Total Pageviews

Wednesday, August 24, 2011

ಬದುಕಿರುವಾಗಲೇ ಖಾಲಿಯಾಗುವ ಖಾಯಿಲೆ!


                         ಬದುಕು ಒಂದು ಖಾಲಿ ಕ್ಯಾನ್ವಾಸ್  ಹಾಳೆಯಂತೆ! ಬೆಳಗ್ಗೆ ಎದ್ದು ಬೃಷ್ ಮಾಡಲು ಹೋದಾಗ ಖಾಲಿಯಾದ ಟೂಥ್ ಪೇಸ್ಟ್ ಟ್ಯೂಬ್  ಕಂಡು ಏನೇನೋ  ವಿಚಾರಧಾರೆಗಳ ಸಂಚಲನ. ಎಲ್ಲ ಖಾಲಿಯಾದ ವಸ್ತುಗಳು replace  ಆಗುತ್ತಲೇ ಇರುತ್ತವೆ. ನಾವು ಪ್ರತಿನಿತ್ಯ ಬಳಸುವ ಪದಾರ್ಥಗಳು, ಮಹಡಿ ಮೇಲಿನ syntax , ಯಾವುದೇ ಆಗಿರಲಿ ಖಾಲಿಯಾದಾಗಲೆಲ್ಲಾ ಅವುಗಳನ್ನು ಪುನಃ replace ಮಾಡಲಾಗುತ್ತದೆ. replace ಆದ ವಸ್ತುಗಳು ಒಂದು ದಿನ ಖಾಲಿಯಾಗುತ್ತ  ಹೋಗುತ್ತವೆ.ಇದನ್ನು ಗಮನಿಸದೆ ದಿನ ಕಳೆಯುವ ನಾವುಗಳು ದೈಹಿಕವಾಗಿ ( ಕೆಲೊವೊಮ್ಮೆ ಮಾನಸಿಕವಾಗಿ ) ಖಾಲಿಯಾಗುತ್ತ ಹೋಗುತ್ತೇವೆ. ಎಂಥ ವಿಚಿತ್ರವಿದು?

                       ಅತೀ ಸಂತುಷ್ಟ ಮನುಷ್ಯನು ಕೆಲೊವೊಮ್ಮೆ ಖಿನ್ನತೆಗೊಳಗಾಗೋದು ನಿಜ, ಹೀಗೇಕಾಗುತ್ತದೆ? ತುಂಬಿದ ಸಂಸಾರ, ಒಬ್ಬೊರನ್ನೊಬ್ಬರು ಅಗಾಧವಾಗಿ ಪ್ರೀತಿಸುವ ದಂಪತಿ, ಮುದ್ದಾದ ಮಕ್ಕಳು, ಯಾವುದೂ ಕೊರತೆ ಇರದ ಮನೆ, ಹೀಗಿದ್ದಾಗಲೂ ಆಕೆ ಬೇರೆ ಯಾವುದೊ ದಿಗಂತಕ್ಕೆ ಕೈ ಚಾಚಿ ಕುಳಿತುಕೊಂಡಿರುತ್ತಾಳೆ, ಆತ ತನ್ನ ಕೆಲಸದಲ್ಲೇ ಮುಳಗೆದ್ದು ಹೋಗಿರುತ್ತಾನೆ, ಮಕ್ಕಳು ತಂದೆ- ತಾಯಿಯರ ಪ್ರೀತಿ-ಮಮತೆಗಾಗಿ ಚಡಪಡಿಸುತ್ತವೆ.

                       ದಾಂಪತ್ಯ ಹಳೆತಾಗುತ್ತ ಹೋದಂತೆ, ಅಲ್ಲಿ ದೈಹಿಕ ಕಾಮನೆಗಳು ಕಡಿಮೆಯಾಗಿ ಮಕ್ಕಳ ಲಾಲನೆ-ಪಾಲನೆಗಳಲ್ಲಿ ಸಮಯ ವಿನಿಯೋಗಿಸಲ್ಪಡುತ್ತದೆ . ಇದು ಸಹಜ  ಪ್ರಕ್ರಿಯೆ. ಆದರೆ ಪಾಲಕರ ಮತ್ತು ಮಕ್ಕಳ ನಡುವೆ ಸಂಬಂಧಗಳ  warmth ನಶಿಸಿ ಹೋದಾಗ, ಅಪ್ಪ ದುಡಿದು ತಂದು ಹಾಕುವ, ಅಮ್ಮ ಅಡುಗೆ ಮಾಡುವ ಮತ್ತು ಮಕ್ಕಳು ಮಾರ್ಕ್ಸ್ ತರುವ ಮಷಿನ್ ಗಳಾಗಿಬಿಡುತ್ತಾರೆ.

