Total Pageviews

Friday, April 29, 2011

Masti ki paathshala!!!!!

                            ನಮ್ಮ ಫಸ್ಟ್ ಸೆಮೆಸ್ಟರ್  ಒಂದು ಚೂರು ಭಯ, ಆತಂಕ, ಮತ್ತು ಕೊಂಚ ಮಜೆಯನ್ನೊಳಗೊಂಡ, ದಿನಗಳಾಗಿದ್ದವು. ಎಲ್ಲವು ಓಕೆ, ಆದ್ರೆ ಈ  " constitution  of  india  and  professional ethics " ಎಂಬ ಸಬ್ಜೆಕ್ಟ್ ಯಾಕೆ?? ಎಂಬ ವಾದ ನಮ್ಮೆಲ್ಲರದ್ದಾಗಿತ್ತು!!  ಅಷ್ತಾಗ್ಗಿಯು ಅದೇ period ನ ನಾವು ತುಂಬಾ ಎಂಜಾಯ್ ಮಾಡ್ತಾ ಇದ್ವಿ. A ಮತ್ತು B section ಎಲ್ಲರು ಒಂದೇ ಕ್ಲಾಸಿನಲ್ಲಿ, ಒಂದೇ ಬೆಂಚನಲ್ಲಿ ನಾಲ್ಕು ಜನ ಕುಳಿತುಕೊಂಡು, ಪಾಠ ಕೇಳೋದಕ್ಕಿಂತ ಜಾಸ್ತಿ ಹರಟೆ  ಹೊಡಿತಾ ಇದ್ವಿ!!


                          ಈ ಸಬ್ಜೆಕ್ಟ್ ನಾ ಅಂಕಗಳು ಕೇವಲ ಆಟಕ್ಕುಂಟು ಲೆಕ್ಕಕಿಲ್ಲ ಅನ್ನೋ ರೀತಿಯಲ್ಲಿ ಇದ್ದರಿಂದ, ನಮಗೂ ಅಷ್ಟೊಂದು seriousness ಇರಲಿಲ್ಲ, ನಾವು ಹುಡುಗಿಯರು ಫಸ್ಟ್ ಬೆಂಚನಲ್ಲಿ ಕುಳಿತುಕೊಂಡೆ, ಸಂಸಾರ ತಾಪತ್ರ್ಯಗಳೆಲ್ಲ ನಮ್ಮ ತೆಲೆಯ ಮೇಲೆ ಇದೆಯೇನೋ ಅನ್ನೋ ಹಾಗೆ ವಟ ವಟ, ಮಾತು ಕಟಿಯುತ್ತಿದ್ದರೆ, ನಮ್ಮ ಸರ್, ಎನ್ರಮ್ಮ ನಿಮ್ಮ ಗಂಡ ದಿನಾ ಕುಡಿದು ಬಂದು ನಿಮ್ಮನ ಹೊಡಿತಾನ್ರೆನಮ್ಮ? ಅದ್ಯಾಕೆ ಈ ಪರಿ ಮಾತು ಸುಮ್ಮನೆ ಕೇಳ್ಬಾರ್ದ?  ಅಂತ ಗದರಿಸಿದಾಗ , ಸ್ವಲ್ಪ ಪಾಠದ ಕಡೆ ಗಮನ ಕೊಡುತ್ತಿದ್ದೆವಾದರು, ಆ amendments , years ,  ಬಿಲ್ ಪಾಸು,  upper  house , lower  house  ಪ್ರೆಸಿಡೆಂಟು, prime  ಮಿನಿಸ್ಟರ್,ಎಲ್ಲವು ಹುಡಿಗೀಯರಿಗಂತೂ ಭಯಂಕರ ಬೋರಿಂಗ್ ಥಿಂಗ್ಸ್ ಅನ್ನಿಸ್ತಾ ಇದ್ದವು!!    


                        ಈ ಹಂತದಲ್ಲೇ ನಾನು ಮತ್ತು ಅಪ್ಪಿ ತುಂಬಾ ಕ್ಲೋಸ್ ಆಗಿದ್ದು,ಇಬ್ಬರು ಫಸ್ಟ್ ಬೆಂಚ್ ಗರ್ಲ್ಸ್! ಮೊದಲು ಬಂದವರೆಲ್ಲ ತಮಗೆ ಬೇಕಾದ ಬೆನ್ಚ್ನಲ್ಲೇ ಕುಳಿತು ಕೊಳ್ಳುತ್ತಿದ್ದರು, ಆದರೆ ನಾವು ಎಷ್ಟೇ ಲೇಟ್ ಆಗಿ ಹೋದರು ನಮ್ಮ ಬೆಂಚ್ ಮಾತ್ರ reserved  ಆಗೇ ಇರುತ್ತಿತ್ತು!! ಈಡಿ ಕ್ಲಾಸ್ ನವ್ರೆಲ್ಲ ಫಸ್ಟ್ ಬೆಂಚ್ ನಲ್ಲಿ ಕುಳಿತುಕೊಳ್ಳಲು ಇಷ್ಟ ಪಡ್ತಾ ಇರಲಿಲ್ಲ, ಆದ್ರೆ  we loved and enjoyed sitting at first bench!! ನಾನು ಮತ್ತು ಅಪ್ಪಿ ಇಬ್ಬರು ಕನ್ನಡ ಪ್ರೇಮಿಗಳು, ಉಳಿದವರೆಲ್ಲ ಕನ್ನಡ ಮಾತನಾದುತ್ತಿದ್ದರಾದರೂ, ನಮ್ಮಷ್ಟು ಕನ್ನಡ ದಿನ ಪತ್ರಿಕಗಳನ್ನ ಓದುವುದು, ಅಂಕಣಗಳ ಚರ್ಚೆ, ಅಂಕಣಕೊರರ ವಿಮರ್ಶೆ, journalism  ಅಂದ್ರೆ ವಿಪರೀತ ಆಕರ್ಷಣೆ ಹೊಂದಿರಲಿಲ್ಲ. ನಮ್ಮ ಗುಂಪಿಗೆ ಹೊಸದಾಗಿ ಸೇರ್ಪಡೆ ಆದವಳೇ ಸ್ಪಂದನ!! ಅವಳು ನಮ್ಮಷ್ಟೇ ತೀವ್ರವಾಗಿ ಕನ್ನಡ ದಿನಪತ್ರಿಕೆಗಳತ್ತ ಒಲವು ಹೊಂದಿದ್ದಳು. ಅವಳಿಗೆ ಒಂದು ದಿನಪತ್ರಿಕೆಯ ಅಂಕಣಕಾರ ಚೇತನ್ (ಹೆಸರು ಬದಲಾಯಿಸಲಾಗಿದೆ)  ಎಂಬ jounalist  ಪರಿಚಯವಿತ್ತು. ಹಾಗಾಗಿ ನಮ್ಮ ಗುಂಪಿನಲ್ಲಿ ಅತಿ ಹೆಚ್ಚಾಗಿ ಸ್ಪಂದನಳ ನೆಚ್ಚಿನ ಲೇಖಕನ ಚರ್ಚೆ ಆಗ್ತಾ ಇತ್ತು!


                             ನಮ್ಮ ಜೊತೆ ಕುಳಿತುಕೊಳ್ಳಲು ತುಂಬಾ ಹುಡುಗೀಯರು ಭಯ ಪಡ್ತಾ ಇದ್ರು, ಈವತ್ತಿಗೂ ಅಷ್ಟೇ, ಏನೇ ಕನ್ನಡ papers  ಓದ್ತಿರ? ಹೆಂಗ್ ಓದ್ತಿರೆ?  ಕನ್ನಡ ಫಿಲ್ಮ್ಸ? ಅಯ್ಯೋ ನಮಗಂತೂ ಅರ್ಥ ಅಗಲ್ಲಪ! ಅಂತ ಯಾರೇ ಅಂದರು ಸಾಕು ನಾನು  ಮತ್ತು ಅಪ್ಪಿ ಜೀವಮಾನದಲ್ಲೇ ಕನ್ನಡದ ಬಗ್ಗೆ ಇನ್ನೆಂದು ಉಡಾಫೆಯ ಮಾತುಗಳನ್ನು ಆಡಲಾರದ ಹಾಗೆ ಬೆವರು ಇಳಿಸಿ ಬಿಡುತ್ತಿದ್ದೆವು!! ಸ್ಪಂದನ typical  ಬಿಜಾಪೂರದ ಶೈಲಿಯಲ್ಲಿ ಎನವ ಹೆಂಗದ ಮೈಗೆ?  ನೀ ಹುಟ್ಟು ಮುಂದೆ thames ನೀರ್ ಕುಡಿದಿ  ಏನ್ ಕಥಿ? ಮನ್ಯಾಗ ಯಾವ accent ಮಾತಾಡ್ತಿ? ನಿಮಗೆಲ್ಲ fashion ಆಗ್ಯದ ಏನ್? ಕನ್ನಡ ಬರಂಗಿಲ್ಲ ಅಂತ ಹೇಳ್ಕೊತೀರಲ್ಲ  ಸ್ವಲ್ಪರೆ  ಜೀವಕ್ಕ ನಾಚಿಕಿ ಆಗುದ್ ಬ್ಯಾಡ? ನಿಮ್ಮ ಕಿಂತ ನಾವು ಮೂರು ಮಂದಿ ಬೆಖಾದ್ accent  ನ್ಯಾಗ್ ಇಂಗ್ಲಿಶ್ನ್ಯಾಗ್ ಮಾತಾಡ್ತಿವಿ. ಆದರ್ ನಿಮ್ಮ್ಹಂಗ ಸೊಕ್ಕಿಲ್ಲ ನಮಗ, ನಮ್ಗೆನಿದ್ರು ಕನ್ನಡನೇ ಶ್ರೇಷ್ಠ! ಕನ್ನಡ ಬರಂಗಿಲ್ಲ ಅಂತ ಹೇಳುದು ನಿಮ್ಮ ತಾಯಿಗೆ ಮಾಡಿದ್ದ ಅವಮಾನಕ್ಕಿಂತ ಜಾಸ್ತಿ ನೆನಪ  ಇಟ್ಟ್ಕೋ...ಇದೆ ಲಾಸ್ಟ್ ಇನ್ನೊಮ್ಮೆ ಹಿಂಗ ಅನ್ನು ಮುಂದ ವಿಚಾರ ಮಾಡು ಏನ?? ಅಂತ ಅವಾಜ್ ಹಾಕ್ತ ಇದ್ದಳು.ನಿಜವಾಗಿ ಕನ್ನಡ ಬರ್ದೇ ಇದ್ದವರು, northies ,ಎಲ್ಲರು ನಮ್ಮ ಗುಂಪಿನಲ್ಲಿದ್ದರು. ಅಷ್ಟೇ ಯಾಕೆ ನನ್ನ ಜೀವದ ಗೆಳತಿ ನೈನಳಿಗು ಕನ್ನಡ ಓದಲು ಕಷ್ಟ ಆಗ್ತಾ ಇತ್ತು, ಆದ್ರೆ ಕನ್ನಡ ಬಾರದೆ ಇದ್ದವರು ಮತ್ತು ಬಾರದ ಹಾಗೆ ನಟಿಸುವವರಿಗೂ ತುಂಬಾ ವ್ಯತ್ಯಾಸವಿದೆ.


