ಯಾರನ್ನೇ ಕೇಳಿ ನೋಡಿ ಪ್ರೀತಿ ಒಂದು ಅನನ್ಯ ಅನುಭವ, ಮಾಡಿದವರಿಗೆ ಮಾತ್ರ ಗೊತ್ತಾಗುತ್ತದೆ, ಮಾಡದೆ ಇರುವವರು ದೊಡ್ಡ ನಷ್ಟ ಅನುಭವಿಸುವವರು ಎಂಬ ರೀತಿಯಲ್ಲಿ, ಪ್ರೀತಿಯಲ್ಲಿ ತೇಲಾಡುವ ಮನಸ್ಸುಗಳು ಹೇಳುವ ಮಾತಿದು. ಹಾಗಾದರೆ, ಪ್ರೀತಿ ಎಂಬುದು ಒಬ್ಬ ಹುಡುಗ/ಹುಡುಗಿಗೆ ಮಾತ್ರ ಸೀಮಿತವಾದ ಅಮೂಲ್ಯ ಸಂಪತ್ತಾ? ಯಾಕೆ ನಮ್ಮ ಯುವ ಜನಾಂಗ ತನ್ನ ಹುಚ್ಚು ಬಯಕೆಗಳಿಗೆ, ಅಪ್ರಭುದ್ಧ ಭಾವನೆಗಳಿಗೆ ಪ್ರೀತಿ ಎಂಬ ಹೆಸರನ್ನು ಕೊಟ್ಟು ಸಂಭ್ರಮಿಸುತ್ತಾರೆ? ಯಾಕೆಂದರೆ, ನಮ್ಮಲ್ಲಿರುವ ಒಂದೇ ಒಂದು ಬಯಕೆ ಏನೆಂದರೆ ನಾನು ಯಾರಿಂದಲಾದರೂ ಗುರುತಿಸಿಕೊಳ್ಳಬೇಕು ಎಂಬ ಕೆಟ್ಟ ಐಡೆಂಟಿಟಿ ಸೀಕಿಂಗ್!!
ಹಾಗಾದ್ರೆ ಪ್ರೀತಿ ಮಾಡುವವರೆಲ್ಲ ಮೂರ್ಖರು ಅಂತಲ್ಲ, ಪ್ರೀತಿಸುವುದು, ಪ್ರೀತಿಸಲ್ಪಡುವುದು ತಪ್ಪು ಅಲ್ಲ, ಆದರೆ ನಮ್ಮ ಆಕರ್ಷಣೆಗಳಿಗೆ, ಭಾವನೆಗಳಿಗೆ, ಪ್ರೀತಿ ಎಂಬ ಶಬ್ದದ ಬಳಕೆ ಸರಿಯಲ್ಲ. ನಾವು ಹುಟ್ಟಿದಾಗಿನಿಂದ ಅಮ್ಮ ತೋರಿಸಿದ್ದು ನಿಸ್ವಾರ್ಥ unconditional ಪ್ರೀತಿ!, ಅಪ್ಪ ತೋರಿಸುವ ಕಾಳಜಿ ನಿಜವಾದ ಪ್ರೀತಿ, ತನ್ನ ಕರುವಿಗಾಗಿ ಹಪ ಹಪಿಸುವ ಹಸುವಿನದ್ದು ಪ್ರೀತಿ. ಅಪರಿಚಿತ ಮಗುವನ್ನು ಎತ್ತಿಕೊಂಡು ಮುದ್ದು ಮಾಡುವುದು ಪ್ರೀತಿ! ಯಾರದ್ದೋ ಕಣ್ಣಿರಿಗೆ ಕೆನ್ನೆಯಾಗುವುದು ಪ್ರೀತಿ! ಕತ್ತಲು ಕೋಣೆಯಲ್ಲಿ ದುಃಖತಪ್ತ ಸ್ನೇಹಿತನನ್ನು/ಸ್ನೇಹಿತೆಯನ್ನು ಸಮಾಧಾನ ಪಡಿಸುವುದು ಪ್ರೀತಿ! ತಮ್ಮ- ತಂಗಿ, ಅಣ್ಣ- ಅಕ್ಕ ರೋಡೆಗಿನ ಒಡನಾಟ ಪ್ರೀತಿ! ಇಳೀ ವಯಸ್ಸಿನಲ್ಲಿ ತಮ್ಮ ಮಕ್ಕಳಿಗಾಗಿ ಪರಿತಪಿಸುವ ಹಿರಿಯ ಕಣ್ನುಗಳದ್ದು ನಿಜವಾದ ಪ್ರೀತಿ! ಪ್ರಪಂಚ ನಿಂತಿರುವುದೇ ಪ್ರೀತಿ ಎಂಬ ಎರಡಕ್ಷರದ ಮೇಲೆ ನಿಜ, ಅದು ನಮ್ಮ ಸುತ್ತಲಿರುವ ಪ್ರತಿ ವ್ಯಕ್ತಿಯೊಂದಿಗೆ ಆಗಬಹುದಲ್ಲ? ಪ್ರೀತಿ ಎನ್ನುವುದು ಹೆಣ್ಣು-ಗಂಡಿಗೆ ಸಂಭಂದಿಸಿದ ವಿಷಯ ಅಂತ ಯಾಕೆ ಭಾವಿಸಬೇಕು?
