Total Pageviews

Wednesday, May 11, 2011

ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ?ಇರೋದ್ರೊಳಗೆ ಬಿದ್ದು ನೋಡಿ ಪ್ರೇಮದ ಗುಂಡಿ! ಅಂತ ಹೇಳ್ತಾರ್ ದೊಡ್ಡ ಮಂದಿ!!

                          
                      ಪ್ರೀತಿ, ಪ್ರೇಮ, ಆಕರ್ಷಣೆ, ಯವ್ವನ, ಹುಚ್ಚು ಮನಸು, ಹರೆಯ, ಮುಂತಾದ ಪದಗಳನ್ನು ಒಂದಿಲ್ಲೊಂದು ರೀತಿಯಲ್ಲಿ, ಸಿನಿಮಾ, ಧಾರವಾಹಿ, ಅಥವಾ ಪತ್ರಿಕೆ ಎಲ್ಲಿಯಾದರೂ ಕೇಳಿಯೇ ಕೇಳಿರುತ್ತೇವೆ. ನಾನಿರುವ ಹಂತ ಗಮನಿಸಿದರೆ ನನಗಂತೂ ಇದೊಂದು ಕೇವಲ ಮಾನಸಿಕ ಅಸ್ವಸ್ಥತೆ ಅಂತ ಅನ್ನಿಸುತ್ತದೆ!! ಹಾಗಂತ ನಾನು ತೀರ ಪ್ರೇಮ ವಿರೋಧಿ ಏನಲ್ಲ, ನನ್ನಲ್ಲೂ  ಕನಸುಗಳಿವೆ, ಕನಸುಗಳಿಗೆ ಬಣ್ಣ ತುಂಬುವ ಸಂಗಾತಿಯ ಅಸ್ಪಷ್ಟ ಚಿತ್ರವಿದೆ! ಆದರೆ ಪ್ರಶ್ನೆ ಇರುವುದು ಪ್ರೀತಿ ಯಾವ ಹಂತದಲ್ಲಿ ನಿಜವಾಗಿ ಹುಟ್ಟುತ್ತದೆ? ಅನ್ನೋದು. ನನಗೆ ಗೊತ್ತು ಇವತ್ತು ಪೋಸ್ಟ್ ಮಾಡಿ ನಾಳೆ ಬೆಳಿಗ್ಗೆ ಎದ್ದು ನೋಡುವಷ್ಟರಲ್ಲಿ ನನ್ನ inbox  ತುಂಬಿ ಹೋಗುವಷ್ಟು ಜನ ನನ್ನ ಸ್ನೇಹಿತರೆಲ್ಲರೂ ನನ್ನನ್ನ ಹಿಗ್ಗ ಮುಗ್ಗ ಬೈದು sms  ಮಾಡಿರುತ್ತಾರೆ! but friends am helpless:-( ನಾನು ನಿಮ್ಮ ಪ್ರೀತಿಯನ್ನು ಅವಮಾನಿಸುತ್ತಿಲ್ಲ, ಬದಲಾಗಿ ನನ್ನ ಅಭಿಪ್ರಾಯವನ್ನು ಹೇಳುತ್ತಿದ್ದೆನಷ್ಟೇ.

                        ಯಾರನ್ನೇ ಕೇಳಿ ನೋಡಿ ಪ್ರೀತಿ ಒಂದು ಅನನ್ಯ ಅನುಭವ, ಮಾಡಿದವರಿಗೆ ಮಾತ್ರ ಗೊತ್ತಾಗುತ್ತದೆ, ಮಾಡದೆ ಇರುವವರು ದೊಡ್ಡ ನಷ್ಟ ಅನುಭವಿಸುವವರು ಎಂಬ ರೀತಿಯಲ್ಲಿ, ಪ್ರೀತಿಯಲ್ಲಿ ತೇಲಾಡುವ ಮನಸ್ಸುಗಳು ಹೇಳುವ ಮಾತಿದು. ಹಾಗಾದರೆ, ಪ್ರೀತಿ ಎಂಬುದು ಒಬ್ಬ ಹುಡುಗ/ಹುಡುಗಿಗೆ ಮಾತ್ರ ಸೀಮಿತವಾದ ಅಮೂಲ್ಯ ಸಂಪತ್ತಾ?  ಯಾಕೆ ನಮ್ಮ ಯುವ ಜನಾಂಗ ತನ್ನ ಹುಚ್ಚು  ಬಯಕೆಗಳಿಗೆ, ಅಪ್ರಭುದ್ಧ ಭಾವನೆಗಳಿಗೆ ಪ್ರೀತಿ ಎಂಬ ಹೆಸರನ್ನು ಕೊಟ್ಟು ಸಂಭ್ರಮಿಸುತ್ತಾರೆ? ಯಾಕೆಂದರೆ, ನಮ್ಮಲ್ಲಿರುವ ಒಂದೇ ಒಂದು ಬಯಕೆ ಏನೆಂದರೆ ನಾನು ಯಾರಿಂದಲಾದರೂ ಗುರುತಿಸಿಕೊಳ್ಳಬೇಕು ಎಂಬ ಕೆಟ್ಟ ಐಡೆಂಟಿಟಿ ಸೀಕಿಂಗ್!! 

