ಎವೊಲ್ಯೂಷನ್ ಕೇವಲ ಜೀವರಾಶಿಗಳಲಿಲ್ಲ, ಅದೊಂದು ನೀರಿನಂತರ ಪ್ರಕ್ರಿಯೆ. ನಾವು ದಿನ ನಿತ್ಯ ನಮ್ಮ ಸುತ್ತಲೂ ನಡೆಯುವ ಘಟನೆಗಳ ಆಧಾರದ ಮೇಲೆ, ಮತ್ತು ಆ ಘಟನೆಗಳು ನಮ್ಮ ಮೇಲೆ ಬೀರುವ ಪರಿಣಾಮಗಳ ಆಧಾರದ ಮೇಲೆ, ಮಾನಸಿಕವಾಗಿ, ಸೈಧಾಂತಿಕವಾಗಿ ಹಾಗೂ ದೈವಿಕವಾಗಿ ಬದಲುಗುತ್ತಾ ಹೋಗ್ತೇವೆ, ಈ ಬದಲಾವಣೆ ಪಾಸಿಟಿವ್ ರೀತಿಯ ಇಂಪ್ಯಾಕ್ಟ್ ಮಾಡಿದರೆ ಅದು ಕೂಡ ಎವೊಲ್ವಿಂಗ್ ಪ್ರಕ್ರಿಯೆ ನೇ !!
ಒಂದಷ್ಟು ವರ್ಷದ ಹಿಂದೆ, ಇದೇ ಸರಿ ಇದೆ ತಪ್ಪು ಅನಿಸುತ್ತೆ, ಕೆಲವು ವರ್ಷಗಳ ನಂತರ ತಪ್ಪು ಅನ್ಕೊಂಡಿದ್ದು ಸರಿ, ಸರಿ ಅನ್ಕೊಂಡಿದ್ದು ತಪ್ಪು ಅನ್ಸುತ್ತೆ, ಕೊನೆ ಕೊನೆಗೆ ಎಲ್ಲದೂ ಸರಿ ನನ್ನ ಅನಿಸಿಕೆ ತಪ್ಪು ಅನಿಸಲಿಕ್ಕೆ ಶುರುವಾಗುತ್ತೆ!! ಇಷ್ಟೆಲ್ಲಾ ಪೀಠಿಕೆ ಯಾಕೆ ಅಂದ್ರ ? ತುಂಬಾ ಮುಖ್ಯವಾದ ವಿಷಯ ಇದೆ, ಈಗ ಈ ಮೂರ್ತಿ ಪೂಜೆ ನಿಷೇಧಿಸಿ, ವೈದಿಕ ಆಚರಣೆ ನಿಷೇಧಿಸಿ, ಅದು ನಮ್ಮ ಆಚರಣೆ ಅಲ್ಲ ಅಂತ ಒಂದು ಬಣ ಎದ್ದಿರೋದು ಅವರದ್ದು ತಪ್ಪು ಅಂತ ಇನ್ನೊಂದು ಬಣ ಹೇಳ್ತಿರೋದು ವಾದ ವಿವಾದ ಪ್ರತಿವಾದ ಎಂತದೆಲ್ಲ ನಡೀತಾ ಇತ್ತಲ, ಈ ರಾಜಕೀಯ ನಮಗೆ ಬೇಡ ಆದರೆ ಯಾವುದು ನಿರುಪದ್ರವಿ ಆಚರಣೆ ಹಾಗೂ ನಂಬಿಕೆ ಆಗಿರಿತ್ತೋ ಅದನ್ನ ಟಚ್ ಮಾಡಕ್ ಹೋಗ್ಬಾರ್ದು ಅನ್ನೋದು ಕಾಮನ್ ಸೆನ್ಸ್ , ಬಟ್ that ಈಸ್ ನಾಟ್ ಕಾಮನ್!