                       ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲ ದಂಪತಿಗಳೂ ಕಾಲಿಗೆ ಸಮಯದ ಚಕ್ರವನ್ನು ಕಟ್ಟಿಕೊಂಡೆ ಓಡಾಡುವ working parents. ನೂರಕ್ಕೆ ಒಂದರಂತೆ ಹೌಸ್ ವೈವ್ಸ್ ಕಾಣಸಿಗುತ್ತಾರೆ, ಇದು ಅವರವರ ಇಷ್ಟ, ಕಷ್ಟ ಮತ್ತು ವೈಯಕ್ತಿಕ ವಿಷಯ ಬಿಡಿ. ಆದರೆ ಪ್ರಶ್ನೆ ಇರುವುದು ನಮ್ಮ ಪಾಲಕರು ನಮ್ಮನ್ನು ಬೆಳಸಿದಂತೆ ಇಂದಿನ ಪಾಲಕರು ತಮ್ಮ  ಮಕ್ಕಳನ್ನು ಬೆಳೆಸಲು ಸಾಧ್ಯವೇ? ಖಂಡಿತ ಇಲ್ಲ. ಅಜ್ಜ ಅಜ್ಜಿಯರು ನಮ್ಮ ಪಾಲಕರನ್ನು ಬೆಳಸಿದಂತೆ ನಮ್ಮನ್ನು ನೋಡಿಕೊಳ್ಳಲಾಗಿಲ್ಲ ಎಂದು ಸ್ವತಹ ಪಾಲಕರೇ ಒಪ್ಪಿಕೊಳ್ಳುತ್ತಾರೆ.

                       ಮಕ್ಕಳ ವಿಕಾಸಕ್ಕಾಗಿ ಎಷ್ಟು ಜನ ಪಾಲಕರು ನಿಜವಾಗಿಯೂ ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ ಮಾಡುತ್ತಿದ್ದಾರೆ?  ಯಾವುದೇ ಶಾಲೆಯ ಪಾಲಕರ ಮೀಟಿಂಗ್ಸ್ ಗಳನ್ನು ನೋಡಿ, ಎಲ್ಲ ಪಾಲಕರೂ ಮಕ್ಕಳ ಮಾರ್ಕ್ಸ್ ಬಗ್ಗೆಯೇ ಚರ್ಚಿಸುತ್ತಾರೆ. ಅಯ್ಯೋ  ನಿಮ್ಮ ಮಗಳು ಪಾರದಳು ಬಿಡಿ ಇಂಜಿನಿಯರಿಂಗ್ ಸೀಟ್ ಸಿಕ್ತಂತೆ, ನನ್ನ ಮಗ ಈಗ PUC ಕಣ್ರೀ, ಮೆಡಿಕಲ್ ಸೀಟ್ ಸಿಗಬೇಕಿದೆ ಹೆಂಗ್ ಮಾಡ್ತಾನೋ ಏನೋ? ನನ್ನ ಮಗಳು cet ನಲ್ಲಿ ೫೦ನೆ ರಾಂಕ್ ಗೊತ್ತ? ನನ್ನ ಮಗ 10th ನಲ್ಲಿ 92 % ಮಾರ್ಕ್ಸ್ ತೆಗೆದಿದಾನೆ. ಆದರೂ competetion ಜಾಸ್ತಿ ಬಿಡಿ highest  99 % ಇದೆ! ಹುಹ್ ಎಂಥ ದಿವ್ಯ ದರ್ಶನ! ಅಖಂಡ ಭಾರತ ದೇಶದ ಮುಂದಿನ ಪ್ರಜೆಗಳ ಪಾಲಕರ ಮನದಾಳದ ಮಾತುಗಳಿವು.