                            ನಾವು ಮೂರು ಜನ ಫಸ್ಟ್ ಬೆಂಚ್ ನಲ್ಲೆ ಕುಳಿತು ಮಾಡಬಾರದ ಸಾಹಸಗಳನ್ನ ಮಾಡ್ತಾ ಇದ್ವಿ!  maths  period ಕೆಲವೊಮ್ಮೆ ತುಂಬಾ ಬೋರಿಂಗ್ ಅನ್ನಿಸೋಕೆ ಶುರುವಾದಾಗ, ನಾನು ಮೊದಲು ನಮ್ಮ ಸರ್ ನ ಡ್ರೆಸ್ ನೋಡಿ ಕಾಮೆಂಟ್ ಕೊಡೋಕೆ ಶುರು ಮಾಡ್ತಾ ಇದ್ದೆ,  ಪಾಪ ಸರ್  ನೋಡೇ ಇವತ್ತು ಕರೆಕ್ಟ್ ಆಗಿ ಡ್ರೆಸ್ ಪ್ರೆಸ್ ಮಾಡಿಲ್ಲ, ಹೈರ್ ಸ್ಟೈಲ್  ಕೂಡ ಖರಾಬ್ ಆಗಿದೆ, ಅಂದಾಗ ಸ್ಪಂದನ, ಅವರು ತಲೆ ಮೇಲೆ ಮೂರೇ ಮೂರು ಕೂದಲು straight  ಆಗಿದ್ದನ್ನ ನೋಡಿ, ನೋಡ್ರೆ ಉಪ್ಪಿ ಹೈರ್ ಸ್ಟೈಲ್ ಒಂದು  band  ಹಾಕಿದ್ರೆ, ಉಪ್ಪಿಗಿಂತ handsome ಕಾಣಲ್ಲವ ನಮ್ಮ ಸರ್? ಉಪ್ಪಿ ಡ್ರೆಸ್ ನಲ್ಲಿ imagine   ಮಾಡ್ಕೊಂಡು ಬಿದ್ದು ನಗ್ತಾ ಇರ್ಬೇಕಾದ್ರೆ ಈ ಅಪ್ಪಿ ಸುಮ್ನೆ ಇರವ್ಳು, ಅವಳದೆನಿದ್ರು ಲೇಟ್ reaction , ನಾವು ನಕ್ಕು ಸುಮ್ಮನಾದ ಮೇಲೆ ಶುರು ಹಚ್ಹ್ಕೊಳವ್ಳು,  ಎಲ್ಲೋ ಒಂದು ಕಡೆ ಒಂದು ಸ್ಟೆಪ್  ಮಿಸ್ ಆಗಿ  ಯಾರೋ  ಹಿಂದಿನಿಂದ,ಸರ್ its wrong! ಕಿರುಚಲು,  ಸರ್  ತೆಲೆ ಕೆರೆದು ಕೊಂಡಾಗ ನಾನು, ಏನು ಕಂಡು ಹಿಡಿಲಿಕ್ಕೆ ಹೊರಟಿದ್ದಾರೆ ಸರ್? ಅಂದಾಗ ಸ್ಪಂದನ, ಯುರೇಕ!! ಅಂತನ್ನಲೂ ಅಪ್ಪಿ ಖಿಸಕ್ ಅಂತ ನಗಲು, ಸರಿಯಾಗಿ ಸರ್ arpita stand up, tell me the answer! ಪ್ರತಿ ಬಾರಿ ನಮ್ಮ ತುಂಟಾಟಕ್ಕೆ  ಅಪ್ಪಿ ಬಲಿಯಾಗುತ್ತಿದ್ದಳು, ನಾವು solution  ಕಂಡು ಹಿಡಿದೇ ಈ ಚೇಷ್ಟೆ ಮಾಡುತಿದ್ದೆವಾದ್ದರಿಂದ ಸೇಫ್ ಇದ್ವಿ!


                      The most worst part of engineering was workshop!! ಪ್ರತಿ ವಾರ workshop ಎಂದರೆ ನನಗಂತೂ ಜ್ವರ ಬಂದ ಅನುಭವ!! ಆ ವಾರದ session ಮುಗಿಯುವದೊರೋಳಗಾಗಿ ನನ್ನ ಕೈ, ಮುಖ, ಕಣ್ಣು ಎಲ್ಲವು ಕೆಂಪು, ಕೆಂಪು,:-) ಯಾರ್ ಕಂಡು ಹಿಡಿದರೋ ಇದನ್ನ, ಮನಪೂರ್ತಿ ಅವರನನ್ನ ಬೈದುಕೊಂಡೆ,ಲ್ಯಾಬ್ ಶುರು ಮಾಡ್ತಾ ಇದ್ವಿ!   ಎಂದೂ ಸವೆಯಲಾರದ ಕಬ್ಬಿಣದ ಫ್ಲಾಟ್ rod  ತಂದು ಕೊಟ್ಟು, ಹುಡುಗಿಯರು ಎಂಬ ಕೊಂಚ ಕರುಣೆಯು ಇಲ್ಲದೆ, ಥೇಟ್ ಹಿಟ್ಲರ್ ಥರ ನಮ್ಮ ಸರ್, ಶುರುಮಾಡಿ ಅಂದಾಗ ಎಲ್ಲರದು ವಾರೆ ಗಣ್ಣು ನೋಟ, ಲುಕ್ ಅಮೆಲೆ ಕೊದ್ರಮ್ಮ , ಹುಂ ಕೆಲಸ ಮೊದಲು... ಅದನ್ನ ಕುಯ್ದು, ಸ್ಮೂಥಿಂಗ್ ಫಿನಿಶ್ ಕೊಟ್ಟು, ಅವರು ಹೇಳಿದ ಆಕಾರಕ್ಕೆ ಕಟ್ ಮಾಡುವಷ್ಟರಲ್ಲಿ,ನಮ್ಮ ಕ್ಲಾಸ್ ಬಾಯ್ಸ್ ಗಳಿಗೆ ಹಿಡಿ ಶಾಪ ಹಾಕಿ, ಸ್ವಲ್ಪನು ಹೆಲ್ಪಿಂಗ್ nature  ಇಲ್ಲ useless  fellows  ಅಂತ ಪ್ರತಿ ಹುಡುಗಿಯು ಮನಸ್ಸಿನ್ನಲ್ಲಿ ಅಂದುಕೊಳ್ಳುತ್ತಿದ್ದಳು!! ತಿರುಗಿ ಬಂದು ಯಾರೊಟ್ಟಿಗೂ ಮಾತನಾಡದೆ ಎರಡು ತಾಸು ಉದ್ದಕ್ಕೆ ಮಲಗಿದ್ದನ್ನು,
 ಹಾಸ್ಟೆಲ್ ನಲ್ಲಿ, ನನ್ನ ರೂಮಿ ಪ್ರಿಯಾ ಮತ್ತು ನೈನಾ workshop  ಸೈಡ್ ಎಫೆಕ್ಟ್!! ಅಂತ ಗೇಲಿ ಮಾಡಿ ನಗುತ್ತಿದ್ದರು:-) 


