Total Pageviews

Sunday, July 10, 2011

ಚರ್ಚೆ

''ಆರಂಭದಲ್ಲೇ ಆಂಗ್ಲ ಮಾಧ್ಯಮದಲ್ಲಿ ಅರೆಯುವುದು ಅವೈಜ್ನ್ಯಾನಿಕ'' ಎಂಬ ಶೀರ್ಷಿಕೆಯಡಿ ಪ್ರಕಟವಾದ ಡಾ. ಎಸ. ಎಲ್  ಭೈರಪ್ಪ ನವರ ಚರ್ಚೆ ಲೇಖನಕ್ಕೆ ನನ್ನ ಅನಿಸಿಕೆ.

                       ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿ ಮಗುವು ತನ್ನ ಅಸ್ತಿತ್ವಕ್ಕಾಗಿ ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಆಂಗ್ಲ ಅಥವಾ ಕನ್ನಡ ಮಾಧ್ಯಮ  ಅನ್ನುವುದಕ್ಕಿಂತ, ಗ್ಲೋಬಲ್  ಲಾಂಗ್ವೇಜ್  ಎಂದೇ ಕರೆಸಿಕೊಳ್ಳುವ ಭಾಷೆಯ ಕಲಿಕೆ ಮತ್ತು ತಿಳಿವಳಿಕೆ ಆರಂಭದಲ್ಲಿ ಅವಶ್ಯಕವಾಗಿ ಕಲಿಸಲೇಬೇಕಾದ ಅನಿವಾರ್ಯತೆ ಇದೆ. ನಮ್ಮ ಮಾತೃ ಭಾಷೆ ಕನ್ನಡ, ಹಾಗಾಗಿ ಮಗು ಮಾತು ಕಲಿಯುವ ಮುನ್ನ ಪ್ರಪ್ರಥಮವಾಗಿ ಹೇಳುವ ಪದವೇ ಅಮ್ಮ.(ಅಪ್ಪ-ಅಮ್ಮ ಆಂಗ್ಲ ವ್ಯಾಮೊಹಿಗಳು ಇರದಿದ್ದರೆ). ನಮ್ಮ ಮಾತೃ ಭಾಷೆಯನ್ನು ಕಲಿಯಲು ನಾವೆಂದು ವ್ಯಾಕರಣದ ಅಧ್ಯಾಯ ಮಾಡುವ ಅವಶ್ಯಕತೆ ಇಲ್ಲ. ಮಾತೃ ಭಾಷೆಯನ್ನು ಸುಲಲಿತವಾಗಿ ಮಾತನಾಡಲು ಬಂದ ಮೇಲೆ ತಾನೆ ಶಾಲೆಯಲ್ಲಿ ವ್ಯಾಕರಣದ ಪಾಠ  ಹೇಳಿ ಕೊಡುವುದು? ಹಾಗೆಯೇ ಯಾವುದೇ ಭಾಷೆಯಾಗಲಿ ಅಥವಾ ಆಂಗ್ಲ ಭಾಷೆಯಾಗಲಿ ಕೇವಲ ಪಾಠ ಹೇಳಿಕೊಡುವುದರಿಂದ ಬರುವಂಥದಲ್ಲ. ಹೀಗಿರುವಾಗ ಆರಂಭದಲ್ಲಿಯೇ ಮಕ್ಕಳಿಗೆ ಆಂಗ್ಲದಲ್ಲಿ ಹೇಳಿಕೊಡುವುದರಿಂದ ಆಗುವ ಹಾನಿ ಏನು?

                     ನಾನು ಮೊದಲಿನಿಂದ ಆಂಗ್ಲ ಮಾಧ್ಯಮದಲ್ಲೇ ಓದಿದವಳು, ಹಾಗಂತ ನನಗೆ ಕನ್ನಡ ಬರೆಯಲು, ಓದಲು ಬರುವುದಿಲ್ಲವೇ? ನನ್ನ ಹೈ ಸ್ಕೂಲ್  ದಿನಗಳಿಂದಲೇ ಭೈರಪ್ಪನವರು ನನ್ನ ನೆಚ್ಚಿನ ಲೇಖಕರು. ಇವತ್ತಿಗೂ ಕನ್ನಡ ಕೃತಿಗಳನ್ನ ಓದುತ್ತೇನೆ. ಮತ್ತು ಕನ್ನಡದಲ್ಲೇ ಬ್ಲಾಗ್ ಬರೆಯುತ್ತೇನೆ.ನನ್ನ ಹಾಗೆ ಇಂಜಿನಿಯರಿಂಗ್ ಮಾಡಿದ  ಅನೇಕ ಸ್ನೇಹಿತ-ಸ್ನೇಹಿತೆಯರು, ಮೊದಲಿನಿಂದಲೂ 
 ಆಂಗ್ಲ ಶಾಲೆಯಲ್ಲೇ ಓದಿದ್ದರೂ, ಆಂಗ್ಲಕ್ಕಿಂತ ಕನ್ನಡದ ಮೇಲೆಯೇ ಜಾಸ್ತಿ ವ್ಯಾಮೋಹ ಇರುವುದರಿಂದಲೇ ಇವತ್ತು ಕನ್ನಡ ಬ್ಲಾಗರ ಗಳ  ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಅಲ್ಲಿಗೆ ಆಂಗ್ಲ ಮಾಧ್ಯಮದಲ್ಲಿ ಓದುವ ಮಕ್ಕಳಿಗೆ ಕನ್ನಡದ ಜ್ನ್ಯಾನ ಕಡಿಮೆ ಎನ್ನುವ ಮಾತು ಅಪ್ರಸ್ತುತ!.