ಇಂಥದ್ದೇ ಅಪಭ್ರಂಶ ನಂಬಿಕೆಗಳು ಮತ್ತು ನಾ ಅನ್ಕೊಂಡಿರೋದು ಮಾತ್ರ ಸತ್ಯ ಅಂತ ನನ್ನ ನಾನೇ ಹಲವು ಬಾರಿ ಸಂತೈಸಿಕೊಂಡು ಅಹಂಕಾರ ಪಟ್ಟುಕೊಂಡಿದ್ದಿದೆ. But ಯೂನಿವರ್ಸ್ ಹ್ಯಾಸ್ ಇಟ್ಸ್ ಓನ್ ವೆ of ಟೀಚಿಂಗ್ ಯು ಲೆಸೆನ್ಸ್ .
ಎರಡು ವರ್ಷದ ಹಿಂದೆ ಇಂಗ್ಲೆಂಡ್ ನ ಬರ್ಹ್ಮಿಂಗ್ಹ್ಯಾಮ್ ನ ದೇವಸ್ಥಾನದ ಪಟವನ್ನು, ನನ್ನ ಫೋನ್ ಮೆಮೊರಿ ಜ್ಞಾಪಿಸಿತು!! ಮನಸ್ಸು ಮತ್ತೆ ಯುರೊಪ್ ಸುತ್ತಿ ಬಂತು. ಐರ್ಲೆಂಡ್ ನಲ್ಲಿ ಕಾನ್ಫರೆನ್ಸ್ ಭಾಗದ ನಿಮಿತ್ತವಾಗಿ ಹೋಗಿ, ಹೇಂಗೂ ಬ್ರಿಟಿಷ್ಐರಿಶ್ ವೀಸಾ ಇರೋ ಕಾರಣಕ್ಕೆ ಯುಕೆ ಪ್ರವಾಸ ಕೂಡ ಮಾಡಬಹುದು ಸೊ , ನಿಮ್ಮ ಕಾನ್ಫರೆನ್ಸ್ ಮುಗಿಯೋ ಅಷ್ಟ್ರಲ್ಲಿ ನಾನು ಯುಕೆ ಐಟರ್ನರಿ ಸಿದ್ಧ ಮಾಡ್ತೇನೆ ಅಂತ ನನ್ನ ಹೋಸ್ಟ್ ಮಾಡಿದ ಗೆಳತೀ ಹೇಳಿದಳು. ಹೇಂಗೂ ಇಷ್ಟು ದೂರ ಬಂದಿದ್ದಾಗಿದೆ ಅದು ನೋಡೇ ಬಿಡೋಣ ಅಂತ ಅರ್ಧ ಮನಸ್ಸು ಹೇಳಿದ್ರೆ ಇನ್ನ ಅರ್ಧ ಮನಸ್ಸು ಸಾಕಪ್ಪ ಯುರೋಪ್ ಸಾವಾಸ, ಮನೆ ಊಟ ಇಲ್ದೆ ಹದಿನೈದು ದಿವಸಕ್ಕೆ ಬರೋಬ್ಬರಿ ೫ ಕೆಜಿ ತೂಕ ಕಮ್ಮಿ ಆಗಿ ಹೋಗಿತ್ತು, ಕಾನ್ಫರೆನ್ಸ್ ಊಟವೋ ದೇವರಿಗೆ ಪ್ರೀತಿ, ಗೆಳತೀ ಕರ್ನಾಟಕದವಳೇ ಅಲ್ಲಿ ಹೋಗಿ ೧೦ ವರ್ಷದ ಮೇಲಾಗಿರೋದಕ್ಕೆ ಈಗ ಅವಳ ಪೂರ್ತಿ ದಿನಚರಿ ಐರಿಶ್ ಲೈಫ್ಸ್ಟೈಲ್ ಥರವೇ!! ಬೆಳಿಗ್ಗೆದ್ದು ದಿನ ಏನ್ ತಿಂಡಿ ಅಂತ ತಲೆ ಕೆಡಸ್ಕೊಳಲ್ಲ ಓಟ್ಸ್ ಇರುತ್ತೆ ಫ್ರಿಡ್ಜ್ ಅಲ್ಲಿ ಹಾಲಿರುತ್ತೆ, ಅವನ್ ಅಲ್ಲಿ ಬಿಸಿ ಮಾಡ್ಕೊಂಡು ಮೇಲೆ ಬ್ಲೂ ಬೆರಿ ಹಾಕೊಂಡು ತಿನ್ನು ಅಂತ ಹೇಳಿ ಆಫೀಸ್ ಹೋಗ್ತಿದ್ಲು