ಅಂತು ಇಂಜಿನಿಯರಿಂಗ್ ಲಾಸ್ಟ್ ಸೆಂ 2nd ಇಂಟರ್ನಲ್ ಮುಗಿಸಿದ್ದಾಯ್ತು, ಇವತ್ತಿಗೆ ಸರಿಯಾಗಿ ಲೆಕ್ಕ ಹಾಕಿದರೆ ಇನ್ನು ಉಳಿದಿರುವುದು ಬರೋಬ್ಬರಿ ೩೦ ಚಿಲ್ಲರೆ ದಿನಗಳು:-( ಆಮೇಲೆ ನಾವ್ ಆಯಿತು ನಮ್ಮ career ಆಯಿತು. ಇನ್ನು ಉಳಿದ ಕೆಲವೇ ದಿನಗಳನ್ನ ಹೇಗೆ ಇನ್ನು ಚೆನ್ನಾಗಿ ಕಳಿಯಬಹುದು ಅಂತಷ್ಟೇ ಯೋಚನೆ ಮಾಡುವುದೇ ಸೂಕ್ತ! ಇಲ್ಲವಾದಲ್ಲಿ ಮಂಗನ ಮನಸು ಬೇಡವಾದ ಎಲ್ಲ ವಿಷಯಗಳನ್ನು ತನ್ನ ಬುಟ್ಟಿಯಲ್ಲಿ ಹಾಕಿಕೊಂಡು ಪಡಬಾರದ ವ್ಯಥೆಯನ್ನು ಅನುಭವಿಸಲಾರಭಿಸುತ್ತದೇ . ಎಲ್ಲದಕ್ಕೂ ಒಂದು ಅಂತ್ಯ ಇದ್ದೆ ಇದೆ ಅದಕ್ಯಾಕ್ಕೆ ಇಷ್ಟೊಂದು ಹತಾಶೆ, ದುಃಖ? ಇರಲಿ ನಮ್ಮ interesting ಕಥೆ ಮಧ್ಯೆ ಸುಮ್ಮನೆ ಎಮೋಷನಲ್ ಡ್ರಾಮ ಯಾಕೆ ಅಲ್ವಾ??
ನಮ್ಮ ಹಾಸ್ಟೆಲ್! ಇವತ್ತು ನನ್ ರೂಮ್ನಲ್ಲಿ ಬಂದು ಸುಮ್ಮನೆ ಕಣ್ಣು ಹಾಯಿಸಿ ಹೋದ ನನ್ನ ಸ್ನೇಹಿತೆ, ಹಾಸ್ಟೆಲ್ ಅಂದ್ರೆ hell ! ಯಾವಾಗ್ಲಾದ್ರು ಮುಗಿಯುತ್ತೋ ನನ್ ನಾಲ್ಕು ವರ್ಷ ದೇವರೇ ಇಲ್ಲಿಂದ ಯಾವಾಗ ಹೊರ ಹೋಗುತ್ತೇನೋ ಅಂತ ವಟಗುಟ್ಟುತಿದ್ದವಳು ನೀನೆ ಏನೇ ಈಗ ಬ್ಲಾಗ್ ನಲ್ಲಿ ಅನುಭವ ಕಥನ ಗಳನ್ನ ಬರೆಯುತ್ತಿರುವುದು ಅಂತ ಗೇಲಿ ಮಾಡಿದಳು, ಅವಳ ಮಾತು ಅತಿಶಯೋಕ್ತಿ ಏನಲ್ಲ. ಇದೆ ನಾಲ್ಕು ವರ್ಷಗಳ ಹಿಂದೆ ಅಪ್ಪ ಅಮ್ಮನ ಕಳಿಸಿ ನನ್ನ ರೂಮಿಗೆ ಬಂದಾಗ ಹಾಗೆ ಅನ್ನಿಸಿದು ಸತ್ಯ! ಆದ್ರೆ ಸಮಯದ ಚಕ್ರಕ್ಕೆ ಸಿಲುಕಿ, ಪ್ರತಿಯೊಂದನ್ನು ನಮ್ಮ ಜೀವನ ಶೈಲಿಗೆ ಹೊಂದುವಂತೆ ಮಾರ್ಪಾಡು ಮಾಡಿಕೊಂಡು ಅಥವಾ ನಮಗೆ ಗೊತ್ತಿಲ್ಲದೇ ಎಲ್ಲವು ನಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಗಿ ಬಿಡುವುದೇ ಅಲ್ಲವೆ ಬ್ಯೂಟಿ ಆಫ್ ಲೈಫ್? ಇರಲಿ ಇನ್ನು ಜಾಸ್ತಿ ಸಮಯ ವ್ಯರ್ಥ ಮಾಡದೆ, ಒರಿಜಿನಲ್ ಸ್ಟೋರಿಗೆ ಹಿಂತಿರುಗೋಣ.