                     ಇನ್ನು ಮೊದಲಿನಿದ ಕನ್ನಡ ಮಾಧ್ಯಮದಲ್ಲಿ ಕಲಿತು, ಒಮ್ಮೆಲೇ ಪಿ.ಯು .ಸಿ  ಗೆ ಆಂಗ್ಲ ಮಾಧ್ಯಮಕ್ಕೆ ಸೇರಿದ ವಿಧ್ಯಾರ್ಥಿಗಳ ಗೋಳು ಕೇಳಿ ನೋಡಿ, ಅವರು ಹೇಳುವ ಒಂದೇ ಮಾತು ನಾವು ಮೊದಲಿನಿದ ಇಂಗ್ಲಿಷ್ ಮಾಧ್ಯಮದಲ್ಲೇ ಕಲಿಯಬೇಕಿತ್ತು ಅನ್ನುವುದು. ಕನ್ನಡ ಮಾಧ್ಯಮದಲ್ಲಿ ಓದಿದವರಿಗೆಲ್ಲ ಇಂಗ್ಲಿಷ್ ಬರುವುದಿಲ್ಲ್ವೆಂದಲ್ಲ, ಅಲ್ಲಿಯೂ ಆಂಗ್ಲ ಮಾಧ್ಯಮದವರನ್ನು ಮೀರಿಸುವ ಹಾಗೆ ಮಾತನಾಡುವ ವಿಧ್ಯಾರ್ಥಿಗಳು ಇರಬಹುದು, ಆದರೆ ಮೆಜೋರಿಟಿ ವಿಧ್ಯಾರ್ಥಿಗಳಿಗೆ ಅದು ಕಷ್ಟವೇ. ಕನ್ನಡ ಮಾಧ್ಯಮದ ವಿಧ್ಯಾರ್ಥಿಗಳು ಬರೆಯಲು ಮತ್ತು ಅರ್ಥಮಾಡಿಕೊಳ್ಳಲು ಯಾವ ತೊಂದರೆಯನ್ನು ಅನುಭವಿಸುವದಿಲ್ಲ, ಆದರೆ ಮಾತನಾಡಲು ಮಾತ್ರ ಹಿಂಜರಿಕೆ. ಕರ್ನಾಟಕದಲ್ಲಿದ್ದು ಕಡ್ಡಾಯವಾಗಿ ಕನ್ನಡದಲ್ಲಿಯೇ ಕಲಿಯಬೇಕು, ಕನ್ನಡದಲ್ಲಿಯೇ ಮಾತನಾಡಬೇಕು ಎಂದು ಹೇಳುವ ಅದೆಷ್ಟು ಜನ ಬುದ್ಧಿ  ಜೀವಿಗಳು ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಓದಿಸಿದ್ದಾರೆ? ವ್ರತ್ತಿ ಪರ ಕೋರ್ಸ್  ತೆಗುದುಕೊಂಡ ವಿಧ್ಯಾರ್ಥಿಗಳಿಗೆ, ಅದರಲ್ಲೂ ಇಂಜಿನಿಯರಿಂಗ್ ಓದುವ ವಿಧ್ಯಾರ್ಥಿಗಳನ್ನು ಕಂಪನಿ ಗಳು  ಆರಿಸಿಕೊಳ್ಳುವಾಗ  ಇಂಗ್ಲಿಷ್ ಭಾಷೆಯೇ ಮಾನದಂಡ ವಾಗಿರುವ, ಇಂಗ್ಲಿಷ್ ಮಾತನಾಡಲು ಬಾರದ ಒಂದೇ ಕಾರಣಕ್ಕೆ, ನಾಲ್ಕು ವರ್ಷ ಪಟ್ಟ ಕಷ್ಟ ವ್ಯರ್ಥ ವಾಗಬೇಕೆ?

                      ಯಾವುದೇ ಭಾಷೆಯ ಕಲಿಕೆ ಇಂದ ಅಥವಾ ಆರಂಭದಿಂದಲೇ ಅದರ ಅಧ್ಯಯನದಿಂದ ಕನ್ನಡಕ್ಕೆ ಕುತ್ತು ಬರುವ ಹಾಗಿದ್ದರೆ, ನಮ್ಮೆಲ್ಲ ಕನ್ನಡ ದಿನಪತ್ರಿಕೆಗಳು, ಕನ್ನಡ ಪುಸ್ತಕಗಳು, ಕಾದಂಬರಿಗಳು,ಹಾಗೂ ಟೀವಿ ಚನ್ನೆಲ್ಲುಗಳು ಎಂದೋ ದಿವಾಳಿ ಎದ್ದು ಹೋಗಬೇಕಿತ್ತಲ್ಲವೇ? ಯಾವ ಮಾಧ್ಯಮದಲ್ಲಿ ಓದಿಸಿದರೂ ಮನೆಯಲ್ಲಿ ಮಾತೃ ಭಾಷೆ ಕನ್ನಡ ಆಗಿರುವುದರಿಂದ, ಆಂಗ್ಲವೇ ಇರಲಿ ಇನ್ನ್ಯಾವ ಭಾಷೆಯೇ ಇರಲಿ ಮಕ್ಕಳು ಅದನ್ನ ಕನ್ನಡಕ್ಕೆ ಅನುವಾದ ಮಾಡಿಕೊಂಡೆ ಕಲಿಯುತ್ತಾರಾದರಿಂದ, ಕನ್ನಡಕ್ಕಂತೂ  ಯಾವ ಕುತ್ತೂ ಇಲ್ಲ.

