Total Pageviews

Sunday, May 10, 2026

ವೈಯಕ್ತಿಕ ನೈತಿಕತೆ ಮತ್ತು ಸಾರ್ವಜನಿಕ ಯಶಸ್ಸು !

 




ನಿನ್ನೆ ನಡೆದ ಕಾರ್ಯಕ್ರಮದಲ್ಲಿ ತ್ರಿಷಾ ಹಾಜರಾತಿಯನ್ನು, ಹೆಂಡತಿ ಹಾಗೂ ಮಕ್ಕಳ ಅನುಪಸ್ಥಿತಿಯನ್ನು ಆಧಾರ ಮಾಡಿಕೊಂಡು “ಕುಟುಂಬ ಸಂತೋಷವಾಗಿಲ್ಲ”, “CM ಆದರೂ ಏನು ಪ್ರಯೋಜನ” ಎಂಬ ರೀತಿಯ moral judgement ಮಾಡುವುದು ಭಾರತೀಯ ಸಮಾಜದ ಆಳವಾಗಿ ಬೇರೂರಿರುವ ಪಿತೃಪ್ರಧಾನ ಮನಸ್ಥಿತಿಯ ಪ್ರತಿಬಿಂಬ. ಸಾರ್ವಜನಿಕ ವ್ಯಕ್ತಿಗಳ ರಾಜಕೀಯ ಸಾಧನೆ, ಆಡಳಿತ ಸಾಮರ್ಥ್ಯ ಅಥವಾ ವೃತ್ತಿಜೀವನಕ್ಕಿಂತ ಅವರ ವೈಯಕ್ತಿಕ ಬದುಕನ್ನು ಹೆಚ್ಚು ತೂಕ ಮಾಡುವುದು ನಮ್ಮ ಸಮಾಜದಲ್ಲಿ ಹೊಸದೇನಲ್ಲ. ವಿಶೇಷವಾಗಿ ಒಬ್ಬ ಮಹಿಳೆ ಈ ಕಥನದ ಮಧ್ಯೆ ಬಂದಾಗ, ಆಕೆಯನ್ನು “home breaker”, “villain” ಅಥವಾ “temptation” ಆಗಿ ಚಿತ್ರಿಸುವ ಪ್ರವೃತ್ತಿ ಇನ್ನೂ ಬಲವಾಗಿಯೇ ಇದೆ.


ಆದರೆ ನಿಜವಾಗಿ ನೋಡಿದರೆ, ಹೊರಗಿನವರಿಗೆ ಯಾವ ಸಂಬಂಧದ ನಿಜಸ್ವರೂಪ ಗೊತ್ತಿರುವುದಿಲ್ಲ. ಒಂದು oath ceremony ಯಲ್ಲಿ ಯಾರು ಬಂದರು, ಯಾರು ಬರಲಿಲ್ಲ ಎಂಬುದರಿಂದ ಕುಟುಂಬದ ಸಂತೋಷ ಅಥವಾ ದುಃಖವನ್ನು ತೀರ್ಮಾನಿಸುವುದು ಬಹಳ ಸರಳೀಕೃತ ಮತ್ತು sensational ದೃಷ್ಟಿಕೋನ. ಸಮಾಜ ಬಹಳ ಸಂಕೀರ್ಣವಾದ ಮಾನವ ಸಂಬಂಧಗಳನ್ನು ಒಂದು ಸಿನಿಮಾ ಕಥೆಯಂತೆ hero villain ಚೌಕಟ್ಟಿನಲ್ಲಿ ನೋಡಲು ಇಷ್ಟಪಡುತ್ತದೆ. ಅದರಲ್ಲೂ ಮಹಿಳೆಯರ ಮೇಲೆ ನೈತಿಕ ಹೊಣೆಗಾರಿಕೆಯನ್ನು ಹೆಚ್ಚು ಹಾಕಲಾಗುತ್ತದೆ.

ಚರಿತ್ರೆಯ ವಿವಿಧ ಕಾಲಘಟ್ಟಗಳಲ್ಲಿ ಮನುಷ್ಯನ ಲೈಂಗಿಕ ಸಂಬಂಧಗಳ ಸ್ವರೂಪ ಹೇಗೆ ಸಮಾಜದ ಆರ್ಥಿಕ ಮತ್ತು ಸಾಂಸ್ಕೃತಿಕ ರಚನೆಗಳ ಜೊತೆ ಬದಲಾಗುತ್ತವೆ ಎಂಬುದನ್ನು The Origin of the Family, Private Property and the State ನಲ್ಲಿ Friedrich Engels ವಿವರಿಸುತ್ತಾರೆ. ಅದೇ ದೃಷ್ಟಿಯಿಂದ ನೋಡಿದರೆ Vijay ಮತ್ತು Trisha Krishnan ಬಗ್ಗೆ ನಡೆಯುವ ನಿರಂತರ ಕುತೂಹಲವೂ ಕೇವಲ gossip ಅಲ್ಲ, ಅದು ಸಮಾಜದ ಮನೋವೈಜ್ಞಾನಿಕ ಮತ್ತು ಸಾಂಸ್ಕೃತಿಕ ರಚನೆಯ ಪ್ರತಿಬಿಂಬ. ಜನರು ಇಬ್ಬರು ಕಲಾವಿದರ ಸಿನಿಮಾ, ಪ್ರತಿಭೆ ಅಥವಾ ಸಮಾಜದ ಮೇಲೆ ಅವರ ಪ್ರಭಾವಕ್ಕಿಂತ ಅವರ ವೈಯಕ್ತಿಕ ಸಂಬಂಧಗಳ ಬಗ್ಗೆ ಹೆಚ್ಚು ಆಸಕ್ತಿ ತೋರಿಸುವುದು, “ಕುಟುಂಬ”, “ನೈತಿಕತೆ”, “ಯಾರ ಜೊತೆ ಯಾರು” ಎಂಬ ಕಲ್ಪನೆಗಳು ಇನ್ನೂ ಭಾರತೀಯ ಸಮಾಜದಲ್ಲಿ ಎಷ್ಟು ಬಲವಾಗಿ ಬೇರು ಬಿಟ್ಟಿವೆ ಎನ್ನುವುದನ್ನು ತೋರಿಸುತ್ತದೆ.

ಫೆಮಿನಿಸಂ ನ ಸ್ವಲ್ಪ ಹೊತ್ತು ಒಂದು ಮೂಟೆ ಲಿ ಕಟ್ಟಿ ಯೋಚನೆ ಮಾಡೋಣ!! ಮನುಷ್ಯ ಅನ್ನುವ ಒಂದು ಪ್ರಾಣಿ, ಪಾಲಿಗಾಮಿ (ಅಂದ್ರೆ ಒಂದಕ್ಕಿಂತ ಹೆಚ್ಚು ಸಂಗಾತಿಯನ್ನು ಬಯಸುವ ಅಥವಾ ಹೊಂದುವ) ಪ್ರಭೇದಗಳಲ್ಲಿ ಎಂಟನೆದೋ ಹತ್ತನೇದೋ ಸ್ಥಾನ ಕೊಟ್ಟಿದಾರೆ ಎವೊಲ್ಯೂಷನ್ ಚಾರ್ಟ್ ನಲ್ಲಿ ಅಂದ್ರೆ ಬೈಯೋಲೋಜಿಕಲೀ ಮನುಷ್ಯನಾದ ಮಾತ್ರಕ್ಕೆ ಉಳಿದ ಪ್ರಾಣಿಗಳಿಗಿಂತ ಲೈಂಗಿಕವಾಗಿ ಮನುಷ್ಯ ಪ್ರಾಣಿ ಬಹಳ ಭಿನ್ನವೇನಲ್ಲ, ಕಾಲ ಕ್ರಮೇಣ ನಾಗರಿಕತೆ, ಸಮಾಜ ಹಾಗೂ ಮದುವೆ ಎಂಬ ವ್ಯವಸ್ಥೆಯ ಭಾಗವಾಗಿ ಮೊನೊಗಾಮಿ ಯನ್ನು ಪಾಲಿಸಲು ಶುರುಮಾಡಲಾಯಿತು!! ಇದು ಆರೋಗ್ಯದ ದೃಷ್ಟಿಯಿಂದ ಹಾಗೂ ಕುಟುಂಬ ಎಂಬ ಕಲ್ಪನೆಗೆ ಒಂದು ದೊಡ್ಡ ಬಲ ಕೊಟ್ಟ ಸಂಗತಿ. ಆದರೆ ಅಗೈನ್ bilogically ಹೆಣ್ಣು ಮತ್ತು ಗಂಡು ತುಂಬ ವಿಭಿನ್ನವಾದ ಜೀವಿಗಳೇ!! ಯೋಚನಾ ಲಹರಿ ಹಾಗೂ ಫಿಸಿಕಲ್ ಅಟ್ರಿಬ್ಯೂಟ್ಸ್ ಹೊರತು ಪಡಿಸಿ ವಾಟ್ ಒನ್ ಫೀಲ್ಸ್ ಭಾವನಾತ್ಮಕವಾಗಿ ಹಾರ್ಮೋನುಗಳ ಸೆಕ್ರೆಷನ್ ಇಂದ ಅಥವಾ ಪ್ರತಿ ತಿಂಗಳು ನಡೆಯುವ ದೇಹದ ಬದಲಾವಣೆಗಳಲ್ಲಿಯೂ ! ಹೀಗಿರುವಾಗ ಇಬ್ಬರನ್ನು ಒಂದೇ ತಕ್ಕಡಿಯಲ್ಲಿ ತೂಗಿ ಸರಿ ತಪ್ಪು judgement ಕೊಡುವಲ್ಲಿ ಸೋಶಿಯಲ್ ಮೀಡಿಯಾ ಯಾವಾಗಲೂ ಒಂದು ಕೈ ಮುಂದೆಯೇ ಅನ್ನಿ!!

ಫೆಮಿನೈನ್ encouragement ಹಾಗೂ ಹೊಗಳಿಕೆ ಬಯಸುವದು ಗಂಡಿನ ಸಹಜ ಪ್ರಕ್ರಿಯೆ. ಎಲ್ಲ ಸರಿ ಆದರೆ ಹೆಣ್ಣು ಅಂದರೆ nurturer ಅಂದರೆ ಆರೈಕೆ ಮಾಡುವವಳು, ಬೆಳೆಸುವವಳು ಅಂತಾನೆ ಸ್ಟೀರಿಯೋಟೈಪಿಕಲ್ ಆಗಿ ಯಾಕೆ ಯಾವಾಗ್ಲೂ ಯೋಚನೆ ಮಾಡ್ಬೇಕು? ಫೆಮಿನಿಸಂ ಒಳ ಹೊಕ್ಕ ಮನಸ್ಸು ಹೌದಲ್ವಾ ಅಂತ ಅನ್ಸಿದ್ರು, bilogically ಅಮ್ಮನಾಗುವ, ಕುಟುಂಬ ಮುನ್ನಡೆಸುವ ಜವಾಬ್ದಾರಿಯನ್ನ ಪ್ರಕೃತಿ ಹೆಣ್ಣಿಗೆ ಅಲ್ವ ಕೊಟ್ಟಿದ್ದು, ಅದನ್ನ ಪ್ರಶ್ನೆ ಮಾಡದೆ ಒಪ್ಪಿಕೊಂಡಿರುವಾಗ ಇದು ಅಷ್ಟೇ ಗಂಡು ಯಾವಾಗ್ಲೂ ವ್ಯಾಲಿಡೇಷನ್ ಬಯಸ್ತಾನೆ ಇರ್ತಾನೆ , ಅದು ಅಮ್ಮ ,ತಂಗಿ,ಗೆಳತೀ, ಪ್ರೇಯಸಿ ಅಥವಾ ಸಂಗಾತಿ ಎಲ್ಲರಲ್ಲೂ ವರ್ಡ್ of affirmation ಬೇಕು ಅಂತ ಇದ್ದೆ ಇರುತ್ತೆ, ಹಲವು ಸಲ ಗಂಡಿನ ಸಕ್ಸಸ್ ಕೂಡ ಯಾವುದೊ ಕಳೆದು ಕೊಂಡ ಪ್ರೇಮದ ನೋವನ್ನು ಮರೆಯುವ ಅಸ್ತ್ರವಾಗಿ ಹೊರ ಹೊಮ್ಮಿರುತ್ತೆ. ಹoಗಾಗಿ ಯಾವ ಗಂಡಸು ತನ್ನ ಸಂಗಾತಿಗೆ ಸೇಫ್ ಸ್ಪೇಸ್ ಕೊಡಬಲ್ಲನೋ ಆತ ಮಾತ್ರ ಅಷ್ಟೇ ರೀತಿಯ ಆರೈಕೆ ಹಾಗೂ ಸೆಕ್ಯೂರಿಟಿ ಕೂಡ ಆ ಸಂಗಾತಿಯಿಂದ ಪಡೆಯಬಹುದು ಮತ್ತು ಅದರಿಂದ ಸಿಗುವ ಶಾಂತಿ ನೆಮ್ಮದಿಯಿಂದ ಏಳಿಗೆ ಹೊಂದಬಹುದು.

ಜಗತ್ತಿನ ಅತೀ ಸುಂದರಿ ಪಟ್ಟ ಹೊಂದಿಯೂ ಕೂಡ ಹೆಣ್ಣು ತನ್ನ ಸಂಗಾತಿಯಿಂದ ಮೊಸಗೊಳಗಾಗಬಲ್ಲಳೇ?!! ಹೌದು ಖಂಡಿತ!! ಅದನ್ನು ಕ್ಷಮಿಸೋದು ಖಂಡಿಸೋದು ಅಥವಾ ಅದಕ್ಕೆ ತಕ್ಕ ಶಿಕ್ಷೆ ಕೊಡೋದು ಪ್ರತಿ ಹೆಣ್ಣಿನ ವಯಕ್ತಿಕ ಆಯ್ಕೆ ಅದನ್ನು ಅಷ್ಟೇ ಗೌರವದಿಂದ ಸಮಾಜ ಸ್ವೀಕರಿಸಬೇಕು ಬಟ್ unfortunately ಅದು ನಮ್ಮ ಸಮಾಜಕ್ಕೆ ನಾಗರೀಕತೆಗೆ ಅಂಟಿರುವ ಖಾಯಿಲೆ ಇಂದ ಸರಿ ಹೋಗುವಂಥದಲ್ಲ!! ಎಲ್ಲ ಸರಿ ಇರುವಾಗಲೂ(?!) ಕಾರಣಗಳೇ ಇಲ್ಲದೆ ಗಂಡು ಬೇರೆ ಕಡೆ ಮುಖ ಮಾಡುವುದು ಎಷ್ಟು ಸರಿ ಎಷ್ಟು ತಪ್ಪು ಅನ್ನೋದು ಅಗೈನ್ ಸಬ್ಜೆಕ್ಟಿವ್ ಕಲ್ಪನೆ ಮನುಷ್ಯ ಯಾಕೆ ಹಾಗೆ ಯೋಚಿಸುತ್ತಾನೆ ಅನ್ನೋ ಲಹರಿಯೇ ತೀರಾ ಕಾಂಪ್ಲಿಕೇಟೆಡ್, ಇಷ್ಟೆಲ್ಲಾ ಆದರೂ ಒಂದು ಹೆಣ್ಣು ಯಾಕೆ ಸಹಿಸಿಕೊಳ್ಳುತ್ತಾಳೆ ಅನ್ನೊಂದು ಇನ್ನೊಂದು ಎಕ್ಸ್ಟ್ರೀಮ್ ಕಾಂಪ್ಲಿಕೇಷನ್. ಇದರ ಮಧ್ಯೆ ಬೇಲಿ ಹಾರಿದ ಪ್ರತಿ ಗಂಡಸಿನದ್ದೇ ತಪ್ಪು ಅನ್ನೋಕ್ಕೆ ನಾವ್ಯಾರು ಅವರ ಮನೆಯನ್ನು ಸಹ ನೋಡಿರುವುದಿಲ್ಲ ಇನ್ನು ಆವರ ಒಳ ಜಗಳ ಮನಸ್ತಾಪ ನಮಗೆ ಗೊತ್ತೂ ಇರುವುದಿಲ್ಲ! ಕೆಲವೊಮ್ಮೆ ಗಂಡು ಸೌಂದರ್ಯ ಮೀರಿದ್ದೇನೋ ಬಯಸುತ್ತಾನಾ ಅನಿಸುತ್ತೆ. ಇರಬಹುದು ಗೊತ್ತಿಲ್ಲ!

ಇದರ ಮಧ್ಯೆ ಅವರ್ನೆಲ್ಲ ಆಡಿಕೊಂಡು ಮಾನಸಿಕವಾಗಿ ಇನ್ನೊಬ್ಬ ಹೆಂಗಸನ್ನು ಬಯಸುವ ಗಂಡು, ದೈಹಿಕವಾಗಿ ಎಂತದ್ದು ಮಾಡಲಿಲ್ಲವಲ್ಲ ಹಾಂಗಾಗಿ ನಾನು ಸತಿ ಸಾವಿತ್ರಿಯ ಗಂಡು ರೂಪ ಅಂತ ಒಳಗೊಳಗೇ ಖುಷಿ ಪಡಬಹುದಷ್ಟೆ! ಇನ್ನು ಎಲ್ಲ ಕಷ್ಟ , ನೋವು, ತಾಪತ್ರೆಯ ಮೋಸ ಹೆಣ್ಣಿಗೆ ಆಗುತ್ತೇನೋ ಅಂದರೆ ,ಹೂo! ಹೆಚ್ಚಿನ ಸಲ ಕೌಟುಂಬಿಕ ಕಟ್ಟಳೆಯೊಳಗೆ ಬಂದ ಹೆಂಗಸೂ, ಮಾನಸಿಕವಾಗಿ ಇನ್ನೊಂದು ಕಡೆ ಮುಖಮಾಡಿಯೂ ಗಂಡಿನಷ್ಟು ಧೈರ್ಯವಾಗಿ ಬೇಲಿ ಹಾರಲು ಯತ್ನಿಸದೆ ಇರಬಹುದು ಆದರೆ ಎರಡೂ ಕಡೆ exceptions ಇದ್ದೆ ಇವೆ! ಮನುಷ್ಯ ಸಹಜ ಕಾಮ ಮೀರಿ ಬೆಳೆದ ಯೋಗಿಗಳಿದ್ದಾರೆ ಹಾಗೆ ಅದೇ ಕಾಮಕ್ಕೆ ಬಲಿಯಾದ ಗಂಡು ಹೆಣ್ಣು ಇಬ್ಬರೂ ಸಮ ಪ್ರಮಾಣದಲ್ಲೇ ಇದ್ದಾರೆ! ಆದರೆ ಹೆಣ್ಣು ಮಾಡುವ ಪ್ರಮಾದ ಒಂದಿಡೀ ಕುಟುಂಬ ಛಿದ್ರ ಗೊಳಿಸುವ ಸಂಭವ ಅತೀ ಹೆಚ್ಚು, ಗಂಡು ಬೇಲಿ ಹಾರಿ ವಾಪಸ್ಸು ಬಂದು ಏನೂ ಆಗಿಯೇ ಇಲ್ವೇನೋ ಎಂಬಂತೆ ಇದ್ದು ಬಿಡಬಹುದು ಹೆಚ್ಚಿನ ಸಲ ಅದು ಮಕ್ಕಳ ವರೆಗೆ ದಾಟಿಯೇ ಇರುವುದಿಲ್ಲ!! ಇದು ಕೇವಲ ಮನರಂಜನೆ, ಕಾಲಹರಣ, ಹಾಗೂ ಆಡಿಕೊಳ್ಳುವ ವಿಷಯವಲ್ಲ ಇದಕ್ಕೆ ಸಾಮಾಜಿಕ ,ವೈಯಕ್ತಿಕ ಹಾಗೂ ಜೈವಿಕ ಕಟ್ಟುಪಾಡುಗಳೂ ಕಾರಣವಾಗಿರುತ್ತವೆ.

ಹೆಂಗಸಿಗೆ ನೋವುಂಟು ಮಾಡಿ, ಅವಳಿಗೆ ದ್ರೋಹ ಮಾಡಿ, ಅವಳ ಜೊತೆ ಬದುಕಲು ಇಚ್ಛಿಸದೆ ಇರುವ ಪುರುಷನ ಅವನತಿ ಖಚಿತ ಎನ್ನುವ ನಂಬಿಕೆ ನಮ್ಮ ಸಮಾಜದಲ್ಲಿ ಬಹಳ ಗಾಢವಾಗಿ ಇದೆ. ಅದು purely moral theory ಆಗಿರಬಹುದು, karmic justice ಅನ್ನುವ ಕಲ್ಪನೆಯಾಗಿರಬಹುದು, ಅಥವಾ ಶತಮಾನಗಳಿಂದ ಬಂದ ಮಾನವ ಅನುಭವಗಳ ಸಾರವಾಗಿರಬಹುದು. ಯಾಕೆಂದರೆ ವೈಯಕ್ತಿಕ ಜೀವನದಲ್ಲಿ ಅಸ್ಥಿರತೆ, ಅಪರಾಧಬೋಧ, ಸಂಬಂಧಗಳ ಒಡೆತ ಇವು ಮನುಷ್ಯನ ಒಳಜಗತ್ತಿನ ಮೇಲೆ ಪರಿಣಾಮ ಬೀರುತ್ತವೆ ಎಂಬುದನ್ನು ಯಾರೂ ಸಂಪೂರ್ಣ ತಳ್ಳಿಹಾಕಲು ಸಾಧ್ಯವಿಲ್ಲ.

ಆದರೆ ವಿಚಿತ್ರ ಸತ್ಯ ಏನೆಂದರೆ, ರಾಜಕೀಯ ಮತ್ತು ಅಧಿಕಾರದ ಜಗತ್ತು ಈ ಸಿದ್ಧಾಂತಕ್ಕೆ ಸದಾ ತಲೆಬಾಗುವುದಿಲ್ಲ. ನಮ್ಮ ದೇಶದ ಇತಿಹಾಸದಲ್ಲೇ ಅನೇಕ Prime Minister ಗಳು, Chief Minister ಗಳು, MLA, MP ಗಳ ವೈಯಕ್ತಿಕ ಬದುಕು ವಿವಾದಗಳಿಂದ ಕೂಡಿದ್ದರೂ, ಅವರ ರಾಜಕೀಯ ಏರಿಕೆ ನಿಂತಿಲ್ಲ. ಅಧಿಕಾರದ ಲೋಕದಲ್ಲಿ ಜನರು ಹಲವಾರು ಬಾರಿ ವ್ಯಕ್ತಿಯ private morality ಮತ್ತು public success ಅನ್ನು ಬೇರೆ ಬೇರೆ ತೂಕದಲ್ಲಿ ಅಳೆಯುತ್ತಾರೆ. ಕೆಲವೊಮ್ಮೆ ಜನರು “ಒಳ್ಳೆಯ ಆಡಳಿತಗಾರನಾ?” ಅನ್ನುವುದನ್ನೇ ಮುಖ್ಯವಾಗಿ ನೋಡುತ್ತಾರೆ; “ಒಳ್ಳೆಯ ಗಂಡನಾ?” ಅನ್ನುವುದನ್ನು ಅಲ್ಲ.

ಅದೇ ಕಾರಣಕ್ಕೆ ಸಮಾಜ ಒಂದು ಕಡೆ ಕುಟುಂಬ ಮೌಲ್ಯಗಳ ಬಗ್ಗೆ ಮಾತನಾಡುತ್ತಾ, ಇನ್ನೊಂದು ಕಡೆ ವೈಯಕ್ತಿಕ ಬದುಕಿನಲ್ಲಿ ವಿವಾದಗಳಿದ್ದ ನಾಯಕರನ್ನೇ ಭಾರೀ ಮತಗಳಿಂದ ಗೆಲ್ಲಿಸುತ್ತದೆ. ಇದು ಮಾನವ ಸಮಾಜದ ದೊಡ್ಡ paradox. ವೈಯಕ್ತಿಕ ನೈತಿಕತೆ ಮತ್ತು ಸಾರ್ವಜನಿಕ ಯಶಸ್ಸು ಯಾವಾಗಲೂ ಒಂದೇ ದಾರಿಯಲ್ಲಿ ನಡೆಯುವುದಿಲ್ಲ ಎಂಬುದೇ ಆ ವಿಚಿತ್ರವಾದ ಸತ್ಯ.

ಇದನ್ನೇ Engels ಹೇಳುವ ಸಾಮಾಜಿಕ morality ಯ ಭಾಗವಾಗಿ ನೋಡಬಹುದು. ಸಮಾಜ “ideal family image” ಅನ್ನು ಕಾಪಾಡಲು ಪ್ರಯತ್ನಿಸುವಾಗ, ವೈಯಕ್ತಿಕ ಸ್ವಾತಂತ್ರ್ಯ, ಸ್ನೇಹ, ಅಥವಾ ಮಾನವ ಸಂಬಂಧಗಳ ಸಂಕೀರ್ಣತೆಯನ್ನು ಒಪ್ಪಿಕೊಳ್ಳಲು ಕಷ್ಟಪಡುತ್ತದೆ. ಅದಕ್ಕೇ Trisha Krishnan ಅವರನ್ನು ವ್ಯಕ್ತಿಯಾಗಿ ನೋಡುವುದಕ್ಕಿಂತ, ಒಂದು ಸಂಕೇತವಾಗಿ ಅಥವಾ ಆರೋಪದ ಮುಖವಾಗಿ ಬಳಸಲಾಗುತ್ತಿದೆ.

#ThalapathyVijay #TVK #PoliticalDiscourse
#SocialMediaTrolls
#GenderRoles #DoubleStandards #MoralPolicing #PersonalIsPolitical #IdentityPolitics #feminist #societalnorms

Monday, November 3, 2025

ಮೂರ್ತಿ ಪೂಜೆ, ದೇವರು , ಮತ್ತು ತರ್ಕಕ್ಕೆ ಮೀರಿದ ನಂಬಿಕೆ!!!



ಎವೊಲ್ಯೂಷನ್ ಕೇವಲ ಜೀವರಾಶಿಗಳಲಿಲ್ಲ, ಅದೊಂದು ನೀರಿನಂತರ ಪ್ರಕ್ರಿಯೆ. ನಾವು ದಿನ ನಿತ್ಯ ನಮ್ಮ ಸುತ್ತಲೂ ನಡೆಯುವ ಘಟನೆಗಳ ಆಧಾರದ ಮೇಲೆ, ಮತ್ತು ಆ ಘಟನೆಗಳು ನಮ್ಮ ಮೇಲೆ ಬೀರುವ ಪರಿಣಾಮಗಳ  ಆಧಾರದ ಮೇಲೆ, ಮಾನಸಿಕವಾಗಿ, ಸೈಧಾಂತಿಕವಾಗಿ ಹಾಗೂ ದೈವಿಕವಾಗಿ ಬದಲುಗುತ್ತಾ ಹೋಗ್ತೇವೆ, ಈ ಬದಲಾವಣೆ ಪಾಸಿಟಿವ್ ರೀತಿಯ ಇಂಪ್ಯಾಕ್ಟ್ ಮಾಡಿದರೆ ಅದು ಕೂಡ ಎವೊಲ್ವಿಂಗ್ ಪ್ರಕ್ರಿಯೆ ನೇ !!  

ಒಂದಷ್ಟು ವರ್ಷದ ಹಿಂದೆ, ಇದೇ ಸರಿ ಇದೆ ತಪ್ಪು ಅನಿಸುತ್ತೆ, ಕೆಲವು ವರ್ಷಗಳ ನಂತರ ತಪ್ಪು ಅನ್ಕೊಂಡಿದ್ದು ಸರಿ, ಸರಿ ಅನ್ಕೊಂಡಿದ್ದು ತಪ್ಪು ಅನ್ಸುತ್ತೆ, ಕೊನೆ ಕೊನೆಗೆ ಎಲ್ಲದೂ ಸರಿ ನನ್ನ ಅನಿಸಿಕೆ ತಪ್ಪು ಅನಿಸಲಿಕ್ಕೆ ಶುರುವಾಗುತ್ತೆ!! ಇಷ್ಟೆಲ್ಲಾ ಪೀಠಿಕೆ ಯಾಕೆ ಅಂದ್ರ ? ತುಂಬಾ ಮುಖ್ಯವಾದ ವಿಷಯ ಇದೆ, ಈಗ ಈ ಮೂರ್ತಿ ಪೂಜೆ ನಿಷೇಧಿಸಿ, ವೈದಿಕ ಆಚರಣೆ ನಿಷೇಧಿಸಿ, ಅದು ನಮ್ಮ ಆಚರಣೆ ಅಲ್ಲ ಅಂತ ಒಂದು ಬಣ ಎದ್ದಿರೋದು ಅವರದ್ದು ತಪ್ಪು ಅಂತ ಇನ್ನೊಂದು ಬಣ ಹೇಳ್ತಿರೋದು ವಾದ ವಿವಾದ ಪ್ರತಿವಾದ ಎಂತದೆಲ್ಲ ನಡೀತಾ ಇತ್ತಲ, ಈ ರಾಜಕೀಯ ನಮಗೆ ಬೇಡ ಆದರೆ ಯಾವುದು ನಿರುಪದ್ರವಿ ಆಚರಣೆ ಹಾಗೂ ನಂಬಿಕೆ ಆಗಿರಿತ್ತೋ ಅದನ್ನ ಟಚ್ ಮಾಡಕ್ ಹೋಗ್ಬಾರ್ದು ಅನ್ನೋದು ಕಾಮನ್ ಸೆನ್ಸ್ , ಬಟ್ that  ಈಸ್  ನಾಟ್ ಕಾಮನ್!

ಇಂಥದ್ದೇ ಅಪಭ್ರಂಶ ನಂಬಿಕೆಗಳು ಮತ್ತು ನಾ  ಅನ್ಕೊಂಡಿರೋದು ಮಾತ್ರ ಸತ್ಯ ಅಂತ ನನ್ನ ನಾನೇ ಹಲವು ಬಾರಿ ಸಂತೈಸಿಕೊಂಡು  ಅಹಂಕಾರ ಪಟ್ಟುಕೊಂಡಿದ್ದಿದೆ. But  ಯೂನಿವರ್ಸ್ ಹ್ಯಾಸ್ ಇಟ್ಸ್ ಓನ್ ವೆ of  ಟೀಚಿಂಗ್ ಯು ಲೆಸೆನ್ಸ್ . 

ಎರಡು ವರ್ಷದ ಹಿಂದೆ ಇಂಗ್ಲೆಂಡ್ ನ ಬರ್ಹ್ಮಿಂಗ್ಹ್ಯಾಮ್ ನ ದೇವಸ್ಥಾನದ ಪಟವನ್ನು, ನನ್ನ ಫೋನ್ ಮೆಮೊರಿ ಜ್ಞಾಪಿಸಿತು!!  ಮನಸ್ಸು ಮತ್ತೆ ಯುರೊಪ್ ಸುತ್ತಿ ಬಂತು. ಐರ್ಲೆಂಡ್ ನಲ್ಲಿ ಕಾನ್ಫರೆನ್ಸ್ ಭಾಗದ ನಿಮಿತ್ತವಾಗಿ ಹೋಗಿ, ಹೇಂಗೂ  ಬ್ರಿಟಿಷ್ಐರಿಶ್ ವೀಸಾ ಇರೋ ಕಾರಣಕ್ಕೆ  ಯುಕೆ  ಪ್ರವಾಸ ಕೂಡ ಮಾಡಬಹುದು ಸೊ , ನಿಮ್ಮ ಕಾನ್ಫರೆನ್ಸ್  ಮುಗಿಯೋ ಅಷ್ಟ್ರಲ್ಲಿ ನಾನು ಯುಕೆ ಐಟರ್ನರಿ ಸಿದ್ಧ ಮಾಡ್ತೇನೆ ಅಂತ ನನ್ನ ಹೋಸ್ಟ್ ಮಾಡಿದ ಗೆಳತೀ ಹೇಳಿದಳು. ಹೇಂಗೂ ಇಷ್ಟು ದೂರ  ಬಂದಿದ್ದಾಗಿದೆ ಅದು ನೋಡೇ ಬಿಡೋಣ ಅಂತ ಅರ್ಧ ಮನಸ್ಸು ಹೇಳಿದ್ರೆ ಇನ್ನ ಅರ್ಧ ಮನಸ್ಸು ಸಾಕಪ್ಪ ಯುರೋಪ್  ಸಾವಾಸ, ಮನೆ ಊಟ ಇಲ್ದೆ ಹದಿನೈದು ದಿವಸಕ್ಕೆ ಬರೋಬ್ಬರಿ ೫ ಕೆಜಿ ತೂಕ ಕಮ್ಮಿ ಆಗಿ ಹೋಗಿತ್ತು, ಕಾನ್ಫರೆನ್ಸ್ ಊಟವೋ ದೇವರಿಗೆ ಪ್ರೀತಿ, ಗೆಳತೀ ಕರ್ನಾಟಕದವಳೇ ಅಲ್ಲಿ ಹೋಗಿ ೧೦ ವರ್ಷದ ಮೇಲಾಗಿರೋದಕ್ಕೆ ಈಗ ಅವಳ ಪೂರ್ತಿ ದಿನಚರಿ ಐರಿಶ್ ಲೈಫ್ಸ್ಟೈಲ್ ಥರವೇ!! ಬೆಳಿಗ್ಗೆದ್ದು ದಿನ ಏನ್ ತಿಂಡಿ ಅಂತ ತಲೆ ಕೆಡಸ್ಕೊಳಲ್ಲ ಓಟ್ಸ್ ಇರುತ್ತೆ ಫ್ರಿಡ್ಜ್ ಅಲ್ಲಿ ಹಾಲಿರುತ್ತೆ, ಅವನ್ ಅಲ್ಲಿ ಬಿಸಿ ಮಾಡ್ಕೊಂಡು ಮೇಲೆ  ಬ್ಲೂ ಬೆರಿ ಹಾಕೊಂಡು ತಿನ್ನು ಅಂತ ಹೇಳಿ ಆಫೀಸ್ ಹೋಗ್ತಿದ್ಲು ಒಂದಿನ ಸರಿ ಎರಡ್ ದಿನ ಸರಿ, ಮೂರನೇ ದಿನ ಅಮ್ಮ ಮಾಡ್ತಿದ್ದ ತರಕಾರಿ ಉಪ್ಪಿಟ್ಟು, ಅವಲಕ್ಕಿ, ಶಾವಿಗೆ ಉಪ್ಪಿಟ್ಟು ಎಲ್ಲ ನೆನಪಾಗಾಕ್ ಶುರವಾಯ್ತು. ಹೇಗೆ ಜೊತೆಲಿರುವಾಗ ಒಬ್ಬರ ವ್ಯಾಲ್ಯೂ ಗೊತ್ತಾಗಲ್ವೋ ಹಂಗೆ, ದಿನ ತಿನ್ನೋ ನಮ್ಮ ಆಹಾರ ಏನ್ ಮಹಾ ಅನ್ಸಿರುತ್ತೆ, ಮೂರ್ ದಿನಕ್ಕೆ ಅದಿಲ್ದೆ ಎಂಥ ನರಕ ಜೀವನ ಅನ್ನೋದು ಗೊತ್ತಾಗುತ್ತೆ !  

ಒಂದು ವಾರಕ್ಕೆ  ದೋಸೆ  ಇಡ್ಲಿ  ನೆನಪಾಗಿ ಡಬ್ಲಿನ್ ನಗರದ ದೋಸೆ ವ್ಯಾನ್ ಹುಡ್ಕೊಂಡು ಹೋದೆ, ನಮ್ಮ ವೆನ್ಯೂ ಇಂದ ಎರಡು ಕಿಲೋಮೀಟರು ಕಾಲ್ನಡಿಗೆ, ಅಯ್ಯೋ  ಸ್ವರ್ಗ ಸಿಕ್ಕ ಅನುಭವ ತಿಂದು ಮುಗಿಸುವ ಹೊತ್ತಿಗೆ ದೋಸೆ ಪ್ಲಸ್ ನೀರು ಸೇರ್ಸಿ  ೧೫ ಯುರೋ ಅಂತಾಯ್ತು ದೋಸೆ ತಿಂದ  ಖುಷಿಗೆ ೧೫೦೦ ಏನ್ ದೊಡ್ಡ ವಿಷಯ ಅಲ್ಲ ಬಿಡು ಅನ್ಕೊಂಡು ಸುಮ್ಮನಾದೆ, ಅಷ್ಟೊತ್ತಿಗಾಗಲೇ ೧೫೦೦ ರೊಪಾಯಿಗೆ ಒಂದು ತಿಂಗಳಿಗೆ ಆಗೋವಷ್ಟು ದೋಸೆ ತಿನ್ಬೋದಿತ್ತು ಯಾ ಸೀಮೆ ಜನ ಇವ್ರೆಲ್ಲ ಅಂತ ಮನಸ್ಸು ಬೈಕೊಂಡಿತ್ತು ಅದು ಬೇರೆ ವಿಷಯ.  ಅಷ್ಟರಲ್ಲೇ ಬಿಸಿ  ಊಟ ತಿನ್ನದೇ ವರ್ಷಗಳೇ ಕಳೆದಹಾಗೆ , ಜನಕ್ಕೆ ಗೊತ್ತಾಗದ ಹಾಗೆ ಮನಸ್ಸು ರೋಧಿಸಲು ಶುರುಮಾಡಿತ್ತು!  ವಾಪಾಸ್ ಊರಿಗೆ ಬಂದು ಬಿಡೋಣ ಅಂದ್ರೆ ಇನ್ನು ಒಂದು ವಾರ ಇಲ್ಲೇ ಠಿಕಾಣಿ ಅದರ ಮಧ್ಯೆ ಐರ್ಲೆಂಡ್ ಹಸಿ ಹಸಿ ತಣ್ಣಗಿನ ವಿಚಿತ್ರ ಊಟ ತಿಂದಿದ್ದಲ್ಲದೆ ಈಗ ಯುಕೆ ಗೆ ಬೇರೆ ಪ್ಲಾನ್ ಮಾಡ್ಕೊಂಡ್ ಕೂತಿದಾಳೆ ಊರಿಗ್ ಹೋಗೋವಶ್ಟರಲ್ಲಿ ಹೆಣ ಬಿದ್ದಿರುತ್ತೆ ನಂದು ಅನ್ಕೊಂಡೆ ಹೊರಡಲು ತೈಯಾರಿ ಮಾಡ್ಕೊಂಡಿದ್ದಾಯ್ತು!!