ಅವಳು ನನ್ನ ಪಕ್ಕದ ರೂಮಿನಲ್ಲೇ ಇದ್ದಳು, ಎಲ್ಲರೊಂದಿಗೆ ತುಂಬಾ ಬೇಗ ಬೆರತು ಹೋಗುವ ಸ್ವಭಾವದ ಹುಡುಗಿ, ತುಂಬಾ ಸಮಯ ತೆಗೆದು ಕೊಂಡು ಆಕೆಯನ್ನ ಸೃಷ್ಟಿ ಮಾಡಿದ್ದನೇನೋ ಬ್ರಹ್ಮ ಅಂತ ಅನ್ನಿಸುವಷ್ಟು ಸೌಂದರ್ಯ ರಾಶಿ. ರೇಶಿಮೆ ಕೂದಲು, ಯಾವ ಸಿನಿಮಾ ನಟಿಗಿಂತ ಏನು ಕಡಿಮೆ ಇಲ್ಲವೇನೋ ಅನ್ನೋ ಅವಳ ಮೈಮಾಟ, ಎಲ್ಲವು ಸೂಪರ್. ಅವಳಿಗೆ ಬಂದ ಪ್ರೋಪೋಸಲ್ಸ್ ಗಲೆಷ್ಟೋ? ಅದೆಷ್ಟು ಹುಡುಗರು ಅವಳನ್ನ ನೋಡಿ ನೋಡಿಯೇ ಮರುಳಾಗಿದ್ದರೋ ಕಾಣೆ! ಹೀಗಂತ ನನ್ನಲ್ಲಿ ನಾನೇ ಮಾತಾಡಿಕೊಂಡು ಸ್ವಲ್ಪ ಹೊಟ್ಟೆ ಉರಿದುಕೊಂಡು ಅವತ್ತು ನನ್ನ ಚೀರ್ ಅಪ್ ಮಾಡಿ ನನ್ನ ರೂಮಿಗೆ ತಂದು ಬಿಟ್ಟ ನೈನಾ ಬಗ್ಗೆ ರಾತ್ರಿಯಲ್ಲ ಯೋಚನೆ ಮಾಡುತ್ತಾ ಮಲಗಿ, ಬೆಳಗ್ಗೆ ಎದ್ದು ಕ್ಲಾಸ್ ತಲುಪೋ ಹೊತ್ತಿಗೆ ತುಂಬಾ ತಡವಾದ್ದರಿಂದ, ಯಾರನ್ನು ಮಾತನಾಡಿಸದೆ ಹೋದೆ. ಸಂಜೆ ಬರುವ ಹೊತ್ತಿಗೆ, ನನ್ನ ತುಂಬಾ ಸಂತೈಸಿದ ಸುಂದರಿಗೆ ವಿಪರೀತ ಜ್ವರ! ಊರು ಹೊಸದೇನಲ್ಲ ಆದರು ಹತ್ತು ವರ್ಷಗಳ ಬಳಿಕ ಮೆಡಿಕಲ್ ಶಾಪ್ ಬಗ್ಗೆ ಸಂಪೂರ್ಣ ಮಾಹಿತಿ ತಪ್ಪಿ ಹೋದ್ದರಿಂದ ಸ್ವಲ್ಪ ಅಳುಕಿನಿಂದಲ್ಲೇ ಆಟೋ ಹತ್ತಿ ಹೋಸ್ಪಿಟಲ್ ತಲುಪುವ ಹೊತ್ತಿಗೆ ಹರ ಹರ ಮಹಾದೇವ....!!! ಡಾಕ್ಟರ ಸಿಕ್ಕು ಮೆಡಿಸಿನ್ ಕೊಟ್ಟು ವಾಪಸ್ ಆಟೋ ಹತ್ತಿ ಬರುವಾಗ ಇಬ್ಬರು ಮುಖ ಮುಖ ನೋಡಿಕೊಂಡು ಮುಸಿ ಮುಸಿ ನಗಲಾರಂಭಿಸಿದೆವು!!!:-)