                 ಹಾಗಾದ್ರೆ ಪ್ರೀತಿ ಮಾಡುವವರೆಲ್ಲ ಮೂರ್ಖರು ಅಂತಲ್ಲ, ಪ್ರೀತಿಸುವುದು, ಪ್ರೀತಿಸಲ್ಪಡುವುದು ತಪ್ಪು ಅಲ್ಲ, ಆದರೆ ನಮ್ಮ ಆಕರ್ಷಣೆಗಳಿಗೆ, ಭಾವನೆಗಳಿಗೆ, ಪ್ರೀತಿ ಎಂಬ ಶಬ್ದದ ಬಳಕೆ ಸರಿಯಲ್ಲ.  ನಾವು ಹುಟ್ಟಿದಾಗಿನಿಂದ ಅಮ್ಮ  ತೋರಿಸಿದ್ದು   ನಿಸ್ವಾರ್ಥ unconditional ಪ್ರೀತಿ!, ಅಪ್ಪ ತೋರಿಸುವ ಕಾಳಜಿ ನಿಜವಾದ ಪ್ರೀತಿ, ತನ್ನ ಕರುವಿಗಾಗಿ ಹಪ ಹಪಿಸುವ ಹಸುವಿನದ್ದು ಪ್ರೀತಿ. ಅಪರಿಚಿತ ಮಗುವನ್ನು ಎತ್ತಿಕೊಂಡು ಮುದ್ದು ಮಾಡುವುದು ಪ್ರೀತಿ! ಯಾರದ್ದೋ ಕಣ್ಣಿರಿಗೆ    ಕೆನ್ನೆಯಾಗುವುದು   ಪ್ರೀತಿ!  ಕತ್ತಲು ಕೋಣೆಯಲ್ಲಿ ದುಃಖತಪ್ತ ಸ್ನೇಹಿತನನ್ನು/ಸ್ನೇಹಿತೆಯನ್ನು ಸಮಾಧಾನ ಪಡಿಸುವುದು ಪ್ರೀತಿ! ತಮ್ಮ- ತಂಗಿ, ಅಣ್ಣ- ಅಕ್ಕ ರೋಡೆಗಿನ ಒಡನಾಟ ಪ್ರೀತಿ! ಇಳೀ ವಯಸ್ಸಿನಲ್ಲಿ ತಮ್ಮ ಮಕ್ಕಳಿಗಾಗಿ  ಪರಿತಪಿಸುವ ಹಿರಿಯ ಕಣ್ನುಗಳದ್ದು  ನಿಜವಾದ ಪ್ರೀತಿ!  ಪ್ರಪಂಚ ನಿಂತಿರುವುದೇ ಪ್ರೀತಿ ಎಂಬ ಎರಡಕ್ಷರದ  ಮೇಲೆ ನಿಜ, ಅದು ನಮ್ಮ ಸುತ್ತಲಿರುವ ಪ್ರತಿ ವ್ಯಕ್ತಿಯೊಂದಿಗೆ ಆಗಬಹುದಲ್ಲ? ಪ್ರೀತಿ ಎನ್ನುವುದು ಹೆಣ್ಣು-ಗಂಡಿಗೆ ಸಂಭಂದಿಸಿದ ವಿಷಯ ಅಂತ ಯಾಕೆ ಭಾವಿಸಬೇಕು?