ಒಂದಿನ ಸರಿ ಎರಡ್ ದಿನ ಸರಿ, ಮೂರನೇ ದಿನ ಅಮ್ಮ ಮಾಡ್ತಿದ್ದ ತರಕಾರಿ ಉಪ್ಪಿಟ್ಟು, ಅವಲಕ್ಕಿ, ಶಾವಿಗೆ ಉಪ್ಪಿಟ್ಟು ಎಲ್ಲ ನೆನಪಾಗಾಕ್ ಶುರವಾಯ್ತು. ಹೇಗೆ ಜೊತೆಲಿರುವಾಗ ಒಬ್ಬರ ವ್ಯಾಲ್ಯೂ ಗೊತ್ತಾಗಲ್ವೋ ಹಂಗೆ, ದಿನ ತಿನ್ನೋ ನಮ್ಮ ಆಹಾರ ಏನ್ ಮಹಾ ಅನ್ಸಿರುತ್ತೆ, ಮೂರ್ ದಿನಕ್ಕೆ ಅದಿಲ್ದೆ ಎಂಥ ನರಕ ಜೀವನ ಅನ್ನೋದು ಗೊತ್ತಾಗುತ್ತೆ !
ಒಂದು ವಾರಕ್ಕೆ ದೋಸೆ ಇಡ್ಲಿ ನೆನಪಾಗಿ ಡಬ್ಲಿನ್ ನಗರದ ದೋಸೆ ವ್ಯಾನ್ ಹುಡ್ಕೊಂಡು ಹೋದೆ, ನಮ್ಮ ವೆನ್ಯೂ ಇಂದ ಎರಡು ಕಿಲೋಮೀಟರು ಕಾಲ್ನಡಿಗೆ, ಅಯ್ಯೋ ಸ್ವರ್ಗ ಸಿಕ್ಕ ಅನುಭವ ತಿಂದು ಮುಗಿಸುವ ಹೊತ್ತಿಗೆ ದೋಸೆ ಪ್ಲಸ್ ನೀರು ಸೇರ್ಸಿ ೧೫ ಯುರೋ ಅಂತಾಯ್ತು ದೋಸೆ ತಿಂದ ಖುಷಿಗೆ ೧೫೦೦ ಏನ್ ದೊಡ್ಡ ವಿಷಯ ಅಲ್ಲ ಬಿಡು ಅನ್ಕೊಂಡು ಸುಮ್ಮನಾದೆ, ಅಷ್ಟೊತ್ತಿಗಾಗಲೇ ೧೫೦೦ ರೊಪಾಯಿಗೆ ಒಂದು ತಿಂಗಳಿಗೆ ಆಗೋವಷ್ಟು ದೋಸೆ ತಿನ್ಬೋದಿತ್ತು ಯಾ ಸೀಮೆ ಜನ ಇವ್ರೆಲ್ಲ ಅಂತ ಮನಸ್ಸು ಬೈಕೊಂಡಿತ್ತು ಅದು ಬೇರೆ ವಿಷಯ. ಅಷ್ಟರಲ್ಲೇ ಬಿಸಿ ಊಟ ತಿನ್ನದೇ ವರ್ಷಗಳೇ ಕಳೆದಹಾಗೆ , ಜನಕ್ಕೆ ಗೊತ್ತಾಗದ ಹಾಗೆ ಮನಸ್ಸು ರೋಧಿಸಲು ಶುರುಮಾಡಿತ್ತು! ವಾಪಾಸ್ ಊರಿಗೆ ಬಂದು ಬಿಡೋಣ ಅಂದ್ರೆ ಇನ್ನು ಒಂದು ವಾರ ಇಲ್ಲೇ ಠಿಕಾಣಿ ಅದರ ಮಧ್ಯೆ ಐರ್ಲೆಂಡ್ ಹಸಿ ಹಸಿ ತಣ್ಣಗಿನ ವಿಚಿತ್ರ ಊಟ ತಿಂದಿದ್ದಲ್ಲದೆ ಈಗ ಯುಕೆ ಗೆ ಬೇರೆ ಪ್ಲಾನ್ ಮಾಡ್ಕೊಂಡ್ ಕೂತಿದಾಳೆ ಊರಿಗ್ ಹೋಗೋವಶ್ಟರಲ್ಲಿ ಹೆಣ ಬಿದ್ದಿರುತ್ತೆ ನಂದು ಅನ್ಕೊಂಡೆ ಹೊರಡಲು ತೈಯಾರಿ ಮಾಡ್ಕೊಂಡಿದ್ದಾಯ್ತು!!