Stanstad ಏರ್ಪೋರ್ಟ್ ತಲುಪುವಾಗ ರಾತ್ರಿ ಒಂದು ಗಂಟೆ, ಅಲ್ಲೇ ಏರ್ಪೋರ್ಟ್ನಲ್ಲಿ ಫ್ರಿಡ್ಜ್ ನಲ್ಲಿ ಇಟ್ಟಿರೋ sandwich  ಕೊಕೊನಟ್ ವಾಟರ್ ತಗೊಂಡು ರಾತ್ರಿ ಜೈ ಅಂದ್ರು ನನ್ನ ಯೂರೋಪ್ ಸ್ನೇಹಿತೆಯರು. ನನ್ ಜೇವಮಾನದಲ್ಲೇ  ಅಷ್ಟು ಕೆಟ್ಟದಾಗಿರೋ ಸ್ಯಾಂಡ್ವಿಚ್  ತಿಂದಿರಲಿಲ್ಲ ನಾನು "atleast ಅವನ್ ಅಲ್ಲಿ ಬಿಸಿ ಮಾಡ್ಕೊಂಡು ಆದರು ತಿಂತೀನಿ ಎಲ್ಲಾದ್ರೂ ಬಿಸಿ ಮಾಡಿ ಕೊಡ್ಸರೆ" ಅಂದ್ರೆ ಗೊಳ್ ಅಂತ ನಕ್ಕು "ಅಕ್ಕ, ಇಲ್ಲೆಲ್ಲಾ ನಿಂಗೆ ಇಂಡಿಯಾ ಥರ ಬಿಸಿ ಬಿಸಿ ಊಟ ಸಿಗಲ್ಲ ಸುಮ್ನೆ ತಿನ್ನು " ಅಂತ ಆಡಿಕೊಂಡಿದ್ರು. ಆವತ್ತು ರಾತ್ರಿ ಪ್ಯಾಕ್ಡ್ ಕೊಕೊನಟ್ ಜ್ಯೂಸು ನನ್ನ ರಾತ್ರಿ ಊಟವಾಗಿತ್ತು ಅಷ್ಟೇ, ತುಂಬಾ ಬೇಜಾರಲ್ಲೇ ಅಮ್ಮನಿಗೆ ಕಾಲ್ ಮಾಡಿ ಅಮ್ಮ ಇಲ್ಲೇನು ಊಟ ಸರಿ ಹೋಗ್ತಿಲ್ಲ ನಂಗೆ ಅಂತ ಬೇಜಾರಲ್ಲೇ  ಹೇಳಿ ಮಲಗಿದೆ. ರಾತ್ರಿಯೆಲ್ಲ , ಹಸಿವೆ ಇಂದ ನಿದ್ದೆ ಇಲ್ಲ !! ತಿನ್ನಣ  ಅಂದ್ರೆ ಮತ್ತದೇ ಸ್ಯಾಂಡ್ವಿಚ್ ಅಯ್ಯೋ ಬೇಡ ಅಂತ ನೀರ್ ಕೂಡದು ಮಲ್ಕೊಂಡೆ. 

 ಬೆಳಿಗ್ಗೆ ನನ್ನ ಗೆಳತೀ ಹೋಗಬೇಕಾದ ಪ್ಲಾನ್ ಚೇಂಜ್ ಮಾಡಿ ಮೊದಲು Barmingham ಹೋಗಿ ಆಮೇಲೆ ಉಳಿದ ಕಡೆ ಹೋಗಣ ಅಂದ್ಲು , ಮೊದಲೇ ಸರಿ ಊಟ ಇಲ್ದೆ ಬೆಂದು ಹೋಗಿರೋ ಜೀವಕ್ಕೆ ಪ್ಲಾನ್ ಯಾಕೆ ಚೇಂಜ್ ಅಂತ ಕೇಳಿದ್ರೆ ದೇವಸ್ಥಾನ ಇದೆ ಅಲ್ಲಿ ಅದಕ್ಕೆ ಅಲ್ಲಿ ಅಂತ ಹೇಳಿದ್ಲು, ಅಲ್ಲ ನಾನು ಈ ಟ್ರಿಪ್ ಮಾಡ್ತಿರೋದು ಇಂಗ್ಲೆಂಡ್ ನೋಡಕ್ಕೆ ತೀರ್ಥ ಯಾತ್ರೆ ಅಲ್ಲ ಕಣಕ್ಕ...  ಮೊದಲೇ ನಾನು ಇಂಥದನ್ನೆಲ್ಲ ಇಷ್ಟ ಪಡಲ್ಲ ಇಲ್ಲಿ ಬಂದು ಗುಡಿ ಗುಂಡಾಂತರ ಅಂತ ಓಡಾಡಿಸ್ತೀಯಾ ನ ಒಲ್ಲೇ ಅಂತ ಜಗಳ ಶುರು ಮಾಡಿದೆ. ನನ್ನ ಬಿಟ್ಟು ಇನ್ನು ಮೂರು ಜನ ಹುಡುಗಿಯರು ದೈವ ಭಕ್ತರು ಹೋಗ್ಲೇ ಬೇಕು ಅಂತ ಹಠ ಹಿಡಿದರು, ಥೋ ಯುರೋಪ್  ಬಂದ್ರು ಇವ್ರೆಲ್ಲ ಇಷ್ಟೇನೆ ಅಂತ ಬೈಕೊಂಡು, ಇನ್ನೇನು ವಾಪಾಸ್ ಹೋಗಕ್ಕೆ ಅದೇನು ಬೆಂಗಳೂರ, ಒಲ್ಲದ ಮನಸ್ಸಿನಿಂದ ಹೋದೆ!

ಅದೋ ಪಕ್ಕ ಭಾರತದ ವೆಂಕಟರಮಣನ ತದ್ರೂಪ ದೇವಸ್ಥಾನ!! ಇದೇನ್ ವಿಶೇಷ ಅಂತ ಬಂದಿದಿರೇ ಇವೆಲ್ಲ ಗಲ್ಲಿಗೊಂದು  ಇಲ್ವಾ ನಮ್ಮೂರಲ್ಲಿ, ಸರಿ ನೀವು ಕ್ಯೂನಲ್ಲಿ ನಿಂತ್ಕೊಂಡು ಮಂಗಳಾರತಿ, ಪ್ರದಕ್ಷಿಣೆ ಎಲ್ಲ ಮುಗಸ್ಕೊಂಡ್ ಬನ್ನಿ  ನಾನು ಇಲ್ಲೇ ಕೂತಿರ್ತೀನಿ ಅಂತ ಅವರನ್ನು ಒಳಗೆ ಕಳ್ಸಿ  ದೇವಸ್ಥಾನದ ಅಂಗಳದಲ್ಲಿ  ಕೂತೆ. ಅಷ್ಟೊಂದು  ಜನರ  ಮಧ್ಯೆ  ನಾವು ಇಂಗ್ಲೆಂಡ್ ನಲ್ಲಿ ಇದೀವ ಭಾರತ ದಲ್ಲಿದೀವ ಅನ್ನೋ ಕನ್ಫ್ಯೂಷನ್. ಥರಾವರಿ ಭಾರತದ ಅದರಲ್ಲೂ ತಮಿಳು ತೆಲುಗು ಕನ್ನಡ ಮಾತಾಡೋ ಅಮ್ಮಂದಿರು ಮಕ್ಕಳನ್ನು ತಮ್ಮ ಭಾಷೆಯಲ್ಲೇ ಕರೆದು ಎಂತದ್ದೋ ಹೇಳ್ತ ಇದ್ರು, ಪರವಾಗಿಲ್ವೇ ಎಲ್ಲ ಅವರವರ ಭಾಷೆ ಚೆನ್ನಾಗೆ ಮಾತಾಡ್ತಾರೆ ಅನ್ಕೊಂಡು ದೇವಸ್ಥಾನ ಎಷ್ಟು ಕ್ಲೀನ್ ಇದೆಯಲ್ಲ, ಅಲ್ಲ ಈ ಜನ ಇಂಡಿಯಾ ಬಿಟ್ಟ ಬರೋದಂತೆ ಇಲ್ಲಿ ಬಂದು ದೇವಸ್ಥಾನ ಕಟ್ಸಿ ಸಂಭ್ರಮಿಸೋದಂತೆ, ಅಷ್ಟು ದೈವ ಭಕ್ತಿ ಇರೋವ್ರು ಇಲ್ಯಾಕ್ ಬರ್ಬೇಕು ಅಂತ ಲಾಜಿಕ್ ಇಲ್ಲದ ಪ್ರಶ್ನೆಗಳನ್ನು ಕೇಳ್ಕೊಂಡು ಕೂರಲು ನನ್ನ ಬಿಟ್ಟು, ದೇವರ ಹತ್ತಿರ ದರ್ಶನ ಪಡ್ಕೊಂಡು ಬರಕ್ಕೆ ಹೋದವ್ರು, ವಾಪಾಸ್ ಬಂದು, ಬಾ ಈವಾಗ ನಿಂಗೊಂದ್ ಸರ್ಪ್ರೈಸ್ ಇದೆ ಅಂದ್ರು!! ಅಲ್ಲ ಕಣ್ರೆ ಲಂಡನ್ ಬ್ರಿಜ್ ತೋರ್ಸಿ ಅಂದ್ರೆ ಯಾಕೆ ಹಿಂಗ್ ಜೀವ್ ತಿನ್ಕೊಂಡು ಈ ದೇವ್ರು ದೇವಸ್ಥಾನ ಅಂತ ಟೈಮ್ ವೇಸ್ಟ್ ಮಾಡ್ತಿದಿರೆ ನಂಗ್ ನಿಜ ಇಷ್ಟ ಆಗ್ತಿಲ್ಲ ನಡೀರಿ ಮೊದಲು ಇಲ್ಲಿಂದ ಅಂದೇ!! 


"ಇವತ್ತು ಇಲ್ಲೇ ಪ್ರಸಾದ ಇದೆ ಇಲ್ಲೇ ಊಟ ಮಾಡ್ಕೊಂಡು ಹೋಗಣ, ಎರಡು ವಾರದಿಂದ ಬಿಸಿ ಬಿಸಿ ತಿನ್ಬೇಕು ಅಂತಿದ್ಯಲ ಅದ್ಕೆ ಇಲ್ಲಿ ಕರ್ಕೊಂಡ್ ಬಂದೆ, ನೋಡು ಈವಾಗ  ಪಕ್ಕ ಸೌತ್ ಇಂಡಿಯನ್ ಫುಡ್ ಸಿಗುತ್ತೆ" ಅಂದ್ಲು, ದೇವರು ಪ್ರತ್ಯಕ್ಷ ಆಗಿದ್ರೆ ಅಷ್ಟು ಖುಷಿ ಆಗ್ತಿತ್ತೋ ಇಲ್ವೋ ಗೊತ್ತಿಲ್ಲ, ಫುಲ್ಲು ಖುಷಿ ಆಗಿ "ಹೌದಾ!! ಸಂಜೆ ಆದ್ರೂ ಪರವಾಗಿಲ್ಲ ಪ್ರಸಾದ ತಿಂದುಕೊಂಡೆ  ಹೋಗಣ"?! ಅಂದೇ !! ಅಷ್ಟರಲ್ಲೇ ಪ್ರಸಾದ sponsor  ಮಾಡಿದ ತೆಲುಗು ಮಾತಾಡೋ ಜನ ಬಂದು ಬನ್ನಿ ಅಂತ  ಊಟದ ಹಾಲಿಗೆ ಕರ್ಕೊಂಡು ಹೋದ್ರೆ ಘಮ್ಮೆನೂ ಸಾಂಬಾರ್ ಪರಿಮಳ, ಆಹಾ  ಈ ಜನುಮವೇ ಅನ್ಕೊಂಡು ಓಡೋಡಿ ಹೋಗಿ ತಟ್ಟೆ ತಗೊಂಡು ಎಲ್ಲರಿಗಿಂತ  ಮೊದಲು ನಿಂತ್ಕೊಂಡೆ, ಅನ್ನ -ಸಾಂಬಾರ್, ಪಾಯಸ , ಕೋಸಂಬ್ರಿ ಮತ್ತು ಮೆಣಸಿನ ಬಜ್ಜಿ ಇಷ್ಟೇ ಊಟ ಇದ್ದದ್ದು, ಆ ದಿನದ ಮಟ್ಟಿಗೆ ಅದು ಮೃಷ್ಟಾನ್ನ ಭೋಜನ!! ಅಷ್ಟೇ ಏಕೆ ಈವತ್ತಿಗೂ ಪ್ರತಿ ತುತ್ತು ನೆನಪಿಸ್ಕೊಳ್ಳುವಂತ ಅನುಭವ ಅದು!! ಬಿಸಿ ಬಿಸಿ ಅನ್ನ ಸಾಂಬಾರ್ ಕಲಸಿಕೊಂಡು ಬಾಯಿಗಿಡುವಾಗ literally ಕಣ್ಣಲ್ಲಿ ನೀರಿತ್ತು!! ಹತ್ತು ದಿನ ನಮ್ಮ್ ಊಟ ಸಿಗದೇ ಇರೋದಕ್ಕೆ ಹಿಂಗಾಡ್ತೀವಿ, ಒಂದು ಹೊತ್ತಿಗೂ ಒಳ್ಳೆ ಊಟ ಇಲ್ಲದೆ ಒದ್ದಾಡೋ ಜನರ ಪರಿಸ್ಥಿತಿ ಹೇಗೆ? ಓಡಿ  ಹೋಗಿ ಪ್ಲಾನ್ ಚೇಂಜ್ ಮಾಡಿದ ಗೆಳತಿನ ತಬ್ಬಿಕೊಂಡು "ಥ್ಯಾಂಕ್ಸ್, ಸಾರೀ ಕಣೆ ಜಗಳ ಮಾಡಿದ್ದಕ್ಕೆ "ಅಂತ ಹೇಳ್ದೆ . ನಿನ್ನೆ ನೀನು ಒದ್ದಾಡಿದ್ದು ನೋಡೀನೇ ನಾವು ಮೂರೂ  ಜನ ಡಿಸೈಡ್ ಮಾಡಿ ಇಲ್ಲಿ ಬಂದ್ವಿ, ಸಧ್ಯ ನಿಂಗೆ ಈ ಜಾಗ ಬಿಟ್ರೆ ಬೇರೆಲ್ಲೋ ಇಂಡಿಯನ್ ಫುಡ್ ಸಿಗಲ್ಲ ಅಂತ, ನೀನು ನೋಡಿದ್ರೆ ನಮ್ಮನ್ನೇ  ಬೈಕೊಂಡು ಕೂತಿದ್ದೆ , ಅದೆಷ್ಟು ಖುಷಿಯಲ್ಲಿ ಊಟ ಮಾಡಿದೆ ಅಂದ್ರೆ ನಾವು ಊಟ ಮಾಡೋದನ್ನ  ಬಿಟ್ಟು ನಿನ್ನೆ ನೋಡ್ತಾ ಕೂತಿದೀವಿ ಅಂತ ಅಂದ್ರು! 

 ಇಷ್ಟೊಂದು ಪ್ರಿವಿಲೇಜ್ ಗಳ  ಮಧ್ಯೆ ನಮ್ಮ ಗೊಣಗಾಟ ಇರುತ್ತಲ್ಲ ಇಂಥದರ ಮಧ್ಯೆ ಈ ದೇವರು ಯಾಕೆ ಈ ದೇವಸ್ಥಾನ ಯಾಕೆ ಅಂತ ಸೊಕ್ಕು ಬೇರೆ ನಂದು, ಈ ದೇವಸ್ಥಾನ ಇರ್ಲಿಲ್ಲ ಅಂದ್ರೆ ತಿಂಗಳ ಗೆಸ್ಟ್ ಆಗಿ ಬಂದ  ನನ್ನಂಥವರಿಗೇನು ತೊಂದ್ರೆ ಇಲ್ಲ, ಭಾರತ ಬಿಟ್ಟು ಬರುವ ಅನೇಕ ಸ್ಟೂಡೆಂಟ್ಸ್ ವೀಸಾ ಮಕ್ಕಳಿಗೆ ಎಷ್ಟೊಂದು ಉಪಯೋಗಕರ ಅನ್ನ  ದಾಸೋಹ ಅಲ್ವ  ಇದು? ಎಲ್ಲದರಲ್ಲೂ ಲಾಜಿಕ್ ಹೊಡ್ಕೋ ನನ್ನ ಕೆಟ್ಟ ಬುದ್ಧಿಗೆ ಅಂತ ನನ್ನ ನಾನೇ ಬೈಕೊಂಡೆ!!   ಅದೇಕೆ ಇದೇಕೆ ಅಂತ ಪ್ರಶ್ನೆ ಮಾಡೋ ಯಾರೆಲ್ಲ ಈ ರೀತಿ ಅನ್ನ ದಾಸೋಹ ಮಾಡ್ತಾರೋ ನಂಗೆ ಗೊತ್ತಿಲ್ಲ, ಆದರೆ ದೇವರ ದೇವಸ್ಥಾನದ ಹೆಸರಲ್ಲಿ ನಡೆಯೋ ಇಂಥ ದಾನ ಧರ್ಮದ ಕಾರ್ಯಗಳು ಎಷ್ಟೋ ಜನರಿಗೆ ಸಹಾಯವಾಗುತ್ತೆ, ಆ ಹೊತ್ತಿಗಿನ  ಹಸಿವೆಯನ್ನು ತಣಿಸಿರುತ್ತೆ, ಅಲ್ಲೋ ಲಾಜಿಕ್ ಹುಡ್ಕಿ , ಅವ ದಾನ ಮಾಡಿದವ ಎಂಥ ವ್ಯಕ್ತಿ ಆವಾ ಸಂಪಾದನೆ ಮಾಡಿದ ರೀತಿ ಎಂತದು? ಅನ್ನೋ ಒಣ ಚರ್ಚೆಗೆ ಅರ್ಥವಿಲ್ಲ, ಹಸಿದವನ ಹೊಟ್ಟೆ ತುಂಬಿಸಿದವ ಆ ಹೊತ್ತಿನ ದೇವರು ಅಷ್ಟೇ!! ಇನ್ನೆಲ್ಲ ಕೆಲ್ಸಕ್ಕೆ ಬಾರದ ತರ್ಕ dustbin ಸೇರಲಿ ಅಷ್ಟೇ!! 


Saturday, March 15, 2025

ಹುಚ್ಚು ಜೀವನ ಪ್ರೀತಿಯ ಕನವರಿಕೆಗಳು.....


ಈ ವರ್ಷದ ರೆಸೊಲ್ಯೂಷನ್ ತಿಂಗಳಿಂಗೊಂದಾದ್ರು ತೋಚಿದ್ದನ್ನು ಗೀಚಬೇಕು ಅನ್ನೋದು, ಹೋದ ತಿಂಗಳು ಉಸಿರಾಡಲು ಕಷ್ಟ ಅನಿಸೋಕೆ ಶುರುವಾಯ್ತು, ಕೂತ್ರೆ ನಿಂತ್ರೆ ಅಂಕ್ಸೈಟಿ, ವಿಪರೀತ ಒತ್ತಡ, ಹೇಳಿಕೊಳ್ಳಲಾಗದ ಸಂಕಟ, ಕಾರ್ಪೊರೇಟ್ ನ ವೈಭವೀಕರಣದ ಜೀವನ, ತೋರಿಸಿಕೊಳ್ಳಲಾಗದ ಅಸಲಿಗೆ ಹೇಳಿಕೊಳ್ಳಲೂ ಆಗದ ಒಂದು ರೀತಿಯ ಉಭಯ ಸಂಕಟ! I am no exception, ನಮ್ಮನೆ ದೋಸೆ ಕೂಡ....ಇರಲಿ,  ಜೀವನ ಇಂಥ ಬಡಿದಾಟಗಳನ್ನು ದಾಟಿಕೊಂಡು ಹೋಗೋದೇ ಅಲ್ವೇ ಅಂತ ಸಮಾಧಾನ ಮಾಡಿಕೊಂಡು ಮೀ ಟೈಮ್ ಗೆ ರೆಡಿ ಆದೆ! 

ಇಷ್ಟೆಲ್ಲ ಜಂಜಾಟಗಳ ಮಧ್ಯೆ ನೆಮ್ಮದಿಯ ತಾಣಗಳು ಅಂದ್ರೆ ನಾವು ಯಾವಾಗಲೂ ಇಷ್ಟ ಪಟ್ಟು ಮಾಡೋ ಹವ್ಯಾಸಗಳು! ಈ ಬಡಿದಾಟ ಇದ್ದಿದ್ದೇ ಅನ್ಕೊಂಡು ಸಂಜೆ ಲಾಗ್ಔಟ್ ಮಾಡಿ ಥಟ್ ಅಂತ ಒಂದು ರೀಲ್ ಮಾಡಿ ಶೇರ್ ಮಾಡಿದೆ, ಹಾಗೆ ಫೇಸ್ಬುಕ್ ಸ್ಕ್ರಾಲ್ ಮಾಡ್ತಾ ಇರುವಾಗ ಸ್ನೇಹಿತೆಯೊಬ್ಬರು ಎರಡು ಸುಂದರವಾದ ಬಾಗಿಲಿನ ಚಿತ್ರ ಹಾಕಿದ್ದರು ಎಷ್ಟು ಚೆನ್ನಾಗಿದೆಯಲ್ಲ ಅಂತ ಲೈಕ್ ಒತ್ತಿದೆ ಆಮೇಲೆ ಗೊತ್ತಾಗಿದ್ದು ಅದಕ್ಕಂಟಿಸಿದ ಒಂದು ಪ್ರಶ್ನೆ ಕೂಡ ಇತ್ತು ಅಂತ, that was interesting!! ಅದಕ್ಕೆ ಪ್ರತಿಕ್ರಿಯಸಿದ ಮೇಲೆ ಬ್ಲಾಗ್ ಅಪ್ಡೇಟ್ ಮಾಡ್ಬೇಕು ಅನ್ಸಿದ್ದು ಸುಳ್ಳಲ್ಲ ... So , here I  am... 
 
ಬಾಗಿಲುಗಳ ಚಿತ್ರ ಹೀಗೆ ಮೇಲೆ ಅಂಟಿಸಿರುವ ಪಟದ ಹಾಗೆ ಸುಂದ್ರವಾಗಿತ್ತು, (ದಿಸ್ ಈಸ್ ಜೆನೆರೇಟೆಡ್ ಫ್ರಮ್ AI )  ಪ್ರಶ್ನೆ ಏನಪಾ ಅಂದ್ರೆ , ಇಲ್ಲಿರುವ ಕೆಂಪು ಮತ್ತು ಹಸಿರು ಬಾಗಿಲುಗಳ ಹಿಂದೆ ಜಿನೀ ವಿಶ್ ಥರ ಎರಡು ವರಗಳಿವೆ, ೧. ಕೆಂಪು ಬಾಗಿಲ ಹಿಂದೆ ಒಂದು ೧೦ ಕೋಟಿ ಇಮ್ಮಿಡಿಯೇಟ ಕ್ಯಾಶ್ ಸಿಗುತ್ತೆ, ೨. ಹಸಿರು ಬಾಗಿಲಿನ ಹಿಂದೆ ಟೈಮ್ ಟ್ರಾವೆಲ್ ಮಷೀನ್ ಇದೆ ನೀವು ಹಿಂದಕ್ಕೆ ಹೋಗಿ ನಿಮ್ಮಗಳ ಜೀವನದಲ್ಲಿ ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲೆಲ್ಲ ನಿಮ್ಮ ತಪ್ಪುಗಳನ್ನ/ ರಿಗ್ರೆಟ್ಗಳನ್ನ ಸರಿಮಾಡಿಕೊಳ್ಳೋ ಒಪ್ಶನ್ ಇದೆ, ಎರಡರಲ್ಲಿ ನಿಮ್ಮ ಆಯ್ಕೆ ಏನು ಅನ್ನೋದು ಪ್ರಶ್ನೆ.... ಹೆಚ್ಚಿನವರು ಗ್ರೀನ್ ಆಯ್ಕೆ ಮಾಡಿದ್ರು , ಸ್ವಲ್ಪ ಜನ ಈವಾಗ ನಂಗೆ ಅವಶ್ಯಕತೆ ಇರೋದು ದುಡ್ಡು ಸೊ ನಾನು ಕೆಂಪು ಬಾಗಿಲು ಆಯ್ಕೆ ಮಾಡ್ತೇನೆ ಅಂತ... incase ಅಲ್ಲಿ ದುಡ್ಡಿರದೇ uncertain ಫ್ಯೂಚರ್ ಇದ್ದಿದ್ರೆ obviously ಯಾರೂ ಕೆಂಪು ಬಾಗಿಲಿನ ಸಾವಾಸಕ್ಕೆ ಹೋಗ್ತಿರ್ಲಿಲ್ಲ ಅನ್ಸುತ್ತೆ... ನಿಮ್ಮ ಆಯ್ಕೆ ಯಾವ್ದು ಅಂತ ಕಾಮೆಂಟ್ ಮಾಡಿ :) 

ಇನ್ನು ನನ್ನ ಉತ್ತರ ಅಷ್ಟೊಂದು ಸಮಂಜಸವೋ ಅಲ್ವೋ ಗೊತ್ತಿಲ್ಲ ಇಲ್ಲಿ ನಾನು ತೀರಾ ಮಾದರಿ ವ್ಯಕ್ತಿತ್ವ ಅದಕ್ಕೋಸ್ಕರ  ನಾನು ಹಿಂಗೇ ಹಂಗೆ ಅನ್ನೋ ಬಿಲ್ಡ್ ಅಪ್ ಗಳಿಲ್ಲ, ಸೀದಾ ಸೀದಾ ಕೆಂಪು ಅಂತ ಹೇಳಿ, ಅದಕ್ಕೆ ವಿವರಣೆ ಏನು ಕೊಟ್ಟೆ ಅಂದ್ರೆ, ಹತ್ತು ಕೋಟಿ  ಸಿಗುತ್ತೋ ಇಲ್ವೋ ಗೊತ್ತಿಲ್ಲ ಸಿಗೋ ಹಾಗಿದ್ರೆ ಸಿಗ್ಲಿ  ದುಡ್ಡು ಯಾರಿಗೆ ಬೇಡ ?  ಆದರೆ ದುಡ್ಡು ಕೊಡ್ತೀನಿ ಅಂದ್ರು ನಾನು ಮರಳಿ ಹಿಂದಕ್ಕೆ ಹೋಗುವುದಿಲ್ಲ!! ಯಾಕೆ ? ಒಹ್ ಜೀವನದಲ್ಲಿ ರಿಗ್ರೆಟ್ಸ್ ಗಳೇ ಇಲ್ವಾ ? ಹಳೇದ್ಯಾವ್ದೋ ಒಂದು ಘಟನೆ , ವ್ಯಕ್ತಿ , ಸಮಯ ಮರುಳಿ ಬೇಕು ಅನ್ಸಿ ಅಲ್ಲಿಗೆ ಹೋಗಲ್ವಾ?  ಅಂದ್ರೆ ಮೈ ಆನ್ಸರ್  ಈಸ್ ನೋ ! 

ನಮಗೆ ಚಿಕ್ಕ ವಯಸ್ಸಿನಿಂದನೂ ಲೈಫ್ ಶುಡ್ ಬಿ ಹ್ಯಾಪಿ ಅಂತ ಬೋಧಿಸಲಾಗಿದೆ !  ಅದನ್ನು ಖುಷಿಯಾಗಿರಸಲು ತಾನೇ ಇಷ್ಟೆಲ್ಲಾ ಬಡಿದಾಟ ಒದ್ದಾಟ ?! ತಪ್ಪಲ್ಲ, ನಮ್ಮೆಲ್ಲರ ದೊಡ್ಡ ಸಮಸ್ಯೆ ಏನಂದರೆ ಗತಿಸಿ ಹೋದದ್ದನ್ನು ವೈಭವೀಕರಿಸುವುದು ಮತ್ತು ಈಗಿರುವದನ್ನು ಸದಾ ಶಪಿಸುತ್ತಿರುವುದು!! ನಮ್ಮ ಬಾಲ್ಯ ಎಷ್ಟು ಸುಂದರ, ನಮ್ಮ ಕಾಲೇಜು ದಿನಗಳು ಎಷ್ಟು ಅಧ್ಭುತ , ನಮ್ಮ ಟ್ರಿಪ್ಗಳು ವೆಕೇಷನ್ಗಳು ವಾಹ್ ಎಲ್ಲ ಮಸ್ತ್ ಆದ್ರೆ ಈ ಲ್ಯಾಪ್ಟಾಪ್ ಕುಟ್ಟೋ ಕೆಲಸ ಮಾತ್ರ ಪರಮ  ಹಿಂಸೆ!! ನಿಜ..  ತೀರಾ ಯಾಂತ್ರಿಕವಾಗಿ ಬದುಕುತ್ತಿರುವ ಜೀವನಕ್ಕೆ ಲವಲವಿಕೆಯ ಜೀವನ ಬೇಕೆನಿಸುವುದು ಸಾಮಾನ್ಯ, ಆದರೆ ಅದ್ನ್ಯಾರು ನಾವು ನಮ್ ಭವಿಷ್ಯದಲ್ಲಿ ಹುಡುಕಲು, ಹೊಂದಲು ಬಯಸದೇ ಮತ್ತೆ ಭೂತಕಾಲಕ್ಕೆ ಹೋಗಬಯಸುವುದು ಯಾಕೆ? ಅಲ್ಲಿ ಎಲ್ಲ ನಮ್ಮ ಹತೋಟಿಯಲ್ಲಿ ಇತ್ತು, ಮತ್ತೆ ಗತಿಸಿ ಹೋದ ಕಾಲದಲ್ಲಿ ನನ್ನ ತಪ್ಪುಗಳನ್ನು ಎಲ್ಲಿ ಸರಿ ಮಾಡಿದ್ದರೆ ಚೆಂದಿತ್ತು ಅನ್ನೋ ಕ್ಲಾರಿಟಿಯನ್ನ  ಬದುಕು ನಮಗೆ ಈಗ ಕಲಿಸಿದೆ, ಹಾಂಗಾಗಿ ಗೊತ್ತಿಲ್ಲದ ಭವಿಷ್ಯದ ಬಾಯಿಗೆ ಬೀಳೋದಕ್ಕಿಂತ, familiar ಅನಿಸೋ ಭೂತ ಕಾಲ ನಮ್ಮ ಫೇವರಿಟ್ ಪ್ಲೇಸ್!!  

ಬದುಕು ಎಲ್ಲರಿಗೂ ಒಂದೇ ರೀತಿಯಲ್ಲ , ಇಲ್ಲಿ ನಡೆಯುವ ಅನಾಹುತಗಳು , ಸಾವು ನೋವುಗಳು , ಅಪಮಾನಗಳು, ಹಾರ್ಟ್ ಬ್ರೇಕ್ಗಳು,  ದುಃಖ ದುಮ್ಮಾನಗಳು ಎಲ್ಲದರದ್ದು ಒಂದು ದೊಡ್ಡ ತೂಕ ಅಂತಾದ್ರೆ , ಸುಮ್ನೆ ತೀರ್ಥ ಪ್ರೋಕ್ಷಣೆ ಮಾಡಿದ ಹಾಗೆ ಅಲ್ಲೊಂದು ಇಲ್ಲೊಂದು ಖುಷಿಯ ಹನಿ ಸಿಕ್ಕಿರುತ್ತೆ, ಏನ್ ಭಾರಿ ಫಿಲಾಸಫಿ ಮಾತಾಡ್ತೀರಾ ಅಂತ ನೀವು ಪ್ರಶ್ನೆ ಮಾಡಬಹುದು.  ಅದು ಹೆಚ್ಚಿನ ಸಲ ನಿಜವೂ ಇರ್ಬಹುದು,  ಅಲ್ಲಗೆಳೆಯೊ ಹಾಗಿಲ್ಲ.  ಈವಾಗ ಇದನ್ನ ಸ್ವಲ್ಪ ಉಲ್ಟಾ ಮಾಡಿ ಹನಿಯಷ್ಟು ಕಷ್ಟ ಸಾಗರದಷ್ಟು ಸುಖ ಅಂತೇನಾದ್ರೂ ಇದ್ದಿದ್ರೆ ನಾವೆಲ್ಲಾ ಸುಖ ಸಂತೋಷಕ್ಕಾಗಿ ಹಾಗೂ ನೆಮ್ಮದಿಗಾಗಿ ಇಷ್ಟೆಲ್ಲಾ ಬಡಿದಾಡುವ ಪ್ರಮೇಯ ಇರ್ತಿತ್ತ ? ಅಸಲಿಗೆ ಸುಖದ ಬೆಲೆಯಾದ್ರೂ ಗೊತ್ತಾಗ್ತಿತ್ತ?! 

ಬದುಕು ಅದೆಷ್ಟೋ  ವಿಸ್ಮಯ, ಅನುಭವಗಳ ಆಗರ ಅಲ್ವ?  ಪ್ರತಿ ಅನುಭವ ಹೊಸ ಪಾಠ, ತೀವ್ರ ಸಂಕಟ, ಹತಾಶೆ, ನೋವು ಇದೆಲ್ಲವನ್ನು ಪರಿ ಪರಿಯಾಗಿ ಅನುಭವಿಸಿದ ಮೇಲೆ ಪಕ್ವವಾಗುವ ಮನಸ್ಥಿತಿ.  ಇದೆಲ್ಲವನ್ನು ಇಲ್ಲದೇ ಬದುಕು ಸುಂದವಾಗೇ ಕಾಣಬಹುದೇನೋ ಈ ಅನುಭವಗಳಿಂದ ವಂಚಿತ ವಾದ ಮನಸ್ಸು ಪಕ್ವವಾಗಿರುವುದಿಲ್ಲ. ಜಗತ್ತನ್ನು ನೋಡುವ ದೃಷ್ಟಿ ಪರಿಣಾಮಕಾರಿಯಾಗಿರುವದಿಲ್ಲ! ಒಹ್ ಬದುಕೇ ಇಷ್ಟೆಲ್ಲ ಅನುಭವ ಕೊಟ್ಟ ನಿನಗೆ ನಾನು ಸದಾ ಋಣಿ ಅಂತ ನಾವು ಯಾವತ್ತೂ ಹೇಳೋದಿಲ್ಲ, ಯಾಕಂದ್ರೆ ಬದುಕಿನಲ್ಲಿ ಯಾವಾಗಲೂ ಸಂತೋಷ ಇರಬೇಕು ಅಂತ ನಮಗೆ ಫೀಡ್ ಮಾಡಲಾಗಿದೆ. 

ಹಿಂದೆ ಹೋಗಿ ಆಗಿದ್ದನ್ನ ಸರಿ ಮಾಡೋದೇ ಆದ್ರೆ ಬದುಕು ಕಲಿಸಿದ ಎಲ್ಲ ಅನುಭವಗಳನ್ನು ಪಾಠಗಳನ್ನು ನಾವು ಅವಮಾನಿಸಿದಂತೇ ಸರಿ. ಅಸಲಿಗೆ ಹಿಂದೆ ಹೋಗುವ ಅವಶ್ಯಕತೆ ಏನಿದೆ ? ಅದು ಒಂದು ಫ್ಯಾಂಟಸಿ ಆಗಬಹುದಷ್ಟೆ, ಮುಂದಿರುವ ಗಮ್ಯತಾಣಗಳೆಷ್ಟೋ ? we never know what is in store for us ! ಈ uncertainty ಎಷ್ಟು ಚೆಂದ ಅಲ್ವ? ಓಶೋ ಹೇಳುವಹಾಗೆ ಯಾವ ಮನುಷ್ಯ ತನ್ನ ಜೀವನವನ್ನು ಪರಿಪೂರ್ಣತೆಯಿಂದ ಕಳೆದಿರುವುದಿಲ್ಲವೋ ಅವನಿಗೆ ಸದಾ ಭೂತದ ಚಿಂತೆ ನಿಜವಾದ ಪರಿಪೂರ್ಣ  ಮನುಷ್ಯ ಅಂತಾದ್ರೆ ಅವನು ತನಗೆ ಖುಷಿ ಕೊಡದೆ ಇರದ ಕೆಲಸಗಳನ್ನು ಮಾಡಿರುವುದೇ ಇಲ್ಲ ಹಾಂಗಾಗಿ ಸದಾ ಸುಖಿ ಅವನಿಗೆ ಭವಿಷ್ಯದ ಬಗ್ಗೆ ಒಂದು ಅಚ್ಚರಿ ಇರುತ್ತೆ ಅಂತ. ಇದು ತೀರಾ ಫಿಲಾಸಫಿಕಲ್ ಅನ್ಸಿದ್ರು ಇಲ್ಲೊಂದು ಮೆಸೇಜ್ ಇದೆ, ನೀವು ಖುಷಿಯಾಗಿರಲು ನಿಮಗೆ ಇಷ್ಟವಿಲ್ಲದನ್ನು ಮಾಡಬೇಡಿ, ಮಾಡುವ ಅನಿವಾರ್ಯತೆ ಇದೆ ಅಂದಾದರೆ own it do it for the sake of it, but never ರಿಗ್ರೆಟ್ it !! 


ಇಲ್ಲಿ ಇಷ್ಟವಿಲ್ಲದನ್ನು ಮಾಡುತ್ತಾ ಹೋಗುವುದು ಮತ್ತು ಮುಂದೆ ಹೋಗ್ತಾ ಹೋಗ್ತಾ ನಾನು ಅದನ್ನ ಸರಿ ಮಾಡಬಹುದಿತ್ತೇನೋ ಅಂತ ತಿರುಗಿ ಅದೇ ಪುಟಕ್ಕೆ ಬಂದು ನಿಲ್ಲೋದು, ಒಂದು ರೀತಿಯ vicious ಸೈಕಲ್.  ಖುಷಿ , ಸಂತೋಷ ನೆಮ್ಮದಿ ಹನಿಗಳಾಗಿ ಸಿಗುತ್ತಲೇ ಇರಬೇಕು ಅವಗಳನ್ನು ಪಡೆಯಲು ನಿರಂತರವಾಗಿ ನಾವು ಸೈಕಲ್ ತುಳಿಯುತ್ತಲೇ ಇರಬೇಕು, ಸಂಕಟಗಳನ್ನು ದಿವ್ಯ ಅನುಭಾವದಂತೆ ಮಿಂದೇಳಬೇಕು ಆಗ ತಾನೇ ಬಿಸಿಲಬೇಗೆಯಲ್ಲಿ ಬೀಳುವ ಹನಿಗಳಿಗೆ ನಿಜವಾದ ಬೆಲೆ?! ಬದುಕು ಎಲ್ಲರಿಗೂ ಒಂದೇ ರೀತಿಯಲ್ಲ ನಿಜ , ಬದುಕನ್ನು ಇಡೀಯಾಗಿ ಇದ್ದಂತೆ ಸ್ವೀಕರಿಸೋದನ್ನ ಬಿಟ್ಟು ಬೇರೆ ಆಯ್ಕೆಗಳೇ ಇಲ್ಲದಿರುವಾಗ ಲವ್ ಯು ಜಿಂದಗಿ ಹೇಳಿ ಮುನ್ನಡೆಯುತ್ತಿರಬೇಕಷ್ಟೆ!! 