               ನಾವು ಏನೇ ಕಂಡುಕೊಳ್ಳಲು ಹೊರಟರು, ಅಥವಾ ಯಾರನ್ನೇ ಆಗಲಿ ಇಷ್ಟಪಡುವಾಗ ಅಲ್ಲಿ  ಸ್ವಾರ್ಥ ಎಂಬ ಪದ ಹುಟ್ಟಿಕೊಂಡರೆ ಅದು ಪ್ರೀತಿಯೇ ಅಲ್ಲ!! ನನ್ನದು ಆಕೆಯೇಡೆಗಿನ ನಿಸ್ವಾರ್ಥ ಪ್ರೀತಿ ಎಂದು ಕೊಚ್ಚಿಕೊಳ್ಳುವ ಹುಡುಗರೆಲ್ಲರಿಗೂ ಒಂದು ಸಿಂಪಲ್ ಪ್ರಶ್ನೆ, ಅವಳು ನೋಡಲು ಸುಂದರವಾಗಿರದಿದ್ದರೆ ನೀವು  ಅವಳನ್ನು ಇಷ್ಟೇ ತೀವ್ರವಾಗಿ ಪ್ರೀತಿಸುತ್ತಿದ್ದೇನೆ ಅಂತ ಹೇಳಿಕೊಳ್ಳುತಿದ್ದಿರ? ಖಂಡಿತ ಇಲ್ಲ!! ಕಣ್ನು ಇಷ್ಟ ಪಡುವುದೇ ಸುಂದರವಾದ ವಸ್ತುಗಳನ್ನ ಮತ್ತು ಸುಂದರವಾದ ವಸ್ತುಗಳನ್ನ! ನೋಡದೆ ಪ್ರೀತಿಸುತ್ತಿದ್ದೇವೆ ಅಂತ ಹೇಳಿಕೊಳ್ಳುವ ಶತ ಮೂರ್ಖರಿಗೆ ಇನ್ನೊಂದು ಪ್ರಶ್ನೆ, ಕೇವಲ ಧ್ವನಿ ಕೇಳಿ ಇಷ್ಟ ಪಡುವ ನೀವುಗಳು, backround , career , profession  ಕೇಳದೆಯೇ ನೀನು ಏನೇ ಆಗಿರು ನಿನ್ನನ್ನೇ ಪ್ರೀತಿಸುತ್ತೇನೆ ಅಂತ ಹೇಳಲು ಸಾಧ್ಯವೇ? ಹೇಳುವ  ಸಾಹಸಿಗರು ಬೆರಳಣಿಕೆಯಷ್ಟು  ಸಿಗಬಹುದೇನೋ ಆದರೆ ಅದು ಕೇವಲ ಅವಿವೇಕದ ಪರಮಾವಧಿಯಾಗಬಹುದು.!


                       ಮನುಷ್ಯ ಸಮಾಜ ಜೀವಿ. ಎಲ್ಲರಿಂದ ಪ್ರೀತಿಸಲ್ಪಡುವ ಹಾಗು ಎಲ್ಲರನ್ನು ಪ್ರೀತಿಸಲು ಬರುವ ಏಕೈಕ ಮಾತು ಬಲ್ಲ ಜೀವಿ!  ಹೀಗಿರುವಾಗ ಯಾಕೆ ನಮ್ಮ ಪ್ರೀತಿಯನ್ನು ಒಬ್ಬಳಿಗಾಗಿ/ ಒಬ್ಬನಿಗಾಗಿ ಜೀವಮಾನವಿಡಿ ಕಾಯಿದಿರಿಸಬೇಕು? ಪ್ರೀತಿ ಹಂಚಿದಷ್ಟು ಬೆಳೆಯುತ್ತ ಹೋಗುವ  ವಿಸ್ಮಯ! ಇರುವಷ್ಟು ದಿನ ಎಲ್ಲರೊಳಗೊಂದಾಗಿ ಬಾಳು ಮಂಕು ತಿಮ್ಮ ಅಂತ d v g  ಹೆಳಿದ್ದಾರೆ. ಒಂದು ಗಂಡು ಮತ್ತು ಹೆಣ್ಣಿನ ನಡುವೆ ಇರುವುದು ಕೇವಲ ಆಕರ್ಷಣೆ ಹೊರತು ಪ್ರೀತಿಯಲ್ಲ. ದೇಹಕ್ಕೆ-ಕಾಮ, ಹರೆಯಕ್ಕೆ-ಭಾವನೆ, ಕಣ್ಣಿಗೆ- ಸೌಂದರ್ಯ, ನಾಲಿಗೆಗೆ-ರುಚಿ, ಹೇಗೋ ಹಾಗೆ ಯವ್ವನದಲ್ಲಿ- ಸಂಗಾತಿಯ ಅವಶ್ಯಕತೆ ಇರುತ್ತದೆ, ಅದನ್ನ ಪ್ರೀತಿ ಅನ್ನುವುದು ತಪ್ಪಾಗುತ್ತದೆ.  ಪ್ರೀತಿಗೆ, ಕಾಮದ, ಆಕರ್ಷಣೆಯ,  ಭಾವನೆಯ, ಸೌಂದರ್ಯದ ಹಂಗಿಲ್ಲ, ಅದು ಸದಾ ಹರಿಯುವ ಜಲಧಾರೆ! ಮದುವೆಯಾದ ೫೦ ವರ್ಷದ ನಂತರವೂ ಗಂಡ ಹೆಂಡತಿಯ ಸಂಗತಕ್ಕೆ ಅಥವಾ ಹೆಂಡತಿ ಗಂಡನ ಸಂಗಾತಕ್ಕೆ ಹಾತೊರೆಯುವುದು ನಿಜವಾದ ಪ್ರೀತಿ! ಹರೆಯ ಮುಗಿದ ತಕ್ಷಣ ಸತ್ತು ಹೋಗುವ ಆಕರ್ಷಣೆಗೂ ಸಾವಿಲ್ಲದಿರುವ ಪ್ರೀತಿಗೂ ಎತ್ತಣದಿಂದೆತ್ತ  ಸಂಭಂದವಯ್ಯ??!!