ನನಗೆ ಯಾವ ಹೊಸ್ಪಿಟಲ್ಗೆ ಹೂಗವುದೆಂದು ತಿಳಿಯದೆ ಆಟೋ ಚಲಕನನ್ನೇ ಯಾವುದಾದರು ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಲೇಡಿ ಡಾಕ್ಟರ ಇರ್ಬೇಕು ಅಂತ ಮಾತ್ರ ಹೇಳಿದ್ದೆ, ಆ ಮಹಾಶಯ ನಮ್ಮ ಇಬ್ಬರನ್ನು maternity ಹೋಸ್ಪಿಟಲ್ ಗೆ ಕರೆದೊಯ್ದು ಬಿಟ್ಟ! ಖುಷಿ ಪಡಲು ನನಗೊಂದು ಕಾರಣವು ಇತ್ತು. ಈಗ್ಗೆ ೨೦ ವರ್ಷಗಳ ಹಿಂದೆ ಕರೆಕ್ಟ್ ಆಗಿ ಮಟ ಮಟ ಮಧ್ಯಾನಕ್ಕೆ ಅಮ್ಮನಿಗೆ ಜನ್ಮಕ್ಕಾಗುವಷ್ಟು ನೋವು ಕೊಟ್ಟು ಏಪ್ರಿಲ್ ೧ನೆ ತಾರೀಖಿನಂದು ನಾನು ಹುಟ್ಟಿದ್ದು ಇದೆ ಆಸ್ಪತ್ರೆಯಲ್ಲಿ ಅಂತ ಆ ಬೋರ್ಡ್ ಓದಿದ ಮೇಲೆ ಅರ್ಥವಾಯಿತು.(Dr . ಇಂದಿರಾ MBBS ,MD (ಗಯನಕಾಲೋಗಿಸ್ಟ್). ಇಷ್ಟು ಸಾಕಿತ್ತು ಹಳೆದನೆಲ್ಲ ನೆನಪಿಸಿಕೊಳ್ಳಲು. ಆದ್ರೆ ಇಂಥ ಅದೆಷ್ಟು ಹೆರಿಗೆ ಗಳನ್ನೂ ಈ ಇಪ್ಪತು ವರ್ಷದಲ್ಲಿ ಅವ್ರು ಮಾಡಿರುತ್ತರೋ? ಅವರಿಗೆ ನಿನ್ನೆ ಮಾಡಿದ ಹೆರಿಗೆಯೇ ನೆನಪಿನಲ್ಲಿ ಉಳಿದಿರುವುದಿಲ್ಲ ಇನ್ನು ನಿನ್ನ ಗುರುತು ಹಿಡಿದಾರೆಯೇ? ಸುಮ್ನೆ ಬೇರೆ ಕಡೆ ಹೋಗೋಣ ನಡೆ ಮಾರಾಯ್ತಿ ಇದೆಲ್ಲಿಯ ಸಹವಾಸ ಸಣ್ಣ ಜ್ವರಕ್ಕೆ maternity ಆಸ್ಪತ್ರೆಗೆ ಬರೋದ? ನೈನಾ ತನ್ನ ಕ್ಷೀಣ ಧ್ವನಿಯಲ್ಲಿ ಹೇಳುತ್ತಲೇ ಇದ್ದಳು, ಹೊರ ಜಗತ್ತಿನ ಪರಿಚಯವೇ ಇಲ್ಲದೆ ಅಪ್ಪನ ಸಹಾಯವಿಲ್ಲದೆ ಒಂದು ದಿನ ಕೂಡ ಆಸ್ಪತ್ರಗೆ ಹೋಗಿರದ ನಾನು, ಆವತ್ತು ಏನೋ ದೊಡ್ಡ ಸಾಧನೆ ಮಾಡುವರ ಹಾಗೆ ಅವಳು ಅಷ್ಟು ಹೇಳುತ್ತಿದ್ದರು ಕಿವಿಯಲ್ಲಿ ಹತ್ತಿ ಇಟ್ಟುಕೊಂಡಿರುವಂತೆ ಕುಳಿತು ಬಿಟ್ಟೆ.