                      ಯಾವ  ಮಾಧ್ಯಮದಲ್ಲಿ ಓದುತ್ತಿದ್ದರೂ ಮಕ್ಕಳಿಗೆ ದಿನಪತ್ರಿಕೆಗಳನ್ನು ಓದಿಸಬೇಕು.ಕನ್ನಡ ಸಾಹಿತ್ಯದಬಗ್ಗೆ ಆಸಕ್ತಿ ಬೆಳೆಸಬೇಕು  ಮತ್ತು ಕನ್ನಡದ  ಅಪ್ರತಿಮ, ಲೇಖಕ, ಸಾಹಿತಿ ಹಾಗೂ ಕವಿಗಳ ಕೃತಿಗಳನ್ನು ಬಿಡುವಿನ ವೇಳೆಯಲ್ಲಿ  ಓದುವಂತೆ ಪ್ರೇರೇಪಿಸಬೇಕು.ಇದನ್ನು ಬಿಟ್ಟು ಕೇವಲ ಕನ್ನಡ ಕಲಿಸಿ ಕನ್ನಡ ಕಲಿಸಿ ಎಂದು ಹೇಳುವುದರಿಂದ, ಕನ್ನಡ ಕೇವಲ ಒಂದು ವಿಷಯವಾಗಿ ಉಳಿದು ಹೋಗುತ್ತದೆಯೇ ಹೊರತು ಅದರಿಂದಾಗುವ ಲಾಭ ಏನೂ ಇಲ್ಲ.ಕನ್ನಡ ಮಾಧ್ಯಮದಲ್ಲಿ ಕಲಿಯುವದಕ್ಕು ಮಕ್ಕಳು ಕನ್ನಡದ ಮೇಲೆ ಆಸಕ್ತಿ ಬೆಳೆಸಿಕೊಲ್ಲುವುದಕ್ಕು ಸಂಭಂದವಿಲ್ಲ. ಅದೆಷ್ಟು ಜನ ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳಿಗೆ ಕನ್ನಡ ಸಾಹಿತ್ಯದ ಅರಿವಿದೆ? ಕನ್ನಡ ಮಾಧ್ಯಮದಲ್ಲಿ ಕಲಿತ ಮಾತ್ರಕ್ಕೆ ಕನ್ನಡವನ್ನು ಉಳಿಸಲು ಸಾಧ್ಯವೇ? ಮಾಧ್ಯಮ ಯಾವುದಾದರೇನು? ಆಸಕ್ತಿ ಬೆಳೆಸಿ ಉಳಿಸುವುದು ನಮ್ಮ ಕೈಯಲ್ಲಿದೆ. 

16 comments:

  1. Nicely Written
    Construction of English medium school is not problem..
    Until people have Kannada “Heart..”

    ReplyDelete
  2. ಕನ್ನಡ ಭಾಷೆಯು ಶಾಲೆಯಲ್ಲಿ ಕೇವಲ ವಿಷಯ ಆಗಿ ಉಳಿಯದೆ ಇದೊಂದು ಭಾಷೆ ಆಗಿ ಉಳಿಯಬೇಕು ಮತ್ತು ಬೆಳೆಯಬೇಕು.. ಅಲ್ಲದೆ ಇದು ಕೇವಲ ಕನ್ನಡ ಮಾಧ್ಯಮದವರ ಹೊಣೆ ಅಲ್ಲ...ಪ್ರತಿಯೊಬ್ಬ ಕನ್ನಡಿಗನ ಹೊಣೆ ಮತ್ತು ಇಡೀ ಕನ್ನಡ ಜನತೆಯ ಅವಶ್ಯ ಮತ್ತು ಅಗತ್ಯ !!!