                      ನಮ್ಮ ಸಮಾಜ ತಾಂತ್ರಿಕವಾಗಿ ಬೆಳೆದು ಹೋದಂತೆಲ್ಲ ನಮ್ಮ  ಸಂಬಂಧಗಳೆಲ್ಲ extinction ಹಂತ ತಲುಪುತ್ತಿವೆಯೇ? ಯಾವುದೋ ಸ್ಪರ್ಧೆಯಲ್ಲಿ ಸೋತು ಬಂದ ಮಗುವನ್ನು ತನ್ನ ಮಡಿಲಿನಲ್ಲಿ ಮಲಗಿಸಿಕೊಂಡು ಸಾಂತ್ವನ ಹೇಳುವ ತಾಯಂದಿರು ಕಡಿಮೆಯಾಗುತ್ತಿದ್ದಾರೆ. ಹಸಿವೆ ಇಲ್ಲ ಎಂದು ಮುನಿಸಿಕೊಳ್ಳುವ ಮಗುವನ್ನು ತನ್ನ ಕೈಯಾರೆ ತಿನಿಸುವ ಅಮ್ಮಂದಿರಿಲ್ಲ. ಅಪ್ಪನ ತಬ್ಬುಗೆಯ warmth ಗೊತ್ತಿಲ್ಲ. ಇಂಥ ಅನೇಕ ಸ್ಮಾಲ್ pleasures ಗಳಿಂದ ವಂಚಿತರಾಗುತ್ತಿರುವ ಇಂದಿನ ಮಕ್ಕಳಿಗೆ ಅಜ್ಜ- ಅಜ್ಜಿಯ ಆಸರೆಯಾದರು ಇದೆಯೇ? ಅದು ಇಲ್ಲ. ಅಜ್ಜಿಯ ಮಡಿಲಿನ ಸ್ವರ್ಗ ಸುಖ ಗೊತ್ತಿಲ್ಲ, ಅಜ್ಜನ ನೀತಿ ಕಥೆಗಳನ್ನು ಕೇಳಿಲ್ಲ, ಅಜ್ಜಿಯ ಕೈ ತುತ್ತಿನ ರುಚಿಯೇ ತಿಳಿದಿಲ್ಲ, ಅಜ್ಜನೊಟ್ಟಿಗೆ ಕೈ ಹಿಡಿದುಕೊಂಡು ಗಾಳಿ ವಿಹಾರಕ್ಕೆ ಹೋಗಿಲ್ಲ.

                     ನಾವುಗಳೆಲ್ಲ ಯಾಂತ್ರಿಕವಾಗಿ ಬದುಕುತ್ತಿರುವುದು ನಿಜ. ಎಲ್ಲವು materialistic ಜೀವನದ ಮೇಲೆಯೇ ನಿರ್ಧಾರಿತವಾಗಿದೆ. ಆದರೂ ನಮ್ಮೆಲ್ಲ ಭಾವನೆಗಳನ್ನು materialize ಮಾಡಲಾಗದೆ ಹೆಣಗುತ್ತಿದ್ದೇವೆ. ಮಾನವೀಯ ಮುಲ್ಯಗಳನ್ನು ಭಾವನಾತ್ಮಕವಾಗಿ ಮೌಲ್ಡ್  ಮಾಡುವಲ್ಲಿ ವಿಫಲರಾಗುತ್ತಿದ್ದೇವೆ. ನಿರ್ಜೀವ ವಸ್ತುಗಳು ಖಾಲಿಯಾದಾಗ replace ಮಾಡುವ ನಾವುಗಳು, ಬದುಕಿರುವಾಗಲೇ ಖಾಲಿಯಾಗಬಾರದಲ್ಲವೇ?

16 comments:

  1. ಅಶ್ವಿನಿ...

    ಅವರವರ ಭಾವ... ಅವರವರ ಮನಸ್ಸು..
    ಹೀಗೆ ಅಂತ ಅಂದು ಕೊಂಡರೆ ಹೇಗೆ...

    ಬದುಕು ಹಾಗೆ ಅಂದು ಕೊಂಡರೆ ಹಾಗಿರುತ್ತದೆ..

    ಪ್ರತಿಯೊಬ್ಬರ ಅನುಭವದ ಜಗತ್ತು ವಿಭಿನ್ನ..

    ಯಾಂತ್ರಿಕ ಬದುಕಿನಲ್ಲೆ ಎಲ್ಲವನ್ನೂ ಕಾಣ ಬಹುದು..
    ಖುಷಿ..
    ಸಂಬಂಧಗಳ ನಡುವೆ ಬಾಂಧವ್ಯ..

    ಅದೆಲ್ಲವೂ ನಮ್ಮ ಮನಸ್ಥಿತಿಯನ್ನು ಅವಲಂಬಿಸಿರುತ್ತದೆ...

    ಚಂದದ ಲೇಖನ..

    ReplyDelete
  2. oLLeyadide lekhana

    ReplyDelete
  3. Gud one yar keep it up. keep Going all the best for ur next blog.

    ReplyDelete
  4. ಅಶ್ವಿನಿ;ತುಂಬಾ ಚೆಂದದ ಲೇಖನ.ಇಷ್ಟವಾಯ್ತು.ಬದಕು ಬರಡಾಗದಂತೆ ಎಲ್ಲಾ ಸಂಭಂದಗಳನ್ನೂ ಆಗಾಗ reniew ಮಾಡಬೇಕೆಂಬ ನಿಮ್ಮ ಅನಿಸಿಕೆ ಎಷ್ಟೊಂದು ಅರ್ಥ ಪೂರ್ಣ!ನನ್ನ ಬ್ಲಾಗಿಗೊಮ್ಮೆ ಭೇಟಿಕೊಡಿ.ನಮಸ್ಕಾರ.

    ReplyDelete
  5. ಮಾರ್ಕ್ಸ್, ಅ೦ಕೆ ಸಂಖ್ಯೆ ಗೆ ಸೀಮಿತ ವಾಗಿದೆ ಈಗಿನ ಮಕ್ಕಳ ಜಗತ್ತು.. ಅತ್ಯಮೂಲ್ಯವಾದ ಅ೦ಶವೊಂದನ್ನು ಈ ಲೇಖನ ಎತ್ತಿ ಹಿಡಿದಿದೆ - ಸಂಬಂಧ!
    ನ್ಯೂಕ್ಲಿಯರ್ ಸಂಸಾರ , ಬೆಳಿಗ್ಗೆ ಸ್ಕೂಲ್ ನಂತರ ಟ್ಯೂಶನ್ , ಅಮ್ಮ ಅಪ್ಪ ಬರೋದು ಇನ್ನು ತಡವಾದರೆ ಅಲ್ಲೇ ಎಲ್ಲೋ ಸಂಗೀತ ಶಾಲೆ ಅಥವಾ ಡ್ರಾಯಿಂಗ್ ಕ್ಲಾಸ್ .. ಸರಿ ಹೋಯಿತು ! ಹೀಗೆ ಮುಂದು ವರಿದಲ್ಲಿ ಮುಂದಿನ ಪೀಳಿಗೆಯವರಿಗೆ
    ಅಮ್ಮ ಅಪ್ಪ ಅಂದ್ರೆ ವೀಕೆಂಡ್ ನಲ್ಲಿ ಸಿಗೋ ಗೆಸ್ಟ್ ಗಳ ಹಾಗೆ!

    ReplyDelete
  6. Anyone starts enjoying each moment it won't hurts, els everyone will suffers. Main problem s mindset.How we look at things, in the same way they will treat us. According to me nothing s non-living, everything on earth has its own life and replacement s essential and eternal too....

    In current situation mk Ghandi s replaced by Anna, US n EUROPE economy will be replace by ASIAN giants, and so on.... just move on....

    GOOD 1 ASHU.....

    ReplyDelete
  7. ಇವತ್ತಿನ ಸಮಾಜಕ್ಕೆ ಇದು ಅನಿವಾರ್ಯ!!
    The family. We were a strange little band of characters trudging through life sharing diseases and toothpaste, coveting one another's desserts, hiding shampoo, borrowing money, locking each other out of our rooms, inflicting pain and kissing to heal it in the same instant, loving, laughing, defending, and trying to figure out the common thread that bound us all together