ಆಗ ಶುರುವಾಯಿತು ನಿಜವಾದ ಪ್ರಪಂಚ ಪರಿಚಯ!! ನಾವು ಕುಳಿತು ಹತ್ತು ನಿಮಿಷ ಮೀರಿದರೂ, ಡಾಕ್ಟರನ ಸುಳಿವೇ ಇಲ್ಲ, ಪೇಶಂಟ್ temperature ಜಾಸ್ತಿ ಆಗ್ತಾ ಇದೆ ಇನ್ನು ಎಷ್ಟು ಹೊತ್ತ ಆಗುತ್ತಮ್ಮ ಅವರು ಬರಲು? ಅಂತ ಕೇಳಿದ್ದಕ್ಕೆ, ಅಲ್ಲಿರುವ ಆಯಾ ಅಯ್ಯೋ abortion ಕೇಸ್ ಅಂದ್ರೆ ಇನ್ನು ಲೇಟ್ ಆಗುತ್ತೆ ನೀವು ಸುಮ್ನೆ ಅಲ್ಲಿ ಹೋಗಿ ಕುಳಿತುಕೊಳ್ಳಿ ಅಂದು ಬಿಡೋದ??? !!! maternity ಆಸ್ಪತ್ರೆಗೆ ಇಬ್ಬರು ವಯಸ್ಸಿಗೆ ಬಂದ ಹುಡುಗೀಯರು ಮಾತ್ರವೇ ಬಂದಿದ್ದಾರೆ ಅಂದ್ರೆ ಈ ರೀತಿಯ ಸತ್ಕಾರಾನ?? ಅದೆಲ್ಲಿತ್ತೋ ಅಷ್ಟು ಕೋಪ (ಅದು ಯಾವಾಗಲು ನನ್ನ ಮೂಗಿನ ನೇರಕ್ಕೆ ಇರುತ್ತೆ ಬಿಡಿ) ಹೇಯ್ ರಾಕ್ಷಷಿ ಏನೇ ಬಾಯಿಗೆ ಬಂದ ಹಾಗೆ ಮಾತಾಡ್ತಿಯ ಏನ್ ಅನ್ಕೊಂಡಿದಿಯ ನೀನು ನನ್ನನ್ನು? ನೋಡಕ್ಕೆ ತೆಳ್ಳಗೆ ಕಾಣಿಸ್ತೀನಿ ಅಷ್ಟೇ ಎರೆಡು ಬಿಟ್ಟ ಅಂದ್ರೆ ಜೀವನ ಪೂರ್ತಿ ಮಾತಾಡಬಾರದು ಹಾಗೆ ಮಾಡ್ತೀನಿ ಹುಷಾರ್!! ಅಂತ ಅವಾಜ್ ಹಾಕ್ದೇ ನೋಡಿ ಆಸ್ಪತ್ರೆಯಲ್ಲಿ ಸ್ಮಶಾನ ಮೌನ!. ಜನರೆಲ್ಲರೂ ನಾನೇನು ಫೂಲನ್ ದೇವಿಯ ಮಗಳಿರಬಹುದ ಅಂತ ಲೆಕ್ಕ ಹಾಕ್ತ ಇದ್ದರೋ ಏನೋ ಪಾಪ, ಅಷ್ಟು ಹೊತ್ತಿಗಾಗಲೇ ನನ್ನ ಕೂಗಾಟ ಡಾಕ್ಟರ ಇದ್ದ ಕೊಣೆಗೂ ಕೇಳಿಸಿದ್ದರಬಹುದು, ಧಾವಿಸಿ ಬಂದು ಏನು ನಡೀತಾ ಇದೆ ಅಂತ ನೋಡುವ ಹೊತ್ತಿಗೆ, ಆಯಾಳ ಪರಿಸ್ತಿತಿ ನನ್ನ ಕೈಯಲ್ಲಿ ಗಂಭೀರ ಸ್ವರೂಪ ತಾಳಿದದನ್ನು ಕಂಡು, ನನ್ನ ಎಡಗೈ ಮೇಲಿನ BCG injection ಗುರುತು ನೋಡಿ, ಅವಳಿಗೆ ನಾನು ಬುದ್ಹಿ ಹೇಳ್ತೀನಿ ಬಿಡಮ್ಮ,ನೀನು ದಾಸರೆಯವರ ಮಗಳ? ಅಂತ ಕೇಳಲು, ನನ್ನ ಕೋಪವೆಲ್ಲ ಕರಗಿ ನೀರಾಗಿ ಹರಿದು ಹೌದು ಮೇಡಂ, ನೋಡಿ ನಿಮ್ಮಲ್ಲಿ ಕೆಲಸ ಮಾಡುವವರು ಎಂಥ ಮಾತಾಡುತ್ತಿದ್ದಾರೆ?? ಅನ್ನಲು ನನ್ನ ಮತ್ತು ನೈನಳನ್ನ ಒಳ ಕರೆದೊಯ್ದು tablets ಬರೆದು ಕೊಟ್ಟು, ತುಂಬಾ ಆತ್ಮೀಯವಾಗಿ ಮಾತಾಡಿದ ಡಾಕ್ಟರ, ನೀನು BCG ಚುಚ್ಹಿಸಿ ಕೊಳ್ಳುವಾಗಲೇ ನೀನು ಜಗಳಗಂಟಿ ಆಗ್ತಿಯ ಅಂತ ನಿಮ್ಮ ಅಪ್ಪನಿಗೆ ಹೇಳಿದ್ದೆ ಅಂತ ವ್ಯಂಗ ನಗು ನಕ್ಕಾಗ, ಅಲ್ಲ ಮೇಡಂ ಇಷ್ಟೊಂದು experience ಇರುವ ನೀವು ನನಗೆ BCG ಹಾಕುವಾಗ ಸರಿಯಾಗಿ ಹಾಕೊದಲ್ವ ನೋಡಿ ಎಷ್ಟು ದೊಡ್ಡದು ಹಾಕಿದಿರ? ಅಂದಾಗ, ನೀನು ಹುಟ್ಟಿದಾಗಿನಿಂದ ಜಗಳಗಂಟಿ ಮಗು, ಅವಾಗ್ಲು ನನ್ ಜೊತೆನೂ ಜಗಳ ಮಾಡಿದ್ದಕ್ಕೆ ಅಷ್ಟು ದೊಡ್ಡದಾಗು ಹಾಗೆ ಆಯಿತು! ಅಂತ ಹೇಳಿದಾಗ, ಸುಮ್ಮನೆ ಹುಸಿ ನಕ್ಕು, ಥ್ಯಾಂಕ್ಸ್ ಹೇಳಿ, ನೈನಳನ್ನ ಕರೆದುಕೊಂಡು ಬರುವಷ್ಟಿಗೆ, ಆ ಆಯಾ ನನ್ನ ತುಂಬಾ apologic ಆಗಿ ನೋಡುತ್ತಿರುವುದನ್ನು ಕಂಡು ಅವಳಿಗೊಂದು ಸಾರೀ ಹೇಳೇ ಪಾಪ ಅಂತ ನೈನಾ ಹೇಳಿದ್ದಕ್ಕೆ ಕೇಳ್ದೆ ಹೊರತು ನನಗಂತೂ ಅವಳು ಪಾಪ ಅಂತನ್ನಿಸಿರಲಿಲ್ಲ!!!
ಇಷ್ಟಾದ ಮೇಲೆ ನಾನು ನೈನಾ ಆತ್ಮಿಯರಾಗಲು ಬೇರೆ ಕಾರಣ ಬೇರೆ ಬೇಕಾ?? ಎರಡೇ ದಿನಕ್ಕೆ ನಾವು ತುಂಬಾ ವರ್ಷದ ಪರಿಚಿತರೆನೋ ಅನ್ನೋ ಹಾಗೆ ಒಬ್ಬೊರನ್ನೊಬ್ಬರು ಹಚ್ಹಿಕೊಂಡು ಬಿಟ್ಟೆವು. ಈ ಘಟನೆಯ ಬಳಿಕ ಹಾಸ್ಟೆಲ್ನಲ್ಲಿ ಯಾರಿಗೆ ಜ್ವರ ಬಂದರು ಅದನ್ನ maternity ಹೋಸ್ಪಿಟಲ್ ಜ್ವರ ಅಂತಲೇ ನೈನಾ ನನ್ನ ಗೇಲಿ ಮಾಡುತ್ತಿದಳು, ನೋಡಲೇ ದಾಸರೆ ಮತ್ತ ಅಕಿಗೆ ಜ್ವರ ಬಂದದ ಅಂತ, ಯಾವ್ maternity ಹೋಸ್ಪಿಟಲ್ ಕರಕೊಂಡು ಹೋಗುನು??? ಅಂತಲೇ ಎಲ್ಲ ಸ್ನೇಹಿತೆಯರು ಕಿಚಾಯಿಸುತ್ತಿದ್ದರು. ಅಬ್ಬ ಭಯಂಕರ ಸಾಧನೆ ನಾನು ಹಾಸ್ಟೆಲ್ ಸೇರಿದ ಮಾರನೆ ದಿನಕ್ಕೆ ಮಾಡಿ ಬಿಟ್ಟಿದ್ದೆ, ಮತ್ತು ಅದಕ್ಕೆ ಸರಿಯಾದ reward ಕೂಡ ಪೂರ್ತಿ ಸೆಂ ಅನುಭವಿಸೋ ಹಾಗಾಯ್ತು!!! ಏನೇ ಆದರು ಈ ಘಟನೆ ಇಂದಲೇ ನಾನು ಮತ್ತು ನೈನಾ ಇಷ್ಟೊಂದು ಆತ್ಮಿಯರಾಗಲು ಸಾಧ್ಯವಾಗಿದ್ದು, ನನ್ನಲ್ಲಿ ಇವತ್ತು ಏನೇ changes ಆಗಿದ್ರು ಅದಕ್ಕೆಲ್ಲ ನನ್ನ ಜೀವದ ಗೆಳತಿ ನೈನಾ ಕಾರಣ.