Stanstad ಏರ್ಪೋರ್ಟ್ ತಲುಪುವಾಗ ರಾತ್ರಿ ಒಂದು ಗಂಟೆ, ಅಲ್ಲೇ ಏರ್ಪೋರ್ಟ್ನಲ್ಲಿ ಫ್ರಿಡ್ಜ್ ನಲ್ಲಿ ಇಟ್ಟಿರೋ sandwich ಕೊಕೊನಟ್ ವಾಟರ್ ತಗೊಂಡು ರಾತ್ರಿ ಜೈ ಅಂದ್ರು ನನ್ನ ಯೂರೋಪ್ ಸ್ನೇಹಿತೆಯರು. ನನ್ ಜೇವಮಾನದಲ್ಲೇ ಅಷ್ಟು ಕೆಟ್ಟದಾಗಿರೋ ಸ್ಯಾಂಡ್ವಿಚ್ ತಿಂದಿರಲಿಲ್ಲ ನಾನು "atleast ಅವನ್ ಅಲ್ಲಿ ಬಿಸಿ ಮಾಡ್ಕೊಂಡು ಆದರು ತಿಂತೀನಿ ಎಲ್ಲಾದ್ರೂ ಬಿಸಿ ಮಾಡಿ ಕೊಡ್ಸರೆ" ಅಂದ್ರೆ ಗೊಳ್ ಅಂತ ನಕ್ಕು "ಅಕ್ಕ, ಇಲ್ಲೆಲ್ಲಾ ನಿಂಗೆ ಇಂಡಿಯಾ ಥರ ಬಿಸಿ ಬಿಸಿ ಊಟ ಸಿಗಲ್ಲ ಸುಮ್ನೆ ತಿನ್ನು " ಅಂತ ಆಡಿಕೊಂಡಿದ್ರು. ಆವತ್ತು ರಾತ್ರಿ ಪ್ಯಾಕ್ಡ್ ಕೊಕೊನಟ್ ಜ್ಯೂಸು ನನ್ನ ರಾತ್ರಿ ಊಟವಾಗಿತ್ತು ಅಷ್ಟೇ, ತುಂಬಾ ಬೇಜಾರಲ್ಲೇ ಅಮ್ಮನಿಗೆ ಕಾಲ್ ಮಾಡಿ ಅಮ್ಮ ಇಲ್ಲೇನು ಊಟ ಸರಿ ಹೋಗ್ತಿಲ್ಲ ನಂಗೆ ಅಂತ ಬೇಜಾರಲ್ಲೇ ಹೇಳಿ ಮಲಗಿದೆ. ರಾತ್ರಿಯೆಲ್ಲ , ಹಸಿವೆ ಇಂದ ನಿದ್ದೆ ಇಲ್ಲ !! ತಿನ್ನಣ ಅಂದ್ರೆ ಮತ್ತದೇ ಸ್ಯಾಂಡ್ವಿಚ್ ಅಯ್ಯೋ ಬೇಡ ಅಂತ ನೀರ್ ಕೂಡದು ಮಲ್ಕೊಂಡೆ.