    ReplyDelete
  3. ಎಲ್ಲರಿಗೂ ಕಡ್ಡಾಯವಾಗಿ ಇಂಗ್ಲೀಷ್ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಬೋಧಿಸಬೇಕಾದ ಅಗತ್ಯವೇನೋ ಗೊತ್ತಾಗುವುದಿಲ್ಲ. ಪ್ರಾಥಮಿಕ ಶಿಕ್ಷಣ ಪಡೆದ ಎಲ್ಲರೂ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುವುದು ಸಾಧ್ಯವಿಲ್ಲ ಮತ್ತು ಮಾಡುವುದೂ ಇಲ್ಲ. ಪ್ರಾಥಮಿಕ ಶಿಕ್ಷಣ ಪಡೆದವರು ಎಲ್ಲರೂ ಇಂಜಿನಿಯರಿಂಗ್, ಕಾಲ್ ಸೆಂಟರ್, ಮ್ಯಾನೇಜ್ಮೆಂಟ್ ಮೊದಲಾದ ಇಂಗ್ಲಿಷ್ ಭಾಷೆಯಲ್ಲಿ ಸಂಹವನ ಕೌಶಲ ಬೇಡುವ ಉದ್ಯೋಗ ಮಾಡಲು ಸಾಧ್ಯವಿಲ್ಲ. ಹೀಗಿರುವಾಗ ಎಲ್ಲರೂ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯಬೇಕೆಂಬ ಭ್ರಮೆಗೆ ಒಳಗಾಗುವುದು ಒಂದು ಸಮೂಹ ಸನ್ನಿಯೇ ಹೊರತು ಮತ್ತೇನಲ್ಲ. ಪ್ರಾಥಮಿಕ ಶಿಕ್ಷಣ ಪಡೆದ ಎಷ್ಟೋ ಜನ ಪ್ರೌಢ ಶಾಲೆ ಹಂತದಲ್ಲಿ, ಇನ್ನಷ್ಟು ಜನ ಪಿ. ಯು. ಸಿ. ಹಂತದಲ್ಲಿ ಶಿಕ್ಷಣ ಮೊಟಕುಗೊಳಿಸುತ್ತಾರೆ. ಇವರೆಲ್ಲರಿಗೂ ಇಂಗ್ಲಿಷ್ ಭಾಷೆಯ ಸಂವನ ಕೌಶಲ ಬೇಕಾಗುತ್ತದೆಯೇ? ಹೀಗಿರುವಾಗ ಎಲ್ಲರೂ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯಲೆಬೇಕೆಂಬ ಚಪಲ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತರೆ ಹೆಚ್ಚು ಗೌರವ ಎಂಬ ಹುಸಿ ಭ್ರಾಂತಿಯ ಸಾಮಾಜಿಕ ಸನ್ನಿವೇಶದಿಂದ ಹುಟ್ಟಿ ಕೊಂಡದ್ದು ಎಂದು ಕಾಣುತ್ತದೆ.

    ReplyDelete
  4. cool ashu lyk it ............... ??? keep on

    ReplyDelete
  5. ನಮ್ಮದೂ ಸಹಮತವಿದೆ.... ಬರಹ ಚೆನ್ನಗಿದೆ...

    ReplyDelete
  6. ಇಲ್ಲಿ ನೀವು ಎರಡು ವಿಶ್ಯಗಳನ್ನು ಬೆರಸಿದ್ದೀರ.

    ೧. ಇಂಗ್ಲಿಶ್ ಮಾದ್ಯಮ(ಒಯ್ಯುಗೆ)ಮತ್ತು ಇಂಗ್ಲಿಶನ್ನು ಒಂದು ನುಡಿಯಾಗಿ ಕಲಿಯುವುದು
    ಇಂಗ್ಲಿಶ್ ನ್ನು ಒಂದು ನುಡಿಯಾಗಿ ಚೆನ್ನಾಗಿಯೇ ಕಲಿಯಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ನಾವು ತುಂಬ ನಮ್ಮತನವನ್ನು ಇಲ್ಲವೆ ಮಾಡುಗತನವನ್ನು(creativity) ತೋರಿಸಬೇಕೆಂದಿದ್ದರೆ ಅದು ನಮ್ಮ ತಾಯ್ನುಡಿಯ ಒಯ್ಯುಗೆಯ ಮೂಲಕ ಮಾತ್ರ ಸಾಧ್ಯ.
    ೨. ಯೂರೋಪಿನ ನಾಡುಗಳು, ಇಸ್ರೇಲ್, ಚೀನ, ಕೊರಿಯ ಇವರೆಲ್ಲ ತಮ್ಮ ತಮ್ಮ ತಾಯ್ನುಡಿಗಳಲ್ಲೇ ಮೇಲ್ಮಟ್ಟದ ಕಲಿಕೆಯನ್ನು ಮಾಡಿ ಇಂದು ಹೆಚ್ಚಿನದನು ಸಾದಿಸಿದ್ದಾರೆ. ಸಾದಿಸುತ್ತಲಿದ್ದಾರೆ. ಅಲ್ಲಿ ಸಾದ್ಯವಾಗುವುದು ಇಲ್ಲಿ ಯಾಕೆ ಸಾದ್ಯವಿಲ್ಲ.
    ೩. ನೀವು ಕನ್ನಡವನ್ನು ’ಜುಟ್ಟಿಗೆ ಮಲ್ಲಿಗೆ ಹೂವು’ ಆಗಿ ನೋಡುತ್ತಿದ್ದೀರ. ಅದನ್ನು ಹೊಟ್ಟೆಗೆ ಹಿಟ್ಟಾಗಬಹುದೆಂಬ ನಂಬಿಕೆ ನಿಮಗಿಲ್ಲ ಅಂತ ಅನ್ನಿಸುತ್ತಿದೆ.
    ೪. ಯೊನೆಸ್ಕೊ ಕೂಡ ಎಲ್ಲ ಮಟ್ಟದ ಕಲಿಕೆ ತಾಯ್ನುಡಿಯಲ್ಲಾದರೆ ಒಳ್ಳೆಯದು ಅಂತ ಯಾಕೆ ಹೇಳಿದ್ದಾರೆ.
    ೫. ಜಾಗತೀಕರಣ ಮತ್ತು ಪೈಪೋಟಿಯಿಂದ ಕೂಡಿದ ಜಗತ್ತಿನಲ್ಲಿ ಇಂಗ್ಲಿಶ್ ಮಾಧ್ಯಮ ಬೇಕು ಅಂತ ಹೇಳುತ್ತಿದ್ದೀರ. ಆದರೆ ಜಾಗತೀಕರಣ ಅಂದರೆ ಬರೀ ’ಪಡೆ’ಯುವುದು ಮಾತ್ರ ಅಲ್ಲ ’ಕೊಡು’ವುದು ಕೂಡ. ಹಾಗೆ ’ಕೊಡು’ವ ದಾರಿಗಳು ನಮಗೆ ನಮ್ಮ ತಾಯ್ನುಡಿಯಲ್ಲಿ ಕಲಿಕೆಯಾದಾಗ ಮಾತ್ರ ಸಿಗಬಲ್ಲವು.