Wednesday, February 12, 2025

ಕಸದ ಬುಟ್ಟಿಗೆ ಹೋಗಬೇಕಾದ ವಿಷಯವೊಂದು ಪ್ರೈಮ್ ಟೈಮ್ ನ್ಯೂಸ್ ಆದಾಗ...🙆

 


ಆಫೀಸ್ನಲ್ಲಿ ಮ್ಯಾನೇಜರ್ ಬರೋಬ್ಬರಿ ೧೨ ಗಂಟೆಗ್ ಆಗೋವಷ್ಟ್ ಕೆಲಸ ಕೊಡ್ಟ್ಟಿರ್ತಾರೆ , ಅಪ್ರೈಸಲ್ ಹತ್ರ ಬರುವಾಗ ಯಾಕ್ ಗುರು ಸುಮ್ನೆ  ರಗಳೇ ಅನ್ಕೊಂಡು ಎಷ್ಟೇ ತ್ರಾಸ್ ಆದ್ರೂ ಒಳಗೆ ನುಂಗಿಕೊಂಡ, ನಮ್ಮ  ಕಾರ್ಪೊರೇಟ್ ಮಜದೂರ್ಗಳು, ಧರ್ಮ , ಹಾಗೂ ಸೆಕ್ಸ್ ವಿಷಯ ಕಂಡ ಕೂಡ್ಲೇ, ಅವರ ಮ್ಯಾನೇಜರ್ ಹಾಗೂ ತಮ್ಮ ಕೆಲ್ಸದ ಎಲ್ಲ ಸಿಟ್ಟೂ ಬಡ್ಡಿಸಮೇತ ಇಂತಹ ಇಶ್ಯೂ ಗಳನ್ನು ಬ್ಲೋಯಿಂಗ್ ಔಟ್ ಆಫ್  proportion ಮಾಡಿ ತಮ್ಮ ಅವ್ಯಕ್ತ ಆಕ್ರೋಶವನ್ನು ಈ ರೀತಿ ತಣ್ಣಗೆ ಮಾಡಿಕೊಳ್ಳುತ್ತಾರೆ!! ಇದು ಕೇವಲ outrage ಅಲ್ಲ, ಇದಕ್ಕೆ ಸಮಾಜದ ಕಟ್ಟು ಪಾಡುಗಳಿಗೆ ನಾನೆಷ್ಟು ಸಭ್ಯ ಅಂತ ಎಲ್ಲರಿಗೂ ಸಾರಿ ಸಾರಿ ಇನ್ನೊಬ್ಬ ದುಷ್ಟ ನೋಡಿ ಅದನ್ನು ಖಂಡಿಸಿ  ನಾನು ಸಭ್ಯ ಅಂತ ತೋರಿಸಿಕೊಳ್ಳೋ ಹಪಾಹಪಿ !!  

ಎರಡು ದಿನದಿಂದ ಏಯ್  ಹಾಳಾಗ್ ಹೋಗ್ಲಿ ಬಿಡ್ರಪ್ಪ ಸುಮ್ನೆ ಯಾಕೆ ನಂದೇ ನಂದು ಹಾಸಿ ಹೊದ್ಕೊಳೋವಷ್ಟಿದೆ  ಅನ್ಕೊಂಡು ಸುಮ್ನಿದ್ದೆ , ಆದ್ರೆ ಇತ್ತೀಚಿಗೆ ಕಾಂಟ್ರಾವೆರ್ಸಿಗಿಂತ ಹ್ಯೂಮನ್ ಸೈಕಾಲಜಿ ಹಾಗೂ ಬಿಹೇವಿಯರ್ strategies ಬಗ್ಗೆ ಒಂದು ರಿಸರ್ಚ್ ಪೇಪರ್ ಓದುವಾಗ ಅನ್ಸಿದ್ದು ಇದನ್ನ ಬರೀಬೇಕು ಅಂತ, ಬಟ್ ರಾಂಗ್ ಟೈಮ್ ಎನಿವೇ ರೈಟ್ ಕಂಟೆಂಟ್!! ಎಷ್ಟೇ ಪ್ರಯತ್ನ ಪಟ್ರು ದಿ suppressed writer ಇನ್ ಮಿ  ಬರಿ ಬರಿ ಅಂತ ಕಾಟ ಕೊಡ್ತಾನೆ ಇರ್ತಾನೆ!! ಸರಿ ವಿಷ್ಯಕ್ಕೆ ಬರಣ... 

ನಮ್ಮ ದೇಶದ ಜನರಿಗೆ ನೋಡಕ್ಕೆ ಬೆಳ್ಳಗೆ ಹಾಗೂ ತಕ್ಕಮಟ್ಟಿಗೆ ಚೆನ್ನಾಗಿ ಕಾಣಿಸುವ ಜನರನ್ನು ನಾರ್ಮಲ್ ಜನರಿಗಿಂತ ತುಸು ಜಾಸ್ತಿ ಇಷ್ಟ ಪಟ್ಟು ನೋಡುವ ಚಾಳಿ ಅದು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಇರ್ಬೋದು ಅಥವಾ ಕಂಟೆಂಟ್ ಹೆಸರಲ್ಲಿ ಸಗಣಿ ಸಾರಿಸುತ್ತ ಇರೋ influencers ಕೂಡ ಇರ್ಬೋದು, ಏಯ್ ನೋಡಕ್ ಮಸ್ತ್ ಇದಾಳ್/ ಇದಾನ್ ಅಲ ಅನ್ನೋದು!! ಹಾಂಗಾಗಿ ಅವರು ಏನು ಮಾಡ್ತಾ ಇದಾರೆ ದೇಶಕ್ಕಾಗಿ ಎಂತಹಾ ಸಾಹಸ,ಕರ್ತವ್ಯ ಮಾಡ್ತಿದ್ದಾರೆ ಅನ್ನೋದನ್ನ ಅವರ followers ಹಾಗೂ subscribers ನಿರ್ಧರಿಸುತ್ತಿರುವುದು ಇಂದಿನ ಕಾಲಮಾನದ ದೊಡ್ಡ ದುರಂತವೇ ಸರಿ!! ಅಗೈನ್ ಸಮೂಹ ಸನ್ನಿ. ರೋಸ್ಟ್ ಮಾಡೋ ಚಾನೆಲ್ಗಳಿಗೂ ಮಿಲಿಯನ್ ಗಟ್ಲೆ  followers!! ಯಾರನ್ನೋ ರೋಸ್ಟ್ ಮಾಡೋ ವಿಕೃತವನ್ನ normalise ಮಾಡಲಾಗಿದೆ. ಇನ್ನು ಮಾತು ಮಾತಿಗೆ ಬೈಯೋದು ಸ್ಟಾಂಡ್ ಅಪ್ ಕಾಮಿಡಿಯ ಅಲಿಖಿತ ನಿಯಮವಾಗಿದೆ! ಇನ್ನು ಬಿಕಿನಿ ಹಾಕೊಂಡು ಮಾಲ್ಡೀವ್ಸ್ ನಲ್ಲಿ ಫೋಟೋಶೂಟ್ ಮಾಡ್ಲಿಲ್ಲ ಅಂದ್ರೆ influencer ಆಗಿ ಬದುಕಿರಬೇಕಾ ಅನ್ನೋ ರೇಂಜಿಗೆ ಬಿಲ್ಡ್ ಅಪ್ ಗಳು!! 

ಕೇವಲ ಐದು ವರ್ಷದ tiktok ಬ್ಯಾನ್ ಹಾಗೂ ಇನ್ಸ್ಟ್ಗ್ರಾಮ್ ರೀಲ್ಸ್ ಒಂದು ಸಭ್ಯ ನಾಗರಿಕತೆಯ ಮುಖವಾಡ ಹೊತ್ತ ಅನೇಕರ ಅಸಲಿ ಚಹರೆಯನ್ನು ಹಂತ ಹಂತವಾಗಿ ಬಯಲು ಮಾಡುತ್ತಲೇ ಬಂದಿದೆ, ನಾಗರಿಕತೆಯ ಹಿತ್ತಲ ಕತ್ತಲನ್ನು ಎಳೆ ಎಳೆಯಾಗಿ ಬಿಚ್ಚುತ್ತಲೇ ಇದೆ. ಇದಕ್ಕೆ ಸಮಾಜ ಒಂದು ಎಂಟಿಟಿಯಾಗಿ ನೇರ ನೇರ ಜವಾಬ್ದಾರಿ.  ಸಮಾಜದ  ಭಾಗವಾದ ನಾವುಗಳು ಕೂಡ  ಪ್ರತ್ಯಕ್ಷ /ಪರೋಕ್ಷವಾಗಿ  ಕಾರಣೀಭೂತರೇ !! ಆದರೆ ಇದನ್ನು ಪಬ್ಲಿಕ್ಕಲ್ಲಿ ಒಪ್ಪಿಕೊಂಡು ಬದುಕೋಕೆ ಆಗುತ್ತೆ ? ಅದಕ್ಕೆ ಯಾವುದೋ ಚಾಲ್ತಿಯಲ್ಲಿರುವ ಧರ್ಮ, ಅಧ್ಯಾತ್ಮ , ಮುಕ್ತಿ ಅನ್ನೋ ದೊಡ್ಡ ದೊಡ್ಡ ಪದ ಬಳಸಿ ಜನರನ್ನು ಮಂಗ್ಯಾ ಮಾಡಿ ತನ್ನತ ಸೆಳೆಯುವ ಕಲೆ ಗೊತ್ತಿರುವ ಮನುಷ್ಯನಿಗೆ ನಮ್ಮ ದೇಶ ತುಂಬಾ ದೊಡ್ಡ ಮಾರ್ಕೆಟ್. ಅದನ್ನ ಸದುಪಯೋಗ ಪಡಿಸಿಕೊಂಡವ ಕೇವಲ ದುಡ್ಡಷ್ಟೇ ಅಲ್ಲ ಹೆಸರೂ? ಮಾಡಿ ಅಸಂಖ್ಯ ಹಿಂಬಾಲಕರನ್ನು ಪಡೆಯುತ್ತಾನೆ!! 

ಹಿಂದೆ ಯಾವುದೇ ದೊಡ್ಡ ಅವಾರ್ಡ್ ಕೊಡುವಾಗ ಅಂದರೆ ಸಾಧನೆಯ ಮಾನದಂಡವಾಗಿ  ಕೊಡುವ ಅವಾರ್ಡ್ ಕನಿಷ್ಠ ೫೦ ವರ್ಶವಾದ್ಮೇಲೆ ಕೊಡುತ್ತಿದ್ದರು, ಅಂದರೆ ಮನುಷ್ಯ ೫೦ ಆಗುವ ಹೊತ್ತಿಗೆ ಮಾಗಿರುತ್ತಾನೆ ಜೀವನದ ಹಲವು ಆಯಾಮ ಅನುಭವಿಸಿ ಪಕ್ವವಾಗಿರುತ್ತಾನೆ ಮಾಗಿರುವ ವ್ಯಕ್ತಿತ್ವಕ್ಕೆ ಅವಾರ್ಡ್ ಅನ್ನೋ ರೀತಿ ಅದೊಂದು ಒಳ್ಳೆಯ ಉದ್ದೇಶದಿಂದ ಕೂಡಿದ್ದ ರೆಕಗ್ನಿಷನ್ ಆಗಿತ್ತು. ಕಾಲ ಕ್ರಮೇಣ ಅವಾರ್ಡ್ಗಳಿಗೂ ರಾಜಕೀಯ ಬಣ್ಣ ಬಳಿದು ಕೇವಲ ಜನರನ್ನು ಕರೆಸಿ ಪಾಡ್ಕ್ಯಾಸ್ಟ್ ಮಾಡಿ ಫೇಮಸ್ ಆದವರದ್ದು ಸಾಧನೆ, ಜನರನ್ನು ನಗೆಸುವುದು ಸಾಧನೆ, ಫ್ಯಾಷನ್ ಸೆನ್ಸ್ ಇರೋದು ಸಾಧನೆ, ಅಡುಗೆ ಮಾಡೋದು ಸಾಧನೆ ಹೀಗೆ ದಿನ ನಿತ್ಯ ಮಾಡೋ ಕ್ರಿಯೆಗಳೂ ಸಾಧನೆಗಳಾಗಿ ಆ ಸಾಧನೆಗಳಿಗೆ ದೇಶದ ಅತ್ಯುನ್ಯತ ಪದವಿಯಲ್ಲಿರುವವವರು ಕರೆಸಿ ಸನ್ಮಾನಿಸಲು ಶುರುವಾದಮೇಲೆ, ಕಷ್ಟಪಟ್ಟು ಮಾಡುವ ಕೆಲ್ಸಕ್ಕೆ ಹಾಗೂ ಸಾಧನೆಗೆ ಬೆಲೆಯೇ ಇಲ್ಲದಂತಾಯ್ತು! ಅಗ್ಗವಾಗಿ ಬಿಕಾರಿಯಾದ ಮೊಬೈಲ್ ಡೇಟಾ ಅಗ್ಗವಾದ ಜನರನ್ನೇ ಸಮಾಜದ ಮುಖ್ಯಪರದೆಗೆ ತಂದು ನಿಲ್ಲಿಸಿದೆ!!  ಈಗ ಇದು ಸರಿ ತಪ್ಪಿನ ಚರ್ಚೆಯೇ ಅಪ್ರಸ್ತುತ, ನಿಯತ್ತಾಗಿ ೮ ರಿಂದ ಹತ್ತು ಗಂಟೆ ಕೆಲಸ ಮಾಡುವರು ಇವರಷ್ಟು ಹೆಸರು ಹಾಗೂ ಹಣ ಎಂದೂ ಮಾಡಲಾರರು! a ಹಾರ್ಡ್ pill ಟು swallow!!  

ಅವರುಗಳನ್ನ ಫಾಲೋ ಮಾಡುತ್ತಲೇ .. ಅಲ್ಲ ಗುರು, ನಾನು ಇಷ್ಟ ಕಷ್ಟ ಪಟ್ಟು ಇದ್ನೇಲ್ಲ ಮಾಡ್ತಿದ್ರೆ ನಂಗೆ ಕರೆಕ್ಟ್ ಟೈಮ್ ಅಪ್ರೈಸಲ್ ಅಥವಾ ಪ್ರೋಮೋಷನ್ ಆಗ್ತಿಲ್ಲ, ಇವ ವಿಡಿಯೋ ಮಾಡ್ಕೊಂಡು ಪಿ ಎಂ  ಹತ್ರ ಅವಾರ್ಡ್ ತಗೊಂಡ್ ಬಂದ್ನಲ್ಲ ಗುರು ಅನ್ನೋ ತಣ್ಣನೆಯ ಉರಿ ಉಡುಗಿರುತ್ತೆ! ಅದು ಕೇವಲ ಒಂದು  ಫ್ಯುಯೆಲ್ ಗ ಕಾಯ್ತಾ ಹೊಂಚು ಹಾಕ್ತಾ ಇರುತ್ತೆ, ಎಲ್ಲೋ ಸಿಕ್ಕೀತಾ ಅಲ್ಲಿಗೆ ದೊಡ್ಡ ಪ್ರಮಾಣಾದ ಬೆಂಕಿ ಹೊತ್ತಿಬಿಡುತ್ತೆ !! ಇಲ್ಲಿ ಯಾರನ್ನೋ ಬೆಂಬಲಿಸುವ ಅಥವಾ justify ಮಾಡುವ ಜರೂರತ್ತು ಖಂಡಿತ ಇಲ್ಲ. ಒಂದು ಕೀಳುಮಟ್ಟದ ಮಾನಸಿಕ ಅಸ್ವಸ್ಥೆಯ ಕಂಟೆಂಟ್ ಹಾಗೂ ಶೋ ಗೆ ಇಷ್ಟೊಂದು outrage ತೋರಿಸುತ್ತಿರುವ ಜನ ತಮ್ಮ ದಿನ ಬೆಳಗಾದರೆ ಬರುವ ಸಮಸ್ಯೆಗಳಿಗೆ, ಮೂಲ ಸೌಕರ್ಯಗಳಿಗೆ ಹಾಗೂ ಸಮಾಜದಲ್ಲಿ ಕಣ್ಣೆದುರಿಗೆ ನಡೆಯುವ ಅನ್ಯಾಯಗಳಿಗೆ ಜಾಣ ಕುರುಡು ಕಿವುಡು ತೋರಿಸಿ ಮತ್ತದೇ ರೀಲ್ಸ್ ಗಳಲ್ಲಿ ಮುಳಗಿಹೋಗುತ್ತಾರೆ! 

ಕಾರಣ ಸೆಕ್ಸ್ ಇಸ್ ಆ taboo, ತನ್ನ ಬ್ರೌಸಿಂಗ್ ಹಿಸ್ಟೋರಿಯಲ್ಲಿ ಎಂತದ್ದೇ ಕೆಟ್ಟ ಕೊಳಕ ಮನಸ್ಥಿತಿಯ ಕಂಟೆಂಟ್ ನೋಡಿದ್ದರೂ, ಸಮಾಜದ ಕಣ್ಣಿಗೆ ತಾನೊಬ್ಬ ಸಭ್ಯ ಮನುಷ್ಯ ಅನ್ನೂದನ್ನ ಬೇರೆಯವರ ಲೈಂಗಿಕತೆಯ ವೈಕಲ್ಯವನ್ನ, ಯೋಚನಾ ಲಹರಿಯನ್ನ ಬಹಿರಂಗವಾಗಿ ಖಂಡಿಸಿ, ನೋಡ್ರಿ ಹೆಂಗ್ ಮಾತಾಡ್ತಾನೆ, ಮಾನ ಮರಿಯಾದೆ ಇದೆಯೇನ್ರಿ ಇವನಿಗೆ ಥೂ! ಅಂತ ಉಗಿದಾಗ , ನೋಡು..  ನಾನೆಷ್ಟು ಒಳ್ಳೆಯವ ಅನ್ನೋ ಮುಖಾವಾಡ ಬಂದು ಅಣುಕಿಸುರುತ್ತದೆ!!  ಬಟ್ that ಈಸ್ ಹೌ ಸಮಾಜ ಎನ್ನುವ ಎಂಟಿಟಿ ಗುರುತಿಸಿಕೊಳ್ಳೋದು! 

ಹಂದಿ ಹೊಲಸಲ್ಲೆ ಇರೋದು ಅನ್ನೋದು ಗೊತ್ತಿರುವ ವಿಷಯ, ಹಂದಿ ಹೊಲಸಲ್ಲೆ ಇದೆ ಅಂತ ಬೊಬ್ಬೆ ಇಡುವವರಿಗೆ ಶಾಣ್ಯಾತನದ ಪಟ್ಟದ ಅವಶ್ಯಕತೆ ಇದೆ.   Dustbin ಗೆ ಹೋಗಬೇಕಾದ ಕಂಟೆಂಟ್ ಅನ್ನು prime-time ನ್ಯೂಸ್ ಮಾಡಿಕೊಂಡು ಬದುಕುವ ದುರ್ಗತಿ ನಮ್ಮ ದೇಶದ ಮಾಧ್ಯಮಕ್ಕೆ  ಬಂದಿರುವುದು ದುರಂತ :( 

ಇಲ್ಲಿಗೆ ಬಂದು ತಮ್ಮ ಅಮೂಲ್ಯ ಸಮಯವನ್ನು ವಿನಯೋಗಿಸಿದಕ್ಕೆ  ಧನ್ಯವಾದಗಳು !! ಮತ್ತೆ ಸಿಗುವೆ :)





Sunday, January 12, 2025

90's Kids ನ ಅವ್ಯಕ್ತ ಕನವರಿಕೆಗಳು !!





ವಿಪರೀತ!!! ಇತಿಹಾಸದಲ್ಲಿ ಹಿಂದೆಂದೂ ಕೇಳದ ಹಾಗೂ ನೋಡದ ರೀತಿಯಲ್ಲಿ ನಮ್ಮ್ ಮಿದುಳಿಗೆ ಟೆಕ್ನಾಲಜಿ ಹೆಸರಲ್ಲಿ ಎಲ್ಲದರ ಬಗ್ಗೆಯೂ ಸದಾ ಅಪ್ಡೇಟ್ ಆಗಿರ್ಬೇಕು ಅನ್ನೋ ಹುಚ್ಚು ಭ್ರಮೆ ತುಂಬಿಸಿ, ಅದರ ಕೆಪ್ಯಾಸಿಟಿ ಗೂ ಮೀರಿದ್ದನ್ನ ಉಣಬಡಿಸಲಾಗುತ್ತಿದೆ! ಕಾರ್ಪೊರೇಟ್ ಜಗತ್ತಿನಲ್ಲಿ ಮಾತೊಂದಿದೆ, "ಇಫ್ ಸಂಥಿಂಗ್ ಈಸ್ ಫ್ರೀ ದೆನ್ ಯು ಆರ್ ದಿ ಪ್ರಾಡಕ್ಟ್" !! ನಮಗೆ ಗೊತ್ತಿಲ್ಲದೇ ನಮ್ಮ ಖಾಸಗೀತನ ಮಾರಿಕೊಂಡು ನಮ್ಮ ಸಮಯ, ನಮ್ಮ ಆರೋಗ್ಯ, ಎಲ್ಲವನ್ನೂ ಈ ಟೆಕ್ನಾಲಜಿ ಹಾಳುಗೆಡುವುತ್ತಿದೆ. ಮನುಷ್ಯನ ಹಲವು ಮುಖ್ಯಗುಣಗಳ ಪೈಕಿ ತಾಳ್ಮೆ ಕೂಡ ಒಂದು! ಅದನ್ನು ನಮ್ಮಲ್ಲಂತೂ ಯಾವುದೇ  ಕಾರಣಕ್ಕೂ ಹುಡುಕುವ ಹಾಗೆ ಇಲ್ಲ ಬಿಡಿ. . ನಮ್ಮ patience ಅನ್ನು ನಮ್ಮಿಂದ ಹೇಳ ಹೆಸರಿಲ್ಲದೆ ೧೫ ರಿಂದ ಮೂವತ್ತು ಸೆಕೆಂಡ್ reels ಹೆಸರಿನಲ್ಲಿ ಸಮಾಧಿ ಮಾಡಲಾಗಿದೆ. ಅಟೆಂಶನ್ ಸ್ಪ್ಯಾನ್ ಕೂಡ ೪೫ ನಿಮಿಷದಿಂದ ೫ ನಿಮಿಷಕ್ಕೆ ಇಳಿಸಲಾಗಿದೆ. ಥ್ಯಾಂಕ್ಸ್ ಟು ಇಂಟರ್ನೆಟ್ ಅಂಡ್ ಥ್ಯಾಂಕ್ಸ್ ಟು ಸೋಶಿಯಲ್ ಮೀಡಿಯಾ!!


ಇದೆಲ್ಲದರ ಮಧ್ಯೆ  ಚೆರ್ರಿ ಆನ್ ಟಾಪ್ ಥರ  ವಾರಕ್ಕೆ ೭೦ ಅಥವಾ ೯೦ ಗಂಟೆಯ ಕೆಲಸ ಎಂಬೋ ಡಿಬೇಟ ಬೇರೆ!!  ಎಲ್ಲದೂ ವಿಪರೀತ ಅನಿಸುವ ಕಾಲಘಟ್ಟದಲ್ಲಿ ಇರುವ  ಈ ninteys ಕಿಡ್ಸ್  ಅಂತ ನಾವೇ ಕರ್ಕೊಂಡು, ವೀ know the ವರ್ಲ್ಡ್ ಬಿಫೋರ್ ಆಂಡ್ ಆಫ್ಟರ್ ಇಂಟರ್ನೆಟ್ ಅಂತ  ಏನೋ ಒಂದು ರೀತಿ ಖುಷಿ ಪಡೋ ನಾವುಗಳು , ನಮಗೆ ಗೊತ್ತಲ್ಲದೆ ಸದಾ ಒಂದು ಧಾವಂತದ ನೂಕು ನುಗಲ್ಲನ್ನು ದಿನ ಬೆಳಗಾದರೆ ಅನುಭವಿಸುತ್ತಲೇ ಇರುತ್ತೇವೆ . of course ನಮ್ಮ ಪಾಲಕರ ಜೆನೆರೇಷನ್ ವೀ Know ದಿ ವರ್ಲ್ಡ್ ಬಿಫೋರ್ ಅಂಡ್ ಆಫ್ಟರ್ ಎಲೆಕ್ಟ್ರಿಸಿಟಿ ಅಂತ ಹೇಳ್ಕೊತಾರೆ ಅವರಕ್ಕಿಂತ ಮುಂಚೆ ಇರೋವ್ರು ಇನ್ನೊಂದೇನೋ ಹೇಳ್ತಾರೆ ಆಂಡ್ ದಿ saga continues!!  ಬಟ್ ನಮ್ಮ ಪಾಲಕರ ಜನರೇಶನ್ at least ನಮಗಿಂತ ಸಂತೋಷದಲ್ಲಿ ಜೀವನ ನಡೆಸ್ತಾ ಇದ್ರೂ ಅನ್ನೋದನ್ನ ಅಲ್ಲಗೆಳೆಯೊಹಾಗಿಲ್ಲ! 


ಸಂಜೆ ಆರು ಏಳುಗಂಟೆಗೆ ಮನೆಗೆ ಬರುತ್ತಿದ್ದ ಅಪ್ಪ, ಮತ್ತೆ ಬೆಳಗೆದ್ದು ೯ ಅಥವಾ ಹತ್ತುಗಂಟೆಯವರೆಗೆ, ಮಾನಸಿಕವಾಗಿ ಹಾಗೂ ದೈಹಿಕವಾಗಿ ಕೇವಲ ಕುಟುಂಬದ ಸ್ವತ್ತಾಗಿಯೇ ಉಳಿಯುತ್ತಿದ್ದರು , ನೋ ಪೀರ್ ಪ್ರೆಷರ್, ನೋ ಡೆಡ್ಲೈನ್ , ನೋ ಇಮೇಲ್, ನೋ ಕಾಲ್ ನೋ ಲ್ಯಾಪ್ಟಾಪ್ more importantly ನೋ ಕನೆಕ್ಷನ್ ಟು ಆಫೀಸ್ ಆಫ್ಟರ್ ಆಫೀಸ್ hours. ವರ್ಕ್ ಲೈಫ್ ಬ್ಯಾಲೆನ್ಸ್ ಫಿಲಾಸಫಿ ನ ತುಂಬಾ ಚೆನ್ನಾಗಿ ನಿಭಾಯಿಸಿದ್ರೂ, ತಮ್ಮದೇ ಸ್ವಂತ ಸೂರು, ಮಕ್ಕಳಿಗೆ ಒಳ್ಳೆಯ ಶಿಕ್ಷಣ ಇದಷ್ಟೇ ಅವರುಗಳ ಕನಸಾಗಿತ್ತು.  ಅಮ್ಮ ಮಾಡಿದ ಅಡುಗೆಯಲ್ಲಿ ಪ್ರೀತಿ ವಾತ್ಸಲ್ಯ ಇರ್ತ ಇತ್ತು, ನಾನು ಮಾಡುವುದು ನಮ್ಮ ಮನೆಯವರಿಗೆ, ಮಕ್ಕಳಿಗೆ ಎನ್ನುವ vibes ಇತ್ತು, ಉಪ್ಪಿಟ್ಟೇ ಇದ್ರೂ ಅಮ್ಮನ ಕೈರುಚಿ ಇತ್ತು, ಹಣಕ್ಕಾಗಿ ಹೊಟ್ಟೆಪಾಡಿನ ಸಾಧನ ಮಾಡಿಕೊಂಡಿರುವ ಕುಕ್ ಗಳು ಅಮ್ಮನಂತೆ ಬಡಿಸಬಲ್ಲರೇ ? ಥರಾವರಿ ತಿಂಡಿ ತಿನಿಸು ಇದ್ರೂ ಅದ್ಯಾಕೆ ಮನೆಯ ಊಟದ ರುಚಿ ಕೊಡುವುದಿಲ್ಲ? ನಾವು ತಿನ್ನುವ ಆಹಾರದ ಮೂಲಕ ನಮ್ಮ ಕುಕ್ಗಳ ಸುಪ್ತ ಮನಸ್ಸಿನ ಎನೆರ್ಜಿಯನ್ನು ನಮಗರಿವಿಲ್ಲದೆ ಸೇವಿಸುತ್ತಿದ್ದೇವೆ!! 


ದೈಹಿಕವಾಗಿ ಮನೆಯಲ್ಲಿದ್ದು ಮನೆಯವರ ಜೊತೆ ಸಮಯ ಕೊಡಲಾಗದೇ, ಸದಾ ಒಂದು ರೀತಿಯ ಒತ್ತಡದಲ್ಲಿ ಬದುಕುತ್ತಿರುವ ನಾವುಗಳು ನಮಗೆ ಗೊತ್ತಿಲ್ಲದೇ ನಮ್ಮ ಸುಪ್ತ ಮನಸ್ಸ್ಸನ್ನು ಎಷ್ಟು ಹಾಳು  ಮಾಡಿಕೊಂಡಿದ್ದೇವೆ ಎಂದರೆ, ಅಲ್ಲಿ ಮುಕ್ಕಾಲು ಭಾಗ ಬೇಡದೆ ಇರುವ ವಿಷಯ, ಚರ್ಚೆ ಹಾಗೂ ನಮ್ಮ ಡೆತ್ ಬೆಡ್ನಲ್ಲಿ ನೆನಪಿಸಿಕೊಳ್ಳೋ  ಯಾವುದೇ ಅಂಶಗಳೇ ಇಲ್ಲ!! ಆಗಿನ ಕಾಲದ ಜನರು ಆರಾಮಾಗಿ ಇದ್ರೂ ಅವರುಗಳು ಅಷ್ಟೊಂದು ದುಡ್ಡು ಮಾಡಲಿಲ್ಲ, ದುಡ್ಡು ಮಾಡಲು ಹೊರಟ ಈಗಿನವರೆಲ್ಲ ಹೆಲ್ತ್ ಇನ್ಶೂರೆನ್ಸ್ ಮಾಡಿಸಲೇ ಬೇಕಾದ ಅನಿವಾರ್ಯತೆ ಇದೆ, ದುಡಿದ ಅರ್ಧ ಅಂತೂ ಆಸ್ಪತ್ರೆಗೆ ಹಾಕಲೇ ಬೇಕಾದ ಪರಿಸ್ಥಿತಿಯಲ್ಲಿ ಹಲವಾರು ಇದ್ದಾರೆ!!


ದಿ ಹ್ಯೂಮನ್ ಅನೋಟೋಮಿ ಈಸ್ ನೋ ಡಿಫರೆಂಟ್ than ಯೂನಿವರ್ಸ್, ನಮ್ಮ ದೇಹದಲ್ಲಿ ಪ್ರಕೃತಿಯ ಏರುಪೇರಿನ ಅನುಭವ, ಕಂಪನ, ಎನರ್ಜಿ ಹಾಗೂ ಕಾಸ್ಮಿಕ್ rays ಪರಿಣಾಮ ಬೀರುತ್ತಲೇ ಇರುತ್ತೆ!! ಹೇಗೆ ನಿಯಮಿತವಾಗಿ ಊಟ, ನಿದ್ದೆ ಹಾಗೂ ಮೈಥುನ ಅವಶ್ಯಕವೋ ಹಾಗೆ  ಕಚೇರಿ ಹಾಗೂ ಮನೆ ಎಂಬ ಎರಡು ಭಿನ್ನ ಎಂಟಿಟಿಗಳಿಗೂ ಅದರದ್ದೇ ಜಾಗ ಹಾಗೂ ಅದರದ್ದೇ  ಪ್ರಾಮುಖ್ಯತೆ ಕೊಡುವುದೂ ಕೂಡ ಮನುಷ್ಯ ಮೂಲಭೂತ ಅವಶ್ಯಕತೆಗಳಲ್ಲೊಂದಾಗಿದೆ.  ಇದು ಗೊತ್ತಿದ್ದೋ ಗೊತ್ತಿಲ್ಲದೆಯೋ ಯಾವುದೊ ಮುಗಿಯದ ಧಾವಂತಕ್ಕೆ ಸಿಕ್ಕು ಹಾಕಿಕೊಂಡು, ಇಷ್ಟ ಪಟ್ಟೋ ಕಷ್ಟ ಪಟ್ಟೋ ಎದೆ ಉಸಿರು ಬಿಟ್ಟುಕೊಂಡು ಕೊನೆಗೊಂದಿನ ಈ ಸ್ಪರ್ಧೆಯಲ್ಲಿ ಗೆದ್ದೂ ಕೂಡ , " The trouble with being in the rat race is that even if you win, you're still a rat. JUST A RAT.!!  ತುಂಬ cynical ಫಿಲಾಸಫಿಕಲ್ ಅನ್ಸಿದ್ರು ದಿನದ ಕೊನೆಗೆ ನಮಗೆ ಬೆಕಾಗೋದು ಹಿಡಿ ಪ್ರೀತಿ, ಮಮತೆ ಹಾಗೂ  ನಂಗ್ಯಾರೋ ಇದಾರೆ ಅನ್ನೋ  ಭದ್ರತೆ . ಮನುಷ್ಯ ಜೀವಿಗೆ ಇದಕ್ಕಿಂತ ಹೆಚ್ಚಿನದ್ದೇನೆ ಸಿಕ್ಕರೂ ಅದು luxury ಮಾತ್ರ!! luxury ಯಾವತ್ತಿಗೂ ಮೂಲಭೂತ ಅವಶ್ಯಕತೆಗಳನ್ನು ರಿಪ್ಲೇಸ್ ಮಾಡಲಾಗದು!! 

ಸುಮಾರು ತಿಂಗಳು ನಂತರ ಬರೆದು ಇಷ್ಟೆಲ್ಲಾ ಕೊರೆಯೋದು ಬೇಕಿತ್ತಾ? ಅಂದ್ರೆ ತಡಿರಿ ನಮ್ಮ ಸಿಇಓ ನ ಕೇಳಿ ಹೇಳ್ತೀನಿ 😛😛



Sunday, October 20, 2024

Humans are Naturally Polygamous!! True or False?!!

ಬರೆದು ಏನು ಬದಲಾಗೋದಿದೆ ಗುರೂ ಒನ್ ಲೆಸ್ ಒಪೀನಿಯನ್ ವಿಲ್ ಮೇಕ್ ನೋ ಡಿಫರೆನ್ಸ್ ಅನ್ಸಿ , ಬರೆಯೋದನ್ನ  ಮರ್ತು ಸುಮಾರ್ ತಿಂಗಳುಗಳೇ ಕಳೆದು ಹೋದ್ವು! ಅಂಥದ್ರಲ್ಲಿ ಈ ಫೇಸ್ಬುಕ್ ಅನ್ನೋ ಬ್ಯುಸಿನೆಸ್ ಆಪ್ ಇರೋ ಬರೋ ಗೂಗಲ್ ಸರ್ಚ್ ಆಡ್  ಗಳನ್ನೇ ತುಂಬಿ ಸ್ನೇಹಿತರ ಪಟ್ಟಿಯಲ್ಲಿ ಇರೋವ್ರ ಸುಮಾರ್ ಅಪ್ಡೇಟ್ಸ್ ಕಾಣದಂಗೆ ಮಾಡಿ ಇದನ್ನು ಹಳ್ಳ ಹಿಡಿಸಿಯಾಗಿದೆ. ಅಳಿಯ ಅಲ್ಲ ಮಗಳ ಗಂಡ ಅನ್ನೋ ಹಾಗೆ ಇನ್ಸ್ಟಾಗ್ರಾಮ್ ಕಡೆ ಮುಖ ಮಾಡಿ ಕುಳಿತಾಗಿದೆ. ಹಾಂಗಾಗಿ ಒಂದಷ್ಟು ಕಷ್ಟ ಪಟ್ಟು ಉಳಿಸಿಕೊಂಡಿರೋ ಸ್ಕಿಲ್ಸ್ ಕೂಡ ಹೇಳ ಹೆಸರಿಲ್ಲದೇ ನಶಿಸುತ್ತಿವೆ.  

ಎನಿವೇಸ್ ವಿಷಯಕ್ಕೆ ಬರೋಣ... ರಾಜಕೀಯ ಬ್ಯಾಡ ಬುಡಿ, ಹೆಂಗೂ ಇನ್ನೆರಡು ದಿನಕ್ಕೆ ವಿಷಯ ಗೊತ್ತಾಗೇ ಆಗುತ್ತೆ, ಸುಮ್ನೆ ನಾವು ನೀವು ಯಾಕೆ ತಲೆ ಬಿಸಿ ಮಾಡ್ಕೊಳನ ಅಲ್ವುರ?! 😝😝😝 




ಈಗ ನಾ ಬರೀತೀರೋ ವಿಷಯ ಮಡಿವಂತರಿಗಂತೂ ಅಲ್ವೇ ಅಲ್ಲ, ಅಯ್ಯ ಅಂತ ಮುಖ ಮಾಡಿಕೊಂಡು ಕೊನೆಗೆ  ಹೋಗೋ ಮೊದಲು ಈಗಲೇ ಹೋಗಿ ಬಿಡೋದು ಒಳ್ಳೇದು!!  ಈ ವಿಶ್ವ ಸುಂದರಿ ಐಶ್ವರ್ಯ ರಾಯ್  ಬಗ್ಗೆ ಹಲವು ತಿಂಗಳಿಂದ ಏನೋ ಏನೋ ಗುಸು ಅಂತ ಜನ ಮಾತಾಡ್ತಿದ್ದಾರೋ  ಇಲ್ವೋ ನಮ್ಮ ಮೀಡಿಯಾ ದವರಂತೂ ದಿನಕ್ಕೊಂದು ಇಪ್ಪತ್ತು ಅಪ್ಡೇಟ್ಸ್ ಕೊಡ್ತಾನೆ ಇದಾರೆ ಹಂಗಂತೆ  ಹಿಂಗಂತೆ ಅನ್ಕೊಂಡು ಥರಾವರಿ ಸುದ್ದಿ ಸೋಶಿಯಲ್ ಮೀಡಿಯಾ ಸ್ಕ್ರಾಲ್ ಮಾಡುವಾಗ ಬೇಡ ಅಂದ್ರು ಆ ನ್ಯೂಸ್ ಕಂಡೆ ಕಾಣುತ್ತೆ. ಜಸ್ಟ್ ಲೈಕ್ ಬಿಗ್ ಬಾಸ್ ಐ ಸೇ ನೀವು ಫಾಲೋ ಮಾಡ್ತಿರೋ ಇಲ್ವೋ ಹೊರಗಡೆ ಯಾರು ಹೋದ್ರು ಅನ್ನೋದಂತೂ ಗೊತ್ತು ಆಗೇ ಆಗುತ್ತೆ!!  

ಐಶ್ವರ್ಯ ದು ಭಾರತಕ್ಕೆ ಸೀಮಿತವಾದ ವಿಷಯ ಬಿಡಿ, ಇದಕ್ಕಿಂತ ಮೊದಲು ಶಕೀರಾ ಅನ್ನೋ ಇನ್ನೊಬ್ಬ ಪಾಪ್ ಗಾಯಕಿ ಕಮ್ ಅಪೂರ್ವ ಸುಂದರಿದು ಈಗ್ಗೆ  ಕೆಲ ವರ್ಷಗಳ ಕೆಳಗೆ ಇಂಥದ್ದೇ ಒಂದು ಸುದ್ದಿ ವಿಶ್ವವನ್ನೇ(?!) ದಂಗು ಬಡಿಸಿತ್ತು.  ನಮ್ಮ ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾಗಳಿಗೆ ಕಂಡವರ ಮನೆ ಸುದ್ದಿ ಅಂದ್ರೆ ಎಲ್ಲಿಲ್ಲಿದ ಆಸಕ್ತಿ. ಅದು  ಕೊಲೆ  ಆರೋಪಿಯಿಂದ ಹಿಡಿದು ಸೆಲ್ಫ್ ಡಿಕ್ಲೇರ್ಡ್ ಲಾಯರ್ ನ ವರೆಗೂ ಎಲ್ಲರನ್ನ ಬ್ರೇಕಿಂಗ್ ನ್ಯೂಸ್ ಅಡಿ ಹಾಕಿ ಮಕ್ಕಳಿಗೂ ಬಾಯಿ ಪಾಠ ಮಾಡ್ಸಿ  ಬಿಡೋದೆಯಾ!! 

ಫೆಮಿನಿಸಂ ನ ಸ್ವಲ್ಪ ಹೊತ್ತು ಒಂದು ಮೂಟೆ ಲಿ ಕಟ್ಟಿ ಯೋಚನೆ ಮಾಡೋಣ!!  ಮನುಷ್ಯ ಅನ್ನುವ ಒಂದು ಪ್ರಾಣಿ, ಪಾಲಿಗಾಮಿ (ಅಂದ್ರೆ ಒಂದಕ್ಕಿಂತ ಹೆಚ್ಚು ಸಂಗಾತಿಯನ್ನು ಬಯಸುವ ಅಥವಾ ಹೊಂದುವ) ಪ್ರಭೇದಗಳಲ್ಲಿ  ಎಂಟನೆದೋ ಹತ್ತನೇದೋ ಸ್ಥಾನ ಕೊಟ್ಟಿದಾರೆ ಎವೊಲ್ಯೂಷನ್ ಚಾರ್ಟ್ ನಲ್ಲಿ ಅಂದ್ರೆ ಬೈಯೋಲೋಜಿಕಲೀ ಮನುಷ್ಯನಾದ ಮಾತ್ರಕ್ಕೆ ಉಳಿದ ಪ್ರಾಣಿಗಳಿಗಿಂತ ಲೈಂಗಿಕವಾಗಿ ಮನುಷ್ಯ ಪ್ರಾಣಿ ಬಹಳ ಭಿನ್ನವೇನಲ್ಲ, ಕಾಲ ಕ್ರಮೇಣ ನಾಗರಿಕತೆ, ಸಮಾಜ ಹಾಗೂ ಮದುವೆ ಎಂಬ ವ್ಯವಸ್ಥೆಯ ಭಾಗವಾಗಿ ಮೊನೊಗಾಮಿ ಯನ್ನು ಪಾಲಿಸಲು ಶುರುಮಾಡಲಾಯಿತು!! ಇದು ಆರೋಗ್ಯದ ದೃಷ್ಟಿಯಿಂದ ಹಾಗೂ ಕುಟುಂಬ ಎಂಬ ಕಲ್ಪನೆಗೆ ಒಂದು ದೊಡ್ಡ ಬಲ ಕೊಟ್ಟ ಸಂಗತಿ. ಆದರೆ ಅಗೈನ್ bilogically ಹೆಣ್ಣು ಮತ್ತು ಗಂಡು ತುಂಬ ವಿಭಿನ್ನವಾದ ಜೀವಿಗಳೇ!! ಯೋಚನಾ ಲಹರಿ ಹಾಗೂ ಫಿಸಿಕಲ್ ಅಟ್ರಿಬ್ಯೂಟ್ಸ್ ಹೊರತು ಪಡಿಸಿ ವಾಟ್ ಒನ್ ಫೀಲ್ಸ್ ಭಾವನಾತ್ಮಕವಾಗಿ ಹಾರ್ಮೋನುಗಳ ಸೆಕ್ರೆಷನ್ ಇಂದ ಅಥವಾ ಪ್ರತಿ ತಿಂಗಳು ನಡೆಯುವ ದೇಹದ ಬದಲಾವಣೆಗಳಲ್ಲಿಯೂ !   ಹೀಗಿರುವಾಗ ಇಬ್ಬರನ್ನು ಒಂದೇ ತಕ್ಕಡಿಯಲ್ಲಿ ತೂಗಿ ಸರಿ ತಪ್ಪು judgement ಕೊಡುವಲ್ಲಿ ಸೋಶಿಯಲ್ ಮೀಡಿಯಾ ಯಾವಾಗಲೂ ಒಂದು ಕೈ ಮುಂದೆಯೇ ಅನ್ನಿ!! 

ಪ್ರತೀ ಮನುಷ್ಯನೂ ಯುನಿಕ್ ಪ್ಯಾಟರ್ನ್ ಹೊಂದಿರುವ ಜೀವಿ.  ಹೆಣ್ಣು ಗಂಡು ಜೆಂಡರ್ ರಿಲೇಟೆಡ್ ವ್ಯತ್ಯಾಸಗಳನ್ನು ಹೊರತು ಪಡಿಸಿ ಕೂಡ ತನ್ನದೇ ಆದ ಯುನಿಕ್ ಒಪೀನಿಯನ್ ಹೊಂದಿರುವ ಬುದ್ಧೀ ಜೀವಿ! ಮೊನ್ನೆ ಜಂಟಲ್ಮನ್ ಟ್ರೈಟ್ ಗಳಲ್ಲಿ ಒಂದಾದ, ಫೆಮಿನೈನ್ encouragement ಹಾಗೂ ಹೊಗಳಿಕೆ ಬಯಸುವದು ಗಂಡಿನ ಸಹಜ ಪ್ರಕ್ರಿಯೆ ಅನ್ನೋ ಥರದ್ದೊಂದು ರೀಲ್ ವೈರಲ್ ಆಗಿದ್ನ ನಾನು ಶೇರ್ ಮಾಡಿದ್ದೆ. ಅದರಲ್ಲಿ ಒಬ್ಬ ಸ್ನೇಹಿತ ಎಲ್ಲ ಸರಿ ಆದರೆ ಹೆಣ್ಣು ಅಂದರೆ  nurturer ಅಂದರೆ ಆರೈಕೆ ಮಾಡುವವಳು, ಬೆಳೆಸುವವಳು ಅಂತಾನೆ ಸ್ಟೀರಿಯೋಟೈಪಿಕಲ್ ಆಗಿ ಯಾಕೆ ಯಾವಾಗ್ಲೂ ಯೋಚನೆ ಮಾಡ್ಬೇಕು?  ಅಂತ ಕೇಳಿದ, ಫೆಮಿನಿಸಂ ಒಳ ಹೊಕ್ಕ ಮನಸ್ಸು ಹೌದಲ್ವಾ ಅಂತ ಅನ್ಸಿದ್ರು,  bilogically ಅಮ್ಮನಾಗುವ, ಕುಟುಂಬ ಮುನ್ನಡೆಸುವ ಜವಾಬ್ದಾರಿಯನ್ನ ಪ್ರಕೃತಿ ಹೆಣ್ಣಿಗೆ ಅಲ್ವ ಕೊಟ್ಟಿದ್ದು, ಅದನ್ನ ಪ್ರಶ್ನೆ ಮಾಡದೆ ಒಪ್ಪಿಕೊಂಡಿರುವಾಗ ಇದು ಅಷ್ಟೇ ಗಂಡು ಯಾವಾಗ್ಲೂ ವ್ಯಾಲಿಡೇಷನ್ ಬಯಸ್ತಾನೆ ಇರ್ತಾನೆ , ಅದು ಅಮ್ಮ ,ತಂಗಿ,ಗೆಳತೀ, ಪ್ರೇಯಸಿ ಅಥವಾ ಸಂಗಾತಿ ಎಲ್ಲರಲ್ಲೂ ವರ್ಡ್ of  affirmation ಬೇಕು ಅಂತ ಇದ್ದೆ ಇರುತ್ತೆ!! ಹಲವು  ಸಲ ಗಂಡಿನ ಸಕ್ಸಸ್ ಕೂಡ ಯಾವುದೊ ಕಳೆದು ಕೊಂಡ ಪ್ರೇಮದ ನೋವನ್ನು ಮರೆಯುವ ಅಸ್ತ್ರವಾಗಿ ಹೊರ ಹೊಮ್ಮಿರುತ್ತೆ. ಹoಗಾಗಿ ಯಾವ ಗಂಡಸು ತನ್ನ ಸಂಗಾತಿಗೆ ಸೇಫ್ ಸ್ಪೇಸ್ ಕೊಡಬಲ್ಲನೋ ಆತ  ಮಾತ್ರ ಅಷ್ಟೇ ರೀತಿಯ ಆರೈಕೆ ಹಾಗೂ ಸೆಕ್ಯೂರಿಟಿ ಕೂಡ ಆ ಸಂಗಾತಿಯಿಂದ ಪಡೆಯಬಹುದು ಮತ್ತು ಅದರಿಂದ ಸಿಗುವ ಶಾಂತಿ ನೆಮ್ಮದಿಯಿಂದ ಏಳಿಗೆ ಹೊಂದಬಹುದು ಅಂತ ಪ್ರತಿ  ವಾದ ಹಾಕಿದೆ. ಒಪ್ಪಿಗೆ ಆಯ್ತೋ ಇಲ್ವೋ ಸರಿ ಬಿಡವ್ವಾ  ನಿನ್ ಜೊತೆ ಏನ್ ವಾದ ಅಂತ ಸುಮ್ನೆ ಆದ್ರೇನೋ ಪ ಗೊತ್ತಿಲ್ಲ 😝

ಇಷ್ಟೆಲ್ಲಾ ಪೀಠಿಕೆ ಆದ್ಮೇಲೆ ನಮ್ಮ actual ಟಾಪಿಕ್, ಜಗತ್ತಿನ ಅತೀ ಸುಂದರಿ ಪಟ್ಟ ಹೊಂದಿಯೂ ಕೂಡ ಹೆಣ್ಣು ತನ್ನ ಸಂಗಾತಿಯಿಂದ ಮೊಸಗೊಳಗಾಗಬಲ್ಲಳೇ?!! ಹೌದು ಖಂಡಿತ!! ಅದನ್ನು ಕ್ಷಮಿಸೋದು ಖಂಡಿಸೋದು ಅಥವಾ ಅದಕ್ಕೆ ತಕ್ಕ ಶಿಕ್ಷೆ ಕೊಡೋದು ಪ್ರತಿ ಹೆಣ್ಣಿನ ವಯಕ್ತಿಕ ಆಯ್ಕೆ ಅದನ್ನು ಅಷ್ಟೇ ಗೌರವದಿಂದ ಸಮಾಜ ಸ್ವೀಕರಿಸಬೇಕು ಬಟ್ unfortunately ಅದು ನಮ್ಮ ಸಮಾಜಕ್ಕೆ ನಾಗರೀಕತೆಗೆ ಅಂಟಿರುವ ಖಾಯಿಲೆ  ಇಂದ ಸರಿ ಹೋಗುವಂಥದಲ್ಲ!! ಎಲ್ಲ ಸರಿ ಇರುವಾಗಲೂ(?!)  ಕಾರಣಗಳೇ ಇಲ್ಲದೆ ಗಂಡು ಬೇರೆ ಕಡೆ ಮುಖ ಮಾಡುವುದು ಎಷ್ಟು ಸರಿ ಎಷ್ಟು ತಪ್ಪು ಅನ್ನೋದು ಅಗೈನ್ ಸಬ್ಜೆಕ್ಟಿವ್ ಕಲ್ಪನೆ ಮನುಷ್ಯ ಯಾಕೆ ಹಾಗೆ ಯೋಚಿಸುತ್ತಾನೆ ಅನ್ನೋ ಲಹರಿಯೇ ತೀರಾ ಕಾಂಪ್ಲಿಕೇಟೆಡ್, ಇಷ್ಟೆಲ್ಲಾ ಆದರೂ ಒಂದು ಹೆಣ್ಣು ಯಾಕೆ ಸಹಿಸಿಕೊಳ್ಳುತ್ತಾಳೆ ಅನ್ನೊಂದು ಇನ್ನೊಂದು ಎಕ್ಸ್ಟ್ರೀಮ್ ಕಾಂಪ್ಲಿಕೇಷನ್. ಇದರ ಮಧ್ಯೆ  ಬೇಲಿ ಹಾರಿದ ಪ್ರತಿ ಗಂಡಸಿನದ್ದೇ ತಪ್ಪು ಅನ್ನೋಕ್ಕೆ ನಾವ್ಯಾರು ಅವರ ಮನೆಯನ್ನು ಸಹ ನೋಡಿರುವುದಿಲ್ಲ ಇನ್ನು ಆವರ  ಒಳ ಜಗಳ ಮನಸ್ತಾಪ ನಮಗೆ ಗೊತ್ತೂ ಇರುವುದಿಲ್ಲ! ಕೆಲವೊಮ್ಮೆ ಗಂಡು ಸೌಂದರ್ಯ ಮೀರಿದ್ದೇನೋ ಬಯಸುತ್ತಾನಾ ಅನಿಸುತ್ತೆ. ಇರಬಹುದು ಗೊತ್ತಿಲ್ಲ! 

ಇದರ ಮಧ್ಯೆ ಅವರ್ನೆಲ್ಲ ಆಡಿಕೊಂಡು ಮಾನಸಿಕವಾಗಿ ಇನ್ನೊಬ್ಬ ಹೆಂಗಸನ್ನು ಬಯಸುವ ಗಂಡು, ದೈಹಿಕವಾಗಿ  ಎಂತದ್ದು ಮಾಡಲಿಲ್ಲವಲ್ಲ ಹಾಂಗಾಗಿ ನಾನು ಸತಿ ಸಾವಿತ್ರಿಯ ಗಂಡು ರೂಪ ಅಂತ ಒಳಗೊಳಗೇ ಖುಷಿ ಪಡಬಹುದಷ್ಟೆ!! ಇನ್ನು ಎಲ್ಲ ಕಷ್ಟ , ನೋವು, ತಾಪತ್ರೆಯ ಮೋಸ ಹೆಣ್ಣಿಗೆ ಆಗುತ್ತೇನೋ ಅಂದರೆ ,ಹೂo! ಹೆಚ್ಚಿನ ಸಲ ಕೌಟುಂಬಿಕ ಕಟ್ಟಳೆಯೊಳಗೆ  ಬಂದ ಹೆಂಗಸೂ, ಮಾನಸಿಕವಾಗಿ ಇನ್ನೊಂದು ಕಡೆ ಮುಖಮಾಡಿಯೂ ಗಂಡಿನಷ್ಟು ಧೈರ್ಯವಾಗಿ ಬೇಲಿ ಹಾರಲು ಯತ್ನಿಸದೆ ಇರಬಹುದು ಆದರೆ ಎರಡೂ ಕಡೆ exceptions  ಇದ್ದೆ ಇವೆ! ಮನುಷ್ಯ ಸಹಜ ಕಾಮ ಮೀರಿ ಬೆಳೆದ ಯೋಗಿಗಳಿದ್ದಾರೆ ಹಾಗೆ ಅದೇ ಕಾಮಕ್ಕೆ  ಬಲಿಯಾದ ಗಂಡು ಹೆಣ್ಣು ಇಬ್ಬರೂ ಸಮ ಪ್ರಮಾಣದಲ್ಲೇ ಇದ್ದಾರೆ!! ಆದರೆ ಹೆಣ್ಣು ಮಾಡುವ ಪ್ರಮಾದ ಒಂದಿಡೀ ಕುಟುಂಬ ಛಿದ್ರ ಗೊಳಿಸುವ ಸಂಭವ ಅತೀ ಹೆಚ್ಚು, ಗಂಡು ಬೇಲಿ ಹಾರಿ ವಾಪಸ್ಸು ಬಂದು ಏನೂ  ಆಗಿಯೇ ಇಲ್ವೇನೋ ಎಂಬಂತೆ ಇದ್ದು ಬಿಡಬಹುದು ಹೆಚ್ಚಿನ ಸಲ ಅದು ಮಕ್ಕಳ ವರೆಗೆ ದಾಟಿಯೇ ಇರುವುದಿಲ್ಲ!! ಇದು ಕೇವಲ ಮನರಂಜನೆ, ಕಾಲಹರಣ, ಹಾಗೂ ಆಡಿಕೊಳ್ಳುವ ವಿಷಯವಲ್ಲ ಇದಕ್ಕೆ ಸಾಮಾಜಿಕ ,ವೈಯಕ್ತಿಕ ಹಾಗೂ ಜೈವಿಕ ಕಟ್ಟುಪಾಡುಗಳೂ ಕಾರಣವಾಗಿರುತ್ತವೆ. 

ಸೊ ಕಂಡವರ ಮನೆಯ ವಿಷಯ ನಂಗ್ಯಾಕೆ ಸಾಮೆ ಅನ್ಕೊಂಡು ಊರ್ ಉಸಾಬರಿ ಮುಗಿಸುವ ಸಮಯ, ಸುಮಾರು ತಿಂಗಳುಗಳ ನಂತ್ರ ಏನೋ ಬರೆದ ಖುಷಿ . ನಕಾರಾತ್ಮಕ ತಂತ್ರಗಳಿಗೆ ಅವಕಾಶವಿಲ್ಲ ವೈಚಾರಿಕ ಭಿನ್ನಾಭಿಪ್ರಾಯಗಳನ್ನು  ಸದಾ ಗೌರವಿಸಲಾಗುವುದು!! 😊


Friday, March 8, 2024

ದುಡ್ಡಿರೋರೆಲ್ಲ ದಾನ ಮಾಡ್ಬೇಕು ಅನ್ನೋದನ್ನ ಅಡ್ವೊಕೇಟ್ ಮಾಡ್ಕೊಂಡು ಇರೋರು.....

 



ಇದಾಗಿ ಒಂದೂ ಒಂದೂವರೆ ವರ್ಷ ಆಗಿರ್ಬೇಕು, ಅವತ್ತು ನಮ್ಮ ಸಂಸ್ಥೆಯ ನೂತನ ಕಟ್ಟಡದ ಉದ್ಘಾಟನೆಗೆ ಮಾನ್ಯ ರಾಷ್ಟ್ರಪತಿ ದ್ರೌಪದಿ ಮುರ್ಮು ಬರೋವ್ರಿದ್ರು, ಅದೊಂದು ಹಬ್ಬದ ಸಂಭ್ರಮವಿತ್ತು. ನಮ್ಮ ಆಗಿನ ಸೆನೆಟ್ ನ ಚೇರ್ ಪರ್ಸನ್ ಆಗಿದ್ದ ಸುಧಾಮೂರ್ತಿ ಕೂಡ ಬೆಳಿಗ್ಗೆ ಎಂಟು ಗಂಟೆಗೆ, ಎಲ್ಲ ಸರಿಯಾಗಿದೀಯಾ ಅಂತ ನೋಡೋಕೆ ಬಂದಿದ್ರು. ರಾಷ್ಟ್ರಪತಿಗಳ ರೂಮ್ ಉಸ್ತುವಾರಿ ನನ್ನ ಮೇಲಿತ್ತು, ಸುಧಾ ಮೂರ್ತಿಯವರ ಜೊತೆ ಮೊದಲ ಭೇಟಿ ಅದಾಗಿತ್ತು, ಅವರು ಬಂದಾಗ ಇಲ್ಲಿ ಯಾರು ಇರ್ತಾರೆ ಅಂತ ಕೇಳಿದ್ರು, ಅಲ್ಲಿರುವವರು ಯಾರೋ ನನ್ನ ಹೆಸರು ಹೇಳಿದ್ರು, ನನ್ನ ಜೊತೆ ಏನ್ ಮಾತಿರುತ್ತೆ ಇವರಿಗೆ ಅಂತ ಅಲ್ಲೇ ಸೈಡ್ ಅಲ್ಲಿ ಸುಮ್ನೆ ನಿಂತು ನಾನೇ ಅಂತ ಹೇಳಿದೆ. ಕೂಡಲೇ ಅಶ್ವಿನಿ ಬಾರಮ್ಮ ಹೋಗಿ ರೂಮ್ ಚೆಕ್ ಮಾಡಿ ಬರುಣು, ಕನ್ನಡ ಬರ್ತದ ಅಲ ನಿಂಗ ಅಂದ್ರು. ಹ್ಞೂ ಅಂತ ತಲೆ ಅಲ್ಲಾಡಿಸಿದೆ. ನೋಡು ಎಲ್ಲ ಚೆನ್ನಾಗಿ ನೋಡ್ಕೊಬೇಕಮ್ಮ ಅವರಿಗೆ ಗಿಫ್ಟ್ ಆಗಿ ಒಂದು ಸಾರಿ ತಂದೀದಿನಿ ಅದನ್ನು ಇಲ್ಲೇ ಇಟ್ಟಿರು, ಆಮೇಲೆ ತೊಗೊಂಡು ಹೋಗ್ತೀನಿ, ರಾಷ್ಟ್ರಪತಿ ಅನ್ನೋದು ನೆನಪಿರಲಿ ಏನೂ ಲೋಪ ಆಗ್ದೇ ಇರೋಹಂಗೆ ನೋಡ್ಕೊಳಿ ಅಂತ ಹೆಗಲ ಮೇಲೆ ಕೈ ಹಾಕಿ ಥೇಟ್ ಮನೆಯವರ್ಯಾರೋ ಮಾತಡ್ತಿದಾರೇನೋ ಅನ್ನೋ ಅನುಭವ. ನಂಗಿನ್ನೂ ನೆನಪಿದೆ ಇನ್ಫೋಸಿಸ್ ಆಗಲಿ, ಚೇರ್ ಪರ್ಸನ್ ಅನ್ನೋ ಯಾವ ದರ್ಪ ಇಲ್ಲದೇನೆ ಹೌಸ್  ಕೀಪಿಂಗ್ ಸ್ಟಾಫ್ ನವರ ಜೊತೆಯೂ ಅಷ್ಟೇ ವಿನಮ್ರವಾಗಿ ನಡೆದುಕೊಂಡಿದ್ದರು!!  ಮಧ್ಯಾನದ ವೇಳೆಗೆ ರಾಷ್ಟ್ರಪತಿಗಳ ಆಗಮನ ಇದ್ದಿದ್ದು... 

ರಾಷ್ಟ್ರಪತಿಯವರು ನಿಮ್ಮ ಸಂಸ್ಥೆಗೆ ಬಂದಿದ್ದರು ಅವರನ್ನು ಭೇಟಿ ಆಗಲು prior ಅಪ್ಪೋಯಿಂಟ್ಮೆಂಟ್ ಬೇಕಾಗುತ್ತೆ, ಮುಂಚೆ ನಿಮ್ ಷೆಡ್ಯೂಲ್ ಫಿಕ್ಸ್ ಮಾಡಿರಬೇಕಾಗಿರುತ್ತೆ. ಅವರ ಸುತ್ತಲಿರುವ ಸೆಕ್ಯೂರಿಟಿ ಮುಲಾಜಿಲ್ಲದೇ ಭೇಟಿ ಆಗ ಬಂದವರನ್ನು ಆಚೆ ಕಳಿಸುತ್ತಾರೆ. ಕೋಣೆಯ ಉಸ್ತುವಾರಿ ನನ್ನ ಮೇಲಿದ್ದರಿಂದ ಒಂದು ಬಾರಿ ಮಾತ್ರ  ನಂಗೆ ಒಳ ಹೋಗಲು ಅವಕಾಶ ಕೊಟ್ಟಿದ್ದರು ಅದು ನನ್ನ ಹತ್ರ ಪ್ರಾಕ್ಸಿಮಿಟಿ ಪಾಸ್ ಇದ್ದ ಕಾರಣ. ಊಟದ ಸಮಯಕ್ಕೆ ಸುಧಾ ಮೂರ್ತಿಯವರು, ನಾನು ಒಂದ್ಸಲ ಊಟದ ವಿಷಯವಾಗಿ ರಾಷ್ಟ್ರಪತಿಗಳ ಹತ್ತಿರ ಮಾತಾಡಬಹುದೇ ಅಂತ ನಮ್ಮ ರೂಮ್ ಬಳಿ ಬಂದರು, ಅವ್ರನ್ನ ಕಂಡು ಡಿಸಿ ಮತ್ತು ಎಸ್ .ಪಿ ಕೂಡ ಅವರು ಒಬ್ಬರೇ ಹೋಗೋದು ತಪ್ಪಾಗುತ್ತೇನೋ ಅಂತ ಅವರ ಜೊತೆಯಾಗಿ ಎಂಟ್ರನ್ಸ್ ವರೆಗೂ ಹೋದ್ರು, ಆದರೆ ಸೆಕ್ಯೂರಿಟಿ ಮಾತ್ರ ಅವರನ್ನು ಒಳಗಡೆ ಬಿಡಲಿಲ್ಲ!!! ಏಯ್ ಏನ್ ನಡೀತಿದೆ ಇಲ್ಲಿ ಗುರೂ ಅವರು ನಮ ಚೇರ್ ಪರ್ಸನ್ ಅವರನ್ನೇ ಬಿಡಲ್ವ ? ಏನ್ ಕಥೆ ಇವ್ರದ್ದು ಅನ್ಕೊಂಡು ನಂಗೆ ನಾನು ಸಮಾಧಾನ ಮಾಡ್ಕೊಂಡು ಅಲ್ಲೇ ಇದ್ದ ಧಡೂತಿ ಸೆಕ್ಯೂರಿಟಿ ಯವರನ್ನ ಗುರಾಯಿಸಿದೆ. ಆಪ್ ಕೋ ಪತಾ ಹಾಯ್ ಕೀ ವೋ ಕೌನ್ ಹೈ ? ಅಂದೆ ಸಿಂಡರಿಸಿಕೊಂಡಿದ್ದ ಮುಖದಿಂದಲೇ ನನ್ನ ಐಡಿ  ನೋಡಿ ಅದರ ಮೇಲೆ ಪ್ರಾಕ್ಸಿಮಿಟಿ ಪಾಸ್ ಅಂತ ಇರೋದಕ್ಕೆ ಮೋಸ್ಟ್ಲಿ ರಿಪ್ಲೈ ಮಾಡಿದ್ರು ಅನ್ಸುತ್ತೆ, "ಕೊಯಿ ಭೀ ಹೊ ಹಮೆ  ಕ್ಯಾ , ಉಧರ್ ದೇಖ್  ರಹೇ ಹೊ ನಾ ಚೀಫ್ ಮಿನಿಸ್ಟರ್ , ಔರ್ ಗವರ್ನರ್ ಕೋಭಿ ದುಸರೇ ರೂಮ್ ಮೇ ಬಿಠಾಯಾ ಹೈ."  ನಾವು ಪ್ರೋಟೋಕಾಲ್ ಫಾಲೋ ಮಾಡ್ತೇವೆ ಅಪ್ಪೋಯಿಂಟ್ಮೆಂಟ್ ಇದ್ರೆ ಮಾತ್ರ ಒಳಗಡೆ ಅಂದ್ರು. ಇನ್ಫೋಸಿಸ್ ಗೊತ್ತಿಲ್ವ ನಿಮಗೆ ಅದರ ಮಾಲೀಕರು ಕಣ್ರೀ ಅಂತ ಏನೋ ಹೇಳೋಕೆ ಹೋದೆ ಆ ಮನುಷ್ಯ ಕ್ಯಾರೇ ಅನ್ಲಿಲ್ಲ!! 

ನಮ್ಮೆಲ್ಲರ ಮುಂದೆ ಅವರನ್ನು ಒಳ ಹೋಗಲು ಬಿಡದೆ ಇದ್ದ ಸ್ಟಾಫ್ ಮೇಲೆ ರೇಗಿಯೋ , ಅಲ್ಲೇ ಇದ್ದ ಎಂಪಿ ಹಾಗೂ ಎಂ ಎಲ್ ಎ ಗಳ  ಸಹಾಯ ಪಡೆದು ಒಳ ಹೋಗೋದೇನೋ ದೊಡ್ಡ ವಿಷಯ ವಾಗಿರಲಿಲ್ಲ but she  chose not to go !!  ಇದನ್ನ ಸಿಂಪ್ಲಿಸಿಟಿ ಅನ್ನದೆ ಇನ್ನೇನು ಅಂತಾರೆ, ಒಳಗಡೆ ಬಿಟ್ಟು ಕೊಡದೆ ಇದ್ದಿದ್ದಕ್ಕೆ ಬೇಜಾರಾಯ್ತೆನೋ ಗೊತ್ತಿಲ್ಲ ಹೊರಗಡೆ ತೋರಿಸಿಕೊಡಲಿಲ್ಲ. ರಾಷ್ಟ್ರಪತಿ ಅಲ್ವ ಏನೋ ರೂಲ್ಸ್ ಇರುತ್ತೆ ತೊಂದರೆ ಇಲ್ಲ ಬಿಡಿ ಅಂತ ನಗು ಮುಖದಿಂದಲೇ ವಾಪಾಸ್ ಹೋದ್ರು. ಐರನಿ ಅಂದ್ರೆ ಸ್ಟೇಜ್ ಮೇಲೆ ರಾಷ್ಟ್ರಪತಿಯವರನ್ನು ಬರಮಾಡಿಕೊಳ್ಳಬೇಕಾಗಿದ್ದು ಸುಧಾ ಮೂರ್ತಿ ನೇ !! ಭಾಷಣ ಉಡುಗೊರೆ ಎಲ್ಲದೂ ಚೆನ್ನಾಗೆ ನಡೀತು ಅದು ದೊಡ್ಡ ನ್ಯೂಸ್ ಕೂಡ ಆಗಿತ್ತು, ನಮ್ಮ  ಕಡೆಯ ಕೌದಿಯನ್ನು ಸಹ ಉಡುಗೊರೆಯಾಗಿ ಕೊಟ್ಟಿದ್ದಕ್ಕೆ!! 

ವೈಚಾರಿಕ ಭಿನ್ನಾಭಿಪ್ರಾಯಗಳ ಮಧ್ಯೆ , ಹಾಗೂ ವಯೋಸಹಜವಾಗಿ ಏನೋ ಹೇಳಲು ಹೋಗಿ , ಇನ್ನೇನೋ ಅರ್ಥೈಸಿಕೊಳ್ಳೋ  ಈ ಸೋಶಿಯಲ್ ಮೀಡಿಯಾ ಜಮಾನದಲ್ಲಿ ಎಲ್ಲದೂ ಕಾಂಟ್ರವರ್ಸಿ ಆಗುವ ಸಾಧ್ಯತೆ ತುಸು ಹೆಚ್ಛೆ!! ನಾವು ಎಲ್ಲದನ್ನು ಸಿನಿಕರಾಗಿ ನೋಡಲು ಶುರುಮಾಡಿದರೇ, ಪ್ರತಿಯೊಬ್ಬರಲ್ಲೂ ತಪ್ಪೇ ಹುಡುಕೊಂಡು ಕೂರೋದಾದ್ರೆ ವೆನ್ ಟು embrace positive  side of  humanity ?! ರಾಜಕೀಯ ಹಾಗೂ ಬಿಸಿನೆಸ್ ಕಾರಣಗಳೇನೇ ಇರಲಿ, this lady truly deserves it !! ದುಡ್ಡಿರೋರೆಲ್ಲ ದಾನ ಮಾಡ್ಬೇಕು ಅನ್ನೋದನ್ನ ಅಡ್ವೊಕೇಟ್ ಮಾಡ್ಕೊಂಡು ಇರೋರು , ಅಂಬಾನಿ ಮದುವೇನೂ ಆಡ್ಕೋತಾರೆ ಇವರ simplicity ಕೂಡ ಆಡ್ಕೋತಾರೆ!! ಮದುವೆ, ದಾನ ಎಲ್ಲ ವೈಯಕ್ತಿಕ ಆಯ್ಕೆ!!  ಆಡಿಕೊಳ್ಳುವವವರು ಫೇಸ್ಬುಕ್ ವಾಲ್ ಗಳಿಗೆ ಸೀಮಿತ, ನಮ್ಮ ವ್ಯಂಗ್ಯ ಅವರಿಗೆ ತಾಕೋದೂ ಇಲ್ಲ, ಅದರಿಂದ ಪ್ರಯೋಜನವೂ ಇಲ್ಲ!! stereotypical mindset ಹಾಗೂ ಸಮಾಜದ ಕಟ್ಟುಪಾಡುಗಳನ್ನು ೫ ದಶಕಗಳ ಹಿಂದೇನೆ ಮುರಿದ ಇವರು ವಿಮೆನ್ಸ್  ಡೇ ದಿನ, ಅದೇ ರಾಷ್ಟ್ರಪತಿಗಳಿಂದ ಆಯ್ಕೆ ಆಗಿದ್ದು ಖುಷಿ ಕೊಟ್ಟಿದೆ  !!  #ಬದುಕಿನ_ಕಲಿಕೆ 



Sunday, September 10, 2023

ಐರ್ಲೆಂಡ್ ಡೈರಿ!!



ಈ ಏರ್ಪೋರ್ಟ್ ಅಲ್ಲಿ ಕೂತು ಕಾಯೋ ಕೆಲಸ ಇದಿಯಲ್ಲ ಇದರಷ್ಟು, ಮಹಾ ಬೋರಿಂಗ್ ಕೆಲಸ ಮತ್ತ ಯವುದೂ ಇರಲಿಕಿಲ್ಲ!! ಆ ಕಡೆ ನೆಮ್ಮದಿಯಿಂದ ಮಲಗೋ ಹಾಗಿಲ್ಲ, ಈ ಕಡೆ ಎಚ್ಚರ ಕೂರುವಷ್ಟು ಎನರ್ಜಿ ಇರೋದಿಲ್ಲ. ಎಲ್ಲ ಹಾರಾಟ ಅಲೆದಾಟ ತಿರುಗಾಟಗಳ ನಡುವೆ ಸಿಗುವ ತಂಗುದಾಣಗಳು ಯಾಕೋ ನನ್ನ ತಾಳ್ಮೆಗೆ ಸರಿ ಹೊಂದುವುದಿಲ್ಲ. ಇರಲಿ ವಿಷಯ ಅದಲ್ಲ, ಹೆಂಗೂ ಕೂತು ಬೋರ್ ಹೊಡಿತಿದೆ.. ಒಂದಷ್ಟು ಐರ್ಲೆಂಡ್ ಎಂಬ ದೇಶ, ಜನ, ಭಾಷೆ ಬಗ್ಗೆ ಬರೆಯೋಣ ಅಂತ....

ಇತಿಹಾಸ ನೋಡೋದಾದ್ರೆ.. ಇವರುಗಳು ನಮ್ಮಂತೆ ಬ್ರಿಟಿಷರ ಮುಷ್ಟಿಯಲ್ಲಿ ನರಳಿ, ನಮ್ಮ ಸ್ವಾತಂತ್ರ್ಯದ ನಂತರದ ವರ್ಷದಲ್ಲಿ ಇಂಡಿಪೆಂಡೆಂಟ್ ಆದ್ರೂ ಕೂಡ ಅರ್ಧದಷ್ಟು ಐರ್ಲೆಂಡ್ ಇತ್ತಿಚಿನವರೆಗೆ ಯುನೈಟೆಡ್ ಕಿಂಗ್ಡಮ್ ಭಾಗವಾಗಿಯೇ ಗುರುತಿಸಿಕೊಳ್ಳುತ್ತಿದ್ದರು. ಯುರೋಪ್ ನ ಭಾಗವಾಗಿದ್ದರೂ, ಶೆಂಗನ್ ರಾಷ್ಟ್ರಗಳಲ್ಲಿ ಗುರುತಿಸೊಕೊಳ್ಳದೇ, ತನ್ನದೇ ವಿಶಿಷ್ಟ ಅಸ್ತಿತ್ವವನ್ನು ಉಳಿಸಿಕೊಳ್ಳಲು ಬಡಿದಾಡಿ, ಯಶಸ್ವಿಯಾಗಿ ರಿಪಬ್ಲಿಕ್ ಆಫ್ ಐರಲೆಂಡ್ ಎಂದು ಅಂಗ್ಲೋ ಐರಿಶ್ ಟ್ರಿಟಿ ಸಹಿ ಮಾಡಿಕೊಂಡಿದ್ದು, ಬರೊಬ್ಬರಿ ಎಳುನೂರು ವರ್ಷಗಳ‌ ನಂತರ!! ಇವರದ್ದೇ ಆದ ಐರಿಶ್ ಭಾಷೆಯನ್ನು ಕೇವಲ ಐದರಿಂದ ಹತ್ತು ಪರ್ಸೆಂಟ್ ಜನ ಮಾತ್ರ ಮಾತನಾಡುತ್ತಾರೆ. ಬ್ರಿಟಿಷರ ಹಾವಳಿಯಿಂದ ಭಾಷೆಯನ್ನೆ ಮರೆತ ಜನರಿದ್ದಾರೆ ಇಲ್ಲಿ.

ಇಲ್ಲಿನ ಇವರ ಇಂಗ್ಲಿಷ್ ಆಕ್ಸೆಂಟ್ ನ ವಿಶ್ವದ ಸುಂದರ ಆಕ್ಸೆಂಟ್ ಅಂತಾನೆ ಹೇಳಬಹದು. ಅವರದೇ ಐರಿಶ್ ಭಾಷೆಯನ್ನ ಬಳಸುವರು ಅತೀ ವಿರಳ. ಇವರ ಇಂಗ್ಲಿಷ್ ನ ಕೇಳುವುದೇ  ಹಿತ... ಆದರೆ ನಮ್ಮ ಇಂಡಿಯನ್  ಇಂಗ್ಲೀಷ್  ಆಕ್ಸೆಂಟ್  ಇವರಿಗೆ ಅರ್ಥ ಅಗೂದೇ ಇಲ್ಲ.. ಅವರಂತೆ ರಾಗವಾಗಿ ಮಾತಾಡಿದರೆ ಮಾತ್ರ ಅರ್ಥ ಮಾಡ್ಕೊಂತಾರೆ. ಸುಂದರ ದ್ವೀಪದಲ್ಲಿನ ಈ ದೇಶದ ಜನ ಭಯಂಕರ ಸ್ವಾಭಿಮಾನಿ ಹಾಗೂ ಇಂಡಿಪೆಂಡೆಂಟ್‌ ಮನಸ್ಥಿತಿಯನ್ನು ಹೊಂದಿರುವವರು. 

ತುಂಬ ರಿಸರ್ವಡ್ ಆಗಿ ತಾವಾಯ್ತು ತಮ್ಮ ಕೆಲಸವಾಯ್ತು ಅನ್ನೋ ಗಂಟು ಮೂತಿಯ ಜನರ ಮಧ್ಯ ತುಂಬ ಫ್ರೆಂಡ್ಲಿಯಾಗಿ ಮಾತಾಡುವ ಹಲವು ಜನರು ಒಮ್ಮೆಲೆ ಭಯ ಬೀಳಿಸುತ್ತಾರೆ. ಬೀದಿಯಲ್ಲಿ ಸುಮ್ಮನೆ ನಡೆದು ಹೋಗುವಾಗ if your eyes catch their eyes, they make sure that they greet you. "Hey beautiful", "Hi lovely", "Have Lovely day.." ಅನ್ನೋ‌ದು ತೀರ casual greetings. ಮೊದಲ‌ಬಾರಿ ಹೋದವರಿಗೆ ಇವರ್ಯಾಕೆ‌ ಹಿಂಗ್ ಆಡ್ತಾರೋ ಯಪ್ಪಾ.. ಲವ್ಲಿ ನಾ? ನಾನಾ?? ಅಂತ ನಾವ್ ತಲಿ ತಲಿ‌ ಕೆಡಸ್ಕೊಳುವಷ್ಟರಲ್ಲಿ ಅವರು ನಮ್ಮನ್ನು ದಾಟಿ‌ ಇನ್ಯಾರನ್ಮೋ ಗ್ರೀಟ್ ಮಾಡಿಕೊಂಡು ಮುಂದೆ ಸಾಗಿರುತ್ತಾರೆ. 
ಸುಂದರ ಹುಡುಗಿಯರು, ವಾಲ್ ಪೇಪರಗಿಂತಲೂ ಚೆಂದದ ಜಾಗಗಳು, ಐರ್ಲೆಂಡ್ ಪ್ರವಾಸಿಗರ ಆಕರ್ಷಣೆಯ ತಾಣ.