ಬರಿ jeanse ಮತ್ತು ಟಾಪ್ ಹಾಕುತ್ತಿದ್ದ, ಬರಿ ಹುಡುಗರ ಹಾಗೆ ವರ್ತಿಸುತ್ತಿದ್ದ ನನ್ನನ್ನು, ಒಬ್ಬ ಸಭ್ಯ, ಸೂಕ್ಷ್ಮ ಹುಡುಗಿಯಾಗಿ ಪರಿವರ್ತಿಸಿದ, ಎಲ್ಲರನ್ನು ಹಚ್ಹಿಕೊಂಡು ಇರಲು ಕಲಿಸಿದ, ಯಾವಾಗಲು ಇಲ್ದೆ ಇದ್ರೆ ಪರವಾಗಿಲ್ಲ ಅವಾಗ ಅವಾಗ, ಒಂದು ಚೂರು ಹುಡುಗಿಯರ ಹಾಗೆ ಸಿಂಗಾರ, ಬಂಗಾರ, ಮೇಕ್ ಅಪ್ ಆಗೋದನ್ನ ಕಲಿಯೇ, ಇಲ್ಲಾಂದ್ರೆ ನಾಳೆ, ನಿನ್ನ ಮದುವೆಯಾದ ಹುಡುಗ ನಾನು ಹುಡುಗಿ ವೇಷ ದಲ್ಲಿರೋ ಹುಡುಗನನ್ನ ಮದುವೆ ಆದೆನ?? ಅಂತ ಯೋಚನೆ ಮಾಡೋ ಹಾಗೆ ಆದೀತು! ಅವನು ನಿನ್ನ ಹಾಗೆ ಕಂಜುಸ್ ಆಗಿದ್ರೆ ಪರವಾಗಿಲ್ಲ ಬಿಡು ಒಳ್ಳೆ ಜೋಡಿ, ಕರ್ಚೆ ಮಾಡದ ಗಂಡ, ಶೋಪ್ಪಿಂಗೆ ಮಾಡದ ಹೆಂಡತಿ ಒಳ್ಳೆ ಜೋಡಿ ಕಣೆ. ಅಂತ ಅವಾಗ್ ಅವಾಗ್ ಹೇಳ್ತಾ ಇದ್ಲು. lipstick, maskara, kajol, foundation, compact,eyeshadow, parlour, ಇದು ಯಾವುದರ ಪರಿಚಯವೇ ಇಲ್ಲದೆ ಬೆಳದ ನನಗೆ ಹೊಸದೊಂದು ಲೋಕದ ಪರಿಚಯ ಮಾಡಿ ಕೊಟ್ಟವಳೇ ಅವಳು. ಅವಳನ್ನು ಅನುಸರಿಸಲು ಹೋಗಿ ನಾ ಮಾಡಿಕೊಂಡ ಫಜೀತಿ to be continued............!!!
One more in kannada !
ReplyDeleteHmmmm...good helping nature.... the last parah is very much funny:).....
ReplyDeletenice............
ReplyDeleteಮತೆರ್ನಿಟಿ ಹಾಸ್ಪಿಟಲ್ ಇಂದ ಹಾಸ್ಟೆಲ್ ವರೆಗೆ ಚೆನ್ನಾಗಿ ಮೂಡಿದೆ ನಿಮ್ಮ ಗೆಳೆತನ..... ಮುಂದುವರಿಸಿ ನಿಮ್ಮ ಫಜೀತಿ ಗಳನ್ನ .....
ReplyDeleteAshu avre tumba chennagide :) nanage ega anista ide nanu modle yake request madilla anta..?! anyway thanx fa being my friend :)Dhanyawadagalu.
ReplyDelete