                 well , ನಾನು ಬ್ಲಾಗ್ನಲ್ಲಿ ಕನ್ನಡದಲ್ಲಿ ಬರೆಯಲು ಶುರು ಮಾಡಿ ಕೇವಲ ಒಂದು ತಿಂಗಳಾಗಿದೆ. ಆದರೆ ಈ ಒಂದು ತಿಂಗಳಲ್ಲಿ ನನಗೆ ಸಿಕ್ಕ ಪ್ರತಿಕ್ರಿಯೆ, ಟೀಕೆ, ವಿಭಿನ್ನವಾದದ್ದು!! ಕೆಲವು ಸ್ನೇಹಿತರು ಯಾವಾಗ continue ಮಾಡ್ತಿಯ? ಅಂತ ಕೇಳ್ದ್ರೆ, ಇನ್ನು ಕೆಲವರು ಯಾವಾಗ ನಿಲ್ಲಿಸ್ತಿಯ? ಕೆಲವರಂತೂ ಮಾಡೋಕೆ ಕೆಲಸ ಇಲ್ಲ ಅಂತ ಕಾಣುತ್ತೆ ಅದಕ್ಕೆ  ಬೇರೆಯವರ  ಸಮಯವನ್ನು ವ್ಯರ್ಥ ಮಾಡ್ತಾ ಇದ್ದೀಯ? ಅಂತ ಕೇಳ್ತಾ ಇದಾರೆ. ನನಗೆ ಪ್ರೋತ್ಸಾಹಕ್ಕಿಂತ criticise  ಮಾಡಿದ ಸ್ನೇಹಿತರೆ ಸರಿ ಅನ್ನಿಸುತ್ತಿದ್ದಾರೆ. ಹಾಗಂತ ಅವರು ಕೇವಲ ನಿಂದನೆ ಮಾಡದೆ ವಿಮರ್ಶೆ ಮಾಡಿ ಸಲಹೆ ನೀಡಿದ್ದಾರೆ ಅವರಿಗೆಲ್ಲ ನನ್ನ ಧನ್ಯವಾದಗಳು. ಹಾಗಂತ ಯಾರೋ ಹೇಳ್ತಾರೆ ಅಂತ ನಾನು ಬ್ಲಾಗ್ ಅಂತು ನಿಲ್ಲಿಸುವುದಿಲ್ಲ, ನಿಮ್ಮ ಟೀಕೆಗಳನ್ನು ನನ್ನ ಬ್ಲಾಗ್ ಸದಾ ಸ್ವಾಗತಿಸುತ್ತದೆ.

15 comments:

  1. super like.. keep going..good write up..

    ReplyDelete
  2. ಪ್ರೀತಿ ಎನ್ನುವುದು ಹೆಣ್ಣು-ಗಂಡಿಗೆ ಸಂಭಂದಿಸಿದ ವಿಷಯ ಅಂತ ಯಾಕೆ ಭಾವಿಸಬೇಕು?
    Yes love is universal. We have seen the greatest personalities showing that love to whole of mankind. But how many are ready to sacrifice their future in the service of mankind? My dear friend love isn’t only between a boy and a girl. It is indeed universal. But you are restricting it in your words.Lets be practical can you love everyone around you? Irrespective of their behavior? And serve them for their betterment? Practicality is not that none should serve mankind. But they can still do it in spite of loving a person in particular. Show your love to your friends , respond to their feelings. That doesn’t stop anyone from loving a person in particular.

    ReplyDelete
  3. U have every right to write whatever u feel like. I honour that. There are some misconceptions in you. That may be because of the people around you who made you get these thoughts first get rid off them(thoughts). This isn’t your fault neither the people around you. You are being exposed to false a love.

    ‘ಕೆಟ್ಟ ಐಡೆಂಟಿಟಿ ಸೀಕಿಂಗ್!!’
    ‘ Identity seeking’ . I can look into this in two directions. First how can someone get their identity by loving?? Insane!!! By the way what kind of identity are u talking about ? good one or a bad one? Certainly none would love to get a bad identity. Ok for an instance lets assume that someone is loving for seeking ‘an’ identity, my question is what kind of people will identify them??? This is truly because of the Love that u have ‘seen’ . No offense to people around u. But they have made you think in these lines. First get out of it and write your words.