    ReplyDelete
  7. ಇಂಗ್ಲೀಶ್ ಇವತ್ತಿನ ದಿನ ಹಲವಾರು ಬಗೆಯ ಒಳಿತನ್ನು ಹೊಂದಿದೆ. ಇಂಗ್ಲೀಷಿನ ಅರಿಮೆ ಇರುವುದು ಒಳಿತು.
    ಮಾಧ್ಯಮವಾಗೆ ಇಂಗ್ಲೀಷನ್ನು ಅಳವಡಿಸಿಕೊಂಡರೆ, ಎಲ್ಲರ ಕಲಿಕೆಯೂ ಚೆನ್ನಾಗಿ ಆಗುವುದಿಲ್ಲ.
    ಇದನ್ನು, ಯುನೆಸ್ಕೋ ಸಂಸ್ಥೆ ಕೂಡ ಹೇಳುತ್ತೆ. ತಾಯ್ನುಡಿಯಲ್ಲಿ ಕಲಿಕೆ ನಡೆದರೆ, ಎಲ್ಲ ಮಕ್ಕಳಿಗೂ ಅನುಕೂಲ ಎಂಬುದನ್ನು ಯುನೆಸ್ಕೋ ಹೇಳುತ್ತೆ.
    ಯುನೆಸ್ಕೋ ಸಂಸ್ಥೆಯು ಒಪ್ಪಿ ಪ್ರತಿಪಾದಿಸುವ ಕಲಿಕೆ ಏರ್ಪಾಡಿನ ಬಗ್ಗೆ ಇಲ್ಲಿ ತಿಳಿದುಕೋಬಹುದು: (http://unesdoc.unesco.org/images/0014/001466/146632e.pdf)

    ಹಾಗಂತ, ಮಕ್ಕಳಿಗೆ ಇನ್ನೊಂದು ಬಾಷೆ ಕಲಿಸಬೇಡಿ ಎಂದು ಹೇಳುತ್ತಿಲ್ಲ. ಇಂಗ್ಲೀಷನ್ನು ಒಂದು ಬಾಷೆಯನ್ನಾಗಿ ಕಲಿಸೋದು ಒಳ್ಳೇದು.
    ಯಾವುದೇ ಬಾಷೆ ಕಲಿಸುವಾಗ, ಮೊದಲು ಅದನ್ನಾಡಲು ಕಲಿಸಿ, ಆಮೇಲೆ ಓದಲು ಬರೆಯಲು ಕಲಿಸುವುದು ತಕ್ಕ ದಾರಿ ಎಂದು ತಜ್ಞರು ಹೇಳುತ್ತಾರೆ.
    ನಮ್ಮ ಕನ್ನಡ ಮಾಧ್ಯಮ ಶಾಲೆಗಳಲ್ಲಿ, ಮೊದಲು ಇಂಗ್ಲೀಷನ್ನು ಬರೆಯಲು, ಓದಲು ಕಲಿಸತೊಡಗುತ್ತೇವೆ. ಇದು ಅವೈಜ್ಞಾನಿಕ ಮಾದರಿ. ಹಂಗಾಗಿ, ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿತ ಹೆಚ್ಚಿನ ಮಕ್ಕಳ ಇಂಗ್ಲೀಶ್ ಅರಿಮೆ ಸಾಕಷ್ಟು ಇರೋದಿಲ್ಲ.