               ಈ ನಡುವೆ ಸ್ಪಂದನ, ಒಂದು ದೊಡ್ಡ ಆಕರ್ಷಣೆಗೆ ಸ್ಪಂದಿಸುತ್ತಿರುವುದನ್ನು ಮೊದಲು ನೈನಾ observe  ಮಾಡಿದಳು.ನಾನು ಮತ್ತು ಅಪ್ಪಿ ಅದನ್ನು ಅಷ್ಟೊಂದು ಸೀರಿಯಸ್ ಆಗಿ ತೆಗೆದು ಕೊಳ್ಳಲಿಲ್ಲ.ಚೇತನ್ ಸ್ಪಂದನಾಳ ನೆಚ್ಚಿನ ಲೇಖಕ! ಪ್ರತಿ ವಾರ ಅವನ ಅಂಕಣ ತಪ್ಪದೆ ಓದಿ, ಅವನಿಗೊಂದು feedback  ಕಳಿಸುತ್ತಿದ್ದಳು. ಆತನು ಅಷ್ಟೇ ಸ್ಪಂದನಳನ್ನ ಎಲ್ಲ ಇತರೆ ಓದುಗರಂತೆ ಟ್ರೀಟ್ ಮಾಡಬಹುದು ಅಂತ ನಾವೆಲ್ಲರೂ ತಿಳಿದು ಕೊಂಡಿದ್ದೆವು. ಮೊದಲು ಮೆಸೇಜ್ ಮಾಡುತ್ತಿದ್ದ ಸ್ಪಂದನಾ,ಪ್ರತಿ ವಾರ ಕಾಲ್ ಮಾಡಿ ಲೇಖನಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಳು.ಚೇತನ್ ಕೂಡ ಇವಳನ್ನು ಎಷ್ಟು ಹಚ್ಹಿಕೊಂಡಿದ್ದನೆಂದರೆ,ಕಾಲ್ ಇವಳೇ ಮಾಡಿದ್ದರು ಅದನ್ನು ಕಟ್ ಮಾಡಿ ತಾನೇ ತಿರುಗಿ ಇವಳಿಗೆ ಕಾಲ್ ಮಾಡ್ತಾ ಇದ್ದ! ಇವಳ ಸಂಭ್ರಮಕ್ಕಂತು ಎಲ್ಲೆಯೇ ಇಲ್ಲದಂತಾಗಿತ್ತು!ಮೂವರಿಗೂ ಪೇಪರ್ ಓದುವ ಹವ್ಯಾಸವಿತ್ತಾದರು, ತೀರ  ಚೇತನ್ ಜೊತೆ ಗಾಢವಾಗುತ್ತಿರುವ ಸ್ನೇಹದ ಪರಿಣಾಮದಿಂದಾಗಿ,ಅವಳು ಕೇವಲ ಅವನೋಬ್ಬನನ್ನೇ ಓದಲು ಮುಂದಾದಳು, ಉಳಿದವರೆನೆಲ್ಲ ಬೋರಿಂಗ್ ಎಂದೂ ಹೀಯಾಳಿಸುತ್ತಿದ್ದಳು.ಆ ವಾರ ಏನಾದರು ಅವನ ಅಂಕಣ ಮಿಸ್ ಆದರೆ ಆಕಾಶವೇ ತೆಲೆ ಮೇಲೆ ಬಿದ್ದ ಹಾಗೆ ಮುಖ ಕೆಡಿಸುತ್ತಿದ್ದಳು,ಎಷ್ಟೇ ಲೇಟ್ ಆಗಿದ್ದರು ಲೈಬ್ರರಿಗೆ ಹೋಗಿ ಓದಿದ ನಂತರವೇ ಸಮಾಧಾನ! 


                     
                            ಇದೆಲ್ಲವೂ ಸ್ಪಂದನಾ divert ಆಗುತ್ತಿರುವ ಸೂಚನೆಗಳನ್ನು ಕೊಡುತ್ತಿದ್ದವಾದರು ನಾನು ಮತ್ತು ಪ್ರಿಯಾ ಹೆಚ್ಹು ತೆಲೆ  ಕೆಡಿಸಿ ಕೊಳ್ಳಲಿಲ್ಲ, ಆದರೆ ನೈನಾ, something  wrong  with  her ! ಅಂತ ಹೇಳುತ್ತಲೇ ಇದ್ದಳು....ಸ್ಪಂದನಾ divert  ಆದ ಪರಿ ಮತ್ತು divert  ಆಗಲು ನಾನು, ಪ್ರಿಯಾ, ಹಾಗು ಅಪ್ಪಿ ಹೇಗೆ ಕಾರಣಿಭೂತರಾದೆವು  ಎಂಬುದು to be continued.......!!

Wednesday, April 20, 2011

Hostel...!!!


              ಅಂತು ಇಂಜಿನಿಯರಿಂಗ್  ಲಾಸ್ಟ್ ಸೆಂ 2nd  ಇಂಟರ್ನಲ್ ಮುಗಿಸಿದ್ದಾಯ್ತು, ಇವತ್ತಿಗೆ ಸರಿಯಾಗಿ  ಲೆಕ್ಕ ಹಾಕಿದರೆ ಇನ್ನು ಉಳಿದಿರುವುದು ಬರೋಬ್ಬರಿ ೩೦ ಚಿಲ್ಲರೆ ದಿನಗಳು:-( ಆಮೇಲೆ ನಾವ್ ಆಯಿತು ನಮ್ಮ career ಆಯಿತು. ಇನ್ನು ಉಳಿದ ಕೆಲವೇ ದಿನಗಳನ್ನ ಹೇಗೆ ಇನ್ನು ಚೆನ್ನಾಗಿ  ಕಳಿಯಬಹುದು ಅಂತಷ್ಟೇ ಯೋಚನೆ ಮಾಡುವುದೇ ಸೂಕ್ತ! ಇಲ್ಲವಾದಲ್ಲಿ ಮಂಗನ ಮನಸು ಬೇಡವಾದ ಎಲ್ಲ ವಿಷಯಗಳನ್ನು ತನ್ನ ಬುಟ್ಟಿಯಲ್ಲಿ  ಹಾಕಿಕೊಂಡು ಪಡಬಾರದ  ವ್ಯಥೆಯನ್ನು  ಅನುಭವಿಸಲಾರಭಿಸುತ್ತದೇ . ಎಲ್ಲದಕ್ಕೂ ಒಂದು ಅಂತ್ಯ  ಇದ್ದೆ ಇದೆ ಅದಕ್ಯಾಕ್ಕೆ ಇಷ್ಟೊಂದು ಹತಾಶೆ, ದುಃಖ? ಇರಲಿ ನಮ್ಮ interesting ಕಥೆ ಮಧ್ಯೆ ಸುಮ್ಮನೆ ಎಮೋಷನಲ್ ಡ್ರಾಮ  ಯಾಕೆ ಅಲ್ವಾ??


           ನಮ್ಮ ಹಾಸ್ಟೆಲ್! ಇವತ್ತು ನನ್ ರೂಮ್ನಲ್ಲಿ ಬಂದು ಸುಮ್ಮನೆ ಕಣ್ಣು ಹಾಯಿಸಿ ಹೋದ ನನ್ನ ಸ್ನೇಹಿತೆ, ಹಾಸ್ಟೆಲ್ ಅಂದ್ರೆ hell ! ಯಾವಾಗ್ಲಾದ್ರು ಮುಗಿಯುತ್ತೋ ನನ್ ನಾಲ್ಕು ವರ್ಷ ದೇವರೇ ಇಲ್ಲಿಂದ ಯಾವಾಗ  ಹೊರ ಹೋಗುತ್ತೇನೋ ಅಂತ ವಟಗುಟ್ಟುತಿದ್ದವಳು  ನೀನೆ ಏನೇ ಈಗ ಬ್ಲಾಗ್ ನಲ್ಲಿ ಅನುಭವ ಕಥನ ಗಳನ್ನ ಬರೆಯುತ್ತಿರುವುದು  ಅಂತ ಗೇಲಿ ಮಾಡಿದಳು, ಅವಳ ಮಾತು ಅತಿಶಯೋಕ್ತಿ ಏನಲ್ಲ. ಇದೆ ನಾಲ್ಕು  ವರ್ಷಗಳ ಹಿಂದೆ ಅಪ್ಪ ಅಮ್ಮನ ಕಳಿಸಿ ನನ್ನ ರೂಮಿಗೆ ಬಂದಾಗ ಹಾಗೆ  ಅನ್ನಿಸಿದು ಸತ್ಯ! ಆದ್ರೆ ಸಮಯದ ಚಕ್ರಕ್ಕೆ ಸಿಲುಕಿ, ಪ್ರತಿಯೊಂದನ್ನು ನಮ್ಮ ಜೀವನ ಶೈಲಿಗೆ ಹೊಂದುವಂತೆ ಮಾರ್ಪಾಡು ಮಾಡಿಕೊಂಡು ಅಥವಾ ನಮಗೆ ಗೊತ್ತಿಲ್ಲದೇ ಎಲ್ಲವು ನಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಗಿ ಬಿಡುವುದೇ ಅಲ್ಲವೆ  ಬ್ಯೂಟಿ ಆಫ್ ಲೈಫ್? ಇರಲಿ ಇನ್ನು ಜಾಸ್ತಿ ಸಮಯ ವ್ಯರ್ಥ ಮಾಡದೆ, ಒರಿಜಿನಲ್ ಸ್ಟೋರಿಗೆ ಹಿಂತಿರುಗೋಣ.