    ReplyDelete
  4. ‘ಒಂದು ಗಂಡು ಮತ್ತು ಹೆಣ್ಣಿನ ನಡುವೆ ಇರುವುದು ಕೇವಲ ಆಕರ್ಷಣೆ ಹೊರತು ಪ್ರೀತಿಯಲ್ಲ.’ Did you make this statement irrespective of the persons’ age? I think you should correct it.
    If parents themselves show you someone and if he is not good looking(for you) will you marry him still? Beauty is of prime importance for all. And that beauty lies in the eyes of the beholder. For every audience hero/heroine in Film looks good but can the audience choose them as their love? Am I making sense to you? Beauty lies in the eyes of the beholder(sorry for bringing this line again, but its much needed here).

    ‘ಮದುವೆಯಾದ ೫೦ ವರ್ಷದ ನಂತರವೂ ಗಂಡ ಹೆಂಡತಿಯ ಸಂಗತಕ್ಕೆ ಅಥವಾ ಹೆಂಡತಿ ಗಂಡನ ಸಂಗಾತಕ್ಕೆ ಹಾತೊರೆಯುವುದು ನಿಜವಾದ ಪ್ರೀತಿ!’ – you mean one has to wait till 50 years to prove their true love?!! And if a couple dies before that they never had a true love between them?

    Unless you put yourselves in others shoe you can’t feel what others feel. This isn’t only regarding love stuff. Its in general. You can never feel the hungry of the poor unless you have starved to death.

    Correct me if I'm wrong:)

    ReplyDelete
  5. pavan, well am sorry i dint mean it in particular to any individual.....!!! there is nothing to correct cause those who are in it are always enjoying it and i always wish all the very best for their future!! but my question is why should we name an attraction or crush between two persons as love?? love is universal...you said can i love evryone around me? yes i can and i do and am not saint to love evryone irrespective of their behaviour that counts for me.If a couple can love each other the same way as they used to do in their young age that means a real sense of love!! it does not mean they have to wait for fifty years to prove their love!! you have mistaken it, it means love is irrespective of age and beauty and feelings!!!

    ReplyDelete
  6. ಪ್ರೀತಿ, ರವಿಯ ಕಿರಣಕ್ಕೆ ಹಾತೊರೆಯುವ
    ಕಮಲದಂತೆ
    ಸ್ನೇಹ, ಕಪ್ಪೆ ಚಿಪ್ಪಿನಲ್ಲಿ ಇರ್ರುವ
    ಮುತ್ತಿನಂತೆ
    ಯಾರ ಕೊರಳಲ್ಲಿ ಯಾರ ಮುಡಿಯಲ್ಲಿ
    ಶೋಬಿಸುತ್ತೋ ಬಲ್ಲವರಾರು
    both love and freindship is eternal in the world ,except these our life is meaningless .Both can happen at anytime without any reasons .

    NICE WRITING ASHU.....

    ReplyDelete
  7. Friends, the blogspot giving huge amount of problems:-(, yesterday i could not even sign in, when today i could sign in all the comments an my recent post are gone and it is showing zero comments:-(, some healthy discussion was going on, am really sorry it is not my fault and am really sad that i could not answer to your comments:-(

    ReplyDelete
  8. Ashu,

    blog bareyoke agde iddavru, madoke kelsa ilva antare,

    blog bagge gottidavru ''adege neevu time maintain madtira'' anta hemme padtaare

    avribbara naduvina ele tumba chikkadu

    neevu barita iri,

    ''binnahake baayillavayya''

    ReplyDelete
  9. ನಾವು ಹುಟ್ಟಿದಾಗಿನಿಂದ ಅಮ್ಮ ತೋರಿಸಿದ್ದು ನಿಸ್ವಾರ್ಥ unconditional ಪ್ರೀತಿ!, ಅಪ್ಪ ತೋರಿಸುವ ಕಾಳಜಿ ನಿಜವಾದ ಪ್ರೀತಿ, ತನ್ನ ಕರುವಿಗಾಗಿ ಹಪ ಹಪಿಸುವ ಹಸುವಿನದ್ದು ಪ್ರೀತಿ. ....nice


    ನನಗೆ ಪ್ರೋತ್ಸಾಹಕ್ಕಿಂತ criticise ಮಾಡಿದ ಸ್ನೇಹಿತರೆ ಸರಿ ಅನ್ನಿಸುತ್ತಿದ್ದಾರೆ. good keep it up

    ReplyDelete
  10. This comment has been removed by the author.