    ಇನ್ನು, ಪಿ.ಯು.ಸಿ ಗೆ ಬಂದಾಗ ವಿದ್ಯಾರ್ಥಿಗಳಿಗೆ ಆಗುವ ತೊಂದರೆಗಳ ಬಗ್ಗೆ ನೀವು ಹೇಳಿರೋದು ಸರಿಯಾಗೇ ಇದೆ.
    ನಮ್ಮಲ್ಲಿ 'ಮೇಲ್ಮಟ್ಟದ ಕಲಿಕೆ' ಕನ್ನಡದಲ್ಲೇ ನಡೆಸಲು ಸಾಧ್ಯವಿಲ್ಲದಂತ ಪರಿಸ್ಥಿತಿ ಇವತ್ತಿದೆ. 'ಮೇಲ್ಮಟ್ಟದ ಕಲಿಕೆಯೂ' ಕನ್ನಡದಲ್ಲಿ ನಡೆಸಲು ಸಾಧ್ಯವಾಗುವಂತ ಏರ್ಪಾಡು ಮಾಡಬೇಕಾದ್ದು ನಮ್ಮ ಸರಕಾರ.
    ನಮ್ಮ ಸರ್ಕಾರವು ಆ ನಿಟ್ಟಿನಲ್ಲಿ ದುಡಿಯದೇ ಸುಮ್ಮನೆ ಕುಳಿತಿದೆ.
    ಇವತ್ತಿನ ದಿನ ಬೆಳೆದು ನಿಂತ ದೇಶಗಳೆಲ್ಲಾ 'ಮೇಲ್ಮಟ್ಟದ ಕಲಿಕೆಯನ್ನೂ' ತಮ್ಮ ತಾಯ್ನುಡಿಯಲ್ಲೇ ಮಾಡುತ್ತಾರೆ.
    ಹಾಗಾಗಿ, ಆ ದೇಶಗಳ ಹೆಚ್ಚಿನ ಜನರು ಚೆನ್ನಾಗಿ ಕಲಿತವರಾಗಿದ್ದಾರೆ. ಅವರಿಗೆ, ವಿಷಯ ಅರಿಯಲು ಇನ್ನೊಂದು ಬಾಷೆ ಕಲಿಯುವ ಕೆಲಸ ಇಲ್ವಲ್ಲ.
    ನಮ್ಮಲ್ಲೂ, ಅಂತದೇ ಏರ್ಪಾಡನ್ನು ಕಟ್ಟುವ ಕೆಲಸ ಆಗಬೇಕಾಗಿದೆ.

    ಕನ್ನಡದಲ್ಲೇ ಎಲ್ಲವನ್ನೂ ಕಲಿತರೆ, ಉಳಿದ ಜನರೊಡನೆ ಮಾತನಾಡೋದು ಹೇಗೆ ಎಂಬ ಪ್ರಶ್ನೆ ನಿಮಗೆ ಮೂಡಿದ್ದರೆ, ನನ್ನ ಉತ್ತರ ಹೀಗಿದೆ:
    ಬೇರೆ ಜನರೊಡನೆ ಮಾತನಾಡಲು, ಇಂಗ್ಲೀಷನ್ನು ಕಲಿತಿರುತ್ತಾರಲ್ಲ. ವೈಜ್ಞಾನಿಕವಾಗಿ ಇಂಗ್ಲೀಷನ್ನು ಕಲಿಸಿದರೆ, ಹೆಚ್ಚಿನ ಜನರು ಇಂಗ್ಲೀಷು ಬಲ್ಲವರಾಗುತ್ತಾರೆ.

    ReplyDelete
  8. ಆಶು ಸಕಾಲಿಕ ಲೇಖನ ಮತ್ತು ಸಮರ್ಥ ಚರ್ಚೆಯಾಗಬೇಕು ಎನ್ನುವ ಇಂಗಿತ ...
    ನಾನು ೭ರ ವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ್ದು ಆದ್ರೂ ಇಂಗ್ಲೀಷ್ ತೊಡಕಾಗಲಿಲ್ಲ...ನನ್ನ ಅಭಿಪ್ರಾಯ ಕನ್ನಡ ಕಲಿಕೆ ಜೊತೆ ಇಂಗ್ಲೀಷ್ ಕಲಿಕೆಯನ್ನೂ ಮೊದಲಿಂದಲೇ ಮಾಡುವುದು ಅಗತ್ಯವಿಲ್ಲ...ಇದನ್ನು ಮೂರನೇ ತರಗತಿಗೆ (ಈಗ ಐದರಿಂದ ಇಂಗ್ಲೀಷ್ ಕಲಿಕೆ ಇದೆ ಎಂದುಕೊಂಡಿದ್ದೇನೆ ಸರ್ಕಾರಿ ಶಾಲೆಗಳಲ್ಲಿ)ತಂದು ವೈಜ್ಞಾನಿಕವಾಗಿ ಮತ್ತು ಇಂಗ್ಲೀಷ ಚನ್ನಾಗಿ ಬಲ್ಲ ಉಪಾಧ್ಯಾರರಿಂದ ಪಾಠಗಳ ವ್ಯವಸ್ಥೆ ಮಾಡಿದರೆ ಉತ್ತಮ. ಇಲ್ಲಿ ನಮ್ಮ ಭಾಷಾ ಕಾಳಜಿಯನ್ನು ಬರೀ ಘೋಷಣೆಗಳಿಗೆ ಸೀಮಿತಗೊಳಿಸದೇ ವೈಜ್ಞಾನಿಕ ಪದಕೋಶವನ್ನು ಅಭಿವೃದ್ಧಿಪಡಿಸುವತ್ತಲೂ ಗಮನ ಹರಿಸುವುದು ಅನಿವಾರ್ಯ.