ಮಕ್ಕಳಿಗಿಂತ ಜಾಸ್ತಿ ಬೀದಿಗಳಲ್ಲಿ ನಾಯಿಗಳದ್ದೇ ದರ್ಬಾರು! ಅವು ಮಾಡುವ ಹೊಲಸನ್ನು ಚೂರೂ ಬೇಜಾರಿಲ್ಲದೇ ಚೀಲದಲ್ಲಿ ಎತ್ತಿ ಎತ್ತಿ ಹಾಕುವ ನಾಯಿಗಳ ಓನರ್ಸ್, ಯಾರಿಗೂ ತೊಂದರೆ ಆಗದಂತೆ ತೀರ ಜಾಗೂರಕರಾಗಿ ನಡೆಯುವ ಜನ,‌ ನಾವು‌  ಫೋಟೋ ವಿಡಿಯೋ ತೆಗೆದುಕೊಳ್ಳುವಾಗ ಭಾರಿ ತಾಳ್ಮೆಯಿಂದ‌  ಕಾಯ್ದು ಕೂಡ, ವಾಪಸ್ ನಮಗೆ‌ ಸಾರಿ ಹೇಳಿ ಹೋಗುತ್ತಿದ್ದರು!! ಈ ಬ್ಯಾಗ್ ಪ್ಯಾಕ್ ಹಿಂದೆ ಹಾಕಿಕೊಂಡರೆ ಓಡಾಡುವಾಗ ಯಾರಿಗಾದರೂ ತಾಗೀತೂ ಅಂತ ಅದನ್ನು ಮುಂದೆ ನೇತು ಹಾಕಿಕೊಂಡು ಓಡಾಡುವಷ್ಟು ಒಳ್ಳೆ ಜನ!

ವೈಪರೀತ್ಯಗಳಿಂದ ಕೂಡಿದ ಹವಾಮಾನ, ಆಲುಗಡ್ಡೆ ಬಿಟ್ಟರೆ ಇನ್ನೆನೂ ಬೆಳೆಯದ ಪರಿಸ್ಥಿತಿ. ಅಲ್ಲೊಂದು ಇಲ್ಲೊಂದು ಆಪಲ್ ಗಿಡ ಕಂಡಿದ್ದು ಬಿಟ್ಟರೆ ಇವರ ಕೃಷಿ ಮಾರುಕಟ್ಟೆ ಬೇರೆ ದೇಶಗಳ ಮೇಲೆಯೇ ಅವಲಂಬಿತವಾಗಿದೆ. ಐರಿಶ್ ಹಸು ಹಾಗೂ ಕುರಿಗಳು ತುಂಬ ಫೇಮಸ್. ಇಲ್ಲಿನ‌ ಫುಲ್‌ಫ್ಯಾಟ್ ಮಿಲ್ಕ್ ಹಾಗೂ ಗೋಟ್ ಚೀಸ್ ಒಮ್ಮೆ ಸವಿಯಲೇಬೇಕು!!

ಆದರೆ ವೆಜಿಟೆರಿಯನ್ನ್ ಗೇ ಮಾತ್ರ ಭಾರೀ ನಿರಾಸೆ ತರಿಸುವ ರೆಸ್ಟೊರೆಂಟ್ ಗಳು. ಅಲ್ಲಲ್ಲಿ ಸಿಗುವ ಇಂಡಿಯನ್‌ ರೆಸ್ಟೊರೆಂಟ್ ಕೂಡ ಉಪ್ಪು ಖಾರ ಕಮ್ಮಿ ಹಾಕಿನೇ‌ ಅಡುಗೆ ಮಾಡ್ತಾರೆ.

ಜೆಟ್ ಸ್ಪ್ರೆ ಇಲ್ಲದ ಬಾತರೂಮ್, ಬಿಸಿಲಲ್ಲೂ ಕೋಟ್ ಧರಿಸಿ ಹೊರಹೋಗುವ ಪಧ್ದತಿ, ಎಷ್ಟೇ ಉಪ್ಪು ಹಾಕಿಕೊಂಡರೂ ಉಪ್ಪೇ ಇಲ್ಲ ಎನಿಸೋದು, ಸಿಹಿಯೇ ಇಲ್ಲದ ಸಕ್ಕರೆ, ಒಂದು ಕಪ್ಪು ಕಾಫಿಗೆ ಅಥವಾ ಚಹಾಕ್ಕೆ ಹನಿಯಷ್ಟು ಹಾಲು ಹಾಕಿಕೊಂಡು ಕುಡಿಯುವ ಪಧ್ದತಿ, ರಾತ್ರಿ ಒಂಭತ್ತು ಗಂಟೆಯವರೆಗೂ ಇರುವ ಬೆಳಕಿಗೆ ಅಡ್ಜಸ್ಟ್ ಆಗೋದು ಸ್ವಲ್ಲ ಕಷ್ಟ. ಆದರೂ ಕುಡಿಯುವವರ ಸ್ವರ್ಗವೆಂದೇ ಹೇಳಬಹುದು, ಬೆಳಿಗ್ಗೆ ಎದ್ದಾಗಿಂದ ಸಂಜೆವರೆಗೂ ಎಲ್ಲ ರೆಸ್ಟೋರೆಂಟ್ ಗಳಲ್ಲಿ ನಮ್ಮಲ್ಲಿ‌ ನೀರು ಕೊಡುವಂತೆ ಅಲ್ಲಿ ಲೀಕರ್ ಕೊಟ್ಟೇ ಮೆನು ಕೊಡುತ್ತಾರೆ.  ಹಣ್ಣು ಹಣ್ಣು ಮುದುಕರಾದರೂ ನಮಗಿಂತ ಗಟ್ಟಿ ಅಲ್ಲಿನ ವಯೋವೃಧ್ದ ಜನ. ಇಲ್ಲಿನ ಕ್ಲಿಫ್ ವಾಕಿಂಗ್ ಹೋದರೆ ನಿಮಗೆ ಸರಾಸರಿ ಅರವತ್ತರ ನಂತರದ ವಯಸ್ಸಿನ‌ ಜನರೇ ಸಿಗುತ್ತಾರೆ ಮತ್ತೆ ನಾವುಗಳು ಎದೆಯುಸಿರು ಬಿಡುತ್ತ ಇನ್ನಾಗಲ್ಲ ಎನ್ನುವಾಗ ಅವರಾಗಲೇ ಬೆಟ್ಟದ ತುದಿ ಮುಟ್ಟಿ ವಾಪಾಸ್ ಬಂದಿರುತ್ತಾರೆ. ಫಿಟ್ನೆಸ್ ಹ್ಯಾಸ್ ನೋ ಎಜ್ ಲಿಮಿಟ್ ಅನ್ನೋವಷ್ಟು ಗಟ್ಟಿ ಜನ!!

ಆ ವಯಸ್ಸಲ್ಲೂ ಚೆಂದನೆ ರೆಡಿಯಾಗಿ, ಲೂಸ್ ಹೇರ್ ಬಿಟ್ಟು, ಮುತ್ತಿನ ಕ್ಲಿಪ್ ಹಾಕಿಕೊಂಡು, ಶಾರ್ಟ್ ಫ್ರಾಕ್ ಹಾಕಿ, ಕೆಂಪು ಲಿಪಸ್ಟಿಕ್, ಕೆಂಪು ನೇಲ್ ಕಲರ್,ಮ್ಯಾಚಿಂಗ್ ಸ್ಯಾಂಡಲ್ಸ್ ಹಾಕಿಕೊಂಡು ಬಸ್ ಹತ್ತು ಅಜ್ಜಿಯರನ್ನು ನೋಡುವುದೇ ಒಂದು ಸಂಭ್ರಮ. Honey... Careful ಅಂತ ಅಜ್ಜಿಯ ಕಾಳಜಿ ಮಾಡುವ ಹ್ಯಾಂಡ್ಸಮ್ ಅಜ್ಕಂದಿರೂ ಏನೂ ಕಮ್ಮಿಯಿಲ್ಲ.  ಆ ವಯಸ್ಸಲ್ಲೂ ಟೀನೇಜ್ ನವರಂತೆ ಆದರೆ ಎಲ್ಲೇ ಮೀರದಂತೆ ಅವರಾಡುವ ಮಾತು, ಹಾಸ್ಯ, ರೊಮ್ಯಾನ್ಸ್ ಎಲ್ಲದೂ ಚೆಂದ 😍🤗

ಭಾರತೀಯರಿಗೆ ಅಲ್ಲಿನ ಎಂಬೆಸಿ ಒಂದು ವಿಶಿಷ್ಟ ಸವಲತ್ತು ಕೊಟ್ಟಿದೆ ನೀವು ಟೂರಿಸ್ಟ್ ಅಥವಾ ಆಫಿಸ್ ಕೆಲಸದ ಮೇಲೆ ಶಾರ್ಟ್ ಸ್ಟೇ ವಿಸಾ ಅಪ್ಲೈ ಮಾಡಿದ್ದಿರಾದರೆ, ನಿಮಗೆ ಬ್ರಿಟಿಷ್ ಐರಿಶ್ ವೀಸಾ ಎಂಡೋರ್ಸ ಮಾಡಿಕೊಳ್ಳುವ ಆಪ್ಷನ್ ಇದೆ. ಸೆಪೆರೇಟ್ ಆಗಿ ಯುಕೆ ವೀಸಾ ಅಗತ್ಯವಿಲ್ಲ. ಕಾಮನ್ ಟ್ರಾವೆಲ್‌ ಎರಿಯಾದಲ್ಲಿ ಎಷ್ಟು ಸಲ ಬೇಕಾದರೂ ಓಡಾಡಬಹುದು. ಮತ್ತು ಕೇವಲ ಒಂದು ಗಂಟೆಯ ಫ್ಲೈಟ್ ನಿಮ್ಮನ್ನು ಡಬ್ಲಿನ್ ಇಂದ‌ ಲಂಡನ್ ಗೆ ಕರೆದೊಯ್ಯುತ್ತದೆ!!

#dublindiaries


Tuesday, April 11, 2023

ಸೋಲಿಗರ ಸಂಗಡ

 ಭಾಷೆ ಅನ್ನೋದು ಎಂತಹ ದೊಡ್ಡ ಶಕ್ತಿ ಅಂತ ತುಂಬಾ ಸಲ ಯೋಚಿಸಿದ್ದೀನಿ, ಯಾಕೆ ನಮ್ಮ ಭಾಷೆಯವರನ್ನ ಕಂಡ್ರೆ ನಮ್ಮವರೇ ಅನ್ನೋ ಭಾವನೆ ಬರುತ್ತೆ, ಭಾಷೆ ಕೇವಲ ಸಂಹವನ ಮಾಧ್ಯಮ ಅಷ್ಟೇ ಅಂತ ಎಣಿಸೋದಾದರೆ, ನಮಗೆ ಗೊತ್ತಿರುವ ಯಾವುದೊ ಒಂದು ಕಾಮನ್ ಭಾಷೆ ಮಾತಾಡಬಹುದು, ಆದ್ರೂ ನಾವು  ಪ್ರಿಫರ್  ಮಾಡೋದು ಮಾತೃಭಾಷೆ!! ನಮ್ಮ್ ನಿಜವಾದ ಅಭಿವ್ಯಕ್ತವನ್ನು ನಮ್ಮ ಭಾಷೆ ಮಾತ್ರ ಕೊಡಬಲ್ಲುದು, ನಮ್ಮ ಸಂಸ್ಕೃತಿ, ನಮ್ಮತನ, ನಮ್ಮ ಆಚರಣೆ, ನಮ್ಮ ಅನನ್ಯತೆ ಎಲ್ಲದೂ ಒಂದು ಭಾಷೆ ಎಂಬ ಶಕ್ತಿ ಎತ್ತಿ ಹಿಡಿಯುತ್ತೆ. 


ಇಷ್ಟೆಲ್ಲಾ ಪೀಠಿಕೆ ಯಾಕೆ ಅಂದ್ರ, ಒಂದು ಭಾಷೆ ನಶಿಸಿ ಹೋದರೆ ಅದರೊಟ್ಟಿಗೆ ಬೆಸೆದುಕೊಂಡ ಎಲ್ಲವು ಹೆಸರಿಲ್ಲದೆ ಅಳಿಸಿ ಹೋಗುತ್ತೆ, ಅನೇಕ ಭಾಷೆಗಳು ಈಗಾಗಲೇ ಸತ್ತು ಹೋಗಿದ್ದಾವೆ. ಅಂತಹ endangered ಪಟ್ಟಿಯಲ್ಲಿ ನಮ್ಮ ರಾಜ್ಯದಲ್ಲೇ ವಾಸವಾಗಿರುವ ಬುಡಕಟ್ಟು ಸಮುದಾಯ ಸೋಲಿಗರ ಭಾಷೆ ಕೂಡ. ಅದನ್ನು ಉಳಿಸುವುದು ಯಾಕೆ ಅವಶ್ಯಕತೆ ಅಂದ್ರೆ, ಹಳಬರನ್ನು ಹೊರತು ಪಡಿಸಿ ಈಗಿನ ತಲೆಮಾರಿನ ಮಕ್ಕಳು ಕನ್ನಡ ಮಿಶ್ರಿತ ಇಂಗ್ಲಿಷ್ ಭಾಷೆಗೆ ಒಗ್ಗಿಕೊಂಡು, ಅವರ ಪೂರ್ವಜರು ಅವರ ಕಾಡಿನ ಔಷಧಿಗಳು, ಸೊಪ್ಪುಗಳು, herbs ಇದನ್ನೆಲ್ಲಾ ಅವರುಗಳು ತಮ್ಮ ಮೂಲಭಾಷೆಯ ಪದಗಳೊಂದಿಗೆ ನೆನಪಿಟ್ಟುಕೊಂಡಿದ್ದಾರೆ, ಅದು ಕನ್ನಡಕ್ಕಿಂತ ಸ್ವಲ್ಪ ಭಿನ್ನ. 

ಈಗಿನ ತಲೆಮಾರಿನವರು ಅವರ ಮೂಲಭಾಷೆಯನ್ನು ಮಾತನಾಡುವುದಿಲ್ಲ  ಮತ್ತು  ಆ ಪರಂಪರೆಯನ್ನು ಅವರ ಭಾಷೆಯ ಸೊಗಡಿನಲ್ಲೇ ಮುಂದುವರೆಸಬೇಕು ಎನ್ನುವು ಆಸೆ ಇದ್ದರೂ ಕೂಡ, ಕನ್ನಡಕ್ಕೆ ಒಗ್ಗಿ ಹೋಗಿ ಮೂಲಭಾಷೆ ಮರೆಯುತ್ತಿದ್ದಾರೆ.  ಇಲ್ಲಿ ಎರಡು ತಲೆಮಾರಿನ ಅಂತರದಲ್ಲಿ ಭಾಷೆ ಸೊರಗುತ್ತಿದೆ.  ಏನ್ ಮಹಾ ಲಾಸ್ ಬಿಡಿ ಅಂತ ಮೇಲು ನೋಟಕ್ಕೆ ಅನಿಸಿದರೂ, ಭಾಷೆಯನ್ನು ಉಳಿಸದೇ ಹೋದರೆ ಸೋಲಿಗರ ಫಾರೆಸ್ಟ್  ಮೆಡಿಸಿನಲ್ knowledge ಹೇಳ ಹೆಸರಿಲ್ಲದೆ ಮಾಯವಾಗುತ್ತದೆ. ಹಿತ್ತಲ ಗಿಡ ಮದ್ದಲ್ಲ ಅಂತ  ನಾವು ತೋರಿಸುವ ಉದಾಸೀನವನ್ನ ಬಂಡವಾಳ ಮಾಡಿಕೊಂಡು  ಬೇರೆ ದೇಶದವರು ನಮ್ಮದೇ ಜ್ನ್ಯಾನವನ್ನು ಸದ್ದಿಲ್ಲದೇ ಎತ್ತಿಕೊಂಡು ನಮಗೆ ವಾಪಾಸ್ ಮಾರುವ ಕಾಲ ದೂರವಿಲ್ಲ. 

ಹಾಗಾಗಿ , ನಮ್ಮ ಸೋಲಿಗರನ್ನ ಮಾತನಾಡಿಸಲು ಎರಡನೇ ಸಲ ಹೋಗಿದ್ವಿ . ಈ ಸಲ ಅವರದ್ದೇ ಭಾಷೆಗೆ ಭಾಷಾಂತರ ಮಾಡುವ ಸ್ಪೀಚ್ ಟು ಸ್ಪೀಚ್ ಟ್ರಾನ್ಸ್ಲೇಷನ್ ಮಾಡೆಲ್ ರೆಡಿ ಮಾಡಿಕೊಂಡು, ಅವರ ಅನಿಸಿಕೆ ತೊಗೊಳೋಣ ಅಂತ ಅವರನ್ನು ಕರೆಸಿ ಟೆಸ್ಟ್ ಮಾಡಿಸಿದ್ವಿ . It was a lovely experience. ಇಂಗ್ಲಿಷ್ ಇಂದ ಸೋಲಿಗ ಭಾಷೆಗೆ ಹಾಗೂ ಸೋಲಿಗ ಭಾಷೆ ಇಂದ ಇಂಗ್ಲಿಷ್ ಗೆ ಭಾಷಾಂತರ ಮಾಡುವ ಪ್ರಾಜೆಕ್ಟ್ ಅನ್ನು ಭಾರತ  ಸರ್ಕಾರ ಪ್ರಾಯೋಜಿಸಿದೆ. .
ಅಜ್ಜಿಯರು, ಮಹಿಳೆಯರು , ಪುರುಷರು ಹಾಗೂ ಶಾಲೆಯ ಮಕ್ಕಳೊಂದಿಗೆ ಬೆರೆತು ಅವರ ಅಮೂಲ್ಯ ಪ್ರತಿಕ್ರಿಯೆ ಪಡೆಯಲಾಯಿತು. ಇನ್ನೂ ಬಾಲ್ಯಾವಸ್ಥೆಯಲ್ಲಿರುವ ಈ ಕೃತಕ ಬುದ್ಧಿಮತ್ತೆ ಹೊಂದಿರುವ ಮಷೀನ್ ಗೆ ಇನ್ನಷ್ಟು ಡೇಟಾ ಅವಶ್ಯಕೆತೆ ಇದೆ, ಸಧ್ಯದ ಮಟ್ಟಿಗೆ ನಿಯಮಿತ ವಾಕ್ಯಗಳನ್ನು ಮಾತ್ರ ತಪ್ಪಿಲ್ಲದೆ ಭಾಷಾಂತರ ಮಾಡುತ್ತಿದೆ


Saturday, March 25, 2023

ಜನಮಣ್ಣನೇ ಮಾತ್ರವೇ ಸಾಧನೆಯ ಮಾನದಂಡವೇ?

ಈ ದುರಿತ(?) ಕಾಲದಲ್ಲಿ ಏನೇ ಹೇಳಿದ್ರೂ ಏನೇ ಬರೆದರೂ ಕಾಂಟ್ರವರ್ಸಿ ಆಗುತ್ತೆ. ಪ್ರತಿಯೊಬ್ಬರಿಗೂ ತಮಗನಿಸಿದ್ದನ್ನ ನೇರ ನೇರ ಹೇಳುವ ವೇದಿಕೆ ಸಿಕ್ಕಾಗಿದೆ. ಈ ವೇದಿಕೆಗಳನ್ನೂ ತಮ್ಮ ರಾಜಕೀಯ ಹಾಗೂ ಸೈಧ್ದಾಂತಿಕ ಸಮೂಹಸನ್ನಿಗೆ ಒಳಪಡಿಸಿಕೊಳ್ಳುವ ಟ್ರಿಕ್ಸ್ ಕೂಡ ನಿಷ್ಪಕ್ಷಾತವಾಗಿ ಎಲ್ಲರೂ ಕಲಿತಿದ್ದಾರೆ‌. ಸೋ ರಾಜಕೀಯ ಹಾಗೂ ಜನರ ಪಲ್ಸ್ ಹೆಚ್ಚಿನ ಸಮಯದಲ್ಲಿ ಬೇರ್ಪಡಿಸಲಾಗದ ಎಂಟಿಟಿಸ್. ಹಾಗಾಗಿ ಸೋಷಿಯಲ್ ಮೀಡಿಯಾ ಒಪಿನಿಯನ್, ಜೆನರಿಕ್ ಆಗಿ ಒಂದು ಪ್ರಾಂತ್ಯದ, ಒಂದು ಕಮ್ಯುನಿಟಿಯ ಓವರ್ ಆಲ್ ಕನ್ಕ್ಕ್ಲೂಷನ್ ಪಾಸ್ ಮಾಡುತ್ತಲಿರುತ್ತೆ!!

ನಮಗರಿವಿಲ್ಲದೇ ನಮ್ಮ ಒಪಿನಿಯನ್ ಡೇಟಾ ರೂಪದಲ್ಲಿ ಎಲ್ಲಕಡೆ ಹರಿದಾಡಿ, ಬೇಕಾದ ರೀತಿಯಲ್ಲಿ ಬಳಸಿಕೊಂಡಿರಲಾಗುತ್ತೆ. Agree to terms and conditions ಅಂತ ಓದದೇ ಟಿಕ್ ಮಾಡಿದ ಎಲ್ಲ ಅ್ಯಾಪ್ ಗಳು ನಮ್ಮ ಖಾಸಗೀತವನ್ನ ಮಾರಿಕೊಂಡೇ ದುಡ್ಡು ಮಾಡುತ್ತಿವೆ!

ವಿಷಯಕ್ಕೆ ಬರುವುದಾದರೇ, ನಮ್ಮಲ್ಲಿ ಸುಲಭವಾಗಿ ಜನರಿಗೆ ತಲುಪಬಹುದಾದ ಒಂದೇ ಒಂದು ಮಿಡಿಯಮ್ ಅಂದ್ರೆ ಅದು ಸಿನಿಮಾ, ಅದನ್ನ ನೋಡಲು, ಕ್ರಿಟಿಸೈಜ್ ಮಾಡಲು, ಆರಾಧಿಸಲು ಇಲ್ಲ ಸುಮ್ನೆ ಎಂಟರ್ಟೇನ್ಮೆಂಟ್‌ ತೊಗೊಳ್ಳಲು, ಯಾವುದೇ ಡಿಗ್ರಿ, ಯಾವುದೇ ಪರಿಣಿತಿ ಅಸಲಿಗೆ ಬೇರ್ ಮಿನಿಮಮ್ ಎಂಬ ಸ್ಕಿಲ್ಸ್ ನ ಅವಶ್ಯಕತೆಯೇ ಇಲ್ಲ!! ಇಂತಹ ಸುಲಭವಾಗಿ ಜನರನ್ನು ರೀಚ್ ಆಗುವ ಮಾರ್ಗವನ್ನು, ಹೆಸರು ಮಾಡುವ, ಸಾಧನೆ ಮಾಡುವ ದಾರಿ ಅಂತ ಹೇಳೋದೇನೋ ಸರಿ, ಆದರೆ ಪಾಪ್ಯುಲಾರಿಟಿ ಒಂದನ್ನೇ ಸಾಧನೆಯ ಮಾನದಂಡ ಅಂತ ಮಾಡಿದಾಗ, ಸಾಧಕ ಎನ್ನುವ ಪದಕ್ಕೇ ಅವಮಾನ ಮಾಡಿದಂತಾಗುತ್ತದೆ!

ಅಲ್ಲೆಲ್ಲೋ ಹಗಲು ರಾತ್ರಿ ನಿದ್ದೆಗಟ್ಟಿ ಇಸ್ರೋದಲ್ಲಿ ಕೋಡ್ ಬರೆಯುವ, ತಂತ್ರಜ್ಞಾನದ ವಿಜ್ಞಾನಿಗಳು ಯಾರೆಂಬುದು ಕೂಡ ಜನರಿಗೆ ಗೊತ್ತಾಗದೇ ನಮ್ಮ ರಾಕೆಟ್ ಉಡ್ಡಯನವಾಗಿರುತ್ತೆ. ಕಂಡಕ್ಟರ್ ಕೆಲಸ ಮಾಡುತ್ತ ಯುಪಿಎಸಿ ಪಾಸ್ ಮಾಡಿದ ಹುಡುಗ ಒಂದು ದಿನದ ಪ್ರತಿಕೆಯ ಸುದ್ದಿ ಯಾಗಿ ಮರೆಯಾಗುತ್ತಾನೆ. ಇಂಡಿಜಿನಿಸ್ ಭತ್ತವನ್ನು ಕಾಪಿಟ್ಟ ರೈತ ರಾಷ್ಟ್ರಪ್ರತಿಗಳಿಂದ ಪ್ರಶಸ್ತಿ ಪಡೆದೂ, ನಮ್ಮ ಮೆಮೊರಿಯಲ್ಲಿ ಉಳಿಯಲಾರ. ನಮ್ಮ ಸುತ್ತ ಮುತ್ತಲಿನ ಸಾಧಕರಿಗೆ ಆಮತಹದ್ದೇನೋ ದೊಡ್ಡ ರೀಚ್ ಸಿಗೋದಿಲ್ಲ. ನಮ್ಮಂತೆ ಬದುಕು ನಡೆಸುವವರು, ದಿನ ನಮಗೆ ಸಿಗುವವರು, ನಮಗೆ ಆರಧನಾ ವ್ಯಕ್ತಿತ್ವಗಳಾಗೋದು ತೀರ ವಿರಳ.

ಅದೇ ಲಾರ್ಜರ್ ದ್ಯಾನ್ ಲೈಫ್ ಎಂಬ ಸುಡೋ ಮುದ ನಿಡುವ ಸಿನಿಮಾ, ಅದರಲ್ಲಿನ ವೈಭವೀಕರಣ, ಗ್ಲಾಮರ್, ಇದ್ಯಾವುದನ್ನೂ ನಿಜ ನೀವನದಲ್ಲಿ ಅನುಭವಿಸಲಾಗದ ಕಾರಣಕ್ಕೆ ಜನ ಸಲೀಸಾಗಿ ಅದರ ಮೋಹಕ್ಕೆ ಒಳಗಾಗುತ್ತಾರೆ, ಮತ್ತೆ ಅಲ್ಲಿ ಕಾಣುವ ತಾರೆಯರನ್ನು ತಲೆ ಮೇಲೆ ಹೊತ್ತು ಮೆರಯುತ್ತಾರೆ. That has helped them to experience some adrenaline rush in some way! ಅದನ್ನು ಇನ್ಯಾವುದೇ ಮಾರ್ಗ ಅಷ್ಟು ಸುಲಭವಾಗಿ ದಕ್ಕಿಸುವದಿಲ್ಲ.

ಸೋಷಿಯಲ್ ಮೀಡಿಯಾ ಬಂದ ಮೇಲಂತೂ ಫಾಲವರ್ಸ ಹೊಂದಿರುವ ಎಲ್ಲರೂ ಇನ್ಪ್ಲುಯೆನ್ಸರ್ಸ ಹಾಗೂ ಕಂಟೆಂಟ್ ಕ್ರಿಯೆಟರ್ಸ್. ಅದು ಕೂಡ ಈಗ ಜನಪ್ರಿಯತೆ ಜೊತೆಗೆ ಹೊಟ್ಟೆ ಪಾಡಿನ ಸಾಧನವಾಗಿದೆ.. ಇಲ್ಲಿ ಸರ್ವೈವ್ ಆಗೋದು ಕೂಡ ಅವರವರ ಕ್ರಿಯೆಟಿವಿಟಿಯ ಸರ್ವೈವಲ್ ಆಫ್ ದಿ ಫಿಟ್ಟೆಸ್ಟ್ ಎಂಬ ಅಂಶವೇ!!

ಅದೇ ರೀತಿ ಸಾಹಿತ್ಯ, ಸಂಗೀತ, ವಿಜ್ಞಾನ, ಕ್ರೀಡೆ, ನೃತ್ಯ, ಹಾಸ್ಯ, ವೈದ್ಯಕೀಯ,  ಇದೆಲ್ಲ ಕ್ಷೇತ್ರ ಆಯಾ ಕ್ಷೇತ್ರದ ಪರಿಣಿತಿಯನ್ನೂ ಮತ್ತು ಅದೇ ಕಮ್ಯಿನಿಟಿಯ ಜನರ ಪ್ರಶಂಸೆಗೆ ಹಾಗೂ ಮೆಚ್ಚುಗೆಗೆ ಪಾತ್ರವಾಗುವಂಥದ್ದು, ಯಾವುದಕ್ಕೆ ಪರಿಣತಿ ಬೇಕೋ ಅದಕ್ಕೆ ಹೆಚ್ಚಿನ ರೀಚ್ ಸಿಗುವುದಿಲ್ಲ, ಸುಲಭವಾಗಿ ಲೆಯ್ ಮ್ಯಾನ್ ಗೆ ಅರ್ಥವಾಗುವ ಭಾಷೆ ಸಿನೆಮಾ ಮಾತ್ರ!

ಮತ್ತು ಅಲ್ಲಿ ಸಿಗುವ ಸಾಧನೆ ಇಂಡೈರೆಕ್ಟ್ ಆಗಿ ಮೇಲಿನ ಹಲವು ಬೇರೆ ಕ್ಷೇತ್ರಗಳಿಗೆ ಪರೋಕ್ಷವಾಗಿ ಸಹಾಯ ಮಾಡಿರುತ್ತೆ, ಒಂದು ಸಿನಿಮಾದ ಸಾಧನೆ ಕೇವಲ ಒಂದೇ‌ ಕಮ್ಯುನಿಟಿಯ ಸಾಧನೆ ಆಗುವುದಿಲ್ಲ. Lot of ಪೀಪಲ್ ಹ್ಯಾವ್ ಶೇರ್ ಇನ್ ಇಟ್. ದುಡ್ಡು ಮಾಡುವುದನ್ನು ಹೊರತುಪಡಿಸಿ, ಹಲವು ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಹಾಗಾಗಿ ಅದಕ್ಕೇ ಹೆಚ್ಚಿನ ಜನಮಣ್ಣನೇ ಕೂಡ ಇದ್ದೇ ಇದೆ. ಇದಷ್ಟೇ  ಸಾಧನೆಯೋ ಎಂದು ಕೇಳುವವರು ಸರಿಯೆ! ಹಾಗೂ ಬೇರೆಯವರನ್ನು ತಂದು ಕೂರಿಸಿದಾಗ ಅದಕ್ಕೆ ಸಿಗುವ ಟಿ ಆರ್ ಪಿಯ ಆತಂಕ ವ್ಯಕ್ತ ಪಡಿಸುವ ಬಿಸಿನೆಸ್ ಮೈಂಡ್ ಗಳು ಕೂಡ ಸರಿಯೆ!! ನಾವು ಬಳಸುವ ಎಲ್ಲ ಎಲಕ್ಟ್ರಾನಿಕ ಸಾಧನ ಗಳ ಬೆನ್ನೆಲುಬಾಗಿರುವ ಸೆಮಿಕಂಡಕ್ಟರ್ ನ ಲೆಜೆಂಡ್, ಹಾಗೂ Moore's law ಜನಕ ಇವತ್ತು ಇಲ್ಲವಾಗಿದ್ದೂ ಹಲವು ಜನರಿಗೆ ಸುದ್ದಿಯೇ ಅಲ್ಲ!!

ಇಲ್ಲಿ ಎಲ್ಲದೂ ಅವರವರ ಲಾಭ ನಷ್ಟಗಳ ಲೆಕ್ಕಾಚಾರಾದಲ್ಲಿ ನಡೆಯುವಂಥದ್ದು, ಬೇಕೋ ನೋಡಿ, ಬೇಡವಾ ಬಿಡಿ ಎಂಬ ಕಾಲಘಟ್ಟದಲ್ಲಿರುವಾಗ, ಇಂತಹ ವ್ಲಾಗರ್ ಅಥವಾ ಬ್ಲಾಗರ್ ನ ಕರೆಸಿ ಅವರೇ ಸಾಧಕರು ನೀವು‌ ಕರೆಸಿರುವವರದ್ದೇನು ಸಾಧನೆ ಎಂದು ಕೇಳುವುದು ಅಥವಾ ಹೇಳುವುದು  ಬಾಲಿಶವಾಗುತ್ತದೆ. Because Success is very subjective!! ಹೇಗೆ ಜೀವನ ಎಂಬುದಕ್ಕೆ ನಿಖರವಾದ ಡೆಫಿನಿಷನ್ ಇಲ್ವೋ , ಹಾಗೆಯೆ ಸಾಧನೆಗೆ ಕೂಡ!! ಬಟ್ ಜನಮಣ್ಣನೇ ಮಾತ್ರವೇ ಸಾಧನೆಯ ಮಾನದಂಡ ಅಲ್ಲವೆಂಬುದು ಮಾತ್ರ ಸರ್ವಕಾಲಿಕ ಸತ್ಯವೇ!!

PS: when journo in me woke up after a year 😜☺😎

Thursday, November 12, 2020

ಬದುಕು ಮಹೋತ್ಸವ ಎಂದ ಬೆಳಗೆರೆ

 

ನಾವು ಎಂಜಿನಿಯರಿಂಗ್ ಓದುವ ದಿನಗಳಲ್ಲಿ (ನಮ್ಮನ್ನ ತುಂಬಾ ಹಳೆ ಕಾಲದವರು ಅಂದುಕೊಳ್ಳೋ ಅವಶ್ಯಕತೆ ಇಲ್ಲ , ತೊಂಭತ್ತರ ಕಿಡ್ಸ್ ) ವಾಟ್ಸ್ ಆಪ್ , ಇನ್ಸ್ಟಾ , ಅಮೆಜಾನ್ ನೆಟ್ಫ್ಲಿಸ್ ಯಾವದೂ ಇರ್ಲಿಲ್ಲ , ಆಗಷ್ಟೇ ಹವಾ ಶುರು ಮಾಡಿದ ಆರ್ಕುಟ್ ಬಳಕೆದಾರರನ್ನು ಫೇಸ್ಬುಕ್ ತನ್ನೆಡೆಗೆ ಸೆಳೆಯುತ್ತಲಿತ್ತು, ಆಗ ನನ್ನಂತೆ ಅನೇಕ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಬ್ಲಾಗಿಂಗ್  ಹವ್ಯಾಸ ಶುರು ಹಚ್ಚಿಕೊಂಡಿದ್ದರು, ಹಾಸ್ಟೆಲ್ ದಿನಗಳಲ್ಲಿ ಎಂಟ್ರ್ಟಟೈನ್ಮೆಂಟ್ ಅಂದ್ರೆ ಲ್ಯಾಪ್ಟಾಪ್ಗಳಲ್ಲಿ ಎಲ್ಲರೂ ಸೇರಿ ಮೂವಿ ನೋಡೋದು ಇಲ್ಲ ಒಬ್ಬರಾದಮೇಲೆ ಒಬ್ಬರು ರೊಟೇಷನ್  ಬೇಸ್ ಮೇಲೆ ಯಾವುದೊ ನಾವೆಲ್ ಓದುವುದು, ಸ್ವರ್ಗದಂಥ ದಿನಗಳವು. 

ಇವತ್ತು ಕನ್ನಡದಲ್ಲಿ ನನಗೆ ಸಂತೋಷ ಹಾಗೂ ತೃಪ್ತಿ ಸಿಗುವಷ್ಟು ವಿಚಾರ ಹಂಚಿಕೊಂಡು ಬರೆಯಲು ಪ್ರೇರಣೆ ನೀಡಿದ ಅನೇಕ ಜನರಲ್ಲಿ ಬೆಳಗೆರೆ ಕೂಡ ಒಬ್ಬರು, ಆ ದಿನಗಳಲ್ಲಿ, ನೂರೆಂಟು ಮಾತು, ಬೆತ್ತಲೆ ಜಗತ್ತು ಕಾಲಂ ಗಳಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದೆ ನನ್ನ ಓದುವ ಹುಚ್ಚು ನೋಡಿ ಗೆಳತೀ ಅರ್ಪಿತಾ ರವಿ ಬೆಳಗೆರೆಯ "ಹಿಮಾಲಯನ್ ಬ್ಲಂಡರ್" , "ಹೇಳಿ ಹೋಗು ಕಾರಣ" ಹಾಗೂ "ಖಾಸ್ ಬಾತ್" ಸೀರೀಸ್ ಪುಸ್ತಕಗಳನ್ನು ಓದಲು ಕೊಟ್ಟಳು, ಹಿಮಾಲಯನ್ ಬ್ಲಂಡರ್ ಓದು ಮುಗಿಸುವಷ್ಟರಲ್ಲಿ ಈ ಬೆಳಗೆರೆ ಎಂಬ ಮಾಂತ್ರಿಕ ನನ್ನ ಪೂರ್ಣ ಪ್ರಮಾಣದಲ್ಲಿ ಮೋಡಿ ಮಾಡಿದ್ದ, ಅದು ಟ್ರಾನ್ಸ್ಲೇಷನ್ ಕಣೆ ಖಾಸ್ ಬಾತ್ ಓದು ಅಂತ ಹೇಳಿದಾಗ, ಇಲ್ಲೇ ಯಾರೋ ಪಕ್ಕದಲ್ಲೇ ನಿಂತು ಹರಟೆ ಹೊಡೆಯುತ್ತ ಹರಟೆಯಲ್ಲೇ ಕೆಲವು ಸೂಕ್ಷ ವಿಚಾರಗಳನ್ನು ಆಪ್ತವಾಗಿ ಹೇಳುತ್ತಿದ್ದಾರೇನೋ ಅನ್ನಿಸಲು ಶುರುವಾಗಿತ್ತು, ಖಾಸ್ ಬಾತ್ ಹುಚ್ಚು ಹಿಡಿದು ನಾನು ಅರ್ಪಿತಾ ಸೇರಿ ಪ್ರತಿ ವಾರ ಹೈ  ಬೆಂಗಳೂರು ಓದಲು ಶುರು ಮಾಡಿದೆವು, ಜಾನಕೀ ಕಾಲಂ , ಹಾಗೂ ಖಾಸ್ ಬಾತ್ ಮತ್ತೆ  ಕೆಲವು ಗಾಸಿಪ್ ಬರಹಗಳು ನಮ್ಮ ಚರ್ಚೆಯ ವಿಷಯಗಳಾಗಿದ್ದವು, ಜಾನಕಿ ಹೆಸರಲ್ಲಿ ಜೋಗಿ ಬರೆಯುತ್ತಿದ್ದಿದು ತುಂಬ ವರ್ಷಗಳ ಮೇಲೆ ಗೊತ್ತಾಯ್ತು. 