       ಅವಳು ನನ್ನ ಪಕ್ಕದ ರೂಮಿನಲ್ಲೇ ಇದ್ದಳು, ಎಲ್ಲರೊಂದಿಗೆ ತುಂಬಾ ಬೇಗ ಬೆರತು ಹೋಗುವ  ಸ್ವಭಾವದ ಹುಡುಗಿ, ತುಂಬಾ ಸಮಯ ತೆಗೆದು ಕೊಂಡು ಆಕೆಯನ್ನ ಸೃಷ್ಟಿ ಮಾಡಿದ್ದನೇನೋ ಬ್ರಹ್ಮ ಅಂತ ಅನ್ನಿಸುವಷ್ಟು ಸೌಂದರ್ಯ ರಾಶಿ. ರೇಶಿಮೆ ಕೂದಲು, ಯಾವ ಸಿನಿಮಾ ನಟಿಗಿಂತ ಏನು ಕಡಿಮೆ ಇಲ್ಲವೇನೋ ಅನ್ನೋ ಅವಳ ಮೈಮಾಟ, ಎಲ್ಲವು ಸೂಪರ್. ಅವಳಿಗೆ ಬಂದ ಪ್ರೋಪೋಸಲ್ಸ್ ಗಲೆಷ್ಟೋ? ಅದೆಷ್ಟು ಹುಡುಗರು ಅವಳನ್ನ ನೋಡಿ ನೋಡಿಯೇ ಮರುಳಾಗಿದ್ದರೋ ಕಾಣೆ! ಹೀಗಂತ ನನ್ನಲ್ಲಿ ನಾನೇ ಮಾತಾಡಿಕೊಂಡು ಸ್ವಲ್ಪ ಹೊಟ್ಟೆ ಉರಿದುಕೊಂಡು ಅವತ್ತು ನನ್ನ ಚೀರ್ ಅಪ್ ಮಾಡಿ ನನ್ನ ರೂಮಿಗೆ ತಂದು ಬಿಟ್ಟ ನೈನಾ ಬಗ್ಗೆ ರಾತ್ರಿಯಲ್ಲ ಯೋಚನೆ ಮಾಡುತ್ತಾ ಮಲಗಿ, ಬೆಳಗ್ಗೆ ಎದ್ದು ಕ್ಲಾಸ್ ತಲುಪೋ ಹೊತ್ತಿಗೆ ತುಂಬಾ ತಡವಾದ್ದರಿಂದ, ಯಾರನ್ನು ಮಾತನಾಡಿಸದೆ ಹೋದೆ. ಸಂಜೆ ಬರುವ ಹೊತ್ತಿಗೆ, ನನ್ನ ತುಂಬಾ ಸಂತೈಸಿದ ಸುಂದರಿಗೆ ವಿಪರೀತ ಜ್ವರ! ಊರು ಹೊಸದೇನಲ್ಲ ಆದರು ಹತ್ತು ವರ್ಷಗಳ ಬಳಿಕ ಮೆಡಿಕಲ್ ಶಾಪ್ ಬಗ್ಗೆ ಸಂಪೂರ್ಣ ಮಾಹಿತಿ ತಪ್ಪಿ ಹೋದ್ದರಿಂದ ಸ್ವಲ್ಪ ಅಳುಕಿನಿಂದಲ್ಲೇ ಆಟೋ ಹತ್ತಿ ಹೋಸ್ಪಿಟಲ್ ತಲುಪುವ ಹೊತ್ತಿಗೆ ಹರ ಹರ ಮಹಾದೇವ....!!! ಡಾಕ್ಟರ ಸಿಕ್ಕು ಮೆಡಿಸಿನ್ ಕೊಟ್ಟು ವಾಪಸ್ ಆಟೋ ಹತ್ತಿ ಬರುವಾಗ  ಇಬ್ಬರು ಮುಖ ಮುಖ ನೋಡಿಕೊಂಡು ಮುಸಿ ಮುಸಿ ನಗಲಾರಂಭಿಸಿದೆವು!!!:-)

          ನನಗೆ ಯಾವ ಹೊಸ್ಪಿಟಲ್ಗೆ ಹೂಗವುದೆಂದು ತಿಳಿಯದೆ ಆಟೋ ಚಲಕನನ್ನೇ ಯಾವುದಾದರು ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಲೇಡಿ ಡಾಕ್ಟರ ಇರ್ಬೇಕು ಅಂತ ಮಾತ್ರ ಹೇಳಿದ್ದೆ, ಆ ಮಹಾಶಯ ನಮ್ಮ ಇಬ್ಬರನ್ನು maternity ಹೋಸ್ಪಿಟಲ್ ಗೆ ಕರೆದೊಯ್ದು ಬಿಟ್ಟ! ಖುಷಿ ಪಡಲು ನನಗೊಂದು ಕಾರಣವು ಇತ್ತು. ಈಗ್ಗೆ ೨೦ ವರ್ಷಗಳ ಹಿಂದೆ ಕರೆಕ್ಟ್ ಆಗಿ ಮಟ ಮಟ ಮಧ್ಯಾನಕ್ಕೆ ಅಮ್ಮನಿಗೆ  ಜನ್ಮಕ್ಕಾಗುವಷ್ಟು ನೋವು ಕೊಟ್ಟು ಏಪ್ರಿಲ್ ೧ನೆ ತಾರೀಖಿನಂದು ನಾನು ಹುಟ್ಟಿದ್ದು ಇದೆ ಆಸ್ಪತ್ರೆಯಲ್ಲಿ ಅಂತ ಆ ಬೋರ್ಡ್ ಓದಿದ ಮೇಲೆ ಅರ್ಥವಾಯಿತು.(Dr . ಇಂದಿರಾ MBBS ,MD (ಗಯನಕಾಲೋಗಿಸ್ಟ್). ಇಷ್ಟು ಸಾಕಿತ್ತು ಹಳೆದನೆಲ್ಲ ನೆನಪಿಸಿಕೊಳ್ಳಲು. ಆದ್ರೆ ಇಂಥ ಅದೆಷ್ಟು ಹೆರಿಗೆ ಗಳನ್ನೂ ಈ ಇಪ್ಪತು ವರ್ಷದಲ್ಲಿ ಅವ್ರು ಮಾಡಿರುತ್ತರೋ? ಅವರಿಗೆ ನಿನ್ನೆ ಮಾಡಿದ ಹೆರಿಗೆಯೇ ನೆನಪಿನಲ್ಲಿ ಉಳಿದಿರುವುದಿಲ್ಲ ಇನ್ನು ನಿನ್ನ  ಗುರುತು ಹಿಡಿದಾರೆಯೇ? ಸುಮ್ನೆ ಬೇರೆ ಕಡೆ ಹೋಗೋಣ ನಡೆ ಮಾರಾಯ್ತಿ ಇದೆಲ್ಲಿಯ ಸಹವಾಸ ಸಣ್ಣ ಜ್ವರಕ್ಕೆ maternity  ಆಸ್ಪತ್ರೆಗೆ ಬರೋದ? ನೈನಾ ತನ್ನ ಕ್ಷೀಣ ಧ್ವನಿಯಲ್ಲಿ ಹೇಳುತ್ತಲೇ ಇದ್ದಳು, ಹೊರ ಜಗತ್ತಿನ ಪರಿಚಯವೇ ಇಲ್ಲದೆ ಅಪ್ಪನ ಸಹಾಯವಿಲ್ಲದೆ ಒಂದು ದಿನ ಕೂಡ ಆಸ್ಪತ್ರಗೆ ಹೋಗಿರದ ನಾನು, ಆವತ್ತು ಏನೋ ದೊಡ್ಡ ಸಾಧನೆ ಮಾಡುವರ ಹಾಗೆ ಅವಳು ಅಷ್ಟು ಹೇಳುತ್ತಿದ್ದರು ಕಿವಿಯಲ್ಲಿ ಹತ್ತಿ ಇಟ್ಟುಕೊಂಡಿರುವಂತೆ  ಕುಳಿತು ಬಿಟ್ಟೆ.