    ReplyDelete
  9. @ ಜಲನಯನ : ನಿಮ್ಮ ಅಭಿಪ್ರಾಯ ಸರಿಯಾಗಿದೆ. ನಾನೂ ಕನ್ನಡ ಮಾಧ್ಯಮದಲ್ಲಿ ಓದಿದ್ದು ೧೦ ನೆ ತರಗತಿವರೆಗೆ. ಪಿ ಯು ಸಿಗೆ ಬಂದಾಗ ಆರಂಭದ ಒಂದೆರಡು ತಿಂಗಳು ಇಂಗ್ಲಿಷ್ಗೆ ಹೊಂದಿಕೊಳ್ಳಲು ಕಷ್ಟವಾದರೂ ನಂತರ ತೊಂದರೆಯೇನೂ ಆಗಲಿಲ್ಲ. ನನ್ನ ಮಗನೂ ಈಗ ಕನ್ನಡ ಮಾಧ್ಯಮದ ಸರಕಾರಿ ಶಾಲೆಯಲ್ಲಿ ಓದುತ್ತಿದ್ದಾನೆ. ಸರಕಾರಿ ಶಾಲೆಯಲ್ಲಿ ಓದುವುದು ಹಾಗೂ ಕನ್ನಡ ಮಾಧ್ಯಮದಲ್ಲಿ ಓದುವುದು ಕೀಳು ಎಂಬ ಭಾವನೆ ನನಗಿಲ್ಲ. ಈಗ ಸರಕಾರಿ ಕನ್ನಡ ಮಧ್ಯಮ ಶಾಲೆಗಳಲ್ಲಿ ಇಂಗ್ಲೀಷನ್ನು ಒಂದನೇ ತರಗತಿಯಿಂದಲೇ ಕಲಿಸಲಾಗುತ್ತಿದೆ.

    ReplyDelete
  10. ನಮ್ಮ ಮನಸ್ಸು ಬದಲಾಗಬೇಕು
    ಇಂಗ್ಲಿಷ್ ಇದ್ದಿದ್ದಕ್ಕೆ ನಾವು ಇಷ್ಟೊಂದು ಮುಂದುವರೆದಿದ್ದೇವೆ
    ಆದರೆ ಅನಾವಶ್ಯಕ ವಿಷಯಗಳಿಗೂ ಇಂಗ್ಲಿಷ್ ತುರುಕಿಸುವುದು ತಪ್ಪು

    ReplyDelete
  11. ನಿಮ್ಮ ಕನ್ನಡದ ಕಳಕಳಿಯನ್ನು ಮೆಚ್ಚತಕ್ಕದ್ದೇ. ಆದರೆ ಎಲ್ಲರೂ ನಿಮ್ಮ ಹಾಗೆಯೇ ಇರುವುದಿಲ್ಲ. ಕನ್ನಡದ ವಿಚಾರ ಬರೀ ಶಿಕ್ಷಣಕ್ಕೆ ಮಾತ್ರ ಸೀಮೀತವಾಗಿ ಉಳಿದಿಲ್ಲ. ಇಲ್ಲಿ ಸಾಹಿತಿಗಳು ಅವರ ಮಕ್ಕಳನ್ನು ಯಾವ ಮಾಧ್ಯಮದಲ್ಲಿ ಓದಿಸುತ್ತಾರೆ ಅನ್ನೋ ವಿಚಾರ ಅಪ್ರಸ್ತುತ. ವಿಜ್ಞಾನಿಗಳ ಪ್ರಕಾರ ನಾವು ಯಾವುದನ್ನೂ ಹೆಚ್ಚ್ಹು ಬಳಸುವುದಿಲ್ಲವೋ ಆ ಅಂಗ ಮುಂದೊಂದು ದಿನ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತೆ. ಇನ್ನು ಭಾಷಾ ವಿಜ್ಞಾನಿಗಳ ಪ್ರಕಾರ ಒಂದು ಬಾಷೆ ನಶಿಸಿ ಹೋಗುತ್ತಿದೆಯಂದರೆ ಅದೊಂದು ಘೋರ ದುರಂತವಲ್ಲದೆ ಬೇರೆ ಏನೂ ಅಲ್ಲ, ಯಾಕೆಂದರೆ ಭಾಷೆಯ ಜೊತೆ ಒಂದು ಸಂಸ್ಕೃತಿಯೂ ನಶಿಸಿ ಹೋಗುತ್ತೆ. ಎಷ್ಟೋ ಸಾವಿರ ವರುಷಗಳಿಂದ ನಮ್ಮ ಸಂಸ್ಕೃತಿ ನಶಿಸಿ ಹೋದರೆ ನಷ್ಟ ನಮಗೇನೆ.

    ಇದಕ್ಕೇನು ಮಾಡಬೇಕು? ಇಂಗ್ಲಿಷ್ ಎಷ್ಟು ಬೇಕು ಅಷ್ಟು ಕಲಿತುಕೊಂಡು ನಮ್ಮ ಬಾಷೆಯನ್ನು ಕಲಿಸಬೇಕು ಬೆಳೆಸಬೇಕು. ಮಕ್ಕಳಿದ್ದಾಗಲೇ ಕಲಿತರೆ ಚೆನ್ನ ಹಾಗೂ ಕೊನೆಯವರೆಗೂ ಉಳಿಯುತ್ತೆ. ಅದಕ್ಕೆ ಕಡೇ ಪಕ್ಷ ಏಳನೇ ತರಗತಿವರೆಗಾದರೂ ಕನ್ನಡ ಮಾಧ್ಯಮ ಉತ್ತಮ. ಇಂಗ್ಲೀಷನ್ನು ಒಂದು ಬಾಷೆಯಾಗಿ ಕಲಿತರೆ ಸಾಕು.