ಬೆಳಿಗ್ಗೆ ನನ್ನ ಗೆಳತೀ ಹೋಗಬೇಕಾದ ಪ್ಲಾನ್ ಚೇಂಜ್ ಮಾಡಿ ಮೊದಲು Barmingham ಹೋಗಿ ಆಮೇಲೆ ಉಳಿದ ಕಡೆ ಹೋಗಣ ಅಂದ್ಲು , ಮೊದಲೇ ಸರಿ ಊಟ ಇಲ್ದೆ ಬೆಂದು ಹೋಗಿರೋ ಜೀವಕ್ಕೆ ಪ್ಲಾನ್ ಯಾಕೆ ಚೇಂಜ್ ಅಂತ ಕೇಳಿದ್ರೆ ದೇವಸ್ಥಾನ ಇದೆ ಅಲ್ಲಿ ಅದಕ್ಕೆ ಅಲ್ಲಿ ಅಂತ ಹೇಳಿದ್ಲು, ಅಲ್ಲ ನಾನು ಈ ಟ್ರಿಪ್ ಮಾಡ್ತಿರೋದು ಇಂಗ್ಲೆಂಡ್ ನೋಡಕ್ಕೆ ತೀರ್ಥ ಯಾತ್ರೆ ಅಲ್ಲ ಕಣಕ್ಕ... ಮೊದಲೇ ನಾನು ಇಂಥದನ್ನೆಲ್ಲ ಇಷ್ಟ ಪಡಲ್ಲ ಇಲ್ಲಿ ಬಂದು ಗುಡಿ ಗುಂಡಾಂತರ ಅಂತ ಓಡಾಡಿಸ್ತೀಯಾ ನ ಒಲ್ಲೇ ಅಂತ ಜಗಳ ಶುರು ಮಾಡಿದೆ. ನನ್ನ ಬಿಟ್ಟು ಇನ್ನು ಮೂರು ಜನ ಹುಡುಗಿಯರು ದೈವ ಭಕ್ತರು ಹೋಗ್ಲೇ ಬೇಕು ಅಂತ ಹಠ ಹಿಡಿದರು, ಥೋ ಯುರೋಪ್ ಬಂದ್ರು ಇವ್ರೆಲ್ಲ ಇಷ್ಟೇನೆ ಅಂತ ಬೈಕೊಂಡು, ಇನ್ನೇನು ವಾಪಾಸ್ ಹೋಗಕ್ಕೆ ಅದೇನು ಬೆಂಗಳೂರ, ಒಲ್ಲದ ಮನಸ್ಸಿನಿಂದ ಹೋದೆ!
ಅದೋ ಪಕ್ಕ ಭಾರತದ ವೆಂಕಟರಮಣನ ತದ್ರೂಪ ದೇವಸ್ಥಾನ!! ಇದೇನ್ ವಿಶೇಷ ಅಂತ ಬಂದಿದಿರೇ ಇವೆಲ್ಲ ಗಲ್ಲಿಗೊಂದು ಇಲ್ವಾ ನಮ್ಮೂರಲ್ಲಿ, ಸರಿ ನೀವು ಕ್ಯೂನಲ್ಲಿ ನಿಂತ್ಕೊಂಡು ಮಂಗಳಾರತಿ, ಪ್ರದಕ್ಷಿಣೆ ಎಲ್ಲ ಮುಗಸ್ಕೊಂಡ್ ಬನ್ನಿ ನಾನು ಇಲ್ಲೇ ಕೂತಿರ್ತೀನಿ ಅಂತ ಅವರನ್ನು ಒಳಗೆ ಕಳ್ಸಿ ದೇವಸ್ಥಾನದ ಅಂಗಳದಲ್ಲಿ ಕೂತೆ. ಅಷ್ಟೊಂದು ಜನರ ಮಧ್ಯೆ ನಾವು ಇಂಗ್ಲೆಂಡ್ ನಲ್ಲಿ ಇದೀವ ಭಾರತ ದಲ್ಲಿದೀವ ಅನ್ನೋ ಕನ್ಫ್ಯೂಷನ್. ಥರಾವರಿ ಭಾರತದ ಅದರಲ್ಲೂ ತಮಿಳು ತೆಲುಗು ಕನ್ನಡ ಮಾತಾಡೋ ಅಮ್ಮಂದಿರು ಮಕ್ಕಳನ್ನು ತಮ್ಮ ಭಾಷೆಯಲ್ಲೇ ಕರೆದು ಎಂತದ್ದೋ ಹೇಳ್ತ ಇದ್ರು, ಪರವಾಗಿಲ್ವೇ ಎಲ್ಲ ಅವರವರ ಭಾಷೆ ಚೆನ್ನಾಗೆ ಮಾತಾಡ್ತಾರೆ ಅನ್ಕೊಂಡು ದೇವಸ್ಥಾನ ಎಷ್ಟು ಕ್ಲೀನ್ ಇದೆಯಲ್ಲ, ಅಲ್ಲ ಈ ಜನ ಇಂಡಿಯಾ ಬಿಟ್ಟ ಬರೋದಂತೆ ಇಲ್ಲಿ ಬಂದು ದೇವಸ್ಥಾನ ಕಟ್ಸಿ ಸಂಭ್ರಮಿಸೋದಂತೆ, ಅಷ್ಟು ದೈವ ಭಕ್ತಿ ಇರೋವ್ರು ಇಲ್ಯಾಕ್ ಬರ್ಬೇಕು ಅಂತ ಲಾಜಿಕ್ ಇಲ್ಲದ ಪ್ರಶ್ನೆಗಳನ್ನು ಕೇಳ್ಕೊಂಡು ಕೂರಲು ನನ್ನ ಬಿಟ್ಟು, ದೇವರ ಹತ್ತಿರ ದರ್ಶನ ಪಡ್ಕೊಂಡು ಬರಕ್ಕೆ ಹೋದವ್ರು, ವಾಪಾಸ್ ಬಂದು, ಬಾ ಈವಾಗ ನಿಂಗೊಂದ್ ಸರ್ಪ್ರೈಸ್ ಇದೆ ಅಂದ್ರು!! ಅಲ್ಲ ಕಣ್ರೆ ಲಂಡನ್ ಬ್ರಿಜ್ ತೋರ್ಸಿ ಅಂದ್ರೆ ಯಾಕೆ ಹಿಂಗ್ ಜೀವ್ ತಿನ್ಕೊಂಡು ಈ ದೇವ್ರು ದೇವಸ್ಥಾನ ಅಂತ ಟೈಮ್ ವೇಸ್ಟ್ ಮಾಡ್ತಿದಿರೆ ನಂಗ್ ನಿಜ ಇಷ್ಟ ಆಗ್ತಿಲ್ಲ ನಡೀರಿ ಮೊದಲು ಇಲ್ಲಿಂದ ಅಂದೇ!!