    ReplyDelete
  11. U speak about parent's love... But whenever someone compares parent's love with the love of the partner a question always arises in my mind .... Parents love us because we are their children.If we were some strangers we can never expect such love from them. But why do the partners love you? We are no one to them. But where does this love arise from?

    I have always wondered why people fall in so called 'love'..and never found an answer even from those in 'love'..So I have convinced myself that there is no reason for a person to love another. Looks might just trigger the process but it cannot keep up the momentum throughout cos according to me, we cannot trust looks.

    ReplyDelete
  12. you have written some interesting post.... keep write on...


    i have come across very least good kannada blogs and especially from student like us....

    ReplyDelete
  13. ಚಂದಗೆ ಬರೀತಿ ಕಣೆ ಹುಡುಗೀ... ವಿಷಯ, ಶೈಲಿ ಎರಡೂ ಸೊಗಸಾಗಿದೆ... ಎಂ.ಟೆಕ್ ಅದರೂ ಮಾಡು.. ಐ. ಎ.ಎಸ್ ಆದರೂ ಮಾಡು ಬರೆಯೋದು ಮಾತ್ರ ನಿಲ್ಲಿಸಬೇಡ. ನಮ್ಮ ಸಂಸ್ಕೃತಿ, ಭಾಷೆಯ ಬಗ್ಗೆ ಅಭಿಮಾನ ಅವುಗಳ ಆಚರಣೆ ಮಾತ್ರವೇ ನಮ್ಮತನವನ್ನು ನಿರಂತರ ಕಾಪಾಡಬಲ್ಲದು ..... ಗೋ ಅಹೆಡ್... ಗುಡ್ ಲಕ್ ...

