ಮೋದಿಯನ್ನು ಇಷ್ಟಪಡುವ ಅನೇಕ ಭಾರತೀಯರಲ್ಲಿ ನಾನು ಒಬ್ಬಳು . "ಅಚ್ಛೆ ದಿನ್" ಎಂಬ ಕಾನ್ಸೆಪ್ಟ್ ಇಟ್ಟುಕೊಂಡೇ ಕೊಟಿ ಕೋಟಿ ಭಾರತೀಯರ ಮನ ಗೆದ್ದ ಮೋದಿಯವರು ಈ ದೇಶದ ಪ್ರಧಾನ ಮಂತ್ರಿ . ನಾನೋ ಯಕ:ಶ್ಚಿತ್ ಅಭಿಮಾನಿ . ಎನೇ ಇರಲಿ ಈ ದೇಶಕ್ಕೊಂದು ಭವಿಷ್ಯವೇ ಇಲ್ಲ ಎಂದು ಭಾವಿಸಿದ್ದ ಅನೇಕ ಯುವಜನರಲ್ಲಿ ಸಾವಿರಾರು ಆಶಾಗೋಪುರ ಕಟ್ಟಿಕೊಂಡು ನಮ್ಮ ದೇಶ ಹೇಗೆಲ್ಲ ವೃದ್ಧಿಯಾಗಬಹುದು ಮತ್ತು ಅದನ್ನು ಹೀಗೆ ಕಣ್ಣಾರೆ ಎರೆಡು ತಲೆಮಾರು ನೋಡಿ ಆನಂದಿಸಬಹುದು ಎಂಬ ಕಾಲ್ಪನಿಕ ಖುಷಿಯನ್ನೇನೋ ತಮ್ಮ ಭಾಷಣದ ಮೂಲಕ ಕೊಟ್ಟ ಮೋದಿಯವರಿಗೆ ಧನ್ಯವಾದಗಳನ್ನು ತಿಳಿಸುತ್ತ ಕೆಲ ವಿಷಯಗಳನ್ನ ಚರ್ಚಿಸೋಣ .
ನಾನು ಬರೆಯುತ್ತಿರುವುದು ಯಾರ ವೈಯಕ್ತಿಕ ವಿಚಾರವೂ ಅಲ್ಲ . ನನ್ನ ನಿರೀಕ್ಷೆ ಅಪಾರವಾದ ಕಾರಣಕ್ಕೋ ನಾ ಮೆಚ್ಚಿದ ನಾಯಕ ಅದನ್ನು ಪೂರ್ಣ ಪ್ರಮಾಣದಲ್ಲಿ ಕೊಡಲು ಸಾಧ್ಯವಿಲ್ಲದಾಗಿ , ಯಾಕೋ ಎಲ್ಲ ಅಶ್ವಾಷಣೆಗಳು ಹುಸಿ ಎಂದೆನಿಸಲು ಇನ್ನು ಸಮಯ ಬಂದಿರದ ಕಾರಣಕ್ಕೋ ಅಥವಾ ತೀರ ಈಗಲೇ ಹೀಗೆ ಎಂದು ಹೇಳುವ ಅನಿರ್ದಿಷ್ಟ ಕಾಲವಾಗಿರುವುದರಿಂದಲೋ ನನ್ನ ಮನಸ್ಸಿನ್ನಲ್ಲಿ ಒಂಥರ ಚಡಪಡಿಕೆ ಶುರುವಾಗಿಬಿಟ್ಟಿದೆ ಕಾರಣ ಬಜೆಟ್!