    ReplyDelete
  12. The conclusion of the writer is not well defined. The basic need of language is to express the feelings.If we think of growing interest in literature then it will be single side.However parents are only not interested in literature.If we do not know language then how can we get interest in that.When we talk of english medium and kannada medium both languages must be compulsory not the both mediums.There should be no choice.
    And a person with no ism has no right to talk about this.So,I dont think S L Bhairappa sir comment is valuable.He says that we should read his novels for entertainment then why should he come for debates.
    Whatever my conclusion is both the languages should be made compulsory.

    ReplyDelete
  13. ಯಾವ ಮಾಧ್ಯಮದಲ್ಲಿ ಓದಿದರೂ...
    "ಆಸಕ್ತಿ" ಇದ್ದರೆ ಮಾತೃ ಭಾಷೆಗೆ ಯಾವ ತೊಡಕೂ ಇರುವದಿಲ್ಲ...

    ಆದರೆ ಮಾತೃಭಾಷೆಯ ಮೇಲಿನ ಅಭಿಮಾನ ನಮಗೆ ಬಹಳ ಕಡಿಮೆ...

    ನಮಗೆ ವಿಚಿತ್ರವಾಗಿ ಕನ್ನಡಮಾತನಾಡುವ ಎಫ್.ಎಮ್.ಗಳು ಬಲು ಇಷ್ಟವಾಗುತ್ತದೆ..

    ಆಗ ಯಾವ ಮಾಧ್ಯಮದಲ್ಲಿ ಓದಿದರೂ ಪ್ರಯೋಜನ ಕಡಿಮೆ..

    ಮೂಲತಃ ನಮ್ಮಲ್ಲಿ ಭಾಷಾಭಿಮಾನ ಇರಬೇಕು..

    ReplyDelete
  14. ಕನ್ನಡ ಬೇಕೋ ಬೇಡವೋ ಇಂಗ್ಲಿಷ್ ಬೇಕೋ ಬೇಡವೋ ಅನ್ನೋ ಚರ್ಚೆ ಈಗ ಬೇರೆಯ ಸ್ವರೂಪವನ್ನೇ ಪಡೆದುಕೊಳ್ಳುತ್ತಿದೆ.
    ನಾವು ಕೊಂಚ ಈ ವಿಷಯವನ್ನು ಪ್ರಾಕ್ಟಿಕಲ್ ಆಗಿ ಯೋಚಿಸಿ ಸರಿಯಾದ ನಿರ್ಧಾರಕ್ಕೆ ಬರುವುದು ಒಳ್ಳೆಯದು.

    ಕನ್ನಡದ ಬಗ್ಗೆ ಅಭಿಮಾನವಿರಲಿ.
    ಜೊತೆಗೆ ಇಂದಿನ ಬಹುಪಾಲು ಉದ್ಯೋಗಗಳು ಆಂಗ್ಲಭಾಷೆಯನ್ನು ಚೆನ್ನಾಗಿ ಬಲ್ಲವರಿಗಷ್ಟೇ ಕೊಡುವುದರಿಂದ, ಆದಷ್ಟು ಬೇಗನೆ ಇಂಗ್ಲಿಷ್ ಭಾಷೆಯನ್ನೂ ಕಲಿಯುವುದು ಒಳ್ಳೆಯದು.
    ಜೊತೆಗೆ ನಮ್ಮ ಭಾಷೆ ಕನ್ನಡ ಭಾಷೆಯಾದ್ದರಿಂದ ಅದು ಮೊದಲ ಮೆಟ್ಟಿಲಾಗಬೇಕು.
    ಇವೆರಡು ವಿಷಯಗಳನ್ನು ಕೂಲಂಕುಶವಾಗಿ ಅವಲೋಕಿಸಿದಾಗ ನಮಗನ್ನಿಸುವುದು.

    ೧. ಪ್ರಾಥಮಿಕ ಶಿಕ್ಷಣ ಕನ್ನಡದಲ್ಲಿ ಶುರುವಾಗಲಿ.
    ೨. ನಂತರ ಈಗಿರುವಂತೆ ಇಂಗ್ಲಿಷ್ ಭಾಷೆ ೫ನೇ ತರಗತಿಯಿಂದ ಶುರುವಾಗಬೇಕು.

    ಇದೆಲ್ಲಕ್ಕಿಂತ ಮೊದಲಾಗಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸುವ ಉಪಾಧ್ಯಾಯರನ್ನು ಸರಿಯಾಗಿ ಪಳಗಿಸಬೇಕು!!
    ಯಾಕೆ ಈ ಮಾತನ್ನು ಹೇಳಿದೆನೆಂದರೆ, ಇಂಗ್ಲಿಷ್ ಭಾಷೆಯನ್ನೂ ಸುಲಭವಾಗಿ ಕಲಿಸದೆ ಅದು ದೊಡ್ಡ ಹೊರೆಯಂತೆ ಮಕ್ಕಳನ್ನು ಕಾಡಬಾರದು.
    ಮಾಸ್ತರರಿಗೆ ಇಂಗ್ಲಿಷ್ ಭಾಷೆಯನ್ನು ಹೇಗೆ ಹೇಳಿ ಕೊಡುವುದೆಂದು ಗೊತ್ತಿಲ್ಲದಿದ್ದರೆ ಮಕ್ಕಳು ಕಲಿಯುವುದಾದರು ಹೇಗೆ ಹೇಳಿ?!!

    ReplyDelete