ಅಷ್ಟರಲ್ಲಾಗಲೇ ಸಾಹಿತ್ಯ ಹಾಗೂ ಪತ್ರಿಕೋದ್ಯಮ ಎಂಥ happening ಕ್ಷೇತ್ರಗಳು ನಾವು ಮಾತ್ರ ಜೀವ ವಿಲ್ಲದ ಮಷೀನ್ , ಹಾಗೂ ಕಣ್ಣಿಗೆ ಕಾಣದ ಎಲೆಕ್ಟ್ರೋನ್ಸ್ಗಳ  ಬಗ್ಗೆ  ಓದುತ್ತ ಎಂಥ ಬೋರಿಂಗ್ ಜೀವನ ಮಾಡ್ತಾ ಇದೀವಿ ಅಂತ ಹಲವು ಬಾರಿ ಅನಿಸಿದರೂ ನಮ್ಮ ಜನರೇಶನ್ ನವರಿಗೆ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಬಿಟ್ರೆ ಆಯ್ಕೆಗಳೇ ಇರಲಿಲ್ಲವಲ್ಲ, ಓದು ಜೀವನ್ ನಡೆಸುವುದಕ್ಕಾಗಿ  , ಹಾಗೂ ಒಳ್ಳೆಯ ಉದ್ಯೋಗಕ್ಕಾಗಿ, ಆತ್ಮ ಸಂತೋಷಕ್ಕಾಗಿ ಬ್ಲಾಗ್ ಶುರು ಮಾಡಿದೆ, ಅದಕ್ಕೆ ಸಿಕ್ಕ ರೆಸ್ಪಾನ್ಸ್ ಒಮ್ಮೆಲೇ ಜರ್ನಲಿಸ್ಟ್ ಆಗುವ ಉಮೇದಿ ಹೆಚ್ಚಿಸಿತು . 

ಹೀಗೆ ಒಂದಿನ ಹೈ ಬೆಂಗಳೂರು ಓದುವಾಗ ಅಶೋಕ್ ಶೆಟ್ಟರ್ ಬಗ್ಗೆ ಒಂದು ಲೇಖನ ಬರೆದಿದ್ದರು ಬೆಳಗೆರೆ, ಆ ಲೇಖನ ಹೇಗಿತ್ತೆಂದರೆ, ಒಂದು ವರ್ಷದಿಂದ ಹೈ  ಬೆಂಗಳೂರು, ಓದುತ್ತಿದ್ದರೂ ಬೆಳಗೆರೆಯನ್ನು ಭೇಟಿಯಾಗಬೇಕು ಎನಿಸಿರಲಿಲ್ಲ, ಶೆಟ್ಟರ್ ಸರ್ ಧಾರವಾಡ, ನಂಗೆ ಪರಿಚಯನೇ ಇಲ್ವಲ್ಲ ಈ ಸೆಮ್ಸ್ಟರ್ ರಜೆ ಲಿ ಹೋಗಿ ಅವ್ರನ್ನು ಭೇಟಿ ಆಗಲೇ ಬೇಕು ಎಂದುಕೊಂಡು ಫೇಸ್ಬುಕ್ ಅಲ್ಲಿ ಹುಡುಕಿ ರಿಕ್ವೆಸ್ಟ್ ಕಳ್ಸಿದೆ, ಒಂದು ಮೆಸೇಜ್ ಕೂಡ ಹಾಕಿದೆ ಸರ್ ನಿಮ್ಮನ್ನ ಭೇಟಿ ಆಗ್ಬೇಕು ಅಂತ ಕರ್ನಾಟಕ ಯೂನಿವರ್ಸಿಟಿ archeology ಡಿಪಾರ್ಟ್ಮೆಂಟ್ ಗೆ ನನ್ನ ಬ್ಲಾಗ್ ಬರಹಗಳ ಪ್ರಿಂಟ್ ಔಟ್ ಹಾಗೂ ಪತ್ರಿಕೆಗಳಲ್ಲಿ ಪ್ರಕಟವಾದ ಎಲ್ಲ ಲೇಖನಗಳನ್ನು ಒಂದು ಫೈಲ್ನಲ್ಲಿ ಹಾಕಿಕೊಂಡು ನಾಳೆ ನೇ ಪತ್ರಕರ್ತೆ ಆಗಿ ಬಿಡುವ ಉತ್ಸಾಹದಿಂದ ಶೆಟ್ಟರ್ ಸರ್ ನ ಭೇಟಿಯಾದೆ, "ಭಾಳ್ ಚೊಲೋ ಬರೀತಿ ಆದ್ರ ರವಿ ಬೆಳೆಯಗೆ ಇನ್ಫ್ಲುಯೆನ್ಸ್ ಭಾಳ್ ಆಗೇತಿ ನಿಂಗ ಸ್ವಲ್ಪ ದಿನ ಅವನ ಬರಹ ಓದದೇ, ನಿನ್ನ ಲೇಖನ ಬರಿ" ಅಂದ್ರು. ಸರಿ ಅಂತ ಒಪ್ಪಿಕೊಂಡು "ಸರ್, ನಾ  ಇಂಜಿನಿಯರಿಂಗ್ ವಲ್ಯ ಭಾಳ ಬೋರಿಂಗ್ ಇದು ನ್ಯೂಸ್ anchor ಆಗ್ತೀನಿ ನಂಗ್ ರೆಫರ್ ಮಾಡ್ರಿ ಬೆಳಗೆರೆಗೆ ಹೇಳಿ" ಅಂದೇ, ನನ್ನ ಮಾರ್ಕ್ಸು ಸೆಮಿಸ್ಟರ್ ರಿಸಲ್ಟ್ ಕೇಳಿ "ತಲಿ ಕೆಟ್ಟದೇನವಾ ?, ಚೊಲೋ ಓದುಮುಂದ ಅರ್ದಕ್ಕ ಯಾಕ್ ಬಿಡತಿ , ಎಲ್ಲವೂ ಒಂದು ಹಂತ ಆದ್ಮೇಲೆ ಮೊನೊಟೋನೂಸ್ ಅನ್ಸೇ ಅನ್ಸುತ್ತೆ , ಸುಮ್ನ ಬ್ಲಾಗ್ ಬರ್ಕೊಂಡು ಓದು ಮುಗಸು, ಜೀವನಕ್ಕ ಏನು ಬೇಕು ಅನ್ನೋಕಿಂತ ಬದುಕಿಗೆ ಏನು ಬೇಕು ಅನ್ನೋದು ಇನ್ನು ತಿಳಿಯದ ವಯಸ್ಸು ನಿಂದು , ಮುಂದೊಂದಿನ  ನೀನೆ  ಇದರ ಬಗ್ಗೆ ತಮಾಷೆ ಮಾಡ್ತಿ ನೋಡು ಅಂತ ಬುದ್ಧಿ ಹೇಳಿ ಕಳ್ಸಿದ್ರು . 

ಅದಾದ್ಮೇಲೆ ನಿಧಾನವಾಗಿ, ಬೆಳಗೆರೆ ಮೇನಿಯಾ ಇಂದ ಹೊರಬರಲು ಶುರು ಮಾಡಿ ಅನೇಕ ಲೇಖಕರು, ಕಥೆಗಾರರು , ಕಾದಂಬರಿಗಾರರು ಭಿನ್ನ ಸಿದ್ಧಾಂತ, ಭಿನ್ನ ವೈಚಾರಿಕತೆ, ಎಲ್ಲದೂ ಅರ್ಥವಾಗುತ್ತಾ ಹೋದಂತೆ, ಬೆಳಗೆರೆಯವರ ಕಾಂಟ್ರವರ್ಸಿಗಳು ಒಹ್ ಇವರು ಇಷ್ಟೇ ಎಲ್ಲರೂ ಇಷ್ಟೇ ಬದುಕೇ ಬೇರೆ ಬರಹವೇ ಬೇರೆ ಎಂದು ಒಂದು ರೀತಿಯ ಘಾಸಿ ಉಂಟಾಯ್ತು, ಆವಾಗ್ಲೇ ಯಾರೇ ಇರಲಿ ಅವರ ವೈಯಕ್ತಿಕ ಬದುಕಿಗಿಂತ ಅವರ ಯಾವ ಗುಣದಿಂದ ಅಥವಾ ಯಾವ ಕೆಲಸದಿಂದ ಅವರು ನಮಗೆ ಇಷ್ಟ ಹಾಗೂ ಅದರಿಂದ ಯಾವ ಒಳ್ಳೆಯ ಗುಣವನ್ನು ನಾನು ಮೈಗೂಡಿಸಿಕೊಳ್ಳಬಹುದು ಎಂಬ transformational phase ನಲ್ಲಿ ಬೆಳಗೆರೆಯ ಹಾರ್ಡವರ್ಕ್ , ಅವರ ಅದಮ್ಯ ಜೀವನ ಪ್ರೀತಿ ಹಾಗೂ ಪೂರ್ಣ ಪ್ರಮಾಣದಲ್ಲಿ ಜೀವನ ಅನುಭವಿಸುವ ಗುಣಗಳು, ಅವರ ಕಷ್ಟದ ದಿನಗಳ ಹೋರಾಟ ಎಲ್ಲವನ್ನೂ ಮೆಚ್ಚಿಯೂ ಅವರನ್ನೂ ವೈಯಕ್ತಿಕವಾಗಿ ಭೇಟಿಯಾಗಲು ಬಯಸಲಿಲ್ಲ, ಭೇಟಿಯಾಗಲಿಲ್ಲ ಎಂಬ ಕೊರಗೂ ಇಲ್ಲ, ಆ ಮನುಷ್ಯನ ಅಕ್ಷರ ಕ್ರಾಂತಿ ನಮ್ಮ ಜನರೇಶನ್ ಹಲವು ಜನರಿಗೆ ಸ್ಪೂರ್ತಿ, ಈ ಬೆಳಗೆರೆಯವರ ಖಾಸ್ ಬಾತ್ ಓದದೇ  ಇದ್ದಿದ್ದರೆ ನನಗೆ ಗುರುವರ್ಯ ಶೆಟ್ಟರ್ ಸರ್ ಸಿಗುತ್ತಿರಲಿಲ್ಲ. 

೬೨ ಕಮ್ಮಿ ಅಂತ ನಮಗೆ ಅನ್ನಿಸಿದರೂ ಒಂದಿನಿತು ರಿಗ್ರೆಟ್ ಇಲ್ಲದೇ ಬದುಕಿಹೋದ ಅವರ ಛಲ ಹಾಗೂ ಜೀವವೋತ್ಸಾಹ ನಮಗೆಲ್ಲರಿಗೂ ಮಾದರಿ, He celebrated his life and  Am Glad that I witnessed his existence !!


Thursday, September 10, 2020

ಭಾಷೆಯ ಹಾಗೂ ಗಡಿಯ ವಿಷಯಕ್ಕೆ ಬಂದರೆ ಮಹಾರಾಷ್ಟ್ರ ಮುಂಚೂಣಿಯಲ್ಲಿ ನಿಲ್ಲುತ್ತದೆ!



 "ಶಿವಸೇನೆ", ಹೇಗೆ ಒಂದು ಕಟ್ಟರ್ ಹಿಂದುತ್ವ ಪ್ರತಿಪಾದಿಸುವ, ಭಾಷೆ ಹಾಗೂ ರಾಜ್ಯದ ಗಡಿಯ ಸಿದ್ಧಾಂತಕ್ಕೆ  ಒತ್ತು  ಕೊಡುವ  ರಾಜಕೀಯ ಪಕ್ಷ ತಾನೇ ಖುದ್ದು ರಾಜಕೀಯ ಕಣ್ಣಾ ಮುಚ್ಚಾಲೆ ಆಟಗಳಿಗೆ ಬಲಿಯಾಯಿತು ಎನ್ನುವುದು ವಿಪರ್ಯಾಸವಾದರೂ ಸತ್ಯ!  

ಮುಂಬೈ ಎಂಬ ಮಾಯಾನಗರಿಯಲ್ಲಿ ಮರಾಠಿಗಿರ ಹೊರತಾಗಿ ಅನೇಕ ಸಮುದಾಯಗಳು, ಹೊರ ರಾಜ್ಯದಿಂದ ವಲಸೆ ಬಂದ ಕಾರ್ಮಿಕರೂ, ನಮ್ಮ ಕರಾವಳಿ ಜನರನ್ನೂ ಸೇರಿಸಿಕೊಂಡೇ ನಮ್ಮ ಅಜ್ಜ ಅಪ್ಪಂದಿರ ಕಾಲಕ್ಕೆ ಬದುಕು ಕಟ್ಟಿಕೊಳ್ಳುವ ನಗರವೆಂದೇ ಖ್ಯಾತಿ ಪಡೆದ ಊರು. ಹೋದವರ್ಯಾರೂ ನಿರಾಶೆಯಾಗಿ ವಾಪಸ್ಸು ಬಂದ ನಿದರ್ಶನಗಳಿಲ್ಲ, ಐಟಿ ಬಿಟಿ ಕಂಪನಿಗಳ ಹಾವಳಿಯಿಂದ ನಮ್ಮ ಜೆನೆರೇಷನ್ ಗೆ ಬೆಂಗುಳೂರು ಇವತ್ತು ಹೇಗೋ , ಹಾಗೇ ಸುಮ್ಮರು ೨೫-೩೦ ವರ್ಷದ ಕೆಳಗೆ ಮುಂಬೈ ಕೂಡ ಹಲವರ ಅನ್ನದಾತ. 

ಇಂತಿಪ್ಪ ಮುಂಬೈ ಜನರಿಗೆ ವಿಶೇಷವಾಗಿ ಮರಾಠೀ ಮಾತನಾಡುವ ಸಮುದಾಯ, ವಲಸಿಗರ ಇಂಗ್ಲಿಷ್ ಪಾಂಡಿತ್ಯದಿಂದೋ ಅಥವಾ ಹೆಚ್ಚಿನ ವಿದ್ಯಾರ್ಹತೆ ದೆಸೆಯಿಂದಲೋ ಎಪ್ಪತ್ತು ಹಾಗು  ಎಂಭತ್ತರ ದಶಕಗಳಲ್ಲಿ, ಮೂಲ ಮುಂಬೈ ನಿವಾಸಿಗಳನ್ನು ಹೊರತುಪಡಿಸಿ ಹೊರಗಡೆ ಇಂದ ಬಂದವರನ್ನೆಲ್ಲ ಬಾಚಿ ತಬ್ಬಿಕೊಂಡು ಬೆಳಸುತ್ತಿರುವಾಗ ಹುಟ್ಟಿಕೊಂಡಿದ್ದೇ ಶಿವ ಸೇನೆ ಹಾಗೂ ಸೇನೆಯ ಮುಖ್ಯಸ್ಥ ಬಾಳ್ ಠಾಕ್ರೆ! ಟೀ ಮಾರಾಟ ಮಾಡುವ ಮಾಣಿಯಿಂದ ಹಿಡಿದು ಸರ್ಕಾರಿ ಕಚೇರಿಗಳ ವರೆಗೆ ಮರಾಠಿಗರಿಗೆ "ಮರಾಠಿಗರು" ಎಂಬ ಕಾರಣಕ್ಕೆ ಅನ್ಯಾಯವಾಗದಂತೆ ನೋಡಿಕೊಂಡ ಹೆಗ್ಗಳಿಕೆ ಆ ನಾಯಕನದ್ದು 

ಮೂಲ ಮುಂಬೈ ನಿವಾಸಿಗಳಾದ ಹಾಗೂ ಮಾಧ್ಯಮ ವರ್ಗ ಹಾಗು ಕೆಲ ಮಧ್ಯಮ ವರ್ಗದ ಜನರ ಮನೆಗಳಲ್ಲಿ ಇವತ್ತೀಗೂ ಅವರ ಫೋಟೋ ನೇತು ಹಾಕಿರುವುದು ಕಾಣಸಿಗುತ್ತದೆ. ಇದು ಕೇವಲ ಅಂಧ ಶ್ರದ್ಧೆಯೋ, ಭಯವೂ ಆಗಿರಲಿಲ್ಲ, ಬದಲಾಗಿ ನಮನ್ನು ಕಾಪಾಡಲೆಂದೇ ಇರುವ ನಾಯಕ ಎಂಬ ವಿಶ್ವಾಸದ ನಂಬಿಕೆಯಾಗಿತ್ತು,

ತಳ ಮಟ್ಟದ ಜ್ವಲಂತ ಸಮಸ್ಯೆಗಳನ್ನು ಪರಿಹರಿಸದೇ ದೊಡ್ಡ ಮಟ್ಟಕ್ಕೆ ಬೆಳೆಯಲಾಗುವುದಿಲ್ಲ ಹಾಗೂ ನಿಮ್ಮ ಗಡಿ ನಿಮ್ಮ ಭಾಷೆಯ ಜನರ ಹಿತಾಸಕ್ತಿ ಕಾಯ್ದುಕೊಳ್ಳುವ ಮೂಲ ಗುಣ ಇಲ್ಲದಿದ್ದರೆ ಒಬ್ಬ ನಾಯಕ ಸೋಶಿಯಲ್ ಮೀಡಿಯಾ ಇಲ್ಲದ ಕಾಲದಲ್ಲಿ ಇಷ್ಟು ಎತ್ತರವಾಗಿ ಬೆಳೆಯಲು ಸಾಧ್ಯವಿರಲಿಲ್ಲ. ರಾಜಕೀಯ ಹೊರತಾಗಿ ಇವತ್ತಿಗೂ ಬಲ ಠಾಕ್ರೆ ಹುಲಿಯೇ! ಅಂಥ ಒಂದು ಸಾಮ್ರಾಜ್ಯಕಟ್ಟಿ, ಮೈಕಲ್ ಜ್ಯಾಕ್ಸನ್ ಇಂದ ಹಿಡಿದು, ಇಂಡಿಯಾ ಪಾಕಿಸ್ತಾನದ ಕ್ರಿಕೆಟ್ ಮ್ಯಾಚ್ ಗಳನ್ನೂ ಸಹ ಕಂಟ್ರೋಲ್ ಮಾಡಬೇಕಿದ್ದರೆ ಅದೆಂತಹ ಸಾಮ್ರಾಜ್ಯ ಕಟ್ಟಿರಬೇಡ??!

ಆಗಿನ ಕಾಲಕ್ಕೆ, ಹಿಂದೂ ಮುಸ್ಲಿಂ ಗಲಾಟೆ, ಭೂಗತ ಲೋಕದ ಪಾತಕಿಗಳ ಸಂಘರ್ಷ , ಮತ್ತು ಭಯೋತ್ಪಾದನೆಯ ತಾಣವಾಗಿದ್ದ ಮುಂಬೈ ಎಂಬ ನಗರಿಯನ್ನು ಕೇಂದ್ರ ಸರ್ಕಾರವೂ ಪ್ರಶ್ನಿಸದಂತೆ ಕೇವಲ, ಭಾಷೆಯ ಹಾಗೂ ಒಂದು ಸಮುದಾಯದ ಜನರ ಪಲ್ಸ್ ಅನ್ನು ಆಳವಾಗಿ ಅರ್ಥೈಸಿಕೊಂಡು ಬೆಳೆದ ಪರಿ ರೋಚಕವೇ. ಇಂದಿರಾ ಗಾಂಧಿ ಖುದ್ದು ಅವರನ್ನು ಕರೆದು ರಾಜಿಗಾಗಿ ಬೇಡಿಕೆಯಿಡುತ್ತಿದ್ದರೆಂದರೆ ಸುಮ್ಮನೆ ಮಾತೆ??! 

ಇಂತಿಪ್ಪ ಸಾಮ್ರಾಜ್ಯಕ್ಕೆ ಗ್ರೌಂಡ್ ರಿಯಾಲಿಟಿ ಗೊತ್ತಿಲ್ಲದ ಮಕ್ಕಳು, ಮೊಮ್ಮಕ್ಕಳು, ಕೆಲವು ಹುಂಬ ಮನಸ್ಥಿತಿಯ ಜನರ ಸೇರ್ಪಡೆಯಿಂದ, ಶಿವ ಸೇನೆ ಪುಂಡಾಟಕೀಯ ಪಕ್ಶವೆಂದೇ ಕುಖ್ಯಾತಿ ಪಡೆಯಲು ಶುರುಮಾಡಿತು. ಯಾರೋ ಎಲ್ಲೋ ಮಾಡುವ ಧಾಂದಲೆಗಳನ್ನು ಈ ಪಕ್ಷದ ಕಾರ್ಯಕರ್ತರೆಂಬ ಸಮರ್ಥನೆಯಲ್ಲಿ ಮುಗಿದು ಹೋಗುತ್ತಿದ್ದವು. 

ಇಡೀ ದೇಶದಲ್ಲಿ ಭಾಷೆಯ ಹಾಗೂ ಗಡಿಯ ವಿಷಯಕ್ಕೆ ಬಂದರೆ ಮಹಾರಾಷ್ಟ್ರ ಮುಂಚೂಣಿಯಲ್ಲಿ ನಿಲ್ಲುತ್ತದೆ, ಕನ್ನಡಿಗರಾಗಿ ನಮಗೆ ಕೋಪ ತಾಪ ಬಂದರೂ ಬೆಳಗಾವಿಯಲ್ಲಿ ಬಂದು ಧಾಂದಲೆ ನಡೆಸಿ ತಮ್ಮ ಬಾವುಟ ಹಾರಿಸುವಷ್ಟು ಉಡಾಫೆ ತೋರಿಸಲು ಮೂಲ ಕಾರಣ ಮತ್ತದೇ ನಾವೆಲ್ಲ ಒಂದೇ ಎಂದು ಸಾರುವ ಮರಾಠೀ ಭಾಷೆ! 

ಕೇವಲ ಭಾಷೆಯ ಮಾನದಂಡ ತೆಗೆದುಕೊಂಡರೆ ತಮಿಳು ನಾಡು ಹಾಗೂ ಕೇರಳ ಕೂಡ ಅಷ್ಟೇ ಜತನದಿಂದ ಭಾಷಾ ಪ್ರೇಮ ಹಾಗೂ ಪ್ರಾದೇಶಿಕ ಬೆಳವಣಿಗೆಗೆ ಒತ್ತು ಕೊಡುವ ರಾಜ್ಯಗಳು. ಆ ಕಾರಣಗಳಿಂದಲೇ ಅಲ್ಲಿನ ಜನ ಹಾಗೂ ಸರ್ಕಾರಗಳೂ ಕೇಂದ್ರದ ಮೇಲೆ ಅವಲಂಬಿತರಾಗದೇ ಆರಾಮಾಗಿ ಉಸಿರಾಡುತ್ತಿವೆ. 

ಇಂತಹ ಇತಿಹಾಸ ಹಾಗೂ ಅಪಾರ ಜನಮನ್ನಣೆ ಪಡೆದ ಪಕ್ಷವೊಂದು ಕೇವಲ ಒಬ್ಬ ಚಿತ್ರನಟಿಯ ಮೇಲೆ ವೈಯಕ್ತಿಕ ದ್ವೇಷ ಸಾಧಿಸಲು ಹೋಗಿ ನಗೆಪಾಟಲಿಗೀಡಾಗಿ ಯುವ ಜನರ ಪಾಲಿನ ಖಳನಟ ಎಂಬಂತೆ ಚಿತ್ರಿಸಲ್ಪಟ್ಟಿದ್ದು ಮಾತ್ರ ದುರಂತ. ಇನ್ನು ಕಾಂಟ್ರೊವರ್ಸಿಗಳ ಜೀವಿತಾವಧಿ ನೋಡಲು ಹೊರಟರೆ ಅವು ನಮ್ಮ ಒಂದು ದಿನದ ಸ್ಟೇಟಸ್ ಸ್ಟೋರಿಗಳಷ್ಟೆಯೇ ಪ್ರಸ್ತುತ. ಇದರಿಂದ ಮುಖ ಭಂಗವಾಗಿದ್ದರೂ ಇದು ತೀರಾ ರಾಜಕೀಯವಾಗಿ ಪರಿಣಾಮ ಬೀಳಬಹುದೇ ಎಂದು ಕಾಡು ನೋಡಬೇಕಷ್ಟೆ!

ಎಲ್ಲ ವಿದ್ಯಾಮಾನಗಳೂ ಹೀಗೆ ನಡೆದೂ ಮೈತ್ರಿ ಸರ್ಕಾರ ಮಾತ್ರ ಬಿಜೆಪಿ ಹಾಗು ಶಿವ ಸೇನೆ ಇದ್ದಿದ್ದರೇ, ಇವತ್ತು #ಮನೆಮಗಳು  #ಜೈ_ಕಂಗನಾ ಹಾಗೂ #love _you  _kangana  ಗಳು ಇಷ್ಟೇ ಪ್ರಬಲವಾಗಿ ಕೆಲಸ ಮಾಡುತ್ತಿದ್ದವೇ ಎಂದು ಯೋಚಿಸುವ ಸಮಯ! 



Thursday, July 23, 2020

ಅಮ್ಮನ ಸೆರಗನ್ನು ಹಿಡಿದು ಹಾಲನ್ನು ಎರೆಯಲು ಹೋಗುವುದೇ ದೊಡ್ಡ ಸಂಭ್ರಮ !





ನಮ್ಮ ಧಾರವಾಡದ ಮಳೆಗಾಲಕ್ಕ, ಮೋಹಕ ಸೊಬಗಿದೆ, ಎರಡು ನಿಮಿಷವೂ ಬಿಡದೆ, ಆಗಸವೆಂಬ ಬಿಂದಿಗೆಗೆ ಯಾರೋ ತೂತು ಮಾಡಿದ ಹಾಗೆ ಬಿಟ್ಟು ಬಿಡದೇ  ಸುರಿಯುವ  ತವಕವಿದೆ !ಇಂತಿಪ್ಪ ಮಳೆಗಾಲದಲ್ಲಿ ಬರುವ ಪಂಚಮಿಯ ಹಬ್ಬಕ್ಕೆ ಪ್ರೀತಿಯ ಆಚರಣೆ ಇದೆ.

ತಂಪಾದ  ಮಂಜಿನ  ಬೆಳಗು, ಜಿಟಿ ಜಿಟಿ ಸುರಿಯುವ ಮಳೆ, ಬೆಚ್ಚಗೆ ಹೊದ್ದು ಮಲಗಿದ್ದ ನಮ್ಮನ್ನ , "ಇವತ್ತು ಪಂಚಮಿ ,ಇವತ್ತರೆ ಬೇಗ ಎದ್ದು ಹಾಲು ಎರೆದು  ಬಂದ್ಮೇಲೆ ನಾಷ್ಟಾ ನೆನಪಿರಲಿ "ಎಂದು ಗದರಿಸಿ ಎಚ್ಚರಿಸುತ್ತಿದ್ದ ಅಮ್ಮ, ರೇಶಿಮೆಯ ಕೆಂಪು ಹಾಗೂ ಹಸಿರು ಬಣ್ಣದ ಲಂಗ ದಾವಣಿ, ಮಲ್ಲಿಗೆ ಹೂವು, ಝುಮಕಿ, ಕೈತುಂಬ  ಬಳೆ, ಕಾಡಿಗೆ ಹಾಗೂ ಕುಂಕುಮ ಇಟ್ಟುಕೊಂಡು ಅಮ್ಮ ತಯಾರಿಸಿಟ್ಟ , ಸಣ್ಣ ಗಿಂಡಿಯಲ್ಲಿ ಹಾಲು, ಅಗರ್ ಬತ್ತಿ,ತಂಬಿಟ್ಟು, ಶೇಂಗಾ ಉಂಡಿ ,  ಹುರಿದ ಜೋಳದ ಅಳ್ಳು ,ಹೂವು , ನೈವೇದ್ಯೆಗೆಂದು ಮಾಡಿಟ್ಟ ಕರಿಗಡುಬು, ದೀಪದ ಎಣ್ಣೆ-ಬತ್ತಿ, ಎಲ್ಲವನ್ನು ಶ್ರದ್ಧೆಯಿಂದ ಒಂದು ತಟ್ಟೆಗೆ ಜೋಡಿಸಿಕೊಂಡು ಅದರ ಮೇಲೆ ಉಲೆನಿಂದ ಹಣೆದ ಮುಚ್ಚಿಗೆ, ಅಮ್ಮನ ಸೆರಗನ್ನು ಹಿಡಿದು ಹಾಲನ್ನು ಎರೆಯಲು ಹೋಗುವುದೇ ದೊಡ್ಡ ಸಂಭ್ರಮ !

ಹೋಗುವ ದಾರಿಯಲ್ಲಿ ನೆರೆಯವರು ಸಿಕ್ಕು "ಹಾಲ್ ಎರಿಯಾಕ್ ಹೊಂಟೇರಿ? ಎಷ್ಟು ಎತ್ತರ ಬೆಳದಾಳ ನೋಡ್ರಿ ಮಗಳು, ಲಕ್ಷಣದ ಗೌರಮ್ಮ" ಎಂದು ಕೆನ್ನೆ ತಟ್ಟಿ ಪ್ರೀತಿಯಿ೦ದ , ಮಾತನಾಡಿಸುತ್ತಿದ್ದ ಆಂಟಿಯರು , ಗಣೇಶನ ದೇವಸ್ಥಾನದ ಅಂಗಳದಲ್ಲಿ ಆಲದ ಮರಕ್ಕೆ ಅಂಟಿಕೊಂಡಿದ್ದ ಕೆಂಪು ಮಣ್ಣಿನ ಹುತ್ತು, ಪ್ರತಿವರ್ಷ ನಾಗಪ್ಪ, ನಾವು ಹೋಗುವ ವರೆಗೆ ಹೊರಗೆ ಬರದೇ ಇರಲಪ್ಪ ಎಂಬ ಅಂಜಿಕೆಯಿಂದಲೇ ಹಾಲು ಹಾಕುವಾಗ, "ಹೆದರ್ಬ್ಯಾಡ ಅರಾಮ್ ಪೂಜೆ ಮಾಡು ಏನೂ ಆಗುದಿಲ್ಲ ಎಂದು" ಅಮ್ಮ ಹೇಳುತ್ತಿದ್ದ ಧೈರ್ಯ, ಅರ್ಚಕರು ಹೊರಗೆ ಬಂದು ನಂಗೋಸ್ಕರ ಒಂದು ಮಂಗಳಾರತಿ ಮಾಡಿ ಗಣೇಶನ ಮೇಲಿದ್ದ ಹೂವು ತಂದುಕೊಟ್ಟು, ಎಲ್ಲ ಚೊಲೋ ಆಗ್ಲಿ ಅರಾಮ್ ಇರ್ರಿ , ನೀನೆ ಫಸ್ಟ್ ಬರಬೇಕು ಈ ಸಲ ಎಕ್ಸಾಮ್ಸ್ನ್ಯಾಗ , ಎನ್ನುವಾಗ ಎಂತದೋ ಹಿಗ್ಗು!
ಆಮೇಲೆ ದೀಪ ಹಚ್ಚಿ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಮನೆಕಡೆ ಹೊರಟರೆ ಜೋಕಾಲಿಯದ್ದೇ ಗುಂಗು.

ದೊಡ್ಡ ಮರಕ್ಕೆ ಕಟ್ಟಿದ ಜೋಕಾಲಿ ಆಡುವುದಕ್ಕೆ ಹರ ಸಾಹಸ ಪಟ್ಟು, ಕಡೆಗೆ ನಾನು ಹೆಚ್ಚು ,ನೀನು ಹೆಚ್ಚು ಎಂದು ಕ್ವಾರ್ಟರ್ಸ್ ಹುಡುಗೀಯರ ಜೊತೆ  ಜಗಳ ಆಡುವ ಗೋಜೇ ಬೇಡ ಎಂದು ಹೇಳಿ ಅಪ್ಪ ಮನೆಯಲ್ಲೇ ನನಗಾಗಿ ಕಟ್ಟುತ್ತಿದ್ದ ಜೋಕಾಲಿ, ಅಡುಗೆ ಮನೆಯಿಂದ ಹಾಲ್ ಗೆ ಬರುವ ಪ್ಯಾಸೇಜ್ ಬ್ಲಾಕ್ ಮಾಡಿ ಪ್ರತಿ ಸಲ ಅಮ್ಮನಿಗೆ ಹಾಯ್ದು ಬೈಸಿಕೊಳ್ಳುತ್ತಿದ್ದ ದಿನಗಳು, ಇದರ ಮಧ್ಯೆ ತಮ್ಮನಿಗೂ ಸ್ವಲ್ಪ ಹೊತ್ತು ಜೋಕಾಲಿ ಬಿಟ್ಟು ಕೊಡುವ ತ್ಯಾಗ, ಒಂದೇ ಎರಡೇ, ಪಂಚಮಿ ಕೇವಲ ಹಬ್ಬವಲ್ಲ ಹುಡುಗೀಯರ ಪಾಲಿಗೆ ಸಡಗರ !
ನಾಗರ ಪಂಚಮಿಯ ಹಾರ್ದಿಕ ಶುಭಾಶಯಗಳು



Monday, July 13, 2020

ಸೋಶಿಯಲ್ ಮೀಡಿಯಾ ಹಾಗೂ ವರ್ಚುಯಲ್ ಐಡೆಂಟಿಟಿ !



ಸುಮ್ಮನೆ ಗಮನಿಸಿ ನೋಡಿ.. ಸೋಶಿಯಲ್ ಮೀಡಿಯಾ ಗೆ ಒಂದು ಪ್ಯಾಟರ್ನ್ ಇದೆ, ಒಂದೇ ಸಲಕ್ಕೆ ಯಾರನ್ನೋ ಹೀರೋ ಅಥವಾ ಜೀರೋ ಮಾಡುವ ಬಲಿಷ್ಠ ಶಕ್ತಿ ಇದೆ ! ನಿಮಗೆ ಇಷ್ಟವೊ ಇಲ್ಲವೋ ಟ್ರೆಂಡಿಂಗ್ ಹೆಸರಲ್ಲಿ ನಡೆಯುವ ಎಲ್ಲ ವಿದ್ಯಮಾನಗಳು ನಿಮ್ಮ timeline ನಲ್ಲಿ ಕಾಣಲೇ ಬೇಕು, ಅವರ ಅಲ್ಗೊರಿಥಮ್ಸ್ ಕೂಡ ಟ್ರೆಂಡ್ ಗೆ ಅನುಗುಣವಾಗಿ ಅಪ್ಡೇಟ್ ಆಗುತ್ತಲಿರುತ್ತವೆ!

ಕಳೆದೆರಡು ವಾರಗಳಿಂದ ಒಂದು ಸೂಲಿಬೆಲೆ, ಇನ್ನೊಂದು ಪ್ರತಾಪ್ ಟ್ರೊಲ್ ಗಳಿಗೆ ಆಹಾರವಾದ ವ್ಯಕ್ತಿಗಳು! ಸೂಲಿಬೆಲೆಯ ಬಗ್ಗೆ ಮೊದಲೇ ಕೇಳಿದ್ದ ನೆನಪು ಕೆಲವು ಒಳ್ಳೆಯ ಕೆಲ್ಸದ ಜೊತೆಗೆ ಅವರ ಅತಿಯಾದ ಇಲ್ಲೊಜಿಕಲ್ ಮಾತುಗಳೇ ಅವರಿಗೆ ಸಧ್ಯ ಮುಳುವಾಗಿರುವುದು ಈಗ ಹಳೆಯ ಸುದ್ದಿ. ಹೇಂಗೂ ಚಕ್ರವರ್ತಿ ಟ್ರೆಂಡ್ ನಡೆದಿತ್ತು, ಅದರೊಟ್ಟಿಗೆ ಈ ಹುಡುಗ ಟ್ರೊಲ್ ಆಗುವ ಮುಂಚೆ ಯಾರೆಂದು ಅನೇಕರಿಗೆ ಗೊತ್ತೇ ಇರಲಿಲ್ಲ ಅಂತಹ ಮಹಾ ಮೋಸಗಾರನನ್ನು ಸಾರಾಸಗಟಾಗಿ ಸುಳ್ಳುಗಳ ಕಾರಣದಿಂದ ಸೂಲಿಬೆಲೆಯ ತಮ್ಮನ ಪಟ್ಟ ಕೊಟ್ಟು ಬಿಡಲಾಯಿತು. ಟ್ರಾಲ್ ಗಳಿಗೆ ಎಥಿಕ್ಸ್ ಇರುವುದಿಲ್ಲ ಬಿಡಿ ಟ್ರೊಲ್ knows ಹೌ ಟು ಡಿಫೇಮ್ someone. ಇದೇ ಸಿಕ್ಕಿದ ಅವಕಾಶವೆಂದು ದಶಕಗಳಿಂದ ತನ್ನ ಕ್ಷೇತ್ರದಲ್ಲಿ ರಾಜಕೀಯ ಪ್ರೇರೆಪಿತ  ಭಾಷಣಗಳ ಹೊರತಾಗೀಯೂ ಸಮಾಜಕ್ಕೆ ಅನೇಕ ರೀತಿಯ ಸಹಾಯ ಮಾಡಿದ ಚಕ್ರವರ್ತಿ ಎಲ್ಲಿ , ಸುಳ್ಳುಗಳನ್ನೇ ಮಾರಿ ದುಡ್ಡು ಮಾಡಿ ರಾಜಕೀಯ ನಾಯಕರನ್ನೇ ಮಂಗ ಮಾಡಿದ ಈ ಹುಡುಗ ಎಲ್ಲಿ? ಹೋಲಿಕೆಗೂ ಮಿತಿ ಬೇಡವೇ?!

ನಾನು ಸೂಲಿಬೆಲೆಯ ಅನುಯಾಯಿಯೂ ಅಲ್ಲ, ಯಾವುದೇ ಬ್ರಿಗೇಡ್ ನ ಕಾರ್ಯಕ್ರತೆಯೂ ಅಲ್ಲ, ಆ ವ್ಯಕ್ತಿಯನ್ನು ಅಣ್ಣ ಎಂದು ತಬ್ಬಿಕೊಂಡೆ ಇನ್ಸ್ಪೈರ್ ಆಗೋ ದೂಡ್ಡ  ಯುವ ಬಳಗವಿದೆ ಅದೆಲ್ಲ ಕೇವಲ ಅವರು ಮಾಡುವ ಭಾಷಣಗಳಿಂದ ಆಗಿದ್ದಲ್ಲ ಅನ್ನುವುದು ಎಷ್ಟು ನಿಜವೂ ಅಷ್ಟೇ ನಿಜ  ಮಾತಿನ ಭರದಲ್ಲಿ ಹೇಳಿದ ಸುಳ್ಳುಗಳಿಂದ ಅವರ ಕಟ್ಟಾ ಹಿಂಬಾಲಕರು ಪೇಚಿಗೆ ಸಿಲುಕಿರುವುದು.