ದೇಶದ ಆರ್ಥಿಕ ಪರಿಸ್ತಿತಿ ಹದಗೆಟ್ಟಿದೆ ದಶಕಗಳ ಕಾಲ ಕೈ ಆಡಳಿತದಿಂದಾಗಿ ದೇಶದ ಬೊಕ್ಕಸ ಖಾಲಿ ಯಾಗಿ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದೇವೆ ಎನ್ನುವುದೇನೋ ದಿಟ . ಆರ್ಥಿಕ ಬಿಕ್ಕಟ್ಟಿನ ರೂವಾರಿಗಳು ಯಾರೇ ಆಗಿರಲಿ ಅನುಭವಿಸುವವರು ಮಾತ್ರ ಜನಸಾಮಾನ್ಯರು . ಹೀಗೆ ಪ್ರತಿ ಬಿಕ್ಕಟ್ಟುಗಳನ್ನು ಸರಿ ಮಾಡಲು ಜನಸಾಮಾನ್ಯರೇ ಬೇಕಾಗಿದ್ದಲಿ ಯಾವ ಪುರುಷಾರ್ಥಕ್ಕಾಗಿ ನಾವು ನಾಯಕರನ್ನು ಆರಿಸಬೇಕು? ಬೇರೆ ಯಾವುದೇ ಪಕ್ಷ ದೇಶದ ಆಡಳಿತ ಚುಕ್ಕಾಣಿ ಹಿಡಿದುಕೊಂಡು ಆರ್ಥಿಕ ಸಮಸ್ಯೆ ನಿವಾರಣೆಯಾಗಲು ಬೇರೆ ದಾರಿ ಇಲ್ಲ ಬೆಲೆ ಹೆಚ್ಚಳ ಮಾಡಲೇಬೇಕು ಎಂದಿದ್ದರೆ ಇವರ ಹಣೆಬರಹವೇ ಇಷ್ಟು ಎಂದು ಹಲಬುತ್ತ ಜೀವನ ಸಾಗಿಸುತ್ತಿದೆವೋ ಏನೋ ? ಆದರೆ ದೇಶ ಕಾಣದ ಅತೀ ಪ್ರಭಾವಿ ವ್ಯಕ್ತಿಯಾದ ಮೋದಿಯವರ ನೇತೃತ್ವದ ಸರ್ಕಾರದ್ದು ಇದೇ ಮಾತಾದರೆ ಎಂಥ ವಿಪರ್ಯಾಸ ?
ರೈಲ್ವೆ ಆಯ್ತು, ಸಿಲಿಂಡರ್ ಆಯ್ತು , ಹಣ್ಣು -ತರಕಾರಿ ಆಯ್ತು ,ಸರಕು ಸಾಗಣೆ ಆಯ್ತು ,ಪೆಟ್ರೋಲ್ -ಡೀಸೆಲ್ ಆಯ್ತು ,ಸರಿ ಹೀಗೆ ಏರುತ್ತಲೇ ಇರಲಿ, ಈ ಏರಿಕೆ ಇಂದ ದೇಶದ ಆರ್ಥಿಕ ಬಿಕ್ಕಟ್ಟು ನಿವಾರಣೆ ಯಾಗುವುದಾದರೆ ಸಂತೋಷ ! ಪ್ರತಿ ಜನ ಸಾಮಾನ್ಯನು ತಾನು ಕಷ್ಟ ಪಟ್ಟು ದುಡಿದ ಹಣದಲ್ಲಿ ಪ್ರತಿ ತಿಂಗಳು ಇಂತಿಷ್ಟು ಅಂತ ಟ್ಯಾಕ್ಸ್ ಕಟ್ಟುತ್ತಲೇ ತನ್ನ ವೃತ್ತಿ ಜೀವನ ಆರಂಭಿಸುತ್ತಾನೆ . ಈ ರೀತಿಯ ಬೆಲೆ ಏರಿಕೆಯ ಪ್ರಸಂಗ ಬಂದಾಗ ಅಯ್ಯೋ ಕರ್ಮವೇ ಎಂದುಕೊಂಡು ಚುರೋ ಪಾರೋ ಬೇಜಾರು ಮಾಡಿಕೊಂಡು ಎ೦ದಿನಂತೆಯೇ ಜೀವನ ಸಾಗಿಸುತ್ತಾನೆ . ಇಂತಿಪ್ಪ ಪಾಪದ ಜನಸಾಮಾನ್ಯನ ಹೊಟ್ಟೆ ಮೇಲೆ ಹೊಡೆದು ಹೊಡೆದು ಆರ್ಥಿಕ ಬಿಕ್ಕಟ್ಟು ನಿವರಣೆಯಾಗಬೇಕಿದ್ದರೆ ಮೊದಿಯಂಥ ನಾಯಕ ನಮಗೆ ನಿಜವಾಗಿಯೂ ಬೇಕಾಗಿತ್ತೆ ??