       ಆಗ ಶುರುವಾಯಿತು ನಿಜವಾದ ಪ್ರಪಂಚ ಪರಿಚಯ!! ನಾವು ಕುಳಿತು ಹತ್ತು ನಿಮಿಷ ಮೀರಿದರೂ, ಡಾಕ್ಟರನ ಸುಳಿವೇ ಇಲ್ಲ, ಪೇಶಂಟ್ temperature ಜಾಸ್ತಿ ಆಗ್ತಾ ಇದೆ ಇನ್ನು ಎಷ್ಟು ಹೊತ್ತ ಆಗುತ್ತಮ್ಮ  ಅವರು ಬರಲು? ಅಂತ ಕೇಳಿದ್ದಕ್ಕೆ, ಅಲ್ಲಿರುವ ಆಯಾ ಅಯ್ಯೋ abortion  ಕೇಸ್ ಅಂದ್ರೆ ಇನ್ನು ಲೇಟ್ ಆಗುತ್ತೆ ನೀವು ಸುಮ್ನೆ ಅಲ್ಲಿ ಹೋಗಿ ಕುಳಿತುಕೊಳ್ಳಿ ಅಂದು ಬಿಡೋದ??? !!! maternity ಆಸ್ಪತ್ರೆಗೆ  ಇಬ್ಬರು ವಯಸ್ಸಿಗೆ ಬಂದ ಹುಡುಗೀಯರು ಮಾತ್ರವೇ ಬಂದಿದ್ದಾರೆ ಅಂದ್ರೆ ಈ ರೀತಿಯ ಸತ್ಕಾರಾನ?? ಅದೆಲ್ಲಿತ್ತೋ ಅಷ್ಟು ಕೋಪ (ಅದು ಯಾವಾಗಲು ನನ್ನ ಮೂಗಿನ ನೇರಕ್ಕೆ ಇರುತ್ತೆ ಬಿಡಿ) ಹೇಯ್ ರಾಕ್ಷಷಿ ಏನೇ ಬಾಯಿಗೆ ಬಂದ ಹಾಗೆ ಮಾತಾಡ್ತಿಯ ಏನ್ ಅನ್ಕೊಂಡಿದಿಯ ನೀನು ನನ್ನನ್ನು? ನೋಡಕ್ಕೆ ತೆಳ್ಳಗೆ ಕಾಣಿಸ್ತೀನಿ ಅಷ್ಟೇ  ಎರೆಡು ಬಿಟ್ಟ ಅಂದ್ರೆ  ಜೀವನ ಪೂರ್ತಿ  ಮಾತಾಡಬಾರದು ಹಾಗೆ ಮಾಡ್ತೀನಿ ಹುಷಾರ್!! ಅಂತ ಅವಾಜ್ ಹಾಕ್ದೇ ನೋಡಿ ಆಸ್ಪತ್ರೆಯಲ್ಲಿ ಸ್ಮಶಾನ ಮೌನ!. ಜನರೆಲ್ಲರೂ ನಾನೇನು ಫೂಲನ್ ದೇವಿಯ ಮಗಳಿರಬಹುದ ಅಂತ ಲೆಕ್ಕ ಹಾಕ್ತ ಇದ್ದರೋ ಏನೋ ಪಾಪ, ಅಷ್ಟು ಹೊತ್ತಿಗಾಗಲೇ ನನ್ನ ಕೂಗಾಟ ಡಾಕ್ಟರ ಇದ್ದ ಕೊಣೆಗೂ ಕೇಳಿಸಿದ್ದರಬಹುದು, ಧಾವಿಸಿ ಬಂದು ಏನು ನಡೀತಾ ಇದೆ ಅಂತ ನೋಡುವ ಹೊತ್ತಿಗೆ, ಆಯಾಳ  ಪರಿಸ್ತಿತಿ ನನ್ನ ಕೈಯಲ್ಲಿ ಗಂಭೀರ ಸ್ವರೂಪ ತಾಳಿದದನ್ನು ಕಂಡು, ನನ್ನ ಎಡಗೈ  ಮೇಲಿನ BCG   injection ಗುರುತು ನೋಡಿ, ಅವಳಿಗೆ ನಾನು ಬುದ್ಹಿ ಹೇಳ್ತೀನಿ ಬಿಡಮ್ಮ,ನೀನು ದಾಸರೆಯವರ ಮಗಳ? ಅಂತ ಕೇಳಲು,  ನನ್ನ ಕೋಪವೆಲ್ಲ ಕರಗಿ  ನೀರಾಗಿ ಹರಿದು  ಹೌದು ಮೇಡಂ, ನೋಡಿ ನಿಮ್ಮಲ್ಲಿ ಕೆಲಸ ಮಾಡುವವರು ಎಂಥ  ಮಾತಾಡುತ್ತಿದ್ದಾರೆ??   ಅನ್ನಲು ನನ್ನ ಮತ್ತು ನೈನಳನ್ನ ಒಳ ಕರೆದೊಯ್ದು tablets  ಬರೆದು ಕೊಟ್ಟು,  ತುಂಬಾ ಆತ್ಮೀಯವಾಗಿ ಮಾತಾಡಿದ ಡಾಕ್ಟರ, ನೀನು BCG  ಚುಚ್ಹಿಸಿ ಕೊಳ್ಳುವಾಗಲೇ ನೀನು ಜಗಳಗಂಟಿ ಆಗ್ತಿಯ ಅಂತ ನಿಮ್ಮ ಅಪ್ಪನಿಗೆ ಹೇಳಿದ್ದೆ  ಅಂತ ವ್ಯಂಗ ನಗು ನಕ್ಕಾಗ, ಅಲ್ಲ ಮೇಡಂ ಇಷ್ಟೊಂದು experience  ಇರುವ ನೀವು ನನಗೆ BCG ಹಾಕುವಾಗ ಸರಿಯಾಗಿ ಹಾಕೊದಲ್ವ ನೋಡಿ ಎಷ್ಟು ದೊಡ್ಡದು ಹಾಕಿದಿರ? ಅಂದಾಗ, ನೀನು ಹುಟ್ಟಿದಾಗಿನಿಂದ ಜಗಳಗಂಟಿ ಮಗು, ಅವಾಗ್ಲು ನನ್ ಜೊತೆನೂ ಜಗಳ ಮಾಡಿದ್ದಕ್ಕೆ ಅಷ್ಟು ದೊಡ್ಡದಾಗು ಹಾಗೆ ಆಯಿತು! ಅಂತ ಹೇಳಿದಾಗ, ಸುಮ್ಮನೆ ಹುಸಿ ನಕ್ಕು, ಥ್ಯಾಂಕ್ಸ್ ಹೇಳಿ,  ನೈನಳನ್ನ ಕರೆದುಕೊಂಡು ಬರುವಷ್ಟಿಗೆ, ಆ ಆಯಾ ನನ್ನ ತುಂಬಾ apologic ಆಗಿ ನೋಡುತ್ತಿರುವುದನ್ನು ಕಂಡು ಅವಳಿಗೊಂದು ಸಾರೀ ಹೇಳೇ ಪಾಪ ಅಂತ ನೈನಾ ಹೇಳಿದ್ದಕ್ಕೆ ಕೇಳ್ದೆ ಹೊರತು ನನಗಂತೂ ಅವಳು ಪಾಪ ಅಂತನ್ನಿಸಿರಲಿಲ್ಲ!!!


         ಇಷ್ಟಾದ ಮೇಲೆ ನಾನು ನೈನಾ ಆತ್ಮಿಯರಾಗಲು ಬೇರೆ ಕಾರಣ ಬೇರೆ ಬೇಕಾ?? ಎರಡೇ ದಿನಕ್ಕೆ ನಾವು  ತುಂಬಾ ವರ್ಷದ  ಪರಿಚಿತರೆನೋ  ಅನ್ನೋ ಹಾಗೆ ಒಬ್ಬೊರನ್ನೊಬ್ಬರು ಹಚ್ಹಿಕೊಂಡು ಬಿಟ್ಟೆವು. ಈ ಘಟನೆಯ ಬಳಿಕ ಹಾಸ್ಟೆಲ್ನಲ್ಲಿ ಯಾರಿಗೆ ಜ್ವರ ಬಂದರು ಅದನ್ನ maternity  ಹೋಸ್ಪಿಟಲ್ ಜ್ವರ ಅಂತಲೇ ನೈನಾ ನನ್ನ ಗೇಲಿ ಮಾಡುತ್ತಿದಳು, ನೋಡಲೇ ದಾಸರೆ ಮತ್ತ ಅಕಿಗೆ ಜ್ವರ ಬಂದದ ಅಂತ, ಯಾವ್ maternity ಹೋಸ್ಪಿಟಲ್ ಕರಕೊಂಡು ಹೋಗುನು??? ಅಂತಲೇ ಎಲ್ಲ ಸ್ನೇಹಿತೆಯರು ಕಿಚಾಯಿಸುತ್ತಿದ್ದರು. ಅಬ್ಬ ಭಯಂಕರ ಸಾಧನೆ ನಾನು ಹಾಸ್ಟೆಲ್ ಸೇರಿದ ಮಾರನೆ ದಿನಕ್ಕೆ ಮಾಡಿ ಬಿಟ್ಟಿದ್ದೆ, ಮತ್ತು ಅದಕ್ಕೆ ಸರಿಯಾದ reward  ಕೂಡ ಪೂರ್ತಿ ಸೆಂ ಅನುಭವಿಸೋ ಹಾಗಾಯ್ತು!!! ಏನೇ ಆದರು ಈ ಘಟನೆ ಇಂದಲೇ ನಾನು ಮತ್ತು ನೈನಾ ಇಷ್ಟೊಂದು ಆತ್ಮಿಯರಾಗಲು ಸಾಧ್ಯವಾಗಿದ್ದು,  ನನ್ನಲ್ಲಿ ಇವತ್ತು ಏನೇ changes  ಆಗಿದ್ರು ಅದಕ್ಕೆಲ್ಲ ನನ್ನ ಜೀವದ ಗೆಳತಿ ನೈನಾ ಕಾರಣ.