    ReplyDelete
  8. ನಿಜವಾದ ಪ್ರೀತಿ, ಮಮಕಾರ, ವಾತ್ಸಲ್ಯ, ಸಂಬಂಧಗಳು ಎಲ್ಲವೂ ಮರೆಯಾಗುತ್ತಿವೆ. ಎಲ್ಲವೂ ಯಾಂತ್ರಿಕವಾದ ಜೀವನ, ನಡೆಯುತ್ತಿದೆ. ಅಕ್ಕಪಕ್ಕದವರ ಪೈಪೋಟಿ ಬಿದ್ದು ಹಣ ಗಳಿಸುವ ಏಕೈಕ ಉದ್ದೇಶವೇ ಇವತ್ತಿನ ಜೀವನದ ಗುರಿಯಾಗಿದೆ. ಇವತ್ತಿನ ಭಾರತದಲ್ಲಿ ಯಾವೊಬ್ಬ ಆಧುನಿಕ ವ್ಯಕ್ತಿ ಸುಖ ಶಾಂತಿ ಇಂದ ಇದ್ದಾನೆ/ಳೆ. ಹೇಳಿ. ತಿಂಗಳಿಗೆ ಲಕ್ಷ ರೂ ಸಂಬಳ ಪಡೆಯುವ ವ್ಯಕ್ತಿ, ದಿನಕ್ಕೆ 50 ರೂ ಸಂಬಳ ಪಡೆಯುವ ವ್ಯಕ್ತಿಯ ಜೀವನಕ್ಕೆ ಬೇಕಾಗಿರುವುದು. ಹೊಟ್ಟೆ ಹಿಡಿಸುವಷ್ಟು ಊಟ ಮಾತ್ರ, ಮಾನ ಮುಚ್ಚಿಕೊಳ್ಳಲು ಬಟ್ಟೆ, ಜೀವನದಲ್ಲಿ ನೆಮ್ಮದಿ, ಅದನ್ನು ಬಲಿಕೊಟ್ಟು ಯಾವ ಪುರುಷಾರ್ಥಕ್ಕೆ ಹೋರಾಡುತ್ತಿದ್ದಾರೆಯೋ ಅವರಿಗೇ ಅರ್ಥವಾಗುತ್ತಿಲ್ಲ. ಪಕ್ಕದ ಮನೆಯವರ ಮಗ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದಾನೆ. ನಮ್ಮ ಮಗನೂ ಇಂಜಿನಿಯರ್ ಆಗಬೇಕು. ಏನೂ ಬೇಕಾದರೂ ಮಾಡಲೂ ತಯಾರಾಗಿರುತ್ತಾರೆ. ಒಟ್ಟಿನಲ್ಲಿ ಹೆಚ್ಚಿಗೆ ಅಂಕಗಳು ಗಳಿಸಬೇಕು. ನೆರೆಹೊರೆಯವರನ್ನು ಅನುಸರಿಸಿ ಛಲಕ್ಕೆ ಬಿದ್ದವರಂತೆ ಜೀವನ ನಡೆಸಲು ಹೋಗಿ ತಮ್ಮ ಶಕ್ತಿ ಮೀರಿ ಅದೆಷ್ಟು ಜನ ಸಾಲಗಾರರಾಗಿದ್ದಾರೆ. ಅದೆಷ್ಟು ಜನ ತಮ್ಮತನವನ್ನೇ ಕಳೆದುಕೊಂಡಿದ್ದಾರೆ. ಐಶಾರಾಮಿ ಬದುಕಿಗಾಗಿ ಇವತ್ತು ನಡೆಯುತ್ತಿರುವ ಅಪರಾಧಗಳೇ ಸಾಕ್ಷಿ. ನಿಮ್ಮ ಲೇಖನ ಅರ್ಥಪೂರ್ಣವಾಗಿದೆ. ಹೆಚ್ಚಿನ ಸಾಮಾಜಿಕ ಕಳಕಳಿಯ ಲೇಖನಗಳನ್ನು ನಿರೀಕ್ಷಿಸುತ್ತೇವೆ. ನಿಮಗೆ ಒಳ್ಳೆಯದಾಗಲಿ, ನಗು ನಗುತ್ತಾ ಇರಿ

    ReplyDelete
  9. ಸಾಂಸ್ಕ್ರತಿಕ ವಿಭಾಗ ಇಂದಿನ ಆಧುನಿಕ ಯುಗದಲ್ಲಿ ಮಕ್ಕಳು ತಮ್ಮ ತಂದೆ-ತಾಯಿಯಿಂದ ದೂರವಿದ್ದು ಅನುಭವಿಸುವ ಯಾತನೆ, ಅನಾಥ ಭಾವವನ್ನು ಎದುರಿಸುವ ಮಕ್ಕಳ ಕುರಿತು ಉತ್ತಮವಾದ ಲೇಖನ ಉಪಯುಕ್ತವಾಗಿದೆ.

    ReplyDelete
  10. ಬದುಕನ್ನು ಖಾಲಿಯಾಗಲು ಬಿಡಲೇ ಬಾರದು ಅಶ್ವಿನಿ. ಒಳ್ಳೆಯ ಚಿಂತನಾತ್ಮಕ ಲೇಖನ ಕೊಟ್ಟಿರಿ. ಧನ್ಯವಾದಗಳು.

    ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ:
    www.badari-poems.blogspot.com
    www.badari-notes.blogspot.com
    www.badaripoems.wordpress.com

    ReplyDelete
  11. Very good article Ashwini !!!some of the facts you have penned down are very true to the current world ...

    ReplyDelete
  12. ಮನುಷ್ಯನ ಮನಸ್ಸು ಆಗಾಗ ಖಾಲಿಯಾಗಲೇಬೇಕು. ಖಾಲಿಯಾಗದೇ ಇದ್ದರೆ ಒಳಗೆ ತುಂಬಿದ್ದು ಕೊಳೆಯಲು ಶುರುವಾಗುತ್ತೆ. ಆಹ್ವಾನ ಮಾಡಿಕೊಳ್ಳುವುದು, ವಿಸರ್ಜನೆ ಮಾಡುವುದು ಒಂದಕ್ಕೊಂದು ಸಾಪೇಕ್ಷವಾದ ಕ್ರಿಯೆಗಳು. ಎರಡೂ ಒಂದರ ಹಿಂದೆ ಒಂದು ಇರಲೇಬೇಕು. ಹಳೆಯದನ್ನು ವಿಸರ್ಜಿಸದ ಹೊರತು ಹೊಸತನ್ನು ಆಹ್ವಾನಿಸುವ ಚೈತನ್ಯ ನಮಗಿರುವುದಿಲ್ಲ.

    ReplyDelete
  13. Would you like to get more visitors from Chennai?

    Submit your blog in zeole.com/hyderabad . This is a one time submission.This would automatically submit a preview of your future blog posts in Hyderabad, with a link back to your blog.

    Enjoy more traffic from Hyderabad :-)

    ReplyDelete
  14. ಹಾಯ್ ಅಶ್ವಿನಿ...

    ನಿಮ್ಮ ಬ್ಲಾಗ್ ಗೆ ನನ್ನ ಮೊದಲ ಭೇಟಿ....ಸೊಗಸಾಗಿದೆ ನಿಮ್ಮ ಬ್ಲಾಗ್....

    ಬದಲಾವಣೆ ಜಗದ ನಿಯಮ, ನಿನ್ನೆ ಇರುವುದು ಇಂದಿಲ್ಲ, ಇಂದಿನದು ನಾಳೆ ಇರೋಲ್ಲ....ಹೌದು ನಮ್ಮ ತಂದೆ-ತಾಯಿಯರು ನಮ್ಮನ್ನು ಬೆಳೆಸಿದ ರೀತಿಯಲ್ಲಿ ಖಂಡಿತಾ ನಮಗೆ ನಮ್ಮ ಮಕ್ಕಳನ್ನು ಬೆಳೆಸಲಾಗುವುದಿಲ್ಲ, ಏಕೆಂದರೆ ಕಾಲ ಬದಲಾಗಿದೆ, ಎಲ್ಲವೂ ಬದಲಾಗಿದೆ ಅವುಗಳಿಗೆ ಹೊಂದಿಕೊಂಡು ನಾವು ಬದಲಾಗುತಿದ್ದೇವೆ.....ಆದರೂ ಈ ಯಾಂತ್ರಿಕ ಬದುಕಿನಲ್ಲೇ ನಮಗೆ ಬೇಕಾದ, ನಮ್ಮ ಮಕ್ಕಳಿಗೆ ಬೇಕಾದ ಖುಷಿಯನ್ನು ಕಾಣಲು ಪ್ರಯತ್ನಿಸಬಹುದಲ್ಲವೇ ??? ಒಂದು ಉತ್ತಮ ಲೇಖನ .......ಬರೀತಾ ಇರಿ....

    ನನ್ನ ಬ್ಲಾಗ್ ಗೂ ಬನ್ನಿ.....http://ashokkodlady.blogspot.com

    ReplyDelete
  15. ನಾವು ಖಾಲಿಯಾಗದೆಯೇ ಖಾಲಿ ಅಂತ ಅನ್ನಿಸಿಕೊಳ್ಳುವುದು ನಿಜವಾದ ದೋಷ. ನಿಮ್ಮ ಲೇಖನ ಚೇತೋಹಾರಿಯಾಗಿರಲಿ ..

    ಬರವಣಿಗೆ ಚಂದವಿದೆ.

    ReplyDelete