    ReplyDelete
  14. ಪ್ರೀತಿ ಎಂಬ ಪದ ಕೇವಲ ಹುಡುಗ ಹುಡುಗಿಯ ಮಧ್ಯೆ ಸ್ರಷ್ಟಿಸುವಂಥದಲ್ಲ. ಒಬ್ಬ ತಾಯಿ, ತಂದೆ, ಮಗ, ಮಗಳನ್ನು ಅತಿಯಾಗಿ ಪ್ರೀತಿಸುವವರು ಎಲ್ಲಾ ಸಂಬಂಧಗಳನ್ನು ದೂರವಿಟ್ಟು ಎಲ್ಲರಿಗಿಂತ ಹೆಚ್ಚಾಗಿ ತನಗೇ ಗೊತ್ತಿಲ್ಲದವರನ್ನು, ಆತ-ಅವಳು ಯಾರದೋ ಧ್ವನಿ ಕೇಳಿಯೋ... ಇಂದಿನ ಆಧುನಿಕ ಯುಗದಲ್ಲಿ ಮೊಬೈಲ್ ಫೋನ್ನಲ್ಲಿ ಮಾತಾಡುವ ಮೂಲಕ ಪರಿಚಯಿಸಿಕೊಂಡ ಯುವಕರು (ಯುವತಿಯರಿಗಿಂತ ಹೆಚ್ಚು) ಭಾವನಾತ್ಮಕವಾಗಿ ಹೆಣ್ಣೆಂಬ ಮಾಯೆಕಡೆ ಆಕಷಿ೯ತರಾಗುತ್ತಾರೆ. ಆ ಒಂದು ಆಕಷ೯ಣೆ ಅವನಲ್ಲಿ ಪ್ರೀತಿಯೆಂಬ ಮೊಳಕೆಯೊಡೆಯುತ್ತದೆ. ಇಲ್ಲಿ ಸ್ಪಶ೯ವೂ ಇಲ್ಲ, ಮುಖಾಮುಖಿಯಾಗಿ ಭೇಟಿಯಾಗುವುದಿಲ್ಲ. ಕೇವಲ ದೂರದ ಸಂಭಾಷಣೆಯಲ್ಲಿ ಹುಡುಗಿ ಆ ಹುಡುಗನನ್ನು ಯಾವುದೋ ಮೂಡಿನಲ್ಲಿ ಪ್ರೀತಿಯೆಂಬ ಪದದಿಂದ ಉತ್ತೇಜನಗೊಳಿಸುತಿರುತ್ತಾಳೆ. ಅವಳ ಆ ಒಂದು ಪ್ರೇರಣೆಯಿಂದ ಅವನು ಅವಳೆಡೆಗೆ ಇನ್ನಷ್ಟು ಆಕಷಿ೯ತನಾಗಿ ತನ್ನ ಹತ್ತಿರದ ಸಂಬಂಧಿಕರಿಗಿಂತ ಗೊತ್ತೇ ಇಲ್ಲದವಳ ಧ್ಯಾನದಲ್ಲಿ ಇರುತ್ತಾನೆ. ಅವಳಿಗೆ ನಿತ್ಯವೂ ಮಾತಾಡದೇ ಇದ್ದರೆ ಮನಸೇ ಬರುವುದಿಲ್ಲ. ಇಲ್ಲ ಅವಳಿಂದ ಒಂದು ಪ್ರೀತಿಯ ಸಂದೇಶಕ್ಕಾದರೂ ಕಾಯುತಿರುತ್ತಾನೆ. ಅಂಥವನನ್ನು ಅಥವಾ ಅಂತಹ ಹುಡಿಗಿಯಲ್ಲಿ ಇರುವುದು ನಿಜವಾದ ಪ್ರೀತಿಯೋ ಅಥವಾ ಅದು ಕಾಮವೆಂಬುದು ಹೇಳಲು ಇಷ್ಟಪಡುತಿರೋ ಇಲ್ಲ ಅದೊಂದು ನಿಷ್ಕಲ್ಮಷವಾದ ಸ್ನೇಹವೆಂದು ಭಾವಿಸುತ್ತಿರೋ ಹುಡುಗರು ಬಹಳ ಸುಲಭವಾಗಿ ಪ್ರತಿಯೆಂಬ ಬಲೆಗೆ ಸಿಕ್ಕಿ ಬೀಳುವುದಕ್ಕೆ ಕಾರಣವೇನು ಮತ್ತು ಹುಡುಗಿಯೊಬ್ಬಳು ಹತ್ತಾರು ಹುಡುಗರನ್ನು ಆಕಷ೯ಸುವಂಥ ಶಕ್ತಿ ಅವಳಲ್ಲೇನಿರುತ್ತದೆ..? ಅದೇ ಒಬ್ಬ ಹುಡುಗನಿಗೆ ಅಷ್ಟು ಸುಲಭವಾಗಿ ಹತ್ತಾರು ಹುಡುಗಿಯರ ಸ್ನೇಹ ದಕ್ಕುವುದಿಲ್ಲ. ಹರಸಾಹಸ ಪಟ್ಟರೂ ಎಷ್ಟೇ ಪ್ರಯತ್ನಪಟ್ಟರೂ ಒಬ್ಬ ಹುಡುಗನಿಗೆ ಒಂದು ಹುಡುಗಿ ನಿಜವಾದ ಸ್ನೇಹಭಾವದಿಂದ ಸಿಗುವುದೆಂದರೆ ಇಂದಿನ ಆಧುನಿಕ ಯುಗದಲ್ಲಿ ಅದು ಸಾಧ್ಯವೇ ಇಲ್ಲ ಎನ್ನಬಹುದೇನೋ. ಇದಕ್ಕೆ ನಿಮ್ಮ ಉತ್ತರ ಸಿಗಬಹುದೆಂಬ ಆಶೆಯಿಂದ ಬರೆದು ಮನವಿಸಿದ್ದೇನೆ. ಬೇಕಾದರೆ ನೀವು ಈ ವಿಷಯದ ಕುರಿತು ಇನ್ನೂ ಮುಂದಿನ ಭಾಗದಲ್ಲಿ ನನ್ನ ಕೆಲವು ಪ್ರಶ್ನೆಗಳಿಗೆ ವಿಶೇಷವಾದ ಲೇಖನವನ್ನು ಬರೆದು ಕೆಲವರಲ್ಲಿ ಇರುವ ಗೊಂದಲವನ್ನು ನೀವು ನಿವಾರಿಸಲು ಪ್ರಯತ್ನಿಸುತಿರೆಂದು ನಂಬಿದ್ದೇನೆ. ಹೇಳಿ ಅಶ್ವಿನಿಯವರೆ.... ನಿಮಗೇನಾದರೂ ಇನ್ನಷ್ಟು ಸಲಹೆ ಸೂಚನೆಗಳ ಅವಶ್ಯಕತೆಯಿದ್ದರೆ ಕೇಳಿ....