       ಬರಿ jeanse ಮತ್ತು ಟಾಪ್ ಹಾಕುತ್ತಿದ್ದ, ಬರಿ ಹುಡುಗರ ಹಾಗೆ ವರ್ತಿಸುತ್ತಿದ್ದ ನನ್ನನ್ನು, ಒಬ್ಬ ಸಭ್ಯ, ಸೂಕ್ಷ್ಮ ಹುಡುಗಿಯಾಗಿ ಪರಿವರ್ತಿಸಿದ, ಎಲ್ಲರನ್ನು ಹಚ್ಹಿಕೊಂಡು ಇರಲು ಕಲಿಸಿದ, ಯಾವಾಗಲು ಇಲ್ದೆ ಇದ್ರೆ ಪರವಾಗಿಲ್ಲ ಅವಾಗ ಅವಾಗ, ಒಂದು ಚೂರು ಹುಡುಗಿಯರ ಹಾಗೆ ಸಿಂಗಾರ, ಬಂಗಾರ, ಮೇಕ್ ಅಪ್ ಆಗೋದನ್ನ ಕಲಿಯೇ,  ಇಲ್ಲಾಂದ್ರೆ ನಾಳೆ, ನಿನ್ನ ಮದುವೆಯಾದ ಹುಡುಗ ನಾನು ಹುಡುಗಿ ವೇಷ ದಲ್ಲಿರೋ ಹುಡುಗನನ್ನ ಮದುವೆ ಆದೆನ?? ಅಂತ ಯೋಚನೆ ಮಾಡೋ ಹಾಗೆ ಆದೀತು! ಅವನು ನಿನ್ನ ಹಾಗೆ ಕಂಜುಸ್ ಆಗಿದ್ರೆ ಪರವಾಗಿಲ್ಲ ಬಿಡು ಒಳ್ಳೆ ಜೋಡಿ, ಕರ್ಚೆ ಮಾಡದ ಗಂಡ, ಶೋಪ್ಪಿಂಗೆ ಮಾಡದ ಹೆಂಡತಿ ಒಳ್ಳೆ ಜೋಡಿ ಕಣೆ. ಅಂತ ಅವಾಗ್ ಅವಾಗ್ ಹೇಳ್ತಾ ಇದ್ಲು.  lipstick, maskara, kajol, foundation, compact,eyeshadow, parlour, ಇದು ಯಾವುದರ ಪರಿಚಯವೇ ಇಲ್ಲದೆ ಬೆಳದ ನನಗೆ ಹೊಸದೊಂದು ಲೋಕದ ಪರಿಚಯ ಮಾಡಿ ಕೊಟ್ಟವಳೇ ಅವಳು. ಅವಳನ್ನು ಅನುಸರಿಸಲು ಹೋಗಿ ನಾ ಮಾಡಿಕೊಂಡ ಫಜೀತಿ to be continued............!!!

Tuesday, April 19, 2011

Everlasting Engineering journey......!!!!

              Am excited!! ಅಂತಷ್ಟೇ ಹೇಳಿ ನನ್ನ ಮನಸಿಗೆ ತೋಚಿದ್ದನ್ನು ಬರೆಯಲು ಸಜ್ಜಾಗಿದ್ದೇನೆ.
ಮಕ್ಕಳು ನೋಡ್ತಾ ನೋಡ್ತಾ ದೊಡ್ಡವರಾಗಿ ಬಿಡ್ತಾರೆ ಅನ್ನೋದು ನಮ್ಮ ಪಾಲಕರ ಮಾತುಗಳು. ನಿಜವಾಗಲು ನಾನು ದೊಡ್ದವಳಗಿದ್ದಿನ? ಕನ್ನಡಿಯಲ್ಲಿ ನಿಂತು ನನ್ನ ನಾನೆ ಕೇಳಿಕೊಂಡಾಗ, slap yourself! ಅಂತು ನನ್ನ ತುಂಟ ಪ್ರತಿಬಿಂಬ.

             ಏನೇ ಅಂದ್ರು ನೋಡ್ತಾ ನೋಡ್ತಾ ಎಂಟನೆ ಸೆಮೆಸ್ಟರ್ ತಲುಪಿದ್ದೇನು ಸುಮ್ಮನೆ ಮಾತಾ?? ಮೊನ್ನೆ ತಾನೆ ಅಪ್ಪ- ಅಮ್ಮನ್ನ ಬಿಟ್ಟು ಹಾಸ್ಟೆಲ್ ಸೇರಿದ ಹಾಗಿದೆ, within a blink of an eye we are almost through it! ಇಂಜಿನಿಯರಿಂಗ್ ಲೈಫ್ ಸ್ಟೈಲ್ ಬಗ್ಗೆ ಪುಟಗಟ್ಟಲೆ ಪುಸ್ತಕಗಳನ್ನ ಬರೆದ ಭೂಪರಿದ್ದರೆ. ಒಂದು ಚಿತ್ರವನ್ನೇ ಮಾಡಿ, ಹಿಸ್ಟರಿ create ಮಾಡಿದವರಿದ್ದಾರೆ. ಅವೆಲ್ಲ complete guys oriented ಅಂತ ಅನ್ನಿಸೋಕೆ ಶುರುವಾಗಿ, ಹುಡುಗಿಯರ ಇಂಜಿನಿಯರಿಂಗ್ ಜೀವನದ ಬಗ್ಗೆ ಬರೆದರೆ ಹೇಗೆ ಅಂತ ಯೋಚಿಸ್ತಾ ನನ್ನ ಜೀವದ ಗೆಳತಿ ಅರ್ಪಿತಗೆ ಮೆಸೇಜ್ ಮಾಡಿದೆ.
me: appi wanna write something...
appi: ಏನ್ ಕಡಿಮ ಬಿತ್ತು?/
me: am serious wanna write something about college life...
appi: are you nuts??
me: wait and watch!!
ಅಂತ ಹೇಳಿ ಬರಿಯೋಕೆ ಶುರು ಮಾಡಿದಿನಿ......

            ಜೀವನದ ಅತ್ಯಮೂಲ್ಯ ಮಹತ್ತರ ವರ್ಷಗಳ ಪಾಲುದಾರ ಡಿಗ್ರಿ. ಅತ್ತ matured ಕೂಡ ಅಲ್ಲದ, ಇತ್ತ immatured ಕೂಡ ಅಲ್ಲದ ,  adult ಕೂಡ ಅಲ್ಲದ, childish ಕೂಡ ಅಲ್ಲದ, ಸುಪ್ತ ಸುಪ್ತ, ಹಸಿ ಹಸಿ ಮನಸುಗಳ ಪಿಕಿಲಾಟ,ಹೋರಾಟ,ಸಂಘರ್ಷ,ಸಂತೋಷ,ಆಕರ್ಷಣೆ, ಒತ್ತಡ, ಭಯ,ಅಭಿವ್ಯಕ್ತ,ಸ್ನೇಹ, ಹೊಂದಾಣಿಕೆ,ಪ್ರೀತಿ, ದ್ವೇಷ, ಮಮತೆ, ಜೀವನೋತ್ಸಾಹ,ಹುಂಬತನ,ಅಮಾಯಕತೆ, ವ್ಯಕ್ತಿತ್ವ,ಜೀವನ ಪ್ರೀತಿ, ಇತ್ಯಾದಿ ಇತ್ಯಾದಿ.... ಎಲ್ಲವುಗಳನ್ನೋಳಗೊಂಡ ಹುಡುಗಿಯರ ಇಂಜಿನಿಯರಿಂಗ್ experience ಅನ್ನು ಹಂಚಿಕೊಳ್ಳುವ ತವಕ ನನ್ನನ್ನು, ಇಡೀಯಾಗಿ ಕಳೆದ ಮೂರು ದಿನಗಳಿಂದ ಕಾಡುತ್ತಿದೆ!!!

           ಕಾರಣವಿಷ್ಟೇ , ರವಿನ್ದೆರ್ ಸಿಂಗ್ (Ravinder singh writer of ' I TOO HAD A LOVE STORY'!) ಎಂಥ ಹುಡುಗ! ಪ್ರತಿ ಹುಡುಗಿ ತನ್ನ ಜೀವನ ಸಂಗಾತಿಯಲ್ಲಿ  ಅಪೇಕ್ಷಿಸುವ ಎಲ್ಲ ಗುಣಗಳನ್ನು ಒಳಗೊಂಡಿರುವಾತ. ಮದುವೆ  ಎಂದಾಕ್ಷಣ ನೂರು ಮೈಲಿ ಓಡುವ ನಾನು ಮತ್ತು ನನ್ನಂಥ ಅನೇಕ ಸ್ನೇಹಿತೆಯರಿಗೆ ರವಿನ್ ಅಂಥ ಹುಡುಗ ಸಿಗ್ತಾನೆ ಅಂದರೆ, ಇವತ್ತೇ  ಮದುವೆಯಾಗಿ ಬಿಡುವ ಸಂಭ್ರಮ!! ರವಿನ್ ಬಗ್ಗೆ ಆಗಾಗ ಬರೆಯೋದು ತುಂಬಾ ಇದೆ, ಸಧ್ಯಕ್ಕೆ ನನ್ನನು ಬರೆಯಲು ಪ್ರೇರೇಪಿಸಿದ ಈ  ಲೇಖಕನಿಗೆ ಒಂದು ಥ್ಯಾಂಕ್ಸ್ ಹೇಳಿ, ನಮ್ಮ ಕಥೆ ಆರಂಭಿಸೋಣ ಏನಂತೀರಿ??