ನಾವು ಏನೇ ಕಂಡುಕೊಳ್ಳಲು ಹೊರಟರು, ಅಥವಾ ಯಾರನ್ನೇ ಆಗಲಿ ಇಷ್ಟಪಡುವಾಗ ಅಲ್ಲಿ ಸ್ವಾರ್ಥ ಎಂಬ ಪದ ಹುಟ್ಟಿಕೊಂಡರೆ ಅದು ಪ್ರೀತಿಯೇ ಅಲ್ಲ!! ನನ್ನದು ಆಕೆಯೇಡೆಗಿನ ನಿಸ್ವಾರ್ಥ ಪ್ರೀತಿ ಎಂದು ಕೊಚ್ಚಿಕೊಳ್ಳುವ ಹುಡುಗರೆಲ್ಲರಿಗೂ ಒಂದು ಸಿಂಪಲ್ ಪ್ರಶ್ನೆ, ಅವಳು ನೋಡಲು ಸುಂದರವಾಗಿರದಿದ್ದರೆ ನೀವು ಅವಳನ್ನು ಇಷ್ಟೇ ತೀವ್ರವಾಗಿ ಪ್ರೀತಿಸುತ್ತಿದ್ದೇನೆ ಅಂತ ಹೇಳಿಕೊಳ್ಳುತಿದ್ದಿರ? ಖಂಡಿತ ಇಲ್ಲ!! ಕಣ್ನು ಇಷ್ಟ ಪಡುವುದೇ ಸುಂದರವಾದ ವಸ್ತುಗಳನ್ನ ಮತ್ತು ಸುಂದರವಾದ ವಸ್ತುಗಳನ್ನ! ನೋಡದೆ ಪ್ರೀತಿಸುತ್ತಿದ್ದೇವೆ ಅಂತ ಹೇಳಿಕೊಳ್ಳುವ ಶತ ಮೂರ್ಖರಿಗೆ ಇನ್ನೊಂದು ಪ್ರಶ್ನೆ, ಕೇವಲ ಧ್ವನಿ ಕೇಳಿ ಇಷ್ಟ ಪಡುವ ನೀವುಗಳು, backround , career , profession ಕೇಳದೆಯೇ ನೀನು ಏನೇ ಆಗಿರು ನಿನ್ನನ್ನೇ ಪ್ರೀತಿಸುತ್ತೇನೆ ಅಂತ ಹೇಳಲು ಸಾಧ್ಯವೇ? ಹೇಳುವ ಸಾಹಸಿಗರು ಬೆರಳಣಿಕೆಯಷ್ಟು ಸಿಗಬಹುದೇನೋ ಆದರೆ ಅದು ಕೇವಲ ಅವಿವೇಕದ ಪರಮಾವಧಿಯಾಗಬಹುದು.!
