ಭಾಷೆ ಅನ್ನೋದು ಎಂತಹ ದೊಡ್ಡ ಶಕ್ತಿ ಅಂತ ತುಂಬಾ ಸಲ ಯೋಚಿಸಿದ್ದೀನಿ, ಯಾಕೆ ನಮ್ಮ ಭಾಷೆಯವರನ್ನ ಕಂಡ್ರೆ ನಮ್ಮವರೇ ಅನ್ನೋ ಭಾವನೆ ಬರುತ್ತೆ, ಭಾಷೆ ಕೇವಲ ಸಂಹವನ ಮಾಧ್ಯಮ ಅಷ್ಟೇ ಅಂತ ಎಣಿಸೋದಾದರೆ, ನಮಗೆ ಗೊತ್ತಿರುವ ಯಾವುದೊ ಒಂದು ಕಾಮನ್ ಭಾಷೆ ಮಾತಾಡಬಹುದು, ಆದ್ರೂ ನಾವು ಪ್ರಿಫರ್ ಮಾಡೋದು ಮಾತೃಭಾಷೆ!! ನಮ್ಮ್ ನಿಜವಾದ ಅಭಿವ್ಯಕ್ತವನ್ನು ನಮ್ಮ ಭಾಷೆ ಮಾತ್ರ ಕೊಡಬಲ್ಲುದು, ನಮ್ಮ ಸಂಸ್ಕೃತಿ, ನಮ್ಮತನ, ನಮ್ಮ ಆಚರಣೆ, ನಮ್ಮ ಅನನ್ಯತೆ ಎಲ್ಲದೂ ಒಂದು ಭಾಷೆ ಎಂಬ ಶಕ್ತಿ ಎತ್ತಿ ಹಿಡಿಯುತ್ತೆ.
ಈಗಿನ ತಲೆಮಾರಿನವರು ಅವರ ಮೂಲಭಾಷೆಯನ್ನು ಮಾತನಾಡುವುದಿಲ್ಲ ಮತ್ತು ಆ ಪರಂಪರೆಯನ್ನು ಅವರ ಭಾಷೆಯ ಸೊಗಡಿನಲ್ಲೇ ಮುಂದುವರೆಸಬೇಕು ಎನ್ನುವು ಆಸೆ ಇದ್ದರೂ ಕೂಡ, ಕನ್ನಡಕ್ಕೆ ಒಗ್ಗಿ ಹೋಗಿ ಮೂಲಭಾಷೆ ಮರೆಯುತ್ತಿದ್ದಾರೆ. ಇಲ್ಲಿ ಎರಡು ತಲೆಮಾರಿನ ಅಂತರದಲ್ಲಿ ಭಾಷೆ ಸೊರಗುತ್ತಿದೆ. ಏನ್ ಮಹಾ ಲಾಸ್ ಬಿಡಿ ಅಂತ ಮೇಲು ನೋಟಕ್ಕೆ ಅನಿಸಿದರೂ, ಭಾಷೆಯನ್ನು ಉಳಿಸದೇ ಹೋದರೆ ಸೋಲಿಗರ ಫಾರೆಸ್ಟ್ ಮೆಡಿಸಿನಲ್ knowledge ಹೇಳ ಹೆಸರಿಲ್ಲದೆ ಮಾಯವಾಗುತ್ತದೆ. ಹಿತ್ತಲ ಗಿಡ ಮದ್ದಲ್ಲ ಅಂತ ನಾವು ತೋರಿಸುವ ಉದಾಸೀನವನ್ನ ಬಂಡವಾಳ ಮಾಡಿಕೊಂಡು ಬೇರೆ ದೇಶದವರು ನಮ್ಮದೇ ಜ್ನ್ಯಾನವನ್ನು ಸದ್ದಿಲ್ಲದೇ ಎತ್ತಿಕೊಂಡು ನಮಗೆ ವಾಪಾಸ್ ಮಾರುವ ಕಾಲ ದೂರವಿಲ್ಲ.
ಹಾಗಾಗಿ , ನಮ್ಮ ಸೋಲಿಗರನ್ನ ಮಾತನಾಡಿಸಲು ಎರಡನೇ ಸಲ ಹೋಗಿದ್ವಿ . ಈ ಸಲ ಅವರದ್ದೇ ಭಾಷೆಗೆ ಭಾಷಾಂತರ ಮಾಡುವ ಸ್ಪೀಚ್ ಟು ಸ್ಪೀಚ್ ಟ್ರಾನ್ಸ್ಲೇಷನ್ ಮಾಡೆಲ್ ರೆಡಿ ಮಾಡಿಕೊಂಡು, ಅವರ ಅನಿಸಿಕೆ ತೊಗೊಳೋಣ ಅಂತ ಅವರನ್ನು ಕರೆಸಿ ಟೆಸ್ಟ್ ಮಾಡಿಸಿದ್ವಿ . It was a lovely experience. ಇಂಗ್ಲಿಷ್ ಇಂದ ಸೋಲಿಗ ಭಾಷೆಗೆ ಹಾಗೂ ಸೋಲಿಗ ಭಾಷೆ ಇಂದ ಇಂಗ್ಲಿಷ್ ಗೆ ಭಾಷಾಂತರ ಮಾಡುವ ಪ್ರಾಜೆಕ್ಟ್ ಅನ್ನು ಭಾರತ ಸರ್ಕಾರ ಪ್ರಾಯೋಜಿಸಿದೆ. .ಅಜ್ಜಿಯರು, ಮಹಿಳೆಯರು , ಪುರುಷರು ಹಾಗೂ ಶಾಲೆಯ ಮಕ್ಕಳೊಂದಿಗೆ ಬೆರೆತು ಅವರ ಅಮೂಲ್ಯ ಪ್ರತಿಕ್ರಿಯೆ ಪಡೆಯಲಾಯಿತು. ಇನ್ನೂ ಬಾಲ್ಯಾವಸ್ಥೆಯಲ್ಲಿರುವ ಈ ಕೃತಕ ಬುದ್ಧಿಮತ್ತೆ ಹೊಂದಿರುವ ಮಷೀನ್ ಗೆ ಇನ್ನಷ್ಟು ಡೇಟಾ ಅವಶ್ಯಕೆತೆ ಇದೆ, ಸಧ್ಯದ ಮಟ್ಟಿಗೆ ನಿಯಮಿತ ವಾಕ್ಯಗಳನ್ನು ಮಾತ್ರ ತಪ್ಪಿಲ್ಲದೆ ಭಾಷಾಂತರ ಮಾಡುತ್ತಿದೆ
No comments:
Post a Comment