"ಇವತ್ತು ಇಲ್ಲೇ ಪ್ರಸಾದ ಇದೆ ಇಲ್ಲೇ ಊಟ ಮಾಡ್ಕೊಂಡು ಹೋಗಣ, ಎರಡು ವಾರದಿಂದ ಬಿಸಿ ಬಿಸಿ ತಿನ್ಬೇಕು ಅಂತಿದ್ಯಲ ಅದ್ಕೆ ಇಲ್ಲಿ ಕರ್ಕೊಂಡ್ ಬಂದೆ, ನೋಡು ಈವಾಗ ಪಕ್ಕ ಸೌತ್ ಇಂಡಿಯನ್ ಫುಡ್ ಸಿಗುತ್ತೆ" ಅಂದ್ಲು, ದೇವರು ಪ್ರತ್ಯಕ್ಷ ಆಗಿದ್ರೆ ಅಷ್ಟು ಖುಷಿ ಆಗ್ತಿತ್ತೋ ಇಲ್ವೋ ಗೊತ್ತಿಲ್ಲ, ಫುಲ್ಲು ಖುಷಿ ಆಗಿ "ಹೌದಾ!! ಸಂಜೆ ಆದ್ರೂ ಪರವಾಗಿಲ್ಲ ಪ್ರಸಾದ ತಿಂದುಕೊಂಡೆ ಹೋಗಣ"?! ಅಂದೇ !! ಅಷ್ಟರಲ್ಲೇ ಪ್ರಸಾದ sponsor ಮಾಡಿದ ತೆಲುಗು ಮಾತಾಡೋ ಜನ ಬಂದು ಬನ್ನಿ ಅಂತ ಊಟದ ಹಾಲಿಗೆ ಕರ್ಕೊಂಡು ಹೋದ್ರೆ ಘಮ್ಮೆನೂ ಸಾಂಬಾರ್ ಪರಿಮಳ, ಆಹಾ ಈ ಜನುಮವೇ ಅನ್ಕೊಂಡು ಓಡೋಡಿ ಹೋಗಿ ತಟ್ಟೆ ತಗೊಂಡು ಎಲ್ಲರಿಗಿಂತ ಮೊದಲು ನಿಂತ್ಕೊಂಡೆ, ಅನ್ನ -ಸಾಂಬಾರ್, ಪಾಯಸ , ಕೋಸಂಬ್ರಿ ಮತ್ತು ಮೆಣಸಿನ ಬಜ್ಜಿ ಇಷ್ಟೇ ಊಟ ಇದ್ದದ್ದು, ಆ ದಿನದ ಮಟ್ಟಿಗೆ ಅದು ಮೃಷ್ಟಾನ್ನ ಭೋಜನ!! ಅಷ್ಟೇ ಏಕೆ ಈವತ್ತಿಗೂ ಪ್ರತಿ ತುತ್ತು ನೆನಪಿಸ್ಕೊಳ್ಳುವಂತ ಅನುಭವ ಅದು!! ಬಿಸಿ ಬಿಸಿ ಅನ್ನ ಸಾಂಬಾರ್ ಕಲಸಿಕೊಂಡು ಬಾಯಿಗಿಡುವಾಗ literally ಕಣ್ಣಲ್ಲಿ ನೀರಿತ್ತು!! ಹತ್ತು ದಿನ ನಮ್ಮ್ ಊಟ ಸಿಗದೇ ಇರೋದಕ್ಕೆ ಹಿಂಗಾಡ್ತೀವಿ, ಒಂದು ಹೊತ್ತಿಗೂ ಒಳ್ಳೆ ಊಟ ಇಲ್ಲದೆ ಒದ್ದಾಡೋ ಜನರ ಪರಿಸ್ಥಿತಿ ಹೇಗೆ? ಓಡಿ ಹೋಗಿ ಪ್ಲಾನ್ ಚೇಂಜ್ ಮಾಡಿದ ಗೆಳತಿನ ತಬ್ಬಿಕೊಂಡು "ಥ್ಯಾಂಕ್ಸ್, ಸಾರೀ ಕಣೆ ಜಗಳ ಮಾಡಿದ್ದಕ್ಕೆ "ಅಂತ ಹೇಳ್ದೆ . ನಿನ್ನೆ ನೀನು ಒದ್ದಾಡಿದ್ದು ನೋಡೀನೇ ನಾವು ಮೂರೂ ಜನ ಡಿಸೈಡ್ ಮಾಡಿ ಇಲ್ಲಿ ಬಂದ್ವಿ, ಸಧ್ಯ ನಿಂಗೆ ಈ ಜಾಗ ಬಿಟ್ರೆ ಬೇರೆಲ್ಲೋ ಇಂಡಿಯನ್ ಫುಡ್ ಸಿಗಲ್ಲ ಅಂತ, ನೀನು ನೋಡಿದ್ರೆ ನಮ್ಮನ್ನೇ ಬೈಕೊಂಡು ಕೂತಿದ್ದೆ , ಅದೆಷ್ಟು ಖುಷಿಯಲ್ಲಿ ಊಟ ಮಾಡಿದೆ ಅಂದ್ರೆ ನಾವು ಊಟ ಮಾಡೋದನ್ನ ಬಿಟ್ಟು ನಿನ್ನೆ ನೋಡ್ತಾ ಕೂತಿದೀವಿ ಅಂತ ಅಂದ್ರು!