ಮೋದಿಯ ನೇತೃತ್ವದ ನಮ್ಮ ಪಾರ್ಲಿಮೆಂಟ್ ಈ ದೇಶ ಕಂಡ ಮಹಾನ್ ದೇಶ ಭಕ್ತರನ್ನು ಒಳಗೊಂಡಿದೆ ಅಲ್ಲವೇ? ಜನ ಸೇವೆಯೇ ಜನಾರ್ದನ ಸೇವೆ , ನಮಗೆ ದುಡ್ಡು ಮಾಡುವ ಚಟವಿಲ್ಲಾ ಮೋದಿಯನ್ನು ಪ್ರಧಾನ ಮಂತ್ರಿಯನ್ನಾಗಿಸುವುದಷ್ಟೇ ನಮ್ಮ ಗುರಿ . ಯಾವ ಯಾವುದೊ ಕ್ಷೇತ್ರದವರು ಇನ್ಯಾವುದೋ ಕ್ಷೇತ್ರದಿಂದ ಸ್ಪರ್ಧಿಸಿ ಭಾರತ ವನ್ನು ಹೊಸ ದಿಗಂತಕ್ಕೆ ಕರೆದುಕೊಂಡು ಹೋಗುತ್ತೇವೆ ಎಂದು ಪುಂಖಾನು ಪುಂಖ ಭಾಷಣ ಮಾಡಿ ಓಟು ಗಿಟ್ಟಿಸಿಕೊಂಡು M.P ಯಾಗಿ ಸಕಲ ಸರ್ಕಾರದ ಸವಲತ್ತುಗಳನ್ನು ಪಡೆದುಕೊಂಡು ಈಗೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ !
ಅಲ್ಲ ಸ್ವಾಮೀ ಈ ಪರಮ ದೇಶ ಭಕ್ತರು ಜನ ಸೇವೆಗಾಗೆ ಜೀವನ ಮುಡುಪಿಟ್ಟವರು ಯಾಕೆ ಬೆಲೆ ಏರಿಕೆಯ ವಿಷಯ ಬಂದಾಗ ಈ ರೀತಿ ವರ್ತಿಸುತ್ತಾರೆ ?? ಒಬ್ಬ M.P ಯ ವಾರ್ಷಿಕ ಆದಾಯ ಮತ್ತು ಅವನ ಕರ್ಚು-ವೆಚ್ಚಗಳು ಸವಲತ್ತುಗಳು ಎಲ್ಲ ಸೇರಿ ಬರೋಬ್ಬರಿ ೫೪ ಲಕ್ಷ .(54*543= ಲೆಕ್ಕ ಹಾಕಿ ) ಹೀಗಿರುವಾಗ ಯಾಕೆ ಎಲ್ಲ ಮಂತ್ರಿಗಳು ಮತ್ತು M.P ಗಳು ಸೇರಿಕೊಂಡು ತಮ್ಮ ಅರ್ಧ ಸಂಬಳವನ್ನು ಮತ್ತು ಶೋಕಿ ಸವಲತ್ತುಗಳನ್ನು ದೇಶದ ಹಿತಕ್ಕಾಗಿ ಕೆಲ ಸಮಯ ಕಡೆ ಪಕ್ಷ ಆರ್ಥಿಕ ಬಿಕ್ಕಟ್ಟು ನಿವಾರಣೆ ಯಾಗುವ ತನಕವಾದರೂ ಕೊಡಬಾರದು ??
ಜನ ಸಾಮಾನ್ಯನು ದುಡಿಯುವುದೇ ಬದುಕುವದಕ್ಕಾಗಿ ತನ್ನ ಜೀವೊನೋಪಾಯ ನಡೆಸಲು ಉದ್ಯೋಗವನ್ನು ಅವಲಂಬಿಸಿರುತ್ತಾನೆ . ಆ ದುಡಿಮೆ ಇಂದ ಮನೆ ಮಕ್ಕಳು ಸಂಸಾರ ಮತ್ತೆ ಸರ್ಕಾರದ ಪಾಲದ ಟ್ಯಾಕ್ಸ್ . ಇಷ್ಟೆಲ್ಲಾ ಮಾಡಿ ನಮ್ಮನ್ನು ನಮ್ಮ ದೇಶವನ್ನು ಒಳ್ಳೆ ರೀತಿಯಲ್ಲಿ ನಡೆಸುಕೊಂಡು ಹೋಗಲಿ ಎಂದು ಪ್ರತಿ ಸಲವೂ ಬಣ್ಣ ಬಣ್ಣದ ಕನಸು ಕಟ್ಟಿಕೊಡುವ ಅಧಿಕಾರಾಸೆಯ ಜನನೀಚರನ್ನು ಆರಿಸಿ ಅವರ ಕೈಗಳಿಗೆ ಅಧಿಕಾರ ಚುಕ್ಕಾಣಿ ಕೊಟ್ಟು . ಅವರ ಹತ್ತು ತಲೆ ಮಾರು ತಿಂದು