ನಾವುಗಳೆಲ್ಲ ಭಾವುಕ ಜೀವಿಗಳು ದೇಶಭಕ್ತಿಯೆಂಬ ರೋಮಾಂಚನವನ್ನು ಮಾತಿನ ಮೂಲಕವೇ ಬಡಿದೆಬ್ಬಿಸುತ್ತಿದ್ದ ಅಪ್ಪಟ ವಾಗ್ಮಿ ಸೂಲಿಬೆಲೆಗೂ ಈ ಸುಳ್ಳುಗಾರ ಪ್ರತಾಪನಿಗೂ ಹೋಲಿಕೆ ಸಲ್ಲ. ಸೈದ್ಧಾಂತಿಕ ವಿರೋಧ ಏನೇ ಇದ್ದರೂ ನೀವು ಯಾವ ಕಂಟೆಂಟ್ ಇಟ್ಟುಕೊಂಡು ನಿಮ್ಮ ಸೈಧಾಂತಿಕ ವಾದ ಮಂಡಿಸುತ್ತೀರಿ ಎನ್ನುವುದು ಮುಖ್ಯವಾಗುತ್ತದೆ, ಟ್ರೊಲ್ ಗಳ  ಹೆಸರಲ್ಲಿ ಕೇವಲ ದ್ವೇಷ ಹಾಗೂ ಅಸೂಯೆ ಬಿತ್ತಿ, ವೈಯಕ್ತಿಕ ತೇಜೋವಧೆ ಮಾಡುವುದೇ ನಿಮ್ಮ ಉದ್ದೇಶವಾಗಿದ್ದರೆ ಅದನ್ನು ಟ್ರೊಲ್ ಅನ್ನದೆ ಬುಲ್ಯಿಂಗ್ ಎನ್ನಬೇಕಾಗುತ್ತದೆ. ಸಮಾಜದ ಸ್ವಾಸ್ಥ್ಯ ಸುಳ್ಳುಗಾರರಿಂದ ಕೆಡುವುದಲ್ಲ ಆ ಸುಳ್ಳುಗಳನ್ನು ಮರು ಪ್ರಶ್ನೆ ಇಲ್ಲದೆ ಒಪ್ಪಿಕೊಂಡು ಸೋಶಿಯಲ್ ಮೀಡಿಯಾ ಕೊಡುವ ಪ್ಯಾಟರ್ನ್ ಗೆ ಅನುಗುಣವಾಗಿ ಕುಣಿಯುವ ನಮ್ಮ ವರ್ಚುಯಲ್ ಐಡೆಂಟಿಟಿ!!!


ನಿಮಗಾಗದವರನ್ನು ಅಥವಾ ನಿಮ್ಮ ಯೋಚನೆಗೆ ಹೊಂದಿಕೆಯಾಗದವರನ್ನು, ನಿಮ್ಮ ವೈಚಾರಿಕ ಭಿನ್ನಾಭಿಪ್ರಾಯಗಳಿಂದ ಒಬ್ಬ ವ್ಯಕ್ತಿಯನ್ನು ವೈಯಕ್ತಿಕವಾಗಿ ದ್ವೇಷಿಸಲು ಹೊರಟರೆ ಜಗತ್ತಿನಲ್ಲಿ ಪ್ರೀತಿಸಲು ಯಾರೂ ಉಳಿಯುವದಿಲ್ಲ! ಯಾರೂ ನೂರು ಪ್ರತಿಶತ ಒಳ್ಳೆಯವರೂ ಅಲ್ಲ ನೂರು ಪ್ರತಿಶತ ಕೆಟ್ಟವರೂ ಅಲ್ಲ, ನಮಗೆ ಒಳ್ಳೆಯದು ಎಲ್ಲಿಂದಲೋ ಯಾರಿಂದಲೂ ಕೇಳಲು ಕಲಿಯಲು  ಅವಕಾಶವಿದ್ದರೆ ಅದನ್ನು ರಾಜಕೀಯ ಹಾಗೂ ಸೈದ್ಧಾಂತಿಕ ಎಂಬ ಬೇಲಿಗಳನ್ನು ದಾಟಿ ಅಳವಡಿಸಿಕೊಳ್ಳೋಣ !

Thursday, June 18, 2020

ದೂರ ತೀರ ಯಾನ....

  ಬೆಳಗ್ಗೆ ಏಳು , ಹಲ್ಲುಜ್ಜು , ಸ್ನಾನ ಮಾಡು , ತಿಂಡಿ ತಿನ್ನು ಕರೆಕ್ಟ್ ಸಮಯಕ್ಕೆ  ಕ್ಲಾಸಿಗೆ ಹೋಗು... ಇದು ಪ್ರತಿನಿತ್ಯದ ದಿನಚರಿ. ಇದರಲ್ಲಿ ಬದಲಾವಣೆಗಳು ಸಾಧ್ಯವೇ ಇಲ್ಲ. ಬದಲಾವಣೆ ಮಾಡಹೊರಟರೂ  ಅದು ಒಂದೋ ಎರೆಡೋ  ದಿನಕ್ಕಾಗುವ ಬದಲಾವಣೆಯೋ ವಿನಃ ದಿನಚರಿ ಆಗಲೊಲ್ಲದು.

ಹೀಗೆ ದಿನ ಪೂರ್ತಿ ಮಾಡಿದ್ದನ್ನೇ  ಮಾಡುತ್ತ , ಕೇಳಿದ್ದನ್ನೇ ಕೇಳುತ್ತ, ಅದೇ ಮನೆ, ಅದೇ ಕಾಲೇಜು ,ಅದೇ ಕಚೇರಿ  ಅದೇ ಜನ, ಅದೇ ಸಮಾಜ ಎಂಬ ನಿಯಮಿತ ಪರೀಧಿಯೊಳಗೆ ಸಾಗುತ್ತಿರುತ್ತದೆ ನಮ್ಮ ಜೀವನ ಗುಟ್ಟುಗಳಲ್ಲಿ ಹಾಗೂ ವಿಫಲ ರಟ್ಟುಗಳಲ್ಲಿ !

 ನಾವೇ ನಮ್ಮ ಅನುಕೂಲಕ್ಕಾಗಿ ನಿರ್ಮಿಸಿಕೊಂಡ ಸಮಾಜ, ಅದರ ಕಟ್ಟುಪಾಡುಗಳು ಏನೋ ಇದೆಲ್ಲ ಗೋಪಿ , ನನಗೊಬ್ಬನಿಗೆ ಹೀಗೆ ಅನ್ಸೋದ ಅಥವಾ ನಿಂಗೂ ಹಿಂಗ ಆಗುತ್ತ ?! ಸಾಕು  ಸುಮ್ನಿರಪಾ  ನಿನ್ನ ನಂಬಿಕೊಂಡು ಒಂದ್ಸಲ ನಿನ್ ಜೊತೆ ನಾನು ಅವನಲ್ಲ ಅವಳು ಫಿಲಂ ನೋಡಿದ್ದಕ್ಕೆ ಅಮ್ಮ ನಂಗೆ ಬಾಸುಂಡೆ ಬಾರೋ ಹಾಗೆ ಬಾರ್ಸಿದ್ಲು ಗೊತ್ತಲ್ವ ?! ದುಡ್ಡಿರೋರು ನೀವೆಲ್ಲ ಏನಂದ್ರು ನಡೆಯುತ್ತೆ ಏನ್ ಮಾಡಿದ್ರು ನಡೆಯುತ್ತೆ ಅಸಲಿಗೆ ಯಾಕೆ ಅಂತ ಕೇಳುವ ತಾಕತ್ತೇ ಯಾರ್ಗೂ ಇಲ್ಲ, ಯಾರ್ಗೂ ಗೊತ್ತಾಗದ ಹಾಗೆ ನ್ಯೂಮೆರೊಲೊಜಿ ಮಣ್ಣು ಮಸಿ ಅಂತ ದೀಪಕ್ ಅನ್ನೋ ಹೆಸರನ್ನೇ ದೀಪ್ ಮಾಡಿಕೊಂಡ ನೀನು ,ಸಮಾಜ ,ಶಾಸ್ತ್ರ ಅಂತ ಮಾತಾಡ್ತೀಯಾ? ಬಿಡು ಇಲ್ಲಿಗೆ ಇದನ್ನೆಲ್ಲ ಕೆಲಸಕ್ಕ್ ಬರೋದನ್ನ ಮಾಡು , ಮಾಡ್ಲಿಲ್ಲ ಅಂದ್ರೂ ತೊಂದ್ರೆ ಇಲ್ಲ ಬಿಡು ನಂಗೆ ಮಾತ್ರ ಬದುಕಲು ಬಿಟ್ಟಬಿಡು ! ಇದೆಲ್ಲ ನಂಗಾಗೋ ಕೆಲಸ ಅಲ್ಲ...ಎಂದು ರಾತ್ರಿ ಕಂಬೈನ್ ಸ್ಟಡಿ ಮಾಡಲು ಹೋಗಿದ್ದು, ಓದೋದನ್ನ ಬಿಟ್ಟು ಇನ್ನೆಲ್ಲ ಮಾಡಿದ್ದಾಯ್ತು, "ಹಿಂಗೇ ಆದ್ರೆ ನಾನು ಇಂಜಿನಿಯರ ಆದ ಹಾಗೆ!ನಾ ಮನೆಗ್ ಹೋಗ್ಬೇಕು ಇನ್ಯಾವತ್ತೂ ಬರಲ್ಲ ಇಲ್ಲಿ" ಎಂದು ಹೊರಡಲು ಅಣಿಯಾದ ಗೋಪಿ

ಲೋ ದಡ್ದ ಅದು ಹಂಗಲ್ಲ ಒಂದು ಸಿಗಾರ್ ಹೊಡೆಯಣ ಬಾ ಇಲ್ಲಿ , ನೋಡು ನಮಗೇನು ಅನ್ಸುತ್ತೋ ಅದನ್ನೇ ಮಾಡಿ ನಿಮಗ್ ಖುಷಿ ಕೊಡದನ್ನೇ ಹಿಂಬಾಲಿಸಿ ಅಂತ ಕನ್ನಡ ಮಾಷ್ಟ್ರು ಲೆಕ್ಚರ್ ಕೊಟ್ರ ಇಲ್ವಾ? ದೀಪಕ್ , ಗೋಪಿಯ ಹೆಗಲ ಮೇಲೆ ಕೈ ಹಾಕಿ ಸಮಾಧಾನ ಹೇಳಲು ಹೋಗಿದ್ದು ಫಲ ಕೊಡಲಿಲ್ಲ.  "ಅದಕ್ಕೂ ಇದಕ್ಕೂ ಸಂಭಂದ ಇಲ್ಲ" ಗೋಪಿ ಸಿಟ್ಟಲ್ಲಿ ಹೇಳಿದ ... "ಇದೆ ಕಣೋ ನಮ್ಮ ದೇಶ ನಮ್ಮ ಸಮಾಜ ಹೆಂಗೆ ನಿರ್ಮಿಸಲ್ಪಟ್ಟಿದೆ ಅಂದ್ರೆ ಯಾವನೋ ಏನೋ ರೂಲ್ಸು ಮಾಡಿ ಗೊಟಕ್ ಅನ್ನೋದು ನೇಣ್ ಹಾಕೋ ಪರಿಸ್ಥಿತಿ ಬಂದ್ರೂ ಅದನ್ನು ಚಾಚೂ ತಪ್ಪದೆ ಪಾಲ್ಸಿ ನೇಣ್ ಹಾಕೊಳ್ಳೋ ನಮ್ಮ ಜನರು , ಅವರು ಮಾಡಿದ್ದು ಸರಿ , ಅವರ ಸಂಪ್ರದಾಯ ಸರಿ, ಅವರ ಲೈಂಗಿಕತೆನೇ ಸರಿ ಅಂತ ವಾದ ಮಾಡಿ ಸಾಯ್ತಾವೆ ! ಅಮೇರಿಕಾ ಇಂಗ್ಲೆಂಡ್ ನಲ್ಲಿ ಗೇ ಮ್ಯಾರೇಜ್ ಎಲ್ಲ ಕಾಮನ್ ಮಗಾ ! ನಮ್ಮುವುಕ್ಕೆ ಅದೊಂದು ಅಪರಾಧ. ಸರಿ ತಪ್ಪು ಅವರವರ ಮನಸಿನ ಭಾವನೆ ಮತ್ತು ಆ ಭಾವನೆ ಮೂಡಿಸಿದ ಸಮಾಜದ ಮೇಲೆ ನಿರ್ಧರಿತವಾಗಿರುತ್ತದೆ ! ಇವತ್ತಿಗೂ ನಿಂಗೆ ಇಷ್ಟ ಇಲ್ಲ ಅಂದ್ರೆ ನಾನು , ನಿನ್ನ ಒತ್ತಾಯ ಪೂರ್ವಕವಾಗಿ ಇಟ್ಕೊಳ್ಳೋಕೆ ಆಗೋದಿಲ್ಲ, ನೀನು ಸಮಾಜ ಅಂತ ಅಂಜಿಕೊಂಡು ನಿನ್ನ ಆಸೆಗಳನ್ನು , ಮನದ ಬೇಡಿಕೆಗಳನ್ನು ಕೊಲ್ಲಬೇಕು ಅಂತ ನಿರ್ಧರಿಸಿದ್ದರೆ ಕೊಂದುಕೊ ಅದಕ್ಕಾಗಿ ಇನ್ನೊಬ್ಬ ಹುಡುಗಿಯ ಜೀವನ ಹಾಳು...... " ಎನ್ನುವಷ್ಟರಲ್ಲಿಯೇ ಸಿಟ್ಟಿನಲ್ಲಿ ಬಾಗಿಲನ್ನು, ರಪ್ ಅಂತ ಎಳೆದುಕೊಂಡು ಹೊರನಡೆದ ಗೋಪಿ.

ದಾರಿಯಲ್ಲಿ ನಡೆದು ಹೋಗುವಾಗ ,ಮನೆಯಲ್ಲಿ ಕಾಯಿಲೆ ಬಿದ್ದಿರುವ ಅಜ್ಜಿ, ಅಪ್ಪನಿಗಾಗಿ ಒಂದು ಕಿಡ್ನಿ ದಾನ ಮಾಡಿ, ಕೊನೆಗೂ ಅಪ್ಪನನ್ನು ಉಳಿಸಿಕೊಳ್ಳಲಾಗದೆ ಹೋದ ನತದೃಷ್ಟ ಹೆಂಡತಿ ನಾನು, ಎಂದು ದಿನಾ  ಶಪಿಸಿಕೊಂಡು ಅಡುಗೆ ಮಾಡುವ ಅಮ್ಮನನ್ನು ನೋಡಿ ಒಂದು ಸಲ ಪಾಪ ಪ್ರಜ್ಞೆ ಬಂದು ,ಕೆನ್ನೆ ತಟ್ಟಿ  ಹೋದ ಹಾಗೆ ಆಯ್ತು! ನಾನು ಓದಿ ಒಳ್ಳೆಯ ಕೆಲಸ ಸೇರಿ ಮನೆ ಸಾಲ ತೀರ್ಸಿ, ಅಮ್ಮನಿಗೊಂದು ಒಳ್ಳೆಯ ಜೀವನ ಕೊಡಬಹುದು ಅಂತ ಅಪ್ಪ ಇರುವಾಗಲೂ ಬಯಸಿದ್ದಳು ಅಮ್ಮ ! "ನಾನೀಗ ಓದುವುದನ್ನು ಬಿಟ್ಟು ಇನ್ನೇನೋ ಮಾಡಿಕೊಂಡು ಓಡಾಡ್ತಾ ಇದೀನಿ ಅಸಹ್ಯ" ಎಂದು ತನ್ನನ್ನು ತಾನೇ ಹಳಿದುಕೊಂಡು, ಮನೆ ತಲುಪಿ  ಮತ್ತೆ ಓದಲು ಕುಳಿತುಕೊಳ್ಳುತ್ತಾನೆ ಗೋಪಿ !

ಬಿಟ್ಟರೂ ಬಿಡದೀ ಮಾಯೆ ಅನ್ನುವ ಹಾಗೆ, ಎರಡು ಪುಟಗಳನ್ನ ತಿರುವಷ್ಟರಲ್ಲಿ ದೀಪಕ್ ಕಾಡಲು ಶುರು ಮಾಡುತ್ತಾನೆ ! ಥತ್  ಹಾಳಾದ್ದು ಓದಕ್ಕೆ ಆಗ್ತಿಲ್ಲ ಅಂತ ಪುಸ್ತಕ ಮುಚ್ಚಿಟ್ಟು , ಪಡಸಾಲೆಯಲ್ಲಿ ಅಜ್ಜಿಯ ಪಕ್ಕ ಬಂದು ಮಲಗುವ ನಾಟಕ ಮಾಡಿದರೂ, ನೆನ್ನೆ ರಾತ್ರಿ ಕುಡಿದ ಮತ್ತಿನಲ್ಲಿಯೇ ಎಲ್ಲವೂ ನಡೆಯಲಿಲ್ಲ ಆದರೂ ನಾನ್ಯಾವುದಕ್ಕೂ ಪ್ರತಿರೋಧ ಒಡ್ಡಲಿಲ್ಲ ಅಂದ್ರೆ ನನಗೂ ಅವನು ಮಾಡಿದ್ದೆಲ್ಲ ಇಷ್ಟ ಅಂತಲೇ ಅರ್ಥ ಅಲ್ವ ? ಕಾಲೇಜು ಅಂದ್ರೆ ಸುಂದರ ಹುಡುಗೀಯರನ್ನು ನೋಡಬಹುದು ಅಂತ ಹೇಳುವ ಹುಡುಗರ ಮಧ್ಯೆ ನನಗೆ ಮಾತ್ರ ದೀಪಕ್ ಮೋದಲ ನೋಟಕ್ಕೆ ಇಷ್ಟ ಆಗಿ ಬಿಟ್ಟಿದ್ದ, ಗಂಡು ಹೆಣ್ಣನ್ನು ಮಾತ್ರ ಇಷ್ಟ ಪಡಬೇಕು ಅಂತ ಕಾನೂನೇ ಇರುವಾಗ ನಾ ಹೇಗೆ ಧೈರ್ಯ ಮಾಡಿ ಅವನ ಹತ್ತಿರ ಹೋಗಿ ನನ್ನ ಇಷ್ಟ ಹೇಳಿಕೊಳ್ಳೋದು ಅಂತ ಮನಸ್ಸಿನಲ್ಲೇ ಕೊರಗುವಾಗ ಅವನೇ ಬಂದು ನನ್ನ ಪಕ್ಕ  ಕೂತು ನನ್ನನ್ನು  ಇಷ್ಟೊಂದು ಹಚ್ಚಿಕೊಂಡು ಬಿಟ್ಟಿದ್ದಲ್ಲದೇ  ನನಗೆ ಗೊತ್ತಿಲ್ಲದೇ, ನನ್ನ ಇಡೀಯಾಗಿ ಆವರಿಸಿದ !
to be continued.....

"ದಿ ಪ್ಲೇಗ್ " ಇಂದಿನ ಕೋವಿಡ್ -೧೯ ಸಾಂಕ್ರಾಮಿಕ ರೋಗದ ವಿರುಧ್ಧದ, ಹೋರಾಟಕ್ಕೆ ಸೂಕ್ತ ಒಳನೋಟ ಕಲ್ಪಿಸುತ್ತದೆ !

ಫ್ರೆಂಚ್ ತತ್ವಜ್ಞಾನಿ ,ಆಲ್ಬರ್ಟ್ ಕ್ಯೆಮೂ- "ದಿ ಪ್ಲೇಗ್ ": ಜಗತ್ತಿನ ಎಲ್ಲ ದುಷ್ಟ ಶಕ್ತಿಗಳಿಂದ ಸಾಧ್ಯವಾಗಬಹುದಾದ ಹಾನಿ ಎಷ್ಟು ಕಠೋರವೋ , ಅಷ್ಟೇ ಕಠೋರ ಹಾನಿ , ಪ್ಲೇಗ್ ಎಂಬ ಪಿಡುಗು ಸಹ ಮಾಡಬಲ್ಲದು " ಇದು ಮನುಷ್ಯರನ್ನು ತಮ್ಮ ಶಕ್ತಿಗೂ ಮೀರಿ ಬೆಳೆಯುವಂತೆ ಪ್ರೇರೇಪಿಸುತ್ತದೆ...... ಈ ಅಂಟುರೋಗದಿಂದ ನಾವು ನಿಜವಾಗಿಯೂ ಕಲಿಯಬೇಕಾಗಿರುವುದೇನೆಂದರೆ, ನಾವು ಅಲಕ್ಷಿಸಬಹುದಾದ ಜನರಿಗಿಂತ, ಈ ಭುವಿಯಲ್ಲಿ ಜಗವೇ ಮೆಚ್ಚುವ೦ಥ  ಅನೇಕ ಜನರಿದ್ದಾರೆ!

ಕೆಮುವಿನ ಕಾದಂಬರಿ "ದಿ ಪ್ಲೇಗ್ " ಇಂದಿನ  ಕೋವಿಡ್ -೧೯ ಸಾಂಕ್ರಾಮಿಕ  ರೋಗದ  ವಿರುಧ್ಧದ, ಹೋರಾಟಕ್ಕೆ ಸೂಕ್ತ ಒಳನೋಟ ಕಲ್ಪಿಸುತ್ತದೆ ! 

" ಈ ಅನಿರ್ದಿಷ್ಟ ದುರದೃಷ್ಟಕರ ಕಾಲಮಾನ ಏಕತಾನತೆಯಿಂದ ನರಳುವಂತೆ ಮಾಡುವುದಲ್ಲದೇ ಮಾನಸಿಕವಾಗಿ ನಮ್ಮನ್ನು ಕುಗ್ಗಿಸುತ್ತದೆ. ತಗ್ಗಿಸಲಾಗದ ಬೆಂಕಿಯಂತೆ ಮೇಲುನೋಟಕ್ಕೆ ಕಂಡುಬಂದರೂ , ಪ್ಲೇಗ್ ನಂತಹ ಮಾರಿಯನ್ನು ಸಹ ಗೆದ್ದವರ ನೆನಪಿನೊಂದಿಗೆ, ಹೆಜ್ಜೆ ಹೆಜ್ಜೆಗೂ ಅತಿರೇಕದ ರಕ್ಕಸನಂತೆ,ವಿವರಿಸಲಾಗದ ಹಿಂಸೆ, ಸಾವು ,ನೋವು, ಹತಾಶೆಯನ್ನು  ಕೊಟ್ಟ  ಈ ಕಾಯಿಲೆ ಈಗ ಇತಿಹಾಸದ ಪುಟಗಳಲ್ಲಿನ ಕರಾಳ ಅಧ್ಯಾಯ! ಈ ಸ೦ವೇದನಾಶೀಲ ಜಾಡ್ಯದ ಮುಂದೆ ಇನ್ನೆಲ್ಲವೂ ಗೌಣವೆಂಬಂತೆ ಕಾಣುವಂತೆ ಮಾಡಿರುವುದು ಅಕ್ಷರಶಃ ನಿಜ. "ಆಲ್ಬರ್ಟ್ ಕ್ಯೆಮೂ- "ದಿ ಪ್ಲೇಗ್ "-ಪುಟ ೧೭೯

ಕಾಲ್ಪನಿಕ ಕಾದಂಬರಿಯಾದರೂ, ೨ ಲಕ್ಷ ಜನಸಂಖ್ಯೆ ಇರುವ , ಉತ್ತರ ಆಫ್ರಿಕಾದ ಓರಾನ್ ಎಂಬ ಪಟ್ಟಣದಲ್ಲಿ ,ಜನ ಇದನ್ನು ತಡೆಯುವಲ್ಲಿ ಹೇಗೆ ಮಾನಸಿಕವಾಗಿ ತೈಯಾರಿ ನಡೆಸುತ್ತಿದ್ದರು , ಹಾಗೂ ಭಾವನಾತ್ಮಕವಾಗಿ ಎಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು ಎಂಬುದನ್ನು ಕ್ಯೆಮೂ ತನ್ನ ವಿಚಾರದ ಮೂಲಕ, ಹಾಗೂ ಪಾತ್ರಗಳ ಮುಖಾಂತರ, ಸಂಭಾಷಣೆಗಳಲ್ಲಿ, ಮನುಕುಲದ ಅಸ್ತಿತ್ವವನ್ನು ಅಣುಕಿಸುವ ಅನಿಶ್ಚತತೆಯನ್ನು ಎಳೆ ಎಳೆಯಾಗಿ ವಿವರಿಸುತ್ತಾನೆ. 

ಹಾಗೆ ಹೋಲಿಸುವುದಾದರೆ  ಕ್ಯೆಮೂವಿನ ಪ್ಲೇಗ್ ಗೂ  ಹಾಗೂ ಕೋವಿಡ್ -೧೯ ಕೊರೋನಾ ಅಂಟುರೋಗಕ್ಕೂ ತುಂಬ ವ್ಯತ್ಯಾಸವಿದೆ . ಮೊದಲನೆಯದಾಗಿ ಪ್ಲೇಗ್ ಎರಡನೇ ಮಹಾಯುದ್ಧದ ಮುಂದುವರೆದ ಭಾಗದಂತೆ ಜನರನ್ನು ಕಾಡಿತ್ತು , ೭೦ ವರ್ಷದ  ಹಿಂದೆ ,ಈಗಿರುವ ವೈದ್ಯಕೀಯ ಸವಲತ್ತಾಗಲಿ, ಔಷಧವಾಗಲೀ ಇಲ್ಲದ ಕಾಲದಲ್ಲಿ ಸಮುದಾಯದ ನಾಮಾವಶೇಷ ಸಿಗದಂತೆ ಮಾಡಿದ್ದಲ್ಲದೇ, ಕುಟುಂಬ ನಡೆಸುವ ಆಧಾರ  ಸ್ಥ೦ಭವಾಗಿರುವ ಪುರುಷರನ್ನೇ ಹೆಚ್ಚಾಗಿ ಬಲಿ ತೆಗೆದುಕೊಂಡಿತ್ತು!

ದಿ ಪ್ಲೇಗ್ ನ ಮೂಲ ವಿಷಯ ಮನುಕುಲದ ಸಂಘರ್ಷವೇ ಆಗಿದ್ದರೂ, ಆಗಿನ ಕಾಲಕ್ಕೆ ನಮ್ಮ ಇಂದಿನ ಪರಿಸ್ಥಿತಿಗೂ ಹೋಲಿಕೆಯಾಗುವಂತೆ ಬೆಲೆ ಏರಿಕೆ ಹಾಗೂ ಹಾಹಾಕಾರದಿಂದ ಉಂಟಾಗುವ ಅಭಾವಗಳ ಉಲ್ಲೇಖ ಮಾಡಲಾಗಿದೆ. ಇವತ್ತಿಗೆ ಕೇಳುತ್ತಿರವ ಮಾಸ್ಕ ಹಾಗೂ ಸ್ಯಾನಿಟೈಜರ್ಗಳ  ಕೊರತೆಯನ್ನು  ಹಾಗೂ ಭಯದ ವಾತಾವರಣದಿಂದ ಜನ  ಅವಶ್ಯಕತೆಗೂ ಮೀರಿದ ಖರೀದಿಯನ್ನು ನಾವು ಕಾಣುತ್ತಲ್ಲೇ ಇದ್ದೇವೆ.  ಕಾಲ್ಪನಿಕವಾದ "ಓರಾನ್ ಪಟ್ಟಣದಲ್ಲಿ ಹಣದಾಸೆಗಾಗಿ ವ್ಯಾಪಾರಸ್ಥರು ತಮ್ಮಲ್ಲಿರುವ ಅವಶ್ಯಕತೆಯ ಆಹಾರ ಪದಾರ್ಥಗಳನ್ನು ಶ್ರೀಮಂತರಿಗೇ ಮಾರಾಟಮಾಡಿ ಅಂಗಡಿ ಮುಂಗಟ್ಟುಗಳನ್ನು ಖಾಲಿ ಮಾಡಿ ಬಡವರಿಗೆ ತಿನ್ನಲು ಗಂಜಿಯೂ ಇಲ್ಲದಂತೆ ಮಾಡಿದ್ದರು . ಸಮುದಾಯಕ್ಕೆ ಹರಡಿದ ಸಾಮಾಜಿಕ ಪಿಡುಗಾದರೂ, ಎಲ್ಲ ವರ್ಗಗಳಿಗೆ ಸಮಾನತೆ ತರಬಹುದು ಎಂದು ಊಹಿಸುವುದೂ ಮೂರ್ಖತನ" ಪುಟ -೨೩೭. 

ಈ ವೈರಾಣುವಿನ ಜೊತೆಗಿನ ಹೋರಾಟ, ಒಂದು ರೀತಿಯ ಪ್ರಾಕೃತಿಕ ವಿಕೋಪಕ್ಕೆ ಒಳಗಾದ ಪ್ರದೇಶಗಳಂತೆಯೇ ಕಂಡುಬರುತ್ತದೆ, ಪೃಕೃತಿಗೆ ಹೇಗೆ ಮೇಲು -ಕೀಳು, ಶ್ರೀಮಂತ- ಬಡವ ,ಹೆಣ್ಣು -ಗಂಡು ಎಂಬ ತಾರತಮ್ಯವಿಲ್ಲವೋ ಹಾಗೆಯೆ ಈ ವೈರಾಣುವಿಗೂ ಕೂಡ! ಆದರೆ ಅತೀ ಕಡಿಮೆ ಸಂಪನ್ಮೂಲ ಹೊಂದಿ ಬದುಕುವ ಜನರಿಗೆ, ಅತೀ  ಹೆಚ್ಚಿನ ಹಾನಿ ಉಂಟಾಗುವುದಂತೂ ಎರಡೂ ವಿಷಯಗಳಲ್ಲಿ ನಿಜ ! 

ಈ ಪುಸ್ತಕದಲ್ಲಿ ನಿರೂಪಕನಾಗಿರುವವ ಡಾಕ್ಟರ್ ಬರ್ನಾರ್ಡ್, ಅವನದ್ದು ಬಿಡುವಿಲ್ಲದ ವೈದ್ಯಕೀಯ ಹೋರಾಟ!
ಕೊನೆಯ ಘಳಿಗೆಯವರೆಗೂ ಹೋರಾಡಿದರೂ ಅವನಿಗೆ ಸಿಗುತ್ತಿದ್ದ ಫಲಿತಾಂಶ ಮಾತ್ರ ೧೦೦ ಕ್ಕೆ ಒಂದರಂತೆ , ಇಂತಿಪ್ಪ ಸಾವುಗಳನ್ನು, ತನ್ನ ಅಸಹಾಯಕತೆಯನ್ನು, ಈ ಪಾತ್ರದ ಮೂಲಕ ಕ್ಯೆಮು ಸೂಕ್ಷ್ಮವಾಗಿ ವಿವರಿಸುತ್ತಾನೆ , ೯ ತಿಂಗಳ ಪ್ರತ್ಯೇಕತೆಯ ನಂತರ ಪಟ್ಟಣದಲ್ಲಿ ಎಲ್ಲರೂ ಮೊದಲಿನಂತೆ ಓಡಾಡಬಹುದು ಎಂಬ ಸಂಭ್ರಮಾಚಾರಣೆಯಲ್ಲಿ ತಾವು ಅನುಭವಿಸಿದ ನೋವನ್ನೆಲ್ಲ ಮರೆತಂತೆ ಕಂಡ ಜನರೆಡೆಗೆ ಬರ್ನಾರ್ಡ್ ಹೇಳುವ ಮಾತಿದು " ಅವನು ಎಲ್ಲರೊಳಗೊಂದಾಗಿ ಇರಲು ಇಚ್ಛಿಸಿದನೋ ಅಥವಾ ಹಾಗೆ  ೯ ತಿಂಗಳೂ ಏನೂ ನಡೆಯಲೇ  ಇಲ್ಲ ಎಂಬಂತೆ ಇರಲು  ಅವನ ಸುತ್ತಲಿನ ವಾತಾವರಣ ಕಾರಣವಾಯಿತೋ ಗೊತ್ತಿಲ್ಲ, ಆದರೆ ಮನುಷ್ಯರ ಹೃದಯದಾಳದಲ್ಲಿ ಬದಲಾವಣೆ ತರಲು, ಪ್ಲೇಗ್ ನ೦ತಹ  ಮಾರಣಾಂತಿಕ ಕಾಯಿಲೆಗೂ, ಸಾಧ್ಯವಿಲ್ಲ "  ಪುಟ ೨೯೫

ಹಾಗಾದರೆ ಈ ಜಾಡ್ಯದ ಫಲಿತಾಂಶವನ್ನು ಕ್ಯೆಮುವಿನ ಕಾದಂಬರಿಯ ದೃಷ್ಟಿಯಲ್ಲಿ ನೋಡ ಹೊರಟರೆ ಅಲ್ಲಿ,ಒಳ್ಳೆಯ ಹಾಗೂ ದುರದೃಷ್ಟಕರ ಎರಡೂ ಅಂಶಗಳಿವೆ, ಪ್ರೀತಿ ಪಾತ್ರರನ್ನು ಕಳೆದುಕೊಂಡು ಅನಾಥ ಭಾವದೊಟ್ಟಿಗೆ, ಭವಿಷ್ಯದ ಅನಿಶ್ಚಯತೆಯ ನಡುವೆ , ಹೃದಯವನ್ನು ಕಲ್ಲಾಗಿಸಿಕೊಂಡು ಬದುಕನ್ನು ಎದುರಿಸುವವರು ಒಂದುಕಡೆಯಾದರೆ, ತಮ್ಮ ಸಾವನ್ನೂ ಲೆಕ್ಕಿಸದೇ  ಕೊನೆಘಳಿಗೆವರೆಗೂ ಹೋರಾಡಿದ ವೈದ್ಯರೂ , ನರ್ಸುಗಳು ಹಾಗೂ ಸ್ವಯಂಸೇವಕರ ನಿಸ್ವಾರ್ಥ ಸೇವೆಯ ಅನಾವರಣ, ಇನ್ನೊಂದೆಡೆ. 

ಯಾವುದೊ ಹಂತದಲ್ಲಿ ಸರಿ ಇಲ್ಲವೆಂಬ ಅಂಶವನ್ನು, ಹಾಗೂ ಅನ್ಯಾಯವನ್ನು ಎದುರಿಸುವುದು ಕಷ್ಟ ಆದರೆ ಅದರ ವಿರುದ್ಧ ಧ್ವನಿ ಎತ್ತುವುದು ಅವಶ್ಯಕ! ಜನ ಗೇಲಿಮಾಡಿದರೂ ಸರಿ ಯಾರೋ ಒಬ್ಬ ಮುಂದೆ ಬಂದು ಇದು ತಪ್ಪು, ಹೀಗೆ ಮಾಡುವುದು ಅನ್ಯಾಯ ಎಂದು ಸಾರ್ವಜನಿಕವಾಗಿ  ಹೇಳಿ, ಅದಕ್ಕೆ ಪ್ರತಿಕೂಲವಾದ ಕ್ರಿಯೆಯಿಂದ ಹೇಗೆ ಇದನ್ನು ಸರಿಮಾಡಬಹುದು ಎಂದು ತೋರಿಸಿಕೊಟ್ಟರೂ ಸಾಕು, ಅದು ಒಳ್ಳೆಯ ಕ್ರಿಯೆಯಾಗಿದ್ದರೆ ಖಂಡಿತವಾಗಿಯೂ ಎಲ್ಲರೂ ಅದನ್ನು ಪಾಲಿಸಲು ಮುಂದಾಗುತ್ತಾರೆ ! ಈ ಒಂದು ಬದಲಾವಣೆಯ ಗಾಳಿಯಿಂದಲೇ ಓರಾನ್ ತನ್ನ ಅಳಿವಿನಂಚಿನಿಂದ ಹೊರಬಂದು ಮೊದಲಿನ ಚೈತನ್ಯಕ್ಕೆ ನಾಂದಿ ಹಾಡಿದ್ದು. ಇದು ಬದುಕಿನ ಪಾಠವೂ ಹೌದು! 

ನಾವು ಕ್ಯೆಮುವಿನ ದೃಷ್ಟಿಯಲ್ಲಿ ,ಪರಿಗಣಿಸಬೇಕಾದ,ಇಂದಿನ  ಕೊರೋನಾಗೂ  ಒಗ್ಗುವ, ಎರಡು ಮುಖ್ಯಾ೦ಶಗಳು 

೧.  ಜಗತ್ತಿನ ಎಲ್ಲ ದುಷ್ಟ ಶಕ್ತಿಗಳಿಂದ ಸಾಧ್ಯವಾಗಬಹುದಾದ ಹಾನಿ ಎಷ್ಟು ಕಠೋರವೋ , ಅಷ್ಟೇ ಕಠೋರ ಹಾನಿ , ಪ್ಲೇಗ್  ಎಂಬ ಪಿಡುಗು ಸಹ ಮಾಡಬಲ್ಲದು " ಇದು ಮನುಷ್ಯರನ್ನು ತಮ್ಮ ಶಕ್ತಿಗೂ ಮೀರಿ ಬೆಳೆಯುವಂತೆ ಪ್ರೇರೇಪಿಸುತ್ತದೆ. ಪುಟ-  ೧೨೫. 

೨.  ಈ ಅಂಟುರೋಗದಿಂದ ನಾವು ನಿಜವಾಗಿಯೂ ಕಲಿಯಬೇಕಾಗಿರುವುದೇನೆಂದರೆ, ನಾವು ಅಲಕ್ಷಿಸಬಹುದಾದ ಜನರಿಗಿಂತ, ಈ ಭುವಿಯಲ್ಲಿ ಜಗವೇ ಮೆಚ್ಚುವ೦ಥ  ಅನೇಕ ಜನರಿದ್ದಾರೆ! ಪುಟ -೩೦೮(ಕೊನೆಯ ಪುಟ )

ಒಂದು ಉತ್ತಮ ಸಮಾಜದ ನಿರ್ಮಾಣಕ್ಕಾಗಿ ನಮ್ಮಿಂದೇನಾಗುತ್ತದೋ ಅದೆಲ್ಲವನ್ನೂ ಮಾಡೋಣ, ಸಧ್ಯ ಈ ಪಿಡುಗಿನಿಂದ ಪಾರಗಲೂ ಏನು ಮಾಡಬೇಕೋ ಅದನ್ನು ಮಾಡೋಣ , ಎಲ್ಲ ಮುಗಿದ ನಂತರ, ಪ್ಲೇಗ್ ಗಿಂತಲೂ ಕೆಟ್ಟದಾಗಿ ಅಂಟಿರುವ, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನಾವೂ ಕಾರಣೀಕರ್ತರಾಗುತ್ತಿರುವ, ಪಿಡುಗುಗಳಾದ, ಪರಿಸರ ವಿನಾಶ ,ಹಸಿವು,ಯುದ್ಧ,  ಹಾಗೂ ವ್ಯವಸ್ಥಿತ ಅನ್ಯಾಯದ ವಿರುದ್ಧ  ಎಲ್ಲರೂ ಒಟ್ಟಾಗಿ ಹೋರಾಡೋಣ. 


Monday, June 15, 2020

ನಮಗೆ ಪರಿಹಾರಕ್ಕಿಂತ ಜಡ್ಜ್ಮೆಂಟ್ ಮುಖ್ಯ!






ನಮ್ಮ ಫಾಸ್ಟ್ ಬದುಕೋ, ಅಥವಾ ತಂತ್ರಜ್ನ್ಯಾನದ ಕೊಡುಗೆಯೂ, ಅಥವಾ ನಾವು ನೆಚ್ಚಿಕೊಂಡ ಮೀಡಿಯಾ ಪ್ರಭಾವವೋ ಎಲ್ಲದೂ ಸೇರಿ,ನಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬದಲಾಗಿ, ಆ ಸಮಸ್ಯೆಯ ಹೊಣೆಯನ್ನು ಯಾರ ಹೆಗಲಿಗೆ ಕಟ್ಟೋದು ಅಂತ ಒದ್ದಾಡುತ್ತಿರುತ್ತೇವೆ!! ಹಾಗೇ ಮಾಡುವಾಗೆಲ್ಲ ನಾವು ಸರಿ ನಮ್ಮ ಸುತ್ತಲಿರುವುದೆಲ್ಲ ತಪ್ಪು ಅನ್ನುವ ಕಲ್ಪನೆ ನಮಗೆ ಗೊತ್ತಿಲ್ಲದೇ ಬಲವಾಗುತ್ತಾ ಹೋಗುತ್ತದೆ! ಮತ್ತೆ ಸಮಸ್ಯೆಯ ಮೂಲ ಕರಣ ಹಾಗೂ ಪರಿಹಾರಕ್ಕಿಂತ ಯಾರನ್ನು ಬೈದು ಇಗೋ ತಣಿಸಿಕೊಳ್ಳಬಹುದು ಎಂಬ ಲೆಕ್ಕಾಚಾರ ನಡೆಯುತ್ತಿರುತ್ತದೆ. ಇದು ಐಚ್ಛಿಕವಾಗಿಯೋ ಅನೈಚ್ಚಿಕವಾಗಿಯೋ ನಡೆಯುವ ಕ್ರಿಯೆ, ಆದರೆ ಹೀಗೆ ನಮ್ಮ ಮೈಂಡ್ ಟ್ರೈನ್ ಆಗಿರೋದಕ್ಕೆ ಮೇಲೆ ಹೇಳಿದ ಎಲ್ಲವೂ ಕಾರಣಗಳೇ!

ನಮಗೆ ಪರಿಹಾರಕ್ಕಿಂತ ಜಡ್ಜ್ಮೆಂಟ್ ಮುಖ್ಯ! ಯಾರು ತಪ್ಪು ಯಾರು ಸರಿ ಅನ್ನುವ ವಿಂಗಡನೆ ಇಷ್ಟ! ಆ ವಿಂಗಡನೆಯಿಂದ ನಮ್ಮ ಗುಂಪು ಯಾವುದು ನಾವು ಯಾರ ಬಣದಲ್ಲಿ ಗುರುತಿಸಕೊಳ್ಳಲು ಬಯಸುತ್ತೇವೆ ಎಂಬುದನ್ನು ನಿರ್ಧರಿಸುವ ಸಾಧನ. ನಿನ್ನೆ ಅರ್ನಬ್ ನಡೆಸಿಕೊಟ್ಟ ಕೆಟ್ಟ ಡಿಬೇಟ ಪ್ರೋಗ್ರಾಮ್ಗಳಲ್ಲೇ ಅತೀ ಕೆಟ್ಟದ್ದು ಅಂದರೆ ತಪ್ಪಾಗಲಾರದೇನೋ, ಈತ ನ್ಯೂಸ್ Hour ಅನ್ನೋ ಪ್ರೈಮ್ ಟೈಮ್ ನಡೆಸಲು ಶುರು ಮಾಡಿದಾಗ ವಾವ್ ಎನಿಸುವಂತೆ ಮಾಡಿದ್ದ, ಮೊದಲ ಬಾರಿ ಮೋದಿ ಗೆಲ್ಲುವಲ್ಲೂ ಈತ ಮಾಡಿದ ಇಂಟರ್ವ್ಯೂಗಳು ನೇರ ಪರಿಣಾಮ ಬೀರಿದ್ದವು. ಇತ್ತೀಚಿಗೆ ಈ ವ್ಯಕ್ತಿ ಜರ್ನಲಿಸಂ ಬಿಟ್ಟು ಇನ್ನೇನೋ ಮಾಡುತ್ತಿರುವನೇನೋ ಎನ್ನುವಷ್ಟು ಬಿಂದಾಸಾಗಿಯೇ ತನ್ನ ಡಿಬೇಟ ನಡೆಸಿಕೊಡುತ್ತಾನೆ, ಒಬ್ಬ ಪತ್ರಕರ್ತ ಹೇಗೆ ನಡೆದುಕೊಳ್ಳಬಾರದು ಎನ್ನುವುದಕ್ಕೆ ದೊಡ್ಡ ಉದಾಹರಣೆಯಾಗಿ ನಿಲ್ಲುವವ! ಆತ ನೇಶನ್ ಫಸ್ಟ್ ಅನ್ನೋ ಟ್ಯಾಗ್ ಹಾಕಿದ್ ತಕ್ಷಣ ಅವನು ದೇಶ ಭಕ್ತ ಅಂತ ತಬ್ಬಿ ಮುದ್ದಾಡುವುವರು ಇದ್ದಾರೆ! ಅಲ್ಲಿನ ರಾಜಕೀಯ, ಎಡ ,ಬಲ ಏನೇ ಇರಲಿ, ಪ್ರತಿ ಸಾವು, ದುರ್ಘಟನೆ, ನೋವು ಅನ್ಯಾಯಗಳನ್ನು ರಾಜಕೀಯವಾಗಿ ಯೋಚಿಸುವಂತೆ  ಮಾಡಿರುವ ಕೀರ್ತಿ ಎಲ್ಲ ಮಾಧ್ಯಮಗಳಿಗೂ ಸಲ್ಲಬೇಕು ಅರ್ನಬ್ ಎದ್ದು ಕಂಡರೆ ಕಾಣದ ಕೈಗಳು ಹಲವಾರಿವೆ!! 

ಬಾಲಿವುಡ್ ಹಲವು ದಶಕಗಳಿಂದ ಯಾರ ಕಂಟ್ರೋಲ್ ನಲ್ಲಿ ಇದೆ ಎನ್ನುವುದು ಓಪನ್ ಸೀಕ್ರೆಟ್, ಖಾನ್ ಗಳು , ಕಪೂರ್ಗಳು, ಅಷ್ಟೇ ಏಕೆ ಸಂಜಯ್ ದತ್ತ್, ಅಕ್ಷಯ್ ಕುಮಾರ್ ಹಾಗೂ ಅಜಯ್ ದೇವ್ಗನ್ ಕೂಡ ಇದಕ್ಕೆ ಹೊರತೇನಲ್ಲ!! ನಾವು ನಮ್ಮ ನೆಚ್ಚಿನ ತಾರೆಯರನ್ನ ನಮ್ಮ ಸೈಧಾಂತಿಕ ಹಿನ್ನಲೆಯಲ್ಲಿ ಅಳೆಯಲು ಶುರು ಮಾಡಿದ ದಿನದಿಂದ ಎಂಟರ್ಟೈನ್ಮೆಂಟ್ ಕೂಡ ಪಾಲಿಟಿಕಲಿ ಮೋಟಿವೇಟೆಡ್ ಬಿಸಿನೆಸ್ ಆಗಿಯಾಗಿದೆ.

ಇನ್ನು ಸುಶಾಂತ್ ಸಿಂಗ್ ನಾ ಸಾವನ್ನು ಜನ ತಮಗೆ ಬೇಕಾದ ಹಾಗೆ ತಿರುಚಿಕೊಂಡು ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ! ನೆಪೋಟಿಸಮ್ ಯಾವ ಕ್ಷೇತ್ರದಲ್ಲಿ ಇಲ್ಲ?? ಒಬ್ಬ ಸ್ಟಾರ್ ಮಗನಾಗಿದ್ದಕ್ಕೋ ಅಥವಾ ಶ್ರೀಮಂತ ಮನೆಯ ಕುಡಿಯೆನ್ನುವ ಕಾರಣಕ್ಕೋ ಜನ ಎಲ್ಲರನ್ನೂ ಸ್ವೀಕರಿಸುವ ಹಾಗಿದ್ದರೆ ಅಭಿಷೇಕ್ ಬಚ್ಚನ್ ಆಗಲಿ, ನಿಖಿಲ್ ಕುಮಾರಸ್ವಾಮಿ ಯಾಗಲಿ ಇಷ್ಟೊತ್ತಿಗೆ ಸ್ಟಾರ್ ಗಳಾಗಿ ಮೆರೆಯಬೇಕಿತ್ತು! ರಾಜಕುಮಾರ್ ಅವರ ಪರಿವಾರದ ಶ್ರೀರಕ್ಷೆ ಇದ್ದರೂ ಶಿವರಾಜ್ ಆಗಲಿ ಪುನೀತ್ ಆಗಲಿ ತಮ್ಮ ತಮ್ಮ ಪಾಲಿನ ಹೋರಾಟ ಕಷ್ಟಗಳನ್ನು ಅನುಭವಿಸಿಯೇ ಮೇಲೆ ಬಂದಿರುತ್ತಾರೆ , ಸೋಲು ಅವರುಗಳನ್ನು ಪಾತಾಳಕ್ಕೆ ತಳ್ಳದೇ ಇರಬಹುದು, ಸೋತರೂ ಒಪ್ಪುವ ಜನರು ಇರಬಹುದು ಅದನ್ನು ಬಿಟ್ಟರೆ ಪ್ರತಿ ಕ್ಷೇತ್ರ ಪ್ರತಿಭೆಗೆ ಬೆಲೆ ಕೊಟ್ಟೆ ಕೊಡುತ್ತದೆ ಅಲ್ಲಿ ನಡೆಯುವ ರಾಜಕೀಯ ಹಾಗೂ ಅನ್ಯಾಯದ ಹೊರತಾಗಿ!


ಗಾಡ್  ಫಾದರ್ ಇಲ್ಲದ ಸುಶಾಂತನಿಗೆ, ಧೋನಿಯಂತಹ ಕೋಟ್ಯಾ೦ತರ ಅಭಿಮಾನಿಗಳನ್ನು ಹೊಂದಿರುವ ಕ್ರಿಕೆಟರ್ ನ ಪಾತ್ರ ಮಾಡಲು ಸಿಕ್ಕ ಅವಕಾಶವೇನು ಚಿಕ್ಕದೇ?? ಅದನ್ನು ಲಕ್ಷಾಂತರ ಜನ ಬೆನ್ನು ತಟ್ಟಿ ,ಧೋನಿಯೆಂದರೆ ನೀನೇ ಎನ್ನುವಷ್ಟು ಆಪ್ತವಾಗಿ ಒಪ್ಪಿಕೊಂಡಿರುವುದು ಸಣ್ಣ ಸಾಧನೆಯೇ?? ಇಷ್ಟೆಲ್ಲ ಸಿಕ್ಕ ವ್ಯಕ್ತಿಗೆ, ಅಲ್ಲಿ ನಡೆಯುವ ಫೇವರಿಸಂನ ಅರಿವಿರಲಿಲ್ಲ ಎನ್ನುವುದು ತೀರಾ ಬಾಲಿಶ ವಾದವಾಗುತ್ತದೆ!!


ಕಾರಣ ಏನೇ ಇರಬಹುದು ಪ್ರತಿ ಆತ್ಮಹತ್ಯೆಗೆ ನಮ್ಮ ಸುತ್ತಲಿನ ಸಿಸ್ಟಮ್, ಸಮಾಜ , ಆಗದಿರುವ ಜನ ಕಾರಣೀಭೂತರಾಗಿರುತ್ತಾರೆ, ಅದನ್ನು ಎದುರಿಸುವಲ್ಲಿ ಸೋತ ಮನುಷ್ಯನ ಧೈರ್ಯ ಚಿಕ್ಕದೆನಿಸುತ್ತದೆ ಯಾಕೆಂದರೆ ಖಿನ್ನತೆಯನ್ನು ನಾವು ಮನೋರೋಗವೆಂದಷ್ಟೇ ಉತ್ಪ್ರೇಕ್ಷೆ ತೋರಿ ಅದೇನೂ ದೊಡ್ಡ ವಿಷಯವೇ ಅಲ್ಲ ಎಂಬಂತೆ ಉದಾಸೀನ ಮಾಡಿರುತ್ತೇವೆ. ಶಾಲೆಗೆ ಹೋಗುವ ಮಗು ಫೇಲ್ ಆಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡರೆ ಪಾಲಕರನ್ನು ಕೊಲೆಗಾರರು ಎನ್ನವುದು ಸರಿಯೋ ಅಥವಾ ಹಾಗೆ ಮಾಡಿಕೊಳ್ಳುವವರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಅವರಿಗೆ ಬೇಕಾದ ಸೂಕ್ತ counselling ಅಥವಾ ಚಿಕಿತ್ಸೆಯ ಚರ್ಚೆ ಮುಖ್ಯವೋ??! 

ಮನುಷ್ಯ ಇದ್ದಾಗ ಅವನ ಆಗು  ಹೋಗುಗಳು , ನೋವು ನಲಿವುಗಳಿಗೆ  ಸ್ಪಂದಿಸದೇ, ಅವನು ಪ್ರಾಣ ಕಳೆದುಕೊಳ್ಳುವವರೆಗೂ ಸುಮ್ಮನಿದ್ದು, ಸತ್ತ ವ್ಯಕ್ತಿ ಈಗ ತಿರುಗಿ ಬರುವುದಿಲ್ಲ ಎಂದು ಧೃಡವಾದಾಗ ಮಾತ್ರ ನಮ್ಮ ಕರುಣೆ ಅನುಕಂಪ ತೋರುವುದು ಎಷ್ಟು ಸರಿ? ಅವನಿಗಾದ ಅನ್ಯಾಯವನ್ನು ಅವನು ಬದುಕಿದ್ದಾಗಲೇ ಧೈರ್ಯ ತುಂಬಿ, ಒಟ್ಟಿಗೆ ಹೋರಾಡಲು ಬಲ ಕೊಟ್ಟು , ಎದುರಿಸುವ ಬಾ ಎಂದು ಹೇಳಿದ್ದರೆ, ಇವತ್ತಿನ ಮೊಸಳೆ ಕಣ್ಣೀರಿಗೆ ಹಾಗೂ ಅನ್ಯಾಯದ  ವಿರುಧ್ಧದ ಹೇಳಿಕೆಗಳಿಗೆ ಬೆಲೆ ಇರುತ್ತಿತ್ತು!!  

Monday, May 4, 2020

ಜೀನಾ ಇಸೀ ಕಾ ನಾಮ್ ಹೈ 😍😇❤


Losing love is not the biggest loss, but Losing self Respect Is! ಒಂದೇ ವಾಕ್ಯದಲ್ಲಿ ಥಪ್ಪಡ್ ಚಿತ್ರದ ವಿಮರ್ಶೆ ಹೇಳುವುದು ತುಸು ಕಷ್ಟವೇ. ಆದರೂ ಒಂದೊಳ್ಳೆ ಸ್ಕ್ರಿಪ್ಟ್ ಹಾಗೂ ಸ್ಕ್ರೀನ್ ಪ್ಲೆ ಎನ್ನಲು ಅಡ್ಡಿಯಿಲ್ಲ. ಆ ಟೈಟಲ್ ಹೇಳುವಂತೆ ಗಂಡ ಕೊಟ್ಟ ಒಂದು ಏಟಿಗೆ ಆದರ್ಶ ಗೃಹಿಣಿ ಎನಿಸಿಕೊಂಡ ಹೆಂಡತಿಯಲ್ಲಿನ ಬದಲಾವಣೆಗಳ ಹಂದರವೇ ಇಡೀ ಚಿತ್ರ!!
ನಾನು ಮೊದಲಿಗೆ, ಇದೊಂದು ಫೆಮಿನಿಸಮ್ ಕೇಂದ್ರೀಕೃತ ಚಿತ್ರ ಎಂದುಕೊಂಡು ನೋಡಲು ಶುರುಮಾಡಿದ್ದು. ಆದರೆ ಹೋಗ್ತಾ ಹೋಗ್ತಾ, ಪ್ರತಿ ಮಹಿಳೆಯ ಆಂತರ್ಯವನ್ನು ಯಾವುದೋ ಹಂತದಲ್ಲಿ ತಟ್ಟಬಲ್ಲ ದೃಶ್ಯಕಾವ್ಯ ಎನಿಸಿದ್ದು ಸುಳ್ಳಲ್ಲ. ಭಯಂಕರ ಎಕ್ಪೆಕ್ಟೇಷನ್ ಇಲ್ಲದೇ, ಸೆನ್ಸಿಬಲ್ ಇಮೋಷನ್ ಇರೋ ಗಂಡಸರಿಗೆ ಹೆಚ್ಚು ಆಪ್ತ ಅನಿಸಬಹುದು, ಇನ್ನೂ ಒಂದೇ ಒಂದು ಏಟಿಗೆ ಸಿನಿಮಾನ ಅಂತ ಮೂಗುಮುರಿದು, ಹೆಣ್ಣೆಂದರೇ ಹೀಗೆ ಇರಬೇಕು ಎಂದು ಕಸ್ಟಮೈಸ್ ಮಾಡಿ ಬದುಕುತ್ತಿರುವ ಜನರಿಗಾಗಿಯೇ ಇರುವ ಸಿನಿಮಾ ಆದರೂ ಅವರ್ಯಾರೂ ಇದನ್ನ ಇಷ್ಟ ಪಡುವುದೇ ಡೌಟು!
ಹಾಗಿದ್ದರೇ ಕೇವಲ ಒಂದು ಥಪ್ಪಡ್ ಒಂದು ಹೆಣ್ಣನ್ನು ವಿಚ್ಛೇದನದ ಹಂತದವರೆಗೆ ಕರೆದುಕೊಂಡು ಹೋಗುತ್ತದಾ? ಅಷ್ಟೊಂದು ಸಿಲ್ಲಿ ವಿಷಯನಾ ಅಂತ ಮೇಲು ನೋಟಕ್ಕೆ ಕಂಡುಬಂದರೂ, ಏಟು ಕಾರಣವಷ್ಟೆ! ಸಾರ್ವಜನಿಕವಾಗಿ ಹೆಂಡತಿಯನ್ನು ಹೊಡೆಯುವುದು ತನ್ನ ಹಕ್ಕು ಎಂದುಕೊಂಡ ಗಂಡನನ್ನು, ಹೇಗೆ ಒಂದೀಡಿ ಸಮುದಾಯ, ಆತನ ಕುಟುಂಬ ಹಾಗೂ ನರೆಹೊರೆಯವರು ದೂಷಿಸದೇ ಒಪ್ಪಿಕೊಂಡು, ಹೆಣ್ಣೆಂದರೆ ಸಹಿಸಿಕೊಂಡು ಹೋಗುವುದು ಎನ್ನುವದನ್ನು ಹಲವು ಪಾತ್ರಗಳು ಸಾರಿ ಹೇಳುತ್ತವೆ!
ಚಿತ್ರದ ಹೊರತಾಗಿ ಚಿಂತನೆಗೆ ಹಚ್ಚಿದ ಹಲವು ಕಾರಣಗಳು ಕೆಳಗಿನಂತಿವೆ.
ಅಪ್ಪನನ್ನು ಸಾರ್ವಜನಿಕವಾಗಿ ಏಕವಚನದಲ್ಲಿ ಸಂಬೋಧಿಸಬಾರದು ಎಂದು ಮಕ್ಕಳಿಗೆ ಹೇಳಿಕೊಡುವ ತಾಯಿ, ತನ್ನನ್ನು ಮಕ್ಕಳು ಹೇಗೆ ಸಂಬೊಧಿಸಿದರೂ ಆದೀತು. ಆದರೆ ಅದೇ ಹೆಣ್ಣು ಮಗುವಿಗೆ ಗಂಡನೊಟ್ಟಿಗೆ ಹೀಗ್ ಹೀಗೇ ನಡೆದುಕೊಳ್ಳಬೇಕು ಅನ್ನುವ ಅಲಿಖಿತ ಸ್ಟ್ಯಾಂಡರ್ಡ್‌ ಸೆಟ್ ಮಾಡಿರುತ್ತಾಳೆ!
ಇಂತಿಪ್ಬ ನಿಲುವನ್ನು ಹೊಂದಿರುವ ಅನೇಕ ತಾಯಂದಿರು ನಮ್ಮ ಜೊತೆಯಲ್ಲಿ ಇದ್ದಾರೆ. ಸೆಲ್ಫ್ ಡಿಕ್ಲೆರ್ಡ ವಿಕ್ಟಿಮ್ ಗಳದ್ದೂ ಇದೇ ಗೋಳು, ಹೊಡಿಲಿ ಬಡಿಲಿ ಗಂಡ ಅಲ್ಲವಾ ಎಲ್ಲಾ ಸಂಭಾಳಿಸಿಕೊಂಡು ಹೋಗಬೇಕಷ್ಟೆ ಎಂದು ಬದಲಾಗದ ನಿತ್ಯ ಹಿಂಸೆಗೆ ಸಮಝಾಯಿಶಿ ಕೊಡುತ್ತಲೇ ತಮ್ಮನ್ನು ತಾವು ಸಂತೈಸಿಕೊಳ್ಳುತ್ತಿರುತ್ತಾರೆ.
ಇನ್ನು ಇವತ್ತಿನ ಮದ್ಯದಂಗಡಿ ಎದುರುಗಡೆ ನಿಂತ ಮಾನಿನಿಯರ ದೊಡ್ಡ ಕ್ಯು ಇಂದಿನ ವೈರಲ್ ಪಟ್ಟಿಗೆ ಸೆಡ್ಡು ಹೊಡೆದು ನಿಂತಿದೆ. ಸಮಾನತೆಯ ಹೆಸರಲ್ಲಿ ಇದನ್ಯಾಕೆ ಸೇರಿಸಬಾರದು ಎಂದು ಒಂದು ಬಣ, ನಮ್ಮ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ ಎಂದು ಮತ್ತೊಂದು ಬಣ ಪೈಪೋಟಿಗೆ ಬಿದ್ದಾಗಿದೆ. ೨೦೨೦ ದಶಕದಲ್ಲಿ ವೈನ್ ಶಾಪ್ ಮುಂದೆ ನಿಂತು ರಾಜಾರೋಷವಾಗಿ ಮದ್ಯ ಖರೀದಿ ಮಾಡುವುದೇ ಸಮಾನತೆಯ ಲಕ್ಷಣ ಅನ್ನೋದಾದರೆ, ಇನ್ನೆಲ್ಲ ವಲಯಗಳಲ್ಲಿ ಮಹಿಳೆಯಾಗಿರುವ ಕಾರಣಕ್ಕೆ ಸಿಗುವ ರಿಸರ್ವೇಷನ್ ಹಾಗೂ ಬೆನಫಿಟ್ ಗಳನ್ನು ಬಿಡಲು ನಾವುಗಳು ತಯಾರಿದ್ದೇವೆಯೇ ಎಂದು ಕೇಳಿಕೊಳ್ಳುವ ಸಮಯ ಇದು!
ವೈಯಕ್ತಿಕವಾಗಿ ನನಗೆ ಫೆಮಿನಿಸ್ಂ ಎಂದರೆ, ಗಂಡಸು ಮಾಡಬಹುದಾದ ಎಲ್ಲ ಕೆಲಸವನ್ನು ಮುಲಾಜಿಲ್ಲದೇ ಮಾಡುವುದಲ್ಲ, ಗಂಡು ಹೆಣ್ಣಿನ ಮಧ್ಯೆ ನಿಸರ್ಗವೇ ನಿರ್ಮಿಸಿದ ವ್ಯತ್ಯಾಸಗಳನ್ನು ಪರಸ್ಪರ ಗೌರವಿಸಿಕೊಂಡು, ಒಬ್ಬರಿಗೊಬ್ಬರು ಕಾಂಪ್ಲಿಮೆಂಟರಿಯಾಗಿ ಬದುಕುವುದು! ಇದು ಯೋಚನಾ ಲಹರಿಯಿಂದ ಹಿಡಿದು ಮಾಡುವ ಪ್ರತಿಕೆಲಸದಲ್ಲೂ ತಮ್ಮ ತಮ್ಮದೇ ಛಾಪನ್ನು ಮೂಡಿಸುವ ಪ್ರತಿ ವ್ಯಕ್ತಿಗೂ ಅನ್ವಯ!
ಇನ್ನು ಹೊಡೆದು ಸರಿಮಾಡಲಾರದ ವಿಷಯ ತೆಗಡದುಕೊಂಡರೆ, ಭಾರತೀಯ ಮಕ್ಕಳು ಮುಂಚುಣಿಯಲ್ಲಿ ನಿಲ್ಲುತ್ತಾರೆ. ನಾಳೆ ಇನ್ಯಾರೋ ಅಮೆರಿಕದಲ್ಲಿ ಮಕ್ಕಳಿಗೆ ಹೊಡೆದರೆ ಜೈಲಾಗುತ್ತೆ, ನಮ್ಮಲ್ಲೂ ಅದು ಬರಬೇಕು ಅಂತ ಹೇಳಲು ನಾವು ತಯಾರಿದ್ದೇವೆಯೆ?!
ಪಾಶ್ಚಾತ್ಯರು ನಮಗಿಂತ ಮುಂಚೆ ಶತಮಾನಗಳ ಅಂತರದಲ್ಲಿ, ಒಂದೀಡಿ ಹೊಸ ಪರಂಪರೆಗೆ ಒಳಗಾದವರು! ನಮ್ಮ ಬೆಂಗಳೂರಿನಲ್ಲಿ ಐಟಿ ಬರುವ ಮುಂಚೆ ಲಿವಿಂಗ್ ಟುಗೆದರ್ ಎಂಬ ಪದಗಳನ್ನೇ ಕೇಳದ ಜನರಿದ್ದರು, ಬೈದುಕೊಂಡೋ ಆಡಿಕೊಂಡೊ ಈಗ ನಿಧಾನವಾಗಿ ಇದು ಅವರದ್ದೇ ಊರಿನ ಭಾಗವಾಗಿದೆ ಎಂಬ ಅರಿವು ಮೂಡಿದೆ! ಇದು ರಾತ್ರೋ ರಾತ್ರಿ ಆಗುವ ಬದಲಾವಣೆಯಲ್ಲ ಕಾಲಕ್ರಮೇಣ ಸುತ್ತಲೂ ನಡೆಯುವ ಘಟನಾವಳಿಗಳಿಂದ ಒಪ್ಪಿಕೊಂಡಿದ್ದು ಯಾಕೆಂದ್ರೆ ದೈಹಿಕವಾಗಿ ನಾವು ಹೇಗೆ ಕಂಡರೂ ಮಾನಸಿಕವಾಗಿ, ಅಮ್ಮ, ಅಜ್ಜಿ ಹಾಗೂ ಮನೆಯವರು ಹೇಳಿದ ಕಟ್ಟಳೆಗಳನ್ನು ಸುಲಭವಾಗಿ ಮೀರುವಂಥ ಜೀನ್ಸ ಮ್ಯುಟೇಷನ್ ಗೆ ನಮ್ಮ ಜನರೇಷನ್ ಒಳಗಾಗಿಲ್ಲ!
ಬಟ್ಟೆ ಬಳಸದೆ, ಸ್ಯಾನಿಟರಿ ಪ್ಯಾಡ್ ಬಳಸಬೇಕು ಎಂದು ಪಬ್ಲಿಕ್ ಆಗಿ ಹೇಳುವುದು ಕೂಡ ಟ್ಯಾಬು ಆಗಿದ್ದ ನಮ್ಮ ಸಮಾಜದಲ್ಲಿ, ಧೈರ್ಯವಾಗಿ ‌ಹೆಂಗಸೇ ಹೋಗಿ ಪ್ರೆಗ್ನೆನ್ಸಿ ಕಿಟ್ ತರುವವರೆಗೆ ಬದಲಾವಣೆಯಾಗಿಯೇ ಇದೆ! ಇದು ಕೂಡ ಬೆಳಗಾಗುವುದರೊಳಗಾಗಿ ಆದ ಬದಲಾವಣೆಯಲ್ಲ!
ಇನ್ನು ಪ್ರತಿ ಮನುಷ್ಯನ ಲಿಂಗಭೇದವಿಲ್ಲದೇ, ನಡೆಯುವ, ಯೋಚನಾ ‌ಲಹರಿ ಭಿನ್ನವಾದದ್ದು ಹಾಗೂ ಅದನ್ನು ಇನ್ಯಾರಿಗೋ ಹೆಳುವಂಥ ಅಥವಾ ಇನ್ಯಾರಿಂದಲೋ ಹೇಳಿಸಿಕೊಳ್ಳದಂಥ ಖಾಸಗೀ ವಿಷಯ! ಅದನ್ನ ಟಿವಿ ಪ್ಯಾನಲ್ ನಲ್ಲಿ, ಗಂಟೆಗಟ್ಟಲೇ ಚರ್ಚೆ ಮಾಡಿಯೋ ಅಥವಾ ಹ್ತಷ್ಟ್ಯಾಗ್ ಹಾಕಿ ಅಭಿಯಾನ ಮಾಡಿದಂತೆ ನಮ್ಮ ಪರ ಹಾಗೂ ವಿರೋಧದ ನಿಲುವುಗಳಿಂದ ಅಳೆಯುವುದಾಗಲೀ, ಅಥವಾ ಜಡ್ಜ್ಮೆಂಟ್ ಕೊಡವುದಕ್ಕೆ ನಾವ್ಯಾರು ನ್ಯಾಯಾಧೀಶರಲ್ಲ!
ಎಲ್ಲರಲ್ಲಿ ನ್ಯೂನ್ಯತೆಗಳಿವೆ, ಕಾರಣಗಳಿಲ್ಲದೇ ಪ್ರೀತಿಸುವ ಅಂಶಗಳೂ ಇವೆ! ಸಮಾನತೆ, ಸ್ವಾತಂತ್ರ್ಯ, ತಾರತಮ್ಯ, ಎಂಬ ಹೊಡೆದಾಟದ ಆಚೆಗೆ ನಮ್ಮ ಆತ್ಮ ತೃಪ್ತಿಪಡುವಂಥ ಅನೇಕ ಧನಾತ್ಮಕ ಅಂಶಗಳಿವೆ! ಭಾವನೆಗಳ ಅಲೆದಾಟವನ್ನು, ಮೊಮೆಂಟರಿ ಸಿಟ್ಟನ್ನೂ ಸಮತೋಲನದಿಂದ ತೂಗಿಸಿಕೊಂಡು ಹೋಗುವುದೇ ನಿಜವಾದ ಪ್ರಭುದ್ದತೆ!
ಕ್ಯುಂಕೀ 😍😇
ಜೀನಾ ಇಸೀ ಕಾ ನಾಮ್ ಹೈ 

Monday, April 27, 2020

ನೆನಪಿನ ಹುಲ್ಲು ಹಾಸಿ, ಬಾಲ್ಯದ ಹೊದಿಕೆ ಹೊದ್ದ ಸಂಭ್ರಮ!


ಜಿಟಿ ಜಿಟಿ ಮಳೆ ಬೀಳುತ್ತಲೇ ಮನವೂ ಒದ್ದೆಯಾಗಿ ,ಮಗ್ಗಲು ಬದಲಿಸಿ, ಬಾಲ್ಯಕ್ಕೆ ಮರಳಿದೆ! ಹೀಗೆ ನಿಶ್ಶಬ್ದದ ಬಾನಿನಲ್ಲಿ , ಮೋಡಗಳ ಮರೆಯಲ್ಲಿ ಅಡಗಿ ಕುಳಿತಿರುತ್ತಿದ್ದ ಸೂರ್ಯನ ದರ್ಶನವೇ ಇಲ್ಲದ ದಿನಗಳು,ವಾರಗಳು , ಅಜ್ಜನ  ಬೆಚ್ಚನೆಯ ತಬ್ಬುಗೆಯ ಘಮ , ಅಜ್ಜಿಯ ಬೆಳ್ಳುಳ್ಳಿ ಒಗ್ಗರಣೆಯ ಘಾಟು, ಅಪ್ಪನ ಪಂಚತಂತ್ರ ಕಥೆಗಳು, ಅಮ್ಮನ ಲಾಲಿಯ ಹಾಡುಗಳು, ಹಿತ್ತಲಿನ ಸಂಪಿಗೆಯ ರಾಶಿ , ಅಂಗಳದ ಮಲ್ಲಿಗೆಯ ನಗು, ಹೀಗೆ ಒಂದೇ ಎರಡೇ, ಬಾಲ್ಯದ ಅಣುಅಣುವು ವೈವಿಧ್ಯಮಯ.

ಒಂದು ರೂಪಾಯಿಯ ಐಸ್ ಕ್ಯಾಂಡಿ , ಅಜ್ಜಿಯ ಕೂದಲು ಎಂಬ ಮಿಠಾಯಿ, ಮರದ ತೊಗಟೆಯಿಂದ ಪೀಪಿ ಆಕಾರದಲ್ಲಿ  ಮಾಡಿದ ಆಟಿಕೆ, ಕುಂಟಾಬಿಲ್ಲೆ,ಮುಟ್ಟಾಟ, ಕಲರ್ ಕಲರ್ ವಾಟ್ ಕಲರ್, ಕಣ್ಣಾ ಮುಚ್ಚಾಲೆ, ಕೆರೆ ದಡ ,ಬೆಳಗಿನಾಟಗಳಾದರೆ ಸಂಜೆಗಾಗಿ ಕಾಯ್ದಿರುಸುತ್ತಿದ್ದ ವೃತ್ತಾಕಾರದಲ್ಲಿ ,ಸುತ್ತಲೂ ಕುಳಿತು  ಆಡುತ್ತಿದ್ದ ಅಂತ್ಯಾಕ್ಷರಿ, ಒಬ್ಬರ ಕಿವಿಯಿಂದ ಇನ್ನೊಬ್ಬರ ಕಿವಿಗೆ ಹೋಗುವಷ್ಟರಲ್ಲಿ ಬದಲಾಗಿಹೋಗುತ್ತಿದ್ದ "ಹೆಲೋ' ಎಂಬ ಮಜವಾದ ಆಟ, ರಾಜ ರಾಣಿ ಕಳ್ಳ ಪೊಲೀಸ್, ಜುಂಕ್ಷನ್ ಎಂಬ ಚೀಟಿಯ ಆಟಗಳು. ಯಾವಾಗಲೂ ಬ್ಯಾಕ್ಗ್ರೌಂಡ್ ನಲ್ಲಿ, ರಫಿ ಲತಾ ರ ಎವರ್ಗ್ರಿನ್ ಹಾಡುಗಳು, ನಮ್ಮ ಉತ್ತರ ಕರ್ನಾಟಕದಲ್ಲಿ ಒಂಚೂರು ಹಿಂದಿ ಹೇರಿಕೆ ಇತ್ತೇನೋ (ಕನ್ನಡ ಹಾಡುಗಳು ಕಡಿಮೆ ಪ್ರಚಲಿತದಲ್ಲಿದ್ದವು)!

ಬೆಂಗಳೂರಿನಲ್ಲಿ ಮೋಡ ಕವಿದಾಗಲೆಲ್ಲ ಮನಸ್ಸು ಧಾರವಾಡದ ಕಡೆ ಮುಖ ಮಾಡಿ ನಿಲ್ಲುತ್ತದೆ, ಗೊತ್ತಿಲ್ಲದೇ ಕಣ್ಣಾಲಿಗಳೆಲ್ಲ ಕಳೆದು ಹೋದ ಒಂದೊಂದು ಭಾವಾವನ್ನೂ ಕಲೆ ಹಾಕಿ ಕೂಡಿಡಲು ಪ್ರಯತ್ನಿಸುತ್ತದೆ! KCD ಎಂಬ ಸ್ವರ್ಗದ ಕಡೆ ಕೈ ಚಾಚಿ ಕರೆಯುತ್ತದೆ, ಕಿತ್ತೂರು ಚೆನ್ನಮ್ಮ ಪಾರ್ಕಿನ  ಮಕ್ಕಳಾಟದ ಮೈದಾನ ಖಾಲಿಯಾದ ನೋವನ್ನು ನೆನಪಿಸುತ್ತದೆ. ಕತ್ತಲಾದರೂ ಬಿಡದೇ ಸರದಿಸಾಲಿನಲ್ಲಿ ನಿಂತು ತಿನ್ನುತ್ತಿದ್ದ ಪ್ರಕಾಶ್ ಸೇವ್ ಪುರಿ ಸೆಂಟರ್, ಮಹಾರಾಷ್ಟ್ರ ಕ್ಯಾಂಟೀನ್ ನ ಶಾಬುದಾನಿ ವಡ, ದುರ್ಗದ್ ಬೈಲಿನ ಗಿರ್ಮಿಟ್ ಹಾಗೂ ಮಿರ್ಚಿ ಎಲ್ಲವನ್ನೂ ಒಂದೇ ದಿನಕ್ಕೆ ತಿಂದು ತೇಗುವ ಆವೇಗ!

ಎಲ್ಲರ ಬಾಲ್ಯವೂ  ಸುಂದರ, ಬಾಲ್ಯದ ಜೊತೆಗೇ  ಹೊಸೆದುಕೊಂಡ ನೆನಪೂ ಮಧುರ, ಎಷ್ಟೇ ವಯಸ್ಸ್ಸಾದರೂ ಹದಿನೆಂಟೇ ಎಂದು ಹೇಳಿಕೊಳ್ಳುಲು ಬಯಸುವ ಅವಿವೇಕಿ ಆಸೆಗೂ ಮೀರಿದ್ದು, ಸರಿ- ತಪ್ಪು, ನಿಜ-ಸುಳ್ಳು , ಎಂಬ ಜಡ್ಜ್ಮೆಂಟಗಳಿಲ್ಲದ, ಅಮಾಯಕ ಸ್ಥಿತಿ, ಮನೆ, ಕುಟುಂಬ, ಸ್ನೇಹಿತರು, ನೆರೆ ಹೊರೆಯವರು, ಇಷ್ಟೇ ಪ್ರಪಂಚ ಎಂಬಂತೆ ಇದ್ದು ಬಿಡುವ ಮನಸ್ಥಿತಿಯ ಅನಾವರಣವೇ ಸೋಜಿಗ. ಮುಲಾಜಿಗೆ ಬಿದ್ದು ಯಾರನ್ನೋ ಖುಷಿ ಪಡಿಸುವ ಇರಾದೆಯೇ ಇರದ ತಟಸ್ಥ ಭಾವನೆ.


ಕರ್ಮಭೂಮಿಯಲ್ಲಿ, ನೆನಪಿನ ಹುಲ್ಲು ಹಾಸಿ, ಬಾಲ್ಯದ ಹೊದಿಕೆ ಹೊದ್ದು ಸಂಭ್ರಮಿಸುವುದಷ್ಟೇ  ಸಧ್ಯಕ್ಕೆ ಪಡೆದ ಭಾಗ್ಯ,
ಆದರೆ ಒಂದಂತೂ ಸತ್ಯ , ಮಳೆಯಾದಾಗಲೆಲ್ಲ, ಮಾಯಾವೀ ನಗರ, ನಮ್ಮದಲ್ಲದ ವರ್ಚುಯಲ್  ಅಸ್ತಿತ್ವವನ್ನು ಅಣುಕಿಸಿ ಹೋದಂತಾಗುತ್ತದೆ!