗ ಅಂಥಾದ್ದೇನ್ ದೊಡ್ಡ ಖಾಯಿಲೆ ಬಂದಿಲ್ಲಾ. ಸ್ಪೊಂಡಿಲೆಸಿಸ್ ಆಗೇದ,ಅಂದು ಸ್ವಲ್ಪ ಗುಳಿಗಿ ಬರೆದು,ಕೊಳ್ಳಾಗ ನಾಯಿಗೆ ಹಾಕ್ತಾರಲ್ಲಾ ಅಂಥಾ ಒಂದು ಬೆಲ್ಟ್ ಹಾಕ್ಕೋ ಅಂಥಾ ಕೊಟ್ಟೂ, ನಡಿ ಇನ್ನ್ ದುಬೈಗೆ ಅಂದ್ರು.ಒಂದ ವಾರದಾಗ ವಾಪಸ್ ಬಂದು ಇಲ್ಲಿ ಕೆಲಸಾ ಸೇರ್ಕೊಂಡೇನಿ.( ಕೊಳ್ಳಾಗ ಬೆಲ್ಟ್ ಹಾಕ್ಕೊಂಡಿದ್ ಬಿಟ್ರ ಯಾವ್ದೇ ನೋವು ಇಲ್ಲದೆ ಆರಾಮ್ ಕೆಲ್ಸಕ್ ಹೊಂಟೇನಿ ).
  ಇದೆಲ್ಲಾ ನಾ ಯಾಕ್ ಹೇಳಬೇಕಾತು ಅಂದ್ರ,ನಿಮ್ಮ ಬರಹದಾಗ ೨-೩ ಸರ್ತಿ ಅಮೆರಿಕಾ ಡಾಕ್ಟರ್ ಬಗ್ಗೆ ಮತ್ತ ಬೌಸ್ಟನ್ ದಾಗ ಆಪರೇಷನ್ ಬಗ್ಗೆ , ನಮ್ಮ ದೇಶದೊಳಗ್ ಡಾಕ್ಟರಗೂಳ್ಗೆ ನಿಮ್ಮ ರೋಗಾ ವಾಸಿ ಮಾಡೋ ತಾಕತ್ತೆ ಇಲ್ಲಾ ಅನ್ನೊ ಹಂಗೆ ನೀವು ಬರೆದಿದ್ದು ನೋಡಿ ಹೇಳಬೇಕಾಯ್ತು ಅಷ್ಟೇ.ಇಲ್ಲಿಯೇ ಇರುವ ನಮ್ಮ ಡಾಕ್ಟರ್ ಗಳು ಏನೂ ಕಡಿಮೆ ಇಲ್ಲಾ ಎನ್ನುವದಕ್ಕೆ ಹೇಳಬೇಕಾಯ್ತು.
  ನಿಮ್ಮ ಬರವಣಿಗೆಯ ಶೈಲಿ ಚೆನ್ನಾಗಿದೆ. ಇದನ್ನು ಮುಂದುವರೆಸಿರಿ.
  ( ಈ ಬ್ಲಾಗ್ ಬಗ್ಗೆ " ವಿಜಯ ಕರ್ನಾಟಕ" ಪತ್ರಿಕೆಯಲ್ಲಿ ಓದಿದ ನಂತರ ಗೊತ್ತಾಯ್ತು. ನಿಮ್ಮ ಮೂಲಕ ಅವರಿಗೆ ಧನ್ಯವಾದಗಳು.)

  ಇಂದುಶೇಖರ ಅಂಗಡಿ

  ReplyDelete