         ಸೆಪ್ಟೆಂಬರ್ ೫, ೨೦೦೭ ಇಂಜಿನಿಯರಿಂಗ್ ಮೊದಲ ದಿನ. ದ್ವಿತೀಯ PUC, ಎಂಬ ಮಹಾನ್ ಯುದ್ಧ ಮುಗಿಸಿ, ನಮ್ಮೆಲ್ಲ ಶಸ್ತ್ರಾಸ್ತ್ರಗಳನ್ನ ತ್ಯಜಿಸಿ, ಕಾಲೇಜ್ ಕ್ಯಾಂಪಸ್ನಲ್ಲಿ  ಕಾಲಿಡುವ ಮುನ್ನ ಕ್ಲಾಸ್ ರೂಮ್ಸ್ ಕನಸ ಕಾಣ  ತೊಡಗಿದ್ದಾಗ, ಅಮ್ಮನ ಎಂದು ಮುಗಿಯದ ಬುದ್ಧಿ ವಾದ, ಅಜ್ಜಿಯ ನೆಲ ನೋಡಿ ಹೋಗ್ಬೇಕು ನೆಲ ನೋಡಿ ಬರಬೇಕು ಎಂಬ ಎಚ್ಚರಿಕೆ, ಪ್ರೀತಿಯ ತಮ್ಮನ ಇನ್ನಾದ್ರು ಎಂಜಾಯ್ ಮಾಡ್ರೆ ...ಎಂಬ ಅಪ್ಪಣೆ, ಎಲ್ಲವನ್ನು ಅರಗಿಸಿಕೊಂಡು ಕಾಲೇಜ್ ಕ್ಯಾಂಪಸ್ ಎಂಟ್ರಿ ಕೊಟ್ಟಿದ್ದು, ಇವತ್ತಿಗೂ ನಂಗೆ ಸರಿಯಾಗಿ ನೆನಪಿದೆ ನಾನು ಮೊದಲ ದಿನ ಒಂದನೇ ತರಗತಿ ಶಾಲೆಗೆ ಸೇರಿಸುವಾಗ ಒಂದು ಬದಿ ಅಪ್ಪ ಇನ್ನೊಂದು ಬದಿ ಅಮ್ಮ ನನ್ನ ಪುಟ್ಟ ಕೈಗಳನ್ನು ಹಿಡಿದು ಶಾಲೆಗೆ ಬಿಟ್ಟೂ ಬಂದ ನೆನಪು.  ಇಂಜಿನಿಯರಿಂಗ್  ಮೊದಲ ದಿನವು ಮೊದಲ ಸಲ ಶಾಲೆಗೆ ಹೋದ ಅನುಭವೇ ಸರಿ, ಯಾಕೆಂದರೆ ಅಪ್ಪ ಅಮ್ಮ ಅದೇ ರೀತಿಯಲ್ಲಿ ನಾನೀಗ ಬೆಳೆದು ದೊಡ್ದವಲಾಗಿದ್ದಿನಿ ಎಂಬ ಪರಿವು ಇಲ್ಲದಂತೆ ಮಗುವಿನಂತೆ ನನ್ನ ಎರಡು ಕೈಗಳನ್ನು ಹಿಡಿದುಕೊಂಡು ಕ್ಲಾಸ್ ರೂಂ ತನಕ ಕರೆದುಕೊಂಡು ಹೋಗಿದ್ದು ಕೊಂಚ ವಿಪರೀತ ಅನಿಸಿದರು  ನಿಜ!! 



                   ನನ್ನನ್ನ್ನು  ಬರೆಯಲು ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಎಲ್ಲ ಗೆಳೆಯರಿಗೆ, ಮತ್ತು ಪರಿಚಯವೇ ಇಲ್ಲದಿದ್ದರೂ  ತುಂಬಾ ಆತ್ಮೀಯವಾಗಿ ಹುರಿದುಂಬಿಸುತ್ತಿರುವ  ಜಲನಯನ blooger  ಸರ್  ಮತ್ತು ಗಣೇಶ್ ಅವರಿಗೆ ಥ್ಯಾಂಕ್ಸ್  ಹೇಳುತ್ತಾ    ನಮ್ಮ ಕ್ಲಾಸ್ ರೂಂ ಸ್ಟೋರಿ  .....

                 ಅವತ್ತು ಎಲ್ಲ ಹುಡುಗಿಯರು ತುಂಬಾ ಚೆನ್ನಾಗಿ ಡ್ರೆಸ್ ಮಾಡಿಕೊಂಡಿದ್ದರು ನಾನು ಕೂಡ ಅಂತ ಸ್ಪೆಷಲ್ ಆಗಿ ಹೇಳುವ ಅವಶ್ಯಕತೆ  ಇಲ್ಲದಿದ್ದರೂ ಹೇಳ್ತೀನಿ ತಪ್ಪು ತಿಳಿಬೇಡಿ ಪ್ಲೀಸ್;-)....ಹಾ ಹುಡುಗರು ತಕ್ಕ ಮಟ್ಟಿಗೆ Professionals  ಅನ್ನೋ ಹಾಗೆ ರೆಡಿ ಆಗಿದ್ದರು. ಎಲ್ಲ ಹೊಸ ಮುಖಗಳ ನಡುವೆ ಕಪ್ಪು ಬಣ್ಣದ ಸಲ್ವಾರ್ ಹಾಕಿಕೊಂಡಿದ್ದ ಹುಡುಗಿ ಪಕ್ಕದಲ್ಲಿ ಹೋಗಿ ಕುಳಿತೆ. ತುಂಬಾ ಸೌಮ್ಯ ಸ್ವಭಾವದ ಹುಡುಗಿ ಅನ್ನಿಸಿದರು ಮತ್ತೆ ನೋಡಬೇಕು ಅನ್ನುವಷ್ಟು ಚೆನ್ದವಿರುವ ಹುಡುಗಿಯನ್ನು ಮಾತನಾಡಿಸದೆ ಇರುವುದು ಉಂಟೆ?? ಆಯಿತು ವಾಚಾಳಿ ಅದ ನನಗೇನು ಸ್ನೇಹಿತರನ್ನ ಮಾಡಿಕೊಳ್ಳುವುದು ಅಷ್ಟೇನೂ ಕಷ್ಟದ ಕೆಲಸವಲ್ಲ...ಅವಳತ್ತ ಕೈ ಚಾಚಿ...
Hi  ashwini  here from dharwad(ಮೂವತ್ತು ಹಲ್ಲುಗಳು ಕಾಣುವಂತೆ ದೊಡ್ಡ ಸ್ಮೈಲ್ ಕೊಡುತ್ತ..)
Spandana  from bijapur.....:-) ನಮ್ಮ ಮೊದಲ ದಿನದ ಭೇಟಿ ಅಷ್ಟೇನೂ memorable  ಅಂತ ಅನ್ನಿಸದಿದ್ದರೂ ಅವಳು ನನ್ನ ಜೀವದ ಗೆಳತಿ ನಂಬರ್ ೧ ಆಗುತ್ತಾಳೆ  ಅಂತ ಆ ಕ್ಷಣಕ್ಕಂತು ಅನ್ನ್ನಿಸಿರಲಿಲ್ಲ....ಇಷ್ಟು ಪರಿಚಯದ ನಂತರ

         ತುಂಬಾ ಚಿಕ್ಕವನಂತೆ ಕಾಣುವ, ಮತ್ತು ಅಷ್ಟೇನೂ ಎತ್ತರ ವಿಲ್ಲದಿದ್ದರೂ ಸ್ಪುರದ್ರೂಪಿ, ಕೃಷ್ಣ ಬಣ್ಣದ professionally dressed , lecturer ಕ್ಲಾಸ್ ಒಳ ಬಂದಾಗ ಅವರು ನಮ್ಮ ಲೆಕ್ಟುರೆರ್ ಅಂತ ನಮಗ್ಯಾರಿಗೂ ಅನ್ನಿಸದೆ ಅವರು ನಮ್ಮಂತೆ fresher  ಅಂದು ಕೊಂಡು ಸುಮ್ಮನೆ ಕುಳಿತುಕೊಂಡಿದ್ದು ಮಾತ್ರ ವಿಪರ್ಯಾಸ!! ಪಾಪ ಬೇರೆ ದಾರಿ ಇಲ್ಲದೆ ಅವರೇ stage ಮೇಲೆ ಹೋಗಿ ತಮ್ಮ ಪರಿಚಯ ಹೇಳಿ ಕೊಂಡಾಗಲೇ ಇವರು ನಮ್ಮ ಸರ್,.... ಅಂತ ಗೊತ್ತಾಗಿದ್ದು...ಹುಡುಗರಿಗೆ ಅದು ಚರ್ಚೆಯ ವಿಷಯವೇ ಅಲ್ಲ ಬಿಡಿ.,ಆದ್ರೆ ಹುಡುಗೀಯರು '' ಹೇಯ್ lecturer  ಅಂತೆ ಕಣ್ರೆ ತುಂಬಾ ಚಿಕ್ಕವ್ರಲ್ಲವ?', ಎಷ್ಟು ಚೆನ್ನಗಿದರಲ್ಲ??,ಹೈಟೆ ಇಲ್ಲ ಕಣೆ ಇನ್ನು ಸ್ವಲ್ಪ ಎತ್ತರ ಇರಬೇಕಿತ್ತು ಅಲ್ವ?, ಅಯ್ಯೋ ವಿಪರೀತ ಕಪ್ಪು...! ಅವ್ರು ನಮ್ಮ  ಸರ್ ಅನ್ನೋದಕಿಂತ ಮದ್ವೆ ಹುಡುಗನೇನೋ ಅನ್ನೋ ಥರ  ವ್ಯರ್ಥ ಚರ್ಚೆಗಳನ್ನ ಮಾಡ್ತಾ ಇರ್ಬೇಕಾದ್ರೆ, 'Good morning everyone! i am akash patil ', as this is the first class, let me have your introductions, the very first question of HR round tell me about youself!!! ಅಂತ ಹೇಳಿದ್ರು.