ಇಷ್ಟೊಂದು ಪ್ರಿವಿಲೇಜ್ ಗಳ ಮಧ್ಯೆ ನಮ್ಮ ಗೊಣಗಾಟ ಇರುತ್ತಲ್ಲ ಇಂಥದರ ಮಧ್ಯೆ ಈ ದೇವರು ಯಾಕೆ ಈ ದೇವಸ್ಥಾನ ಯಾಕೆ ಅಂತ ಸೊಕ್ಕು ಬೇರೆ ನಂದು, ಈ ದೇವಸ್ಥಾನ ಇರ್ಲಿಲ್ಲ ಅಂದ್ರೆ ತಿಂಗಳ ಗೆಸ್ಟ್ ಆಗಿ ಬಂದ ನನ್ನಂಥವರಿಗೇನು ತೊಂದ್ರೆ ಇಲ್ಲ, ಭಾರತ ಬಿಟ್ಟು ಬರುವ ಅನೇಕ ಸ್ಟೂಡೆಂಟ್ಸ್ ವೀಸಾ ಮಕ್ಕಳಿಗೆ ಎಷ್ಟೊಂದು ಉಪಯೋಗಕರ ಅನ್ನ ದಾಸೋಹ ಅಲ್ವ ಇದು? ಎಲ್ಲದರಲ್ಲೂ ಲಾಜಿಕ್ ಹೊಡ್ಕೋ ನನ್ನ ಕೆಟ್ಟ ಬುದ್ಧಿಗೆ ಅಂತ ನನ್ನ ನಾನೇ ಬೈಕೊಂಡೆ!! ಅದೇಕೆ ಇದೇಕೆ ಅಂತ ಪ್ರಶ್ನೆ ಮಾಡೋ ಯಾರೆಲ್ಲ ಈ ರೀತಿ ಅನ್ನ ದಾಸೋಹ ಮಾಡ್ತಾರೋ ನಂಗೆ ಗೊತ್ತಿಲ್ಲ, ಆದರೆ ದೇವರ ದೇವಸ್ಥಾನದ ಹೆಸರಲ್ಲಿ ನಡೆಯೋ ಇಂಥ ದಾನ ಧರ್ಮದ ಕಾರ್ಯಗಳು ಎಷ್ಟೋ ಜನರಿಗೆ ಸಹಾಯವಾಗುತ್ತೆ, ಆ ಹೊತ್ತಿಗಿನ ಹಸಿವೆಯನ್ನು ತಣಿಸಿರುತ್ತೆ, ಅಲ್ಲೋ ಲಾಜಿಕ್ ಹುಡ್ಕಿ , ಅವ ದಾನ ಮಾಡಿದವ ಎಂಥ ವ್ಯಕ್ತಿ ಆವಾ ಸಂಪಾದನೆ ಮಾಡಿದ ರೀತಿ ಎಂತದು? ಅನ್ನೋ ಒಣ ಚರ್ಚೆಗೆ ಅರ್ಥವಿಲ್ಲ, ಹಸಿದವನ ಹೊಟ್ಟೆ ತುಂಬಿಸಿದವ ಆ ಹೊತ್ತಿನ ದೇವರು ಅಷ್ಟೇ!! ಇನ್ನೆಲ್ಲ ಕೆಲ್ಸಕ್ಕೆ ಬಾರದ ತರ್ಕ dustbin ಸೇರಲಿ ಅಷ್ಟೇ!!

No comments:
Post a Comment