ತೆಗುವಷ್ಟು ದುಡ್ಡು ಮಾಡಿ ಕೊಟ್ಟು , ಅವರ ಎಲ್ಲ ಶೋಕಿ ಸವಲತ್ತುಗಳಿಗೆ ಮೂಕ ವಿಸ್ಮಿತರಾಗಿ, ನೋಡಿ ನಮ್ಮ ಟ್ಯಾಕ್ಸ್ ದುಡ್ಡಿನಿಂದ ಅವರ ಹೆಂಡರು ಮಕ್ಕಳು ವಿಲಾಸಿ ಜೀವನ ನಡೆಸುತ್ತ , ಕೈಗೊಬ್ಬ ಕಾಲಿಗೊಬ್ಬ ಆಳು ಕಾಳು , ಉಚಿತ ಸಾರಿಗೆ, ರೈಲ್ವೆ ವಿಮಾನ ಪ್ರಯಾಣ , ಉಚಿತ ಆಸ್ಪತ್ರೆ ವೆಚ್ಚ , ಇಷ್ಟೆಲ್ಲಾ ಸೌಕರ್ಯ (ಹೆಂಡತಿ/ಗಂಡನ) ಒಳಗೊಂಡ ಜನ ನಾಯಕರೆನಿಸಿಕೊಂಡವರು ತಮ್ಮ ಆದಾಯದ ಮುಕ್ಕಾಲಂಶವನ್ನು ಕೊಟ್ಟರು ಸಾಕಾದಿತು , ನಮ್ಮ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಲೇ ಬಾರದೆಂದಲ್ಲ , ಮಂತ್ರಿಗಳು, ೫೪೩ ಜನ M.P ಗಳು ಅಗತ್ಯ ಬಿದ್ದರೆ M.L.A ಗಳ ಆದಾಯದಿಂದಲೂ ತೆಗೆದುಕೊಳ್ಳಬಹುದಲ್ಲವೇ? ಆಗ ನಮ್ಮ ಅಗತ್ಯ ಬೆಲೆ ಏರಿಕೆ ತುಸು ಇಳಿಮುಖವಾದಿತು .
ಆದರೆ ಕೊಡುವವರ್ಯಾರು ? ತೆಗೆದುಕೊಳ್ಳುವವರು ಯಾರು?? ಇಷ್ಟು ಕಷ್ಟ ಪಟ್ಟು M.P M.LA ಸೀಟ್ ಗಿಟ್ಟಿಸಿಕೊಂಡು ಗಳಿಕೆಯನ್ನೆಲ್ಲ ಬ್ಯಾಂಕ್ ಬ್ಯಾಲೆನ್ಸ್ ಮಾಡಿಡುವ , ತಮ್ಮ ವಯಕ್ತಿಕ ಕೆಲಸ ಕಾರ್ಯಗಳನ್ನು ಸರ್ಕಾರದ ಸವಲತ್ತುಗಳನ್ನು ಪಡೆದುಕೊಂಡೆ ಮಾಡುವ ಹಣ ದಾಹಿ ಅಧಿಕಾರಿಗಳಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಆದರೂ ಮೋದಿ ಚುಕ್ಕಾಣಿ ಹಿಡಿದ ಸು ಸಂಧರ್ಭದಲ್ಲೂ ಇದು ಆಗದಿದ್ದರೆ ಇನ್ನೆಂದು ಆದಿತು ? ಇಷ್ಟು ಬೇಗ ಒಂದು ನಿರ್ಧಾರಕ್ಕೆ ಬಂದು ಬಿಡುವುದು ಅವಸರವೇ ಇರಬಹುದು . ನಿರ್ಧಾರ ಏನೇ ಆದರೂ ಬೆಲೆ ಏರಿಕೆಯ ಮೊದಲ ಬಿಸಿ ಅನುಭವ ಪಡೆಯುವ ಸುದೈವಿಗಳಲ್ಲವೇ ನಾವುಗಳು? "Make the lie big, make it simple,keep saying it,and eventually people will believe it!!" ಹಿಟ್ಲರ್ ಹೇಳಿಕೆ ಅದೇಕೋ ನಿಜವೆನಿಸುತ್ತಿದೆ!. ಕಬ್ ಆಯೆಂಗೆ ಅಚ್ಚೆ ದಿನ್ ?? :( :'( :( (Feeling hopeless )