          ಒಂದಿಬ್ಬರನ್ನು ಬಿಟ್ಟರೆ ಉಳಿದೆಲ್ಲರೂ ತುಂಬಾ ಬೋರಿಂಗ್  ಆದ ರೀತಿಯಲ್ಲೇ ತಮ್ಮ Introduction  ಕೊಡಲು ಶುರುಮಾಡಿದರು....ಸ್ವಲ್ಪ ಹೊತ್ತಿನ ನಂತರ ರಮ್ಯ, ಅರ್ಪಿತ, ಅಪೇಕ್ಷ, ಪ್ರಿಯಾಂಕ, ಕಾವ್ಯ ಇಂಟರೆಸ್ಟಿಂಗ್ ಆದ ಹವ್ಯಾಸಗಳನ್ನ   ಹೇಳತ್ತ ಹೋದರು. thank god! ನನ್ನ ಹವ್ಯಾಸಕ್ಕೆ ಸರಿ ಹೊಂದುವ ಹುಡುಗೀಯರು ಸಿಕ್ರಲ್ಲ, ಅಂತ ಅಂದು ಕೊಳ್ಳುವಾಗ ,ನನ್ನ ಸರದಿ ಬಂತು. writing articles to the news papers  ನನ್ನ ಹವ್ಯಾಸ ಅಂತ ಹೇಳಿದ್ದಕ್ಕೂ, ಆವತ್ತೇ ನನ್ನ ಲೇಖನ ವಿಜಯ್ ಕರ್ನಾಟಕದಲ್ಲಿ ಪುಬ್ಲಿಶ್ ಆಗುವುದಕ್ಕೂ ಸರಿ ಹೋಯಿತು. I was the centre of attraction! ಮಧ್ಯಾನ ಊಟಕ್ಕೆ ಹೋದ ಕೆಲ ಗೆಳೆಯರು, ನನ್ನ ಲೇಖನ ಓದಿ  ಮೆಚ್ಚುಗೆ ವ್ಯಕ್ತ ಪಡಿಸಿದರು.  ತುಂಬಾ ಜನ ಮೊದನಲೇ ದಿನಕ್ಕೆ ಸ್ನೇಹಿತರಾದರು. ಇಡೀ ದಿನ ಅಂದರೆ ಮಧ್ಯಾನದ ಸೆಶನ್ ನಲ್ಲಿ,, ಫ್ಯೂಚರ್ ಪ್ಲಾನ್ಸ್ ಹೇಗೆ? ಒಂದೇ ಸೆಂ ನಲ್ಲಿ ಎಂಟೂ ಸುಬ್ಜೆಕ್ಟ್ಸ್ ಗಳನ್ನ ಹೇಗೆ ನಿಭಾಯಿಸಬೇಕು? ಇಂಟರ್ನಲ್ಸ್ ಅಂದ್ರೆ ಏನು? ಎಕ್ಷ್ತೆರ್ನಲ್ಸ ಅಂದ್ರೆ ಏನು, ಲ್ಯಾಬ್ ಏನು? ಮುಂತಾದ ವಿಷಯಗಳನ್ನ ನಮ್ಮ ಪ್ರೀತಿಯ  ಪ್ರಿನ್ಸಿ ತುಂಬಾ ಚೆನ್ನಾಗಿ ಹೇಳಿದ್ದರು. that was an inspiring session of three hours!

              ಸಂಜೆ ಐದು ಗಂಟೆ ಹೊತ್ತಿಗೆ, ನನ್ನ ಲಗೇಜ್ sameta, ಅಪ್ಪ- ಅಮ್ಮ ನನ್ನ ಅಜ್ಜಿ ಮನೆ ಇಂದ  ಹಾಸ್ಟೆಲ್ಗೆ ರೂಂ ನಂಬರ್ ಫ-೧೨ ಗೆ ಶಿಫ್ಟ್ ಮಾಡಿದ್ದರು. ಜೀವಮಾನದಲ್ಲೇ ಹಾಸ್ಟೆಲ್ ಗೇಟ್ ನಲ್ಲಿ  ಮೊದಲಬಾರಿಗೆ ನಿಂತು, ಅಮ್ಮ- ಅಪ್ಪನಿಗೆ ಬೈ ಹೇಳುವ ಹೊತ್ತಿಗೆ ಮನಸು ಭಾರ ಭಾರ :-(. ಗಂಡನ ಮನೆಗೆ ಹೋಗುವಾಗ ಹುಡುಗಿ ಜೊತೆ ಗಂಡನಾದರೂ ಇರುತ್ತಾನೆ, ಅತ್ತರೆ ಸಮಾಧಾನವಾದರೂ ಮಾಡುತ್ತಾನೆ, ಹಾಸ್ಟೆಲ್ ನಲ್ಲಿ ಇರುವುದಕ್ಕಿಂತ ಮದುವೆನೇ ಅಗಿರಬಹುದಿತ್ತಲ್ಲ ಅಂತ ಅನ್ನಿಸಿದ್ದು ಮಾತ್ರ ಸತ್ಯ!:-P. ಅತ್ತರೆ ಸಮಾಧಾನ ಮಾಡುವವರೇ  ಬೈ ಹೇಳುತ್ತಿರುವಾಗ ಏನು ಮಾಡುವುದೋ ತಿಳಿಯದೆ, ಓಡಿ ಹೋಗಿ ಅಪ್ಪನನ್ನ ಗಟ್ಟಿ ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿರುವಾಗ, 'ಶುರುವಾಯ್ತ ನಿಮ್ಮದು?' ಎಂದು ಗದರಿಸುತ್ತಾ, ಅಮ್ಮ 'ರೀ ಅವಳಿಗೆ ರೂಢಿಯಾದ ಮೇಲೆ ಸರಿ ಹೋಗುತ್ತಾಳೆ, ಬಿಡಿ ಅವಳನ್ನ ಎಂದು ತನ್ನ  ದುಃಖ ಮರೆ ಮಾಚಲು ಅಮ್ಮ ಮಾಡಿದ್ದೂ ನಾಟಕ ಎಂದು ತಿಳ್ಯೋ ಹೊತ್ತಿಗೆ ಅಪ್ಪ- ಅಮ್ಮ ನನ್ನಿಂದ ಬಲು ದೂರ ನಡೆದು ಬಿಟ್ಟಿದ್ದರು.
           
             ಅವರು  ಹೋದ ಎಷ್ಟೋ ಹೊತ್ತಿನ ನ0ತರವು, ನಾನು ಗೇಟ್ ಬಳಿಯೇ ನಿಂತಿದ್ದನ್ನೇ ಕಂಡು, ತುಂಬಾ ಸುಂದರವಾಗಿರುವ ಸೀರೆಯುಟ್ಟ ಹುಡುಗಿ, ನನ್ನ ಹತ್ತಿರ ಬಂದು, new admission? ಎಂದಾಗ ಕಣ್ಣು ಒರೆಸುತ್ತಾ,  ಹುಂ ಅಂದೇ. come on dear, cheer up! am naina 1st  sem BBM. ಎಂದಾಗ , ಅವಳು ನನ್ನ ವಾರಿಗೆಯ ಬೇರೆ ಕೋರ್ಸ್ ನ ಹುಡುಗಿ ಎಂದು ತಿಳಿಯದೆ, I am ashu BE 1st sem, should i call you dee? ಎಂದೆ.ಹೇ ಹುಚ್ಚಿ ನಾನು ನಿಮ್ಮ ಬ್ಯಾಚ್ ಮೇಟ್, dee ಯಾಕೆ? ಅಂದಾಗ ನೀನು ನನಗಿಂತ ಎತ್ತರ ಇದ್ದೀಯ, ನನಗಿಂತ ಉದ್ದ ಕೂದಲಿದೆ, ಸೀರೆ ಹಾಕೊಂಡಿದಿಯ, ಅಕ್ಕ ಅಂತ ತಿಳಿದು ಕೊಂಡೆ ಸಾರೀ ಅಂತ ಕೇಳಿದಾಗ,  ದೊಡ್ಡ ದನಿಯಲ್ಲಿ ನಗುತ್ತ ನನ್ನ ಅಮಯಕತೆಯನ್ನು ವ್ಯಂಗ ಮಾಡುತ್ತಾ,  ಮೊದಲ ದಿನವೇ ನನ್ನನು ತುಂಬಾ ಆಕರ್ಷಿಸಿದ್ದ ನೈನಾ, ನನ್ನ ಜೀವದ ಗೆಳತಿ ನಂಬರ್ ೨ ಆಗಬಹುದು ಅಂತ ಆ ಕ್ಷಣಕ್ಕಂತು  ಅನ್ನಿಸಿರಲಿಲ್ಲ!