ಮನುಷ್ಯ ಸಮಾಜ ಜೀವಿ. ಎಲ್ಲರಿಂದ ಪ್ರೀತಿಸಲ್ಪಡುವ ಹಾಗು ಎಲ್ಲರನ್ನು ಪ್ರೀತಿಸಲು ಬರುವ ಏಕೈಕ ಮಾತು ಬಲ್ಲ ಜೀವಿ! ಹೀಗಿರುವಾಗ ಯಾಕೆ ನಮ್ಮ ಪ್ರೀತಿಯನ್ನು ಒಬ್ಬಳಿಗಾಗಿ/ ಒಬ್ಬನಿಗಾಗಿ ಜೀವಮಾನವಿಡಿ ಕಾಯಿದಿರಿಸಬೇಕು? ಪ್ರೀತಿ ಹಂಚಿದಷ್ಟು ಬೆಳೆಯುತ್ತ ಹೋಗುವ ವಿಸ್ಮಯ! ಇರುವಷ್ಟು ದಿನ ಎಲ್ಲರೊಳಗೊಂದಾಗಿ ಬಾಳು ಮಂಕು ತಿಮ್ಮ ಅಂತ d v g ಹೆಳಿದ್ದಾರೆ. ಒಂದು ಗಂಡು ಮತ್ತು ಹೆಣ್ಣಿನ ನಡುವೆ ಇರುವುದು ಕೇವಲ ಆಕರ್ಷಣೆ ಹೊರತು ಪ್ರೀತಿಯಲ್ಲ. ದೇಹಕ್ಕೆ-ಕಾಮ, ಹರೆಯಕ್ಕೆ-ಭಾವನೆ, ಕಣ್ಣಿಗೆ- ಸೌಂದರ್ಯ, ನಾಲಿಗೆಗೆ-ರುಚಿ, ಹೇಗೋ ಹಾಗೆ ಯವ್ವನದಲ್ಲಿ- ಸಂಗಾತಿಯ ಅವಶ್ಯಕತೆ ಇರುತ್ತದೆ, ಅದನ್ನ ಪ್ರೀತಿ ಅನ್ನುವುದು ತಪ್ಪಾಗುತ್ತದೆ. ಪ್ರೀತಿಗೆ, ಕಾಮದ, ಆಕರ್ಷಣೆಯ, ಭಾವನೆಯ, ಸೌಂದರ್ಯದ ಹಂಗಿಲ್ಲ, ಅದು ಸದಾ ಹರಿಯುವ ಜಲಧಾರೆ! ಮದುವೆಯಾದ ೫೦ ವರ್ಷದ ನಂತರವೂ ಗಂಡ ಹೆಂಡತಿಯ ಸಂಗತಕ್ಕೆ ಅಥವಾ ಹೆಂಡತಿ ಗಂಡನ ಸಂಗಾತಕ್ಕೆ ಹಾತೊರೆಯುವುದು ನಿಜವಾದ ಪ್ರೀತಿ! ಹರೆಯ ಮುಗಿದ ತಕ್ಷಣ ಸತ್ತು ಹೋಗುವ ಆಕರ್ಷಣೆಗೂ ಸಾವಿಲ್ಲದಿರುವ ಪ್ರೀತಿಗೂ ಎತ್ತಣದಿಂದೆತ್ತ ಸಂಭಂದವಯ್ಯ??!!
well , ನಾನು ಬ್ಲಾಗ್ನಲ್ಲಿ ಕನ್ನಡದಲ್ಲಿ ಬರೆಯಲು ಶುರು ಮಾಡಿ ಕೇವಲ ಒಂದು ತಿಂಗಳಾಗಿದೆ. ಆದರೆ ಈ ಒಂದು ತಿಂಗಳಲ್ಲಿ ನನಗೆ ಸಿಕ್ಕ ಪ್ರತಿಕ್ರಿಯೆ, ಟೀಕೆ, ವಿಭಿನ್ನವಾದದ್ದು!! ಕೆಲವು ಸ್ನೇಹಿತರು ಯಾವಾಗ continue ಮಾಡ್ತಿಯ? ಅಂತ ಕೇಳ್ದ್ರೆ, ಇನ್ನು ಕೆಲವರು ಯಾವಾಗ ನಿಲ್ಲಿಸ್ತಿಯ? ಕೆಲವರಂತೂ ಮಾಡೋಕೆ ಕೆಲಸ ಇಲ್ಲ ಅಂತ ಕಾಣುತ್ತೆ ಅದಕ್ಕೆ ಬೇರೆಯವರ ಸಮಯವನ್ನು ವ್ಯರ್ಥ ಮಾಡ್ತಾ ಇದ್ದೀಯ? ಅಂತ ಕೇಳ್ತಾ ಇದಾರೆ. ನನಗೆ ಪ್ರೋತ್ಸಾಹಕ್ಕಿಂತ criticise ಮಾಡಿದ ಸ್ನೇಹಿತರೆ ಸರಿ ಅನ್ನಿಸುತ್ತಿದ್ದಾರೆ. ಹಾಗಂತ ಅವರು ಕೇವಲ ನಿಂದನೆ ಮಾಡದೆ ವಿಮರ್ಶೆ ಮಾಡಿ ಸಲಹೆ ನೀಡಿದ್ದಾರೆ ಅವರಿಗೆಲ್ಲ ನನ್ನ ಧನ್ಯವಾದಗಳು. ಹಾಗಂತ ಯಾರೋ ಹೇಳ್ತಾರೆ ಅಂತ ನಾನು ಬ್ಲಾಗ್ ಅಂತು ನಿಲ್ಲಿಸುವುದಿಲ್ಲ, ನಿಮ್ಮ ಟೀಕೆಗಳನ್ನು ನನ್ನ ಬ್ಲಾಗ್ ಸದಾ ಸ್ವಾಗತಿಸುತ್ತದೆ.