    ಕಾಮವಿರಲಿ,,,,,,,,ನಿಷ್ಕಲ್ಮಶ ಸ್ನೇಹವಿರಲಿ,,,,,,,,,ಭಾವನಾತ್ಮಕ ಸಂಬಂಧವಿರಲಿ ಪ್ರೀತಿಯೆಂಬ ಪದ ಪ್ರಾಣಿ ಪಕ್ಷಿಗಳಿಂದ ಹಿಡಿದು ಈ ಪ್ರಕ್ರತಿ ನಿಯಮದಲ್ಲಿ ಜೀವಿಸುವ ಜೀವ ಜಂತುಗಳಲ್ಲಿ ಕೂಡ ಪ್ರೇಮ ಕಾಮ ತುಂಬಿದ ನಿಜವಾದ ಭಾವನಾತ್ಮಕವಾದ ಪ್ರೀತಿ ಇದ್ದೇ ಇರುತ್ತದೆ. ಅಲ್ಲಿ ಕಪಟತನ ಇರುವುದಿಲ್ಲ. ಗೊಂದಲಗಳು ಹುಟ್ಟುವುದಿಲ್ಲ. ಅನುಮಾನಗಳು ಕಾಣುವುದಿಲ್ಲ. ಅಪನಂಬಿಕೆ ಸ್ರಷ್ಟಿಯಾಗುವುದಿಲ್ಲ. ಆದರೆ ಮಾನವರಲ್ಲಿ ಮಾತ್ರ ಪ್ರೀತಿ-ಪ್ರೇಮದಲ್ಲಿ ಭೇದಭಾವ, ನಂಬಿಕೆ ಅಪನಂಬಿಕೆ, ಗೊಂದಲದ ಗೂಡಾಗಿ ಬಿಡುವ ಪ್ರೀತಿ ಏನೆಲ್ಲಾ ಕಾರಣಗಳು ಸ್ರಷ್ಟಿ ಮಾಡಿ ಬಿಡುತ್ತದೆ. ಪುರುಷರನ್ನೇ ಅಪರಾಧಿಗಳನ್ನಾಗಿ ಮಾಡಿ ಬಿಡುವ ಸಮಾಜ ಪ್ರೀತಿಯೆಂಬ ವಿಷಯದಲ್ಲಿ ಹುಡುಗಿಯರನ್ನು ರಿಯಾಯಿತಿ ಕೊಡುತಲೇ ಬಂದಿದೆ. ಹೆಣ್ಣಿನಲ್ಲಿ ಕಾಮವೆಂಬ ಪದ ಮರೀಚಿಕೆಯಾಗಿ ಗಂಡಿನಲ್ಲಿ ಅದು ಬಹಿರಂಗವಾಗಿ ಕಂಡು ಬರುತ್ತದೆ ಎಂದು ಹೇಳುವುದು ಅದೇಷ್ಟು ಸೂಕ್ತವೆಂಬುದಕ್ಕೆ ನೀವು ನಿಮ್ಮ ಲೇಖನದ ಮುಂದೊರೆಯುವ ಭಾಗದಲ್ಲಿ ಉತ್ತರಿಸಬೇಕು. ಹೆಣ್ಣಿನಲ್ಲಿ ಪ್ರೇಮದ ಸೆಳೆತ ಪ್ರೀತಿಯ ಆಕಷ೯ಣೆ, ಕಾಮದ ಬಯಕೆಗಳೇ ಇರುವುದಿಲ್ಲವೆಂದು ವಾದಿಸುವವರಿಗೆ ನೀವು ಹೇಳುವ ಕಿವಿ ಮಾತೇನು....? ಹೆಣ್ಣಿನಲ್ಲಿ ಗಂಡಿಗಿರುವ ಎಲ್ಲಾ ಬಯಕೆಗಳು ಇರುವುದೇ ಇಲ್ಲ ಎಂದರೆ ಅವಳೇಕೆ ಕಾಮದ ಕಣ್ಣುಗಳಿಗೆ ಬಲಿಯಾಗಬೇಕು ಅಂತಹ !ಂದು ಉಡುಗೆ ತೊಡುಗೆಗಳಲ್ಲಿ ಪುರುಷರ ಮನಸನ್ನು ವಿಚಲಿತಗೊಳಿಸುವಂಥ ಪ್ರದಶ೯ನವನ್ನೇಕೆ ನೀಡಬೇಕು....? ವಿದೇಶಿ ಉಡುಗೆ ತೊಡುಗೆಗಳಲ್ಲಿ ಕಾಣಿಸಿಕೊಳ್ಳುವವರು ಅಲ್ಲಿ ನಿಜವಾದ ಪ್ರೀತಿಯಿಲ್ಲದೇ ಕಾಮಕ್ಕೆ ಆಹ್ವಾನಿಸುವ ಸೂಚನೆಯೆಂಬ ಕೆಲವರಲ್ಲಿರುವ ತಪ್ಪು ಕಲ್ಪನೆಗಳೋ ಅಥವಾ ಸರಿಯಾದ ವಿಚಾರಗಳೋ ಎಂಬುದಕ್ಕೆ ನಿಮ್ಮಲ್ಲಿರುವ ಉತ್ತರಗಳೇನು...?

    -ವೀರಣ್ಣ ಮಂಠಾಳಕರ್

    ReplyDelete
  15. today i read your blog in vijayakarnataka liked it pl send me full